AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿ ಹೇಗ್‌ನಲ್ಲಿ 16 ಡಚ್ ಸಿಇಒಗಳನ್ನು ಭೇಟಿಯಾದ ಪ್ರಧಾನಿ ಮೋದಿ: ಏನಿದು ಒಪ್ಪಂದ? ಏನು ಚರ್ಚೆಯಾಯಿತು?

Narendra Modi's Netherlands visit: ಯೂರೋಪ್​ನ ಪ್ರಮುಖ ದೇಶಗಳಲ್ಲೊಂದಾದ ನೆದರ್​ಲ್ಯಾಂಡ್ಸ್​ಗೆ ಪ್ರಧಾನಿ ಮೋದಿ ಭೇಟಿ ನೀಡಿದ್ದು, ಎರಡು ದೇಶಗಳ ಮಧ್ಯೆ ಮಹತ್ವದ ಸಹಕಾರ, ಒಪ್ಪಂದಗಳು ಏರ್ಪಡುತ್ತಿವೆ. ನೆದರ್​ಲ್ಯಾಂಡ್ಸ್​ನ ವಿವಿಧ ಕ್ಷೇತ್ರಗಳ ಪ್ರಮುಖ ಕಂಪನಿಗಳ ಸಿಇಒಗಳೊಂದಿಗೆ ಮೋದಿ ಸಭೆ ನಡೆಸಿದರು. ಈ ವೇಳೆ, ಡಚ್ ಪ್ರಧಾನಿಗಳೂ ಉಪಸ್ಥಿತರಿದ್ದರು.

ದಿ ಹೇಗ್‌ನಲ್ಲಿ 16 ಡಚ್ ಸಿಇಒಗಳನ್ನು ಭೇಟಿಯಾದ ಪ್ರಧಾನಿ ಮೋದಿ: ಏನಿದು ಒಪ್ಪಂದ? ಏನು ಚರ್ಚೆಯಾಯಿತು?
ನೆದರ್​ಲ್ಯಾಂಡ್ಸ್ ದೇಶದ ಕಂಪನಿಗಳ ಮುಖ್ಯಸ್ಥರೊಂದಿಗೆ ಮೋದಿ ಸಭೆImage Credit source: Narendra Modi's X account
ಸುಗ್ಗನಹಳ್ಳಿ ವಿಜಯಸಾರಥಿ
|

Updated on:May 17, 2026 | 11:45 AM

Share

ನವದೆಹಲಿ, ಮೇ 17: ನೆದರ್‌ಲ್ಯಾಂಡ್ಸ್‌ನ ‘ದಿ ಹೇಗ್’ ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ನೆದರ್‌ಲ್ಯಾಂಡ್ಸ್ ಪ್ರಧಾನಿ ರಾಬ್ ಜೆಟ್ಟನ್ (Rob Jetten) ಅವರೊಂದಿಗೆ ಜಂಟಿಯಾಗಿ ಪ್ರಮುಖ ಡಚ್ ಕಂಪನಿಗಳ 16 ಸಿಇಒಗಳ (CEO) ಜೊತೆ ದುಂಡುಮೇಜಿನ (Roundtable meet) ಸಭೆ ನಡೆಸಿದರು. ಭಾರತದಲ್ಲಿ ಬಂಡವಾಳ ಹೂಡಿಕೆ, ನಾವೀನ್ಯತೆ ಹಾಗೂ ಉದ್ಯಮವನ್ನು ವಿಸ್ತರಿಸುವಂತೆ ಜಾಗತಿಕ ಉದ್ಯಮಿಗಳಿಗೆ ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ಮುಕ್ತ ಆಹ್ವಾನ ನೀಡಿದರು.

ಮುಖ್ಯ ಒಪ್ಪಂದ: ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಮೈತ್ರಿ

ಸಭೆಗೂ ಮುನ್ನ ಭಾರತದ ಉದ್ಯಮ ರಂಗದಲ್ಲಿ ಐತಿಹಾಸಿಕ ಒಪ್ಪಂದವೊಂದು ಏರ್ಪಟ್ಟಿತು. ಜಾಗತಿಕ ಸೆಮಿಕಂಡಕ್ಟರ್ ದೈತ್ಯ ಕಂಪನಿಯಾದ ASML ಮತ್ತು ಭಾರತದ ಟಾಟಾ ಎಲೆಕ್ಟ್ರಾನಿಕ್ಸ್ (Tata Electronics) ಸಂಸ್ಥೆಗಳು ಒಪ್ಪಂದಕ್ಕೆ ಸಹಿ ಹಾಕಿದವು. ಗುಜರಾತ್‌ನ ಧೋಲೇರಾದಲ್ಲಿ ಸ್ಥಾಪನೆಯಾಗಲಿರುವ ಭಾರತದ ಮೊದಲ ಅತ್ಯಾಧುನಿಕ ‘ಫ್ರಂಟ್-ಎಂಡ್ ಸೆಮಿಕಂಡಕ್ಟರ್ ಫ್ಯಾಬ್’ (Semiconductor FAB) ನಿರ್ಮಾಣಕ್ಕೆ ಈ ಒಪ್ಪಂದವು ಭಾರಿ ಬೆಂಬಲ ನೀಡಲಿದೆ.

ಭಾರತವು ವೇಗ ಮತ್ತು ಸ್ಥಿರತೆಯ ಸಂಕೇತ: ಮೋದಿ

ಇಂದಿನ ಭಾರತವು ಜಾಗತಿಕ ಮಟ್ಟದಲ್ಲಿ ಸ್ಥಿರತೆ ಹಾಗೂ ಬೃಹತ್ ಮಾರುಕಟ್ಟೆಯ ಸಂಕೇತವಾಗಿದೆ. ಮೂಲಸೌಕರ್ಯ, ಸ್ವಚ್ಛ ಇಂಧನ ಮತ್ತು ಸಂಪರ್ಕದ (Connectivity) ವಿಷಯದಲ್ಲಿ ಜಗತ್ತಿನ ಯಾವುದೇ ದೇಶವೂ ಭಾರತದ ವೇಗಕ್ಕೆ ಸಾಟಿಯಿಲ್ಲ. ಜಾಗತಿಕ ಆರ್ಥಿಕ ಬೆಳವಣಿಗೆಗೆ ಭಾರತವು ಪ್ರಸ್ತುತ ಶೇಕಡಾ 17 ರಷ್ಟು ಕೊಡುಗೆ ನೀಡುತ್ತಿದೆ ಎಂದು ಪ್ರಧಾನಿ ತಿಳಿಸಿದರು.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯ ತಲೆನೋವೇ ಬೇಡ; ಆಯಿಲ್ ಪೈಪ್​ಲೈನ್ ಯೋಜನೆ ಜಾರಿಗೆ ಯುಎಇ ಮುಂದು

ಭಾರತದ ಆರ್ಥಿಕತೆಯ ಡಿಎನ್‌ಎಯನ್ನು ನಿರಂತರ ಸುಧಾರಣೆಗಳ ಮೂಲಕ ಬದಲಾಯಿಸಲಾಗಿದೆ. ಖಾಸಗಿ ವಲಯಕ್ಕೆ ಹೆಚ್ಚಿನ ಸ್ಥಿರ ನೀತಿ (Predictability) ನೀಡಲು ಬಾಹ್ಯಾಕಾಶ, ಗಣಿಗಾರಿಕೆ ಮತ್ತು ಪರಮಾಣು ಇಂಧನ ಕ್ಷೇತ್ರಗಳನ್ನು ಮುಕ್ತಗೊಳಿಸಲಾಗಿದೆ. ತೆರಿಗೆ, ಕಾರ್ಮಿಕ ಕಾಯ್ದೆ ಹಾಗೂ ಸುಲಭ ವ್ಯಾಪಾರ (Ease of Doing Business) ಪ್ರಕ್ರಿಯೆಗಳನ್ನು ಸರಳಗೊಳಿಸಲಾಗಿದೆ ಎಂದು ನರೇಂದ್ರ ಮೋದಿ ವಿವರಿಸಿದರು.

ಚರ್ಚೆಯಾದ ವಿಷಯಗಳು

ಉದ್ಯಮಿಗಳನ್ನು ಪ್ರಮುಖವಾಗಿ ಮೂರು ಗುಂಪುಗಳಾಗಿ (Clusters) ವಿಂಗಡಿಸಿ ವಿಚಾರ ಮಂಡನೆ (Presentations) ಆಲಿಸಲಾಯಿತು:

  • ಸೆಮಿಕಂಡಕ್ಟರ್ಸ್, ತಂತ್ರಜ್ಞಾನ ಮತ್ತು ನಾವೀನ್ಯತೆ (Innovation)
  • ಮೂಲಸೌಕರ್ಯ, ಲಾಜಿಸ್ಟಿಕ್ಸ್ ಮತ್ತು ಕಡಲ ಉದ್ಯಮ (Maritime)
  • ಸುಸ್ಥಿರತೆ, ಹಸಿರು ಇಂಧನ ಮತ್ತು ಕೃಷಿ ಕ್ಷೇತ್ರ

ಪ್ರಧಾನಿ ಮೋದಿ ಅವರು ಕಡಲ ಉದ್ಯಮ, ನವೀಕರಿಸಬಹುದಾದ ಇಂಧನ, ಕೃತಕ ಬುದ್ಧಿಮತ್ತೆ (AI), ಡಿಜಿಟಲ್ ತಂತ್ರಜ್ಞಾನ ಮತ್ತು ಆರೋಗ್ಯ ರಕ್ಷಣಾ ಕ್ಷೇತ್ರಗಳಲ್ಲಿ ಭಾರತದಲ್ಲಿರುವ ಅಪಾರ ಅವಕಾಶಗಳನ್ನು ಬಳಸಿಕೊಳ್ಳಲು ಡಚ್ ಕಂಪನಿಗಳಿಗೆ ಕರೆ ನೀಡಿದರು. ಇದರೊಂದಿಗೆ ಭಾರತ-ಇಯು (India-EU) ಮುಕ್ತ ವ್ಯಾಪಾರ ಒಪ್ಪಂದವನ್ನು (FTA) ಶೀಘ್ರವಾಗಿ ಜಾರಿಗೆ ತರಲು ಉಭಯ ದೇಶಗಳ ಪ್ರಧಾನಿಗಳು ಒಲವು ತೋರಿದರು.

ಇದನ್ನೂ ಓದಿ: ಹಾರ್ಮುಜ್‌ ಸುತ್ತಲಿನ ಪ್ರದೇಶವೂ ಸುರಕ್ಷಿತವಲ್ಲ! ಮತ್ತೆ ಭಾರತದ ಹಡಗಿನ ಮೇಲೆ ದಾಳಿ

ಮೋದಿಯವರನ್ನು ಭೇಟಿಯಾದ 16 ಡಚ್ ಸಿಇಒಗಳು ಮತ್ತು ಕಂಪನಿಗಳ ಪಟ್ಟಿ

  1. ಎಪಿಎಂ ಟರ್ಮಿನಲ್ಸ್ (APM Terminals) ಸಿಇಒ ಕೀತ್ ಸ್ವೆಂಡ್ಸೆನ್
  2. ಎಎಸ್‌ಎಂಎಲ್ (ASML) ಸಿಇಒ ಕ್ರಿಸ್ಟೋಫ್ ಫೌಕೆಟ್
  3. ಡೇಮೆನ್ ಶಿಪ್‌ಯಾರ್ಡ್ಸ್ ಗ್ರೂಪ್ (Damen Shipyards Group) ಸಿಇಒ ಅರ್ನೌಟ್ ಡೇಮೆನ್
  4. ಹೇನಿಕನ್ (Heineken) ಸಿಇಒ ಡಾಲ್ಫ್ ವಾನ್ ಡೆನ್ ಬ್ರಿಂಕ್
  5. ಕೆಎಲ್‌ಎಂ ರಾಯಲ್ ಡಚ್ ಏರ್‌ಲೈನ್ಸ್ (KLM) ಸಿಇಒ ಮಾರ್ಜನ್ ರಿಂಟೆಲ್
  6. ಎನ್‌ಎಕ್ಸ್‌ಪಿ ಸೆಮಿಕಂಡಕ್ಟರ್ಸ್ (NXP Semiconductors) ನೆದರ್​ಲ್ಯಾಂಡ್ಸ್ ಸಿಇಒ ಮಾರಿಸ್ ಗೆರಾಟ್ಸ್
  7. ಫಿಲಿಪ್ಸ್ (Philips) ಸಿಇಒ ರಾಯ್ ಜಾಕೋಬ್ಸ್
  8. ಪೋರ್ಟ್ ಆಫ್ ರೋಟರ್‌ಡ್ಯಾಮ್ (Port of Rotterdam) – ಬೌಡೆವಿಜ್ನ್ ಸೀಮನ್ಸ್ (ಸಿಇಒ)
  9. ಪವರ್2ಎಕ್ಸ್ (Power2X) ಸಿಇಒ ಒಕ್ಕೊ ರೂಲೋಫ್ಸೆನ್
  10. ಪ್ರೊಸಸ್ (Prosus) ಸಿಇಒ ಫ್ಯಾಬ್ರಿಸಿಯೊ ಬ್ಲೋಯಿಸಿ
  11. ರಾಂಡ್‌ಸ್ಟಾಡ್ (Randstad) ಸಿಇಒ ಸ್ಯಾಂಡರ್ ವ್ಯಾನ್ ‘ಟ್ ನೂರ್ಡೆಂಡೆ
  12. ರಿಜ್ಕ್ ಜ್ವಾನ್ (Rijk Zwaan) ಸಿಇಒ ಮಾರ್ಟಿಜ್ನ್ ಎಗ್ಗಿಂಕ್
  13. ರಾಯಲ್ ಎಚ್‌ಝಡ್‌ಪಿಸಿ ಗ್ರೂಪ್ (Royal HZPC Group) ಸಿಇಒ ಹಾನ್ಸ್ ಹುಯಿಸ್ಟ್ರಾ
  14. ರಾಯಲ್ ಐಎಚ್‌ಸಿ (Royal IHC) ಸಿಇಒ ಡೆರ್ಕ್ ಟೆ ಬೊಕ್ಕೆಲ್
  15. ರಾಯಲ್ ವೋಪಾಕ್ (Royal Vopak) ಸಿಇಒ ಡಿಕ್ ರಿಚೆಲ್
  16. ವ್ಯಾನ್ ಊರ್ಡ್ (Van Oord) ಸಿಇಒ ಗೋವರ್ಟ್ ವ್ಯಾನ್ ಊರ್ಡ್

ಈ ಎಲ್ಲಾ ಉದ್ಯಮಿಗಳು ಭಾರತ ಸರ್ಕಾರದ ಸುಧಾರಣಾ ಕ್ರಮಗಳನ್ನು ಶ್ಲಾಘಿಸಿದ್ದು, ಭಾರತದಲ್ಲಿ ತಮ್ಮ ಉದ್ಯಮ ವಿಸ್ತರಣೆಗೆ ಅತ್ಯಂತ ಆಸಕ್ತಿ ಹೊಂದಿದ್ದೇವೆ ಎಂದು ಭರವಸೆ ನೀಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:42 am, Sun, 17 May 26

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More