AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಅರಾಕಲ್, ಮೈಕ್ರೋಸಾಫ್ಟ್ ಉದ್ಯೋಗಿಗಳಿಗೆ ಲೇ ಆಫ್ ಭೀತಿ; 3,000ಕ್ಕೂ ಹೆಚ್ಚು ಮಂದಿಗೆ ಹೋಗುತ್ತಾ ಕೆಲಸ?

Oracle, Microsoft employees in India facing job loss fear: ಜಾಗತಿಕ ತಂತ್ರಜ್ಞಾನ ಸಂಸ್ಥೆಗಳು ಉದ್ಯೋಗಕಡಿತದ ಕಾರ್ಯ ಮುಂದುವರಿಸುತ್ತಿರುವಂತಿದೆ. ವರದಿಗಳ ಪ್ರಕಾರ, ಮೈಕ್ರೋಸಾಫ್ಟ್ ಮತ್ತು ಅರಾಕಲ್ ಸಂಸ್ಥೆಗಳು ಲೇ ಆಫ್ ಕ್ರಮ ತೆಗೆದುಕೊಳ್ಳುತ್ತಿವೆ. ಒರಾಕಲ್ ಭಾರತದಲ್ಲಿ 3,000 ಮಂದಿಯನ್ನು ಕೆಲಸದಿಂದ ತೆಗೆಯಬಹುದು ಎನ್ನಲಾಗಿದೆ. ಮೈಕ್ರೋಸಾಫ್ಟ್ ಭಾರತದಲ್ಲಿ 500 ಉದ್ಯೋಗಿಗಳನ್ನು ಪಿಐಪಿಯಲ್ಲಿ ಇಟ್ಟಿದೆ.

ಭಾರತದಲ್ಲಿ ಅರಾಕಲ್, ಮೈಕ್ರೋಸಾಫ್ಟ್ ಉದ್ಯೋಗಿಗಳಿಗೆ ಲೇ ಆಫ್ ಭೀತಿ; 3,000ಕ್ಕೂ ಹೆಚ್ಚು ಮಂದಿಗೆ ಹೋಗುತ್ತಾ ಕೆಲಸ?
ಅರಾಕಲ್Image Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 01, 2026 | 12:06 PM

Share

ನವದೆಹಲಿ, ಸೆಪ್ಟೆಂಬರ್ 1: ಜಾಗತಿಕ ಟೆಕ್ ದೈತ್ಯ ಸಂಸ್ಥೆಗಳು ಲೇ ಆಫ್ ದಿಕ್ಕಿನಲ್ಲಿ ಮುಂದುವರಿದಂತಿವೆ. ಅರಾಕಲ್ ಮತ್ತು ಮೈಕ್ರೋಸಾಫ್ಟ್ ಸಂಸ್ಥೆಗಳು ಸಾಕಷ್ಟು ಉದ್ಯೋಗಗಳಿಗೆ ಕತ್ತರಿ ಹಾಕುತ್ತಿವೆ ಎನ್ನುವಂತಹ ವರದಿ ಇದೆ. ಬಹಳಷ್ಟು ಭಾರತೀಯರು ಕೆಲಸ ಕಳೆದುಕೊಳ್ಳುವ ಭೀತಿ ಇದೆ. ವರದಿಗಳ ಪ್ರಕಾರ, ಭಾರತದಲ್ಲಿ ಅರಾಕಲ್ ಸಂಸ್ಥೆ (Oracle) ಸುಮಾರು 3,000 ಉದ್ಯೋಗಿಗಳನ್ನು ಲೇ ಆಫ್ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇನ್ನೊಂದೆಡೆ, ಮೈಕ್ರೋಸಾಫ್ಟ್ (Microsoft) ಸಂಸ್ಥೆ ಭಾರತದಲ್ಲಿ ತನ್ನ 500 ಉದ್ಯೋಗಿಗಳನ್ನು ಪಿಐಪಿ ನೋಟೀಸ್​ನಲ್ಲಿ ಇಟ್ಟಿರುವುದು ತಿಳಿದುಬಂದಿದೆ. ಈ ಎರಡು ಸುದ್ದಿಗಳು ಭಾರತದಲ್ಲಿ ಟೆಕ್ಕಿಗಳನ್ನು ಭಯಭೀತಗೊಳಿಸಿವೆ.

ಅರಾಕಲ್‌ನಲ್ಲಿ ಮತ್ತೆ ಪಿಂಕ್ ಸ್ಲಿಪ್ ಭೀತಿ

ಅರಾಕಲ್ (Oracle) ಸಂಸ್ಥೆಯು ತನ್ನ ಎರಡನೇ ತ್ರೈಮಾಸಿಕದ ಆರಂಭವಾದ ಸೆಪ್ಟೆಂಬರ್ 1 ರಿಂದ ಹೊಸ ಹಂತದ ಉದ್ಯೋಗ ಕಡಿತಕ್ಕೆ ಸಜ್ಜಾಗಿದೆ. ಕಂಪನಿಯು ಭಾರತದಲ್ಲಿ ಸುಮಾರು 2,000 ದಿಂದ 3,000 ಉದ್ಯೋಗಗಳನ್ನು ಕಡಿತಗೊಳಿಸುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ. ಎಕನಾಮಿಕ್ ಟೈಮ್ಸ್, ಬ್ಯುಸಿನೆಸ್ ಇನ್​ಸೈಡರ್ ಪತ್ರಿಕೆಗಳಲ್ಲಿ ಈ ಹಿಂದೆ ಬಂದ ವರದಿಗಳು ತಮ್ಮ ಕೆಲ ಮೂಲಗಳನ್ನು ಉಲ್ಲೇಖಿಸಿ ಲೇ ಆಫ್ ಸಂಭಾವ್ಯತೆಯನ್ನು ತಿಳಿಸಿದ್ದವು. ಎರಡನೇ ತ್ರೈಮಾಸಿಕ ಶುರುವಾಗುವಷ್ಟರಲ್ಲಿ ಉದ್ಯೋಗಿಗಳ ಸಂಖ್ಯೆ ಕಡಿಮೆಗೊಳಿಸುವ ಗುರಿಯನ್ನು ಅರಾಕಲ್ ಮ್ಯಾನೇಜ್ಮೆಂಟ್ ಇಟ್ಟುಕೊಂಡಿತ್ತು ಎಂದು ವರದಿಗಳು ಹೇಳಿದ್ದವು. ಹೀಗಾಗಿ, ಸೆಪ್ಟೆಂಬರ್ 1 ಆಗಿರುವ ಇವತ್ತು ಅರಾಕಲ್​ನ ಟಾರ್ಗೆಟೆಡ್ ಉದ್ಯೋಗಿಗಳಿಗೆ ಲೇ ಆಫ್ ನೋಟೀಸ್ ಬಂದಿರಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿ: ಆಪಲ್ ಸಿಇಒ ಸ್ಥಾನಕ್ಕೆ ಟಿಮ್ ಕುಕ್ ವಿದಾಯ; ಸೆ. 1ರಿಂದ ಜಾನ್ ಟರ್ನಸ್ ಕೈಗೆ ಚುಕ್ಕಾಣಿ

‘ಬೆಳಗಿನ 6 ಗಂಟೆಯ ಇಮೇಲ್’ ಆತಂಕ

ಈ ಹಿಂದಿನ ಹಂತದ ಲೇ-ಆಫ್‌ಗಳಲ್ಲಿ ಉದ್ಯೋಗಿಗಳಿಗೆ ಯಾವುದೇ ಮುನ್ಸೂಚನೆ ನೀಡದೆ ಬೆಳಿಗ್ಗೆ 6 ಗಂಟೆಗೆ ಇಮೇಲ್ ಕಳುಹಿಸಿ ತಕ್ಷಣವೇ ಸಿಸ್ಟಮ್ ಆಕ್ಸೆಸ್ ರದ್ದುಗೊಳಿಸಲಾಗಿತ್ತು. ಅದೇ ಮಾದರಿಯ ಇಮೇಲ್ ಮತ್ತೆ ಬರಬಹುದು ಎಂಬ ಆತಂಕದಲ್ಲಿ ಉದ್ಯೋಗಿಗಳಿದ್ದಾರೆ. ಭಾರತದಲ್ಲಿ ಸದ್ಯ ಅರಾಕಲ್​ನ 30,000 ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. 3,000 ಮಂದಿಗೆ ಕೆಲಸ ಹೋದರೆ ಶೇ. 10 ಲೇ ಆಫ್ ಮಾಡಿದಂತಾಗುತ್ತದೆ.

ಎಐ (AI) ಹೂಡಿಕೆಗಾಗಿ ಉದ್ಯೋಗ ಕಡಿತ

ಕಳೆದ ಒಂದು ವರ್ಷದಲ್ಲಿ ಅರಾಕಲ್ ಸುಮಾರು 21,000 ಉದ್ಯೋಗಗಳನ್ನು ಕಡಿತಗೊಳಿಸಿದೆ. ಕೃತಕ ಬುದ್ಧಿಮತ್ತೆ (AI) ಮತ್ತು ಕ್ಲೌಡ್ ಡಾಟಾ ಸೆಂಟರ್‌ಗಳ ಮೂಲಸೌಕರ್ಯಕ್ಕೆ ಬಿಲಿಯನ್‌ಗಟ್ಟಲೆ ಡಾಲರ್ ಹೂಡಿಕೆ ಮಾಡಲು ವೆಚ್ಚ ನಿರ್ವಹಣೆಯ ಭಾಗವಾಗಿ ಸಂಸ್ಥೆ ಈ ಕ್ರಮ ಕೈಗೊಂಡಿದೆ.

ಇದನ್ನೂ ಓದಿ: ಯುದ್ಧ, ತೈಲ ಬಿಕ್ಕಟ್ಟಿನ ಸ್ಥಿತಿಯಲ್ಲೂ ಭಾರತದ ಆರ್ಥಿಕತೆ ಶೇ. 7.8 ಬೆಳೆಯಲು ಸಾಧ್ಯವಾಗಿದ್ದು ಹೇಗೆ?

ಮೈಕ್ರೋಸಾಫ್ಟ್‌ನಲ್ಲಿ PIP ಕ್ರಮ: ಉದ್ಯೋಗಿಗಳಿಗೆ ಭೀತಿ

ಮತ್ತೊಂದೆಡೆ, ಮೈಕ್ರೋಸಾಫ್ಟ್ (Microsoft) ಸಂಸ್ಥೆಯು ಭಾರತದಲ್ಲಿನ ತನ್ನ ಒಟ್ಟು ಸಿಬ್ಬಂದಿಯ ಪೈಕಿ ಸುಮಾರು ಶೇ. 2 ರಷ್ಟು, ಅಂದರೆ 400 ರಿಂದ 500 ಉದ್ಯೋಗಿಗಳನ್ನು ‘ಪರ್ಫಾರ್ಮೆನ್ಸ್ ಇಂಪ್ರೂವ್‌ಮೆಂಟ್ ಪ್ಲಾನ್’ (PIP) ವ್ಯಾಪ್ತಿಗೆ ತಂದಿದೆ. ಇದು ನೇರ ಲೇ-ಆಫ್ ಅಲ್ಲದಿದ್ದರೂ, ಮುಂದೆ ಉದ್ಯೋಗ ನಷ್ಟಕ್ಕೆ ಕಾರಣವಾಗಬಹುದು ಎಂಬ ಆತಂಕ ಸಿಬ್ಬಂದಿಯಲ್ಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ
ಮೈಸೂರು ದಸರಾ ಉದ್ಘಾಟನೆಗೂ ಮುನ್ನ ಅವಘಡ: ಮುರಿದುಬಿದ್ದ ನಂದಿ ಧ್ವಜ ಕಂಬ!
ಮೈಸೂರು ದಸರಾ ಉದ್ಘಾಟನೆಗೂ ಮುನ್ನ ಅವಘಡ: ಮುರಿದುಬಿದ್ದ ನಂದಿ ಧ್ವಜ ಕಂಬ!
ದಸರಾ ಉದ್ಘಾಟನೆಗೂ ಮುನ್ನ ಚಾಮುಂಡೇಶ್ವರಿ ದರ್ಶನ ಪಡೆದ ಗವಿಸಿದ್ದೇಶ್ವರ ಶ್ರೀ
ದಸರಾ ಉದ್ಘಾಟನೆಗೂ ಮುನ್ನ ಚಾಮುಂಡೇಶ್ವರಿ ದರ್ಶನ ಪಡೆದ ಗವಿಸಿದ್ದೇಶ್ವರ ಶ್ರೀ
ಚೆನ್ನೈ ಮೆಟ್ರೋದಲ್ಲಿ ಪ್ರಧಾನಿ ಮೋದಿ–ಸಿಎಂ ವಿಜಯ್ ಪ್ರಯಾಣ
ಚೆನ್ನೈ ಮೆಟ್ರೋದಲ್ಲಿ ಪ್ರಧಾನಿ ಮೋದಿ–ಸಿಎಂ ವಿಜಯ್ ಪ್ರಯಾಣ
ಮಾಗಡಿ ಮಾರುಕಟ್ಟೆಯಲ್ಲಿ ರಾಶಿ ರಾಶಿ ಕಸ ಕಂಡು ಗರಂ ಆದ್ರು ಸಚಿವ ಬಾಲಕೃಷ್ಣ!
ಮಾಗಡಿ ಮಾರುಕಟ್ಟೆಯಲ್ಲಿ ರಾಶಿ ರಾಶಿ ಕಸ ಕಂಡು ಗರಂ ಆದ್ರು ಸಚಿವ ಬಾಲಕೃಷ್ಣ!
Live: ಮೈಸೂರು ದಸರಾ ಉದ್ಘಾಟನೆ ನೇರಪ್ರಸಾರ
Live: ಮೈಸೂರು ದಸರಾ ಉದ್ಘಾಟನೆ ನೇರಪ್ರಸಾರ
ಮೈಸೂರು ದಸರಾಗೆ ಕ್ಷಣಗಣನೆ: ಗವಿಸಿದ್ದೇಶ್ವರ ಶ್ರೀಗಳಿಂದ ನಾಡಹಬ್ಬಕ್ಕೆ ಚಾಲನೆ
ಮೈಸೂರು ದಸರಾಗೆ ಕ್ಷಣಗಣನೆ: ಗವಿಸಿದ್ದೇಶ್ವರ ಶ್ರೀಗಳಿಂದ ನಾಡಹಬ್ಬಕ್ಕೆ ಚಾಲನೆ
ಎವರೆಸ್ಟ್ ಶಿಖರದ ಮೇಲೆ ಕನ್ನಡ ಧ್ವಜ ಹಾರಿಸಿ ಇತಿಹಾಸ ನಿರ್ಮಿಸಿದ ಕನ್ನಡಿಗರು!
ಎವರೆಸ್ಟ್ ಶಿಖರದ ಮೇಲೆ ಕನ್ನಡ ಧ್ವಜ ಹಾರಿಸಿ ಇತಿಹಾಸ ನಿರ್ಮಿಸಿದ ಕನ್ನಡಿಗರು!
ಉಕ್ರೇನ್‌ಗೆ ಕೈಕೊಟ್ಟ ಅಮೆರಿಕ: ಝೆಲೆನ್‌ಸ್ಕಿ ವಿರುದ್ಧ ಟ್ರಂಪ್ ಆಕ್ರೋಶ
ಉಕ್ರೇನ್‌ಗೆ ಕೈಕೊಟ್ಟ ಅಮೆರಿಕ: ಝೆಲೆನ್‌ಸ್ಕಿ ವಿರುದ್ಧ ಟ್ರಂಪ್ ಆಕ್ರೋಶ
ಮೈಸೂರು ದಸರಾ: ಗಜಪಡೆಗೆ ಮಜ್ಜನದೊಂದಿಗೆ ಸಂಭ್ರಮದ ಸಿದ್ಧತೆಗಳಿಗೆ ಚಾಲನೆ
ಮೈಸೂರು ದಸರಾ: ಗಜಪಡೆಗೆ ಮಜ್ಜನದೊಂದಿಗೆ ಸಂಭ್ರಮದ ಸಿದ್ಧತೆಗಳಿಗೆ ಚಾಲನೆ