
ಮುಂಬೈ, ಸೆಪ್ಟೆಂಬರ್ 24: ಭಾರತದ ಪ್ರಮುಖ ಷೇರು ವಿನಿಮಯ ಕೇಂದ್ರವಾದ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಐಪಿಒ ಮುಗಿದಿದ್ದು 1,817 ರೂ ಬೆಲೆಗೆ ಅದರ ಷೇರುಗಳು ಲಿಸ್ಟ್ ಆಗಿವೆ. ಅದರ ಮಾರುಕಟ್ಟೆ ಬಂಡವಾಳ (Market Capitalization) 46 ಬಿಲಿಯನ್ ಡಾಲರ್ ದಾಟಿದೆ. ಲಿಸ್ಟ್ ಆಗಿರುವ ಸ್ಟಾಕ್ ಎಕ್ಸ್ಚೇಂಜ್ಗಳ ಪೈಕಿ ಎನ್ಎಸ್ಇ ಏಷ್ಯಾದ ಎರಡನ ಅತಿಹೆಚ್ಚು ಮೌಲ್ಯದ ವಿನಿಮಯ ಕೇಂದ್ರ ಎನಿಸಿದೆ. ಅಮೆರಿಕದ ಸಿಎಂಇ ಗ್ರೂಪ್ ವಿಶ್ವದಲ್ಲೇ ಅತಿಹೆಚ್ಚು ಮೌಲ್ಯದ ವಿನಿಮಯ ಕೇಂದ್ರವೆನಿಸಿದೆ. ಹಾಂಕಾಂಗ್ ಎಕ್ಸ್ಚೇಂಜಸ್ ಏಷ್ಯಾದ ನಂಬರ್ ಒನ್ ಎನಿಸಿದೆ.
ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಜಪಾನ್ನ ಟೋಕಿಯೋ ಸ್ಟಾಕ್ ಎಕ್ಸ್ಚೇಂಜ್ ಅನ್ನು ಹಿಂದಿಕ್ಕೆ ಎರಡನೇ ಸ್ಥಾನ ಪಡೆದಿದೆ. ಇಲ್ಲಿ ಬಹಳ ದೊಡ್ಡ ಷೇರು ವಿನಿಮಯ ಕೇಂದ್ರಗಳು ಲಿಸ್ಟೆಡ್ ಆಗಿಲ್ಲದಿರುವುದರಿಂದ ಎನ್ಎಸ್ಇ ಟಾಪ್-2ಗೆ ಹೋಗಲು ಸಾಧ್ಯವಾಗಿದೆ.
ಸಿಎಂಇ ಗ್ರೂಪ್ ಸಂಸ್ಥೆಯು ಡೆರಿವೇಟಿವ್ಸ್ ಎಕ್ಸ್ಚೇಂಜ್ ಪ್ಲಾಟ್ಫಾರ್ಮ್ ಆಗಿದೆ. ಫ್ಯೂಚರ್ಸ್ ಕಾಟ್ರಾಕ್ಟ್ಗಳು, ಆಪ್ಷನ್ಸ್ ಟ್ರೇಡಿಂಗ್, ಷೇರುಗಳು, ಬ್ರೆಂಟ್ ಇತ್ಯಾದಿ ಕಮಾಡಿಟಿಗಳ ಟ್ರೇಡಿಂಗ್ ಅನ್ನು ಮಾಡಲಾಗುತ್ತದೆ. ಈ ಕಂಪನಿಯ ಸ್ವಂತ ಮಾರುಕಟ್ಟೆ ಬಂಡವಾಳ 97.31 ಬಿಲಿಯನ್ ಡಾಲರ್ ಇದೆ.
ಅಮೆರಿಕದ ಅಟ್ಲಾಂಟಾದಲ್ಲಿ ಕಚೇರಿ ಇರುವ ಇಂಟರ್ಕಾಂಟಿನೆಂಟಲ್ ಎಕ್ಸ್ಚೇಂಜ್ 87.77 ಬಿಲಿಯನ್ ಡಾಲರ್ ಮಾರುಕಟ್ಟೆ ಬಂಡವಾಳೀಕರಣ ಹೊಂದಿದ್ದು ವಿಶ್ವದ ಎರಡನೇ ಸ್ಥಾನ ಪಡೆದಿದೆ. ನಂತರದ ಸ್ಥಾನವು ಹಾಂಕಾಂಗ್ ಎಕ್ಸ್ಚೇಂಜ್ನದ್ದು.
ಇದನ್ನೂ ಓದಿ: ವಿಶ್ವದ ಅಗ್ರಮಾನ್ಯ ಎಲೆಕ್ಟ್ರಾನಿಕ್ಸ್ ಕಂಪನಿಯಾಗಿ ಬೆಳೆಯಲು ಪಣತೊಟ್ಟ ಭಾರತದ ಡಿಕ್ಸನ್ ಟೆಕ್ನಾಲಜೀಸ್
ಅಮೆರಿಕದ ನಾಸ್ಡಾಕ್, ಬ್ರಿಟನ್ನ ಲಂಡನ್ ಸ್ಟಾಕ್ ಎಕ್ಸ್ಚೇಂಜ್ ಕ್ರಮವಾಗಿ 53.34 ಬಿಲಿಯನ್ ಡಾಲರ್, 53.10 ಬಿಲಿಯನ್ ಡಾಲರ್ ಮಾರ್ಕೆಟ್ ಕ್ಯಾಪಿಟಲೈಸೇಶನ್ ಹೊಂದಿವೆ. ಇವುಗಳ ನಂತರ ಭಾರತದ ಎನ್ಎಸ್ಇ 6ನೇ ಸ್ಥಾನ ಪಡೆಯುತ್ತದೆ.
ಇದನ್ನೂ ಓದಿ: ಷೇರುಪೇಟೆ ಭಾರಿ ಕುಸಿತ; ಸೆನ್ಸೆಕ್ಸ್ಗೆ 1,247, ನಿಫ್ಟಿಗೆ 383 ಅಂಕಗಳ ನಷ್ಟ; ಮಾರುಕಟ್ಟೆ ಹಿನ್ನಡೆಗೆ ಪ್ರಮುಖ ಕಾರಣಗಳಿವು
ಈ ಮೇಲಿನ ಪಟ್ಟಿಯಲ್ಲಿ ಷೇರು ವಿನಿಮಯ ಕೇಂದ್ರಗಳಲ್ಲಿ ಟ್ರೇಡಿಂಗ್ ಆಗುತ್ತಿರುವ ಷೇರುಗಳ ಒಟ್ಟೂ ಮೌಲ್ಯವನ್ನು ಆಧರಿಸಿದ್ದಾಗಿದೆ. ಎನ್ಎಸ್ಇ ಪ್ಲಾಟ್ಫಾರ್ಮ್ನಲ್ಲಿ ಸುಮಾರು 2,500-3,000 ದಷ್ಟು ಕಂಪನಿಗಳ ಷೇರುಗಳು ಲಿಸ್ಟ್ ಆಗಿ ಟ್ರೇಡಿಂಗ್ ಆಗುತ್ತಿವೆ. ಇಷ್ಟೂ ಷೇರುಗಳ ಒಟ್ಟು ಮೌಲ್ಯ 4.76 ಟ್ರಿಲಿಯನ್ ಡಾಲರ್ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ