AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಷೇರುಪೇಟೆ ಭಾರಿ ಕುಸಿತ; ಸೆನ್ಸೆಕ್ಸ್​ಗೆ 1,247, ನಿಫ್ಟಿಗೆ 383 ಅಂಕಗಳ ನಷ್ಟ; ಮಾರುಕಟ್ಟೆ ಹಿನ್ನಡೆಗೆ ಪ್ರಮುಖ ಕಾರಣಗಳಿವು

ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನ ಹೆಚ್ಚಿನ ಸೂಚ್ಯಂಕಗಳು ಗುರುವಾರ ಕಸಿತ ಕಂಡಿವೆ. ಸೆನ್ಸೆಕ್ಸ್ 1,247 ಹಾಗು ನಿಫ್ಟಿ 383 ಅಂಕಗಳನ್ನು ಕಳೆದುಕೊಂಡಿವೆ. ತೈಲ ಬೆಲೆ ಏರಿಕೆಯಾಗಿರುವುದು, ಯುಎಸ್ ಬಾಂಡ್ ಟ್ರೆಷರಿ ಯೀಲ್ಡ್ ಕಳೆದ 19 ವರ್ಷದ ಗರಿಷ್ಠ ಮಟ್ಟಕ್ಕೆ ಏರಿರುವುದು ಇತ್ಯಾದಿ ಅಂಶಗಳು ಮಾರುಕಟ್ಟೆ ಹಿನ್ನಡೆಗೆ ಕಾರಣ ಎನ್ನಲಾಗಿದೆ.

ಷೇರುಪೇಟೆ ಭಾರಿ ಕುಸಿತ; ಸೆನ್ಸೆಕ್ಸ್​ಗೆ 1,247, ನಿಫ್ಟಿಗೆ 383 ಅಂಕಗಳ ನಷ್ಟ; ಮಾರುಕಟ್ಟೆ ಹಿನ್ನಡೆಗೆ ಪ್ರಮುಖ ಕಾರಣಗಳಿವು
ಮಾರುಕಟ್ಟೆImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 24, 2026 | 3:54 PM

Share

ನವದೆಹಲಿ, ಸೆಪ್ಟೆಂಬರ್ 24: ಜಾಗತಿಕ ಮಾರುಕಟ್ಟೆಯ ನಕಾರಾತ್ಮಕ ಸೂಚನೆಗಳಿಂದಾಗಿ ಭಾರತೀಯ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ತೀವ್ರ ಕುಸಿತವನ್ನು ಕಂಡಿವೆ. ಸೆನ್ಸೆಕ್ಸ್ 1,200 ಕ್ಕೂ ಹೆಚ್ಚು ಪಾಯಿಂಟ್‌ಗಳಷ್ಟು ಕುಸಿದರೆ, ನಿಫ್ಟಿ 23,250 ರ ಮಟ್ಟದಿಂದ ಕೆಳಗೆ ಜಾರಿದೆ. ಸೆನ್ಸೆಕ್ಸ್, ನಿಫ್ಟಿ ಮಾತ್ರವಲ್ಲ, ಬಿಎಸ್​ಇ ಮತ್ತು ಎನ್ಎಸ್​ಇ ವಿನಿಮಯ ಕೇಂದ್ರಗಳಲ್ಲಿರುವ ಬಹುತೇಕ ಎಲ್ಲಾ ಇಂಡೆಕ್ಸ್​ಗಳೂ ಹಿನ್ನಡೆ ಕಂಡಿವೆ. ಸೆನ್ಸೆಕ್ಸ್ 1,247 ಅಂಕಗಳಷ್ಟು ಕುದು 73,580 ಮಟ್ಟದಲ್ಲಿದೆ. ನಿಫ್ಟಿ ಸೂಚ್ಯಂಕ 383 ಅಂಕಗಳನ್ನು ಕಳೆದುಕೊಂಡು 23,221 ರ ಮಟ್ಟದಲ್ಲಿದೆ. ಮಿಡ್​ಕ್ಯಾಪ್ ಮಟ್ಟದ ಷೇರುಗಳು ಅತಿ ಹೆಚ್ಚು ಹಿನ್ನಡೆ ಕಂಡಿವೆ.

ಭಾರತದ ಮಾರುಕಟ್ಟೆಯ ಈ ದಿಢೀರ್ ಕುಸಿತಕ್ಕೆ ಪ್ರಮುಖ ಕಾರಣಗಳು ಮತ್ತು ವಿವರಗಳು ಇಲ್ಲಿವೆ:

ಅಮೆರಿಕದ ಬಾಂಡ್ ಇಳುವರಿ ಏರಿಕೆ

ಅಮೆರಿಕದ 10-ವರ್ಷದ ಬೆಂಚ್‌ಮಾರ್ಕ್ ಟ್ರೆಜರಿ ಬಾಂಡ್ ಇಳುವರಿಯು (US 10-year Treasury yield) ಶೇ. 5.10 ರ ಗಡಿ ದಾಟಿ ಏರಿಕೆಯಾಗಿದೆ. ಇದು 2007 ರ ನಂತರ ಕಂಡ ಅತ್ಯಂತ ಹೆಚ್ಚಿನ ಮಟ್ಟವಾಗಿದೆ. ಕಳೆದ 19 ವರ್ಷದಲ್ಲೇ ಅಮೆರಿಕದ ಬಾಂಡ್ ಇಳುವರಿ ಕಂಡ ಗರಿಷ್ಠ ಎತ್ತರ ಇದು.

ಬಾಂಡ್ ಇಳುವರಿ ಹೆಚ್ಚಾದಾಗ, ಜಾಗತಿಕ ಹೂಡಿಕೆದಾರರು ಷೇರು ಮಾರುಕಟ್ಟೆಯಂತಹ ಅಪಾಯಕಾರಿ ಹೂಡಿಕೆಗಳಿಂದ ಹಣವನ್ನು ಹಿಂತೆಗೆದುಕೊಂಡು ಸುರಕ್ಷಿತವಾದ ಅಮೆರಿಕನ್ ಬಾಂಡ್‌ಗಳಲ್ಲಿ ಹೂಡಿಕೆ ಮಾಡಲು ಮುಂದಾಗುತ್ತಾರೆ.

ಜಾಗತಿಕ ಮಾರುಕಟ್ಟೆಗಳಲ್ಲಿ ಹಿಂಜರಿತ

ಅಮೆರಿಕದ ಪ್ರಮುಖ ಷೇರು ಸೂಚ್ಯಂಕಗಳಾದ ನಾಸ್‌ಡಾಕ್ (Nasdaq), S&P 500 ಮತ್ತು ಡೌ ಜೋನ್ಸ್ (Dow Jones) ಮಾರುಕಟ್ಟೆಗಳು ಭಾರಿ ಕುಸಿತವನ್ನು ಕಂಡಿದ್ದರಿಂದ ಅದರ ಬಿಸಿ ಏಷ್ಯನ್ ಹಾಗೂ ಭಾರತೀಯ ಮಾರುಕಟ್ಟೆಗಳಿಗೂ ತಟ್ಟಿದೆ.

ಕಚ್ಚಾ ತೈಲ ಬೆಲೆ ಏರಿಕೆ

ಬ್ರೆಂಟ್ ಕಚ್ಚಾ ತೈಲದ ಬೆಲೆಯು (Brent Crude) ಪ್ರತಿ ಬ್ಯಾರೆಲ್‌ಗೆ 102 USD ಗಡಿ ದಾಟಿ ಮುನ್ನುಗ್ಗುತ್ತಿದ್ದು, ಇದು ಭಾರತದಂತಹ ಆಮದು ಆಧಾರಿತ ದೇಶಗಳಿಗೆ ಹಣದುಬ್ಬರದ ಆತಂಕವನ್ನು ಹೆಚ್ಚಿಸಿದೆ.

ಇದನ್ನೂ ಓದಿ: ಭಾರತದ ಮೂಲಸೌಕರ್ಯ ಕ್ರಾಂತಿ; ಸೇತುವೆ, ಸುರಂಗ, ಎಕ್ಸ್​ಪ್ರೆಸ್​ವೇಗಳಿಂದ ಮಿಂಚಿನ ಸಂಚಾರ; ಪ್ರಯಾಣ ಅವಧಿ ಗಣನೀಯವಾಗಿ ಇಳಿಕೆ

ಭಾರಿ ನಷ್ಟ ಅನುಭವಿಸಿದ ವಲಯಗಳು

ಬ್ಯಾಂಕಿಂಗ್, ಖಾಸಗಿ ಬ್ಯಾಂಕ್, ಫೈನಾನ್ಷಿಯಲ್ ಸರ್ವಿಸಸ್ ಮತ್ತು ಮೆಟಲ್ (ಲೋಹ) ವಲಯದ ಷೇರುಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಕುಸಿತ ಕಂಡವು. ಬಜಾಜ್ ಫಿನಾನ್ಸ್, ಆಕ್ಸಿಸ್ ಬ್ಯಾಂಕ್, ಕೋಟಕ್ ಬ್ಯಾಂಕ್, ಹೆಚ್‌ಡಿಎಫ್‌ಸಿ ಲೈಫ್, ಎಲ್ & ಟಿ, ಮತ್ತು ಗ್ರಾಸಿಮ್ ಮೊದಲಾದ ಷೇರುಗಳು ಅತೀವ ನಷ್ಟ ಕಂಡಿವೆ.

ಟೆಕ್ ಮಹೀಂದ್ರಾ, ಸನ್ ಫಾರ್ಮಾ, ಟಿಸಿಎಸ್, ಮತ್ತು ಐಸಿಐಸಿಐ ಬ್ಯಾಂಕ್ ಸೇರಿದಂತೆ ಕೆಲವು ಐಟಿ ಹಾಗೂ ಫಾರ್ಮಾ ಷೇರುಗಳು ಅಲ್ಪ ಚೇತರಿಕೆ ಕಂಡಿವೆ.

ಮಾರುಕಟ್ಟೆ ವಿಶ್ಲೇಷಕರ ಪ್ರಕಾರ, ನಿಫ್ಟಿಗೆ 23,100 ರಿಂದ 23,300 ಅಂಕಗಳು ಪ್ರಮುಖ ಸಪೋರ್ಟ್ ಲೆವೆಲ್ ಎನಿಸಿವೆ. ಮಾರುಕಟ್ಟೆ ಮತ್ತೆ ಚೇತರಿಸಿಕೊಂಡು ಸಬಲವಾಗಲು ನಿಫ್ಟಿ 23,500 – 23,600 ರ ಮಟ್ಟವನ್ನು ದಾಟುವುದು ಅಗತ್ಯವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More