AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಪಲ್ ಸಿಇಒ ಸ್ಥಾನಕ್ಕೆ ಟಿಮ್ ಕುಕ್ ವಿದಾಯ; ಸೆ. 1ರಿಂದ ಜಾನ್ ಟರ್ನಸ್ ಕೈಗೆ ಚುಕ್ಕಾಣಿ

Apple CEO, Tim Cook exit, John Ternus Entry: ಕಳೆದ 15 ವರ್ಷಗಳಿಂದ ಆಪಲ್ ಸಿಇಒ ಆಗಿದ್ದ ಟಿಮ್ ಕುಕ್ ಅವರು 2026ರ ಸೆ. 1ರಂದು ಆ ಹುದ್ದೆಯಿಂದ ಹೊರಬರಲಿದ್ದಾರೆ. ಆಪಲ್​ನ ಹಾರ್ಡ್​ವೇರ್ ವಿಭಾಗದ ಮುಖ್ಯಸ್ಥ ಜಾನ್ ಟರ್ನಸ್ ಇದೀಗ ಕಂಪನಿಯ ನೂತನ ಸಿಇಒ ಆಗಿದ್ದಾರೆ. ಸೆ. 1ರಿಂದಲೇ ಟರ್ನಸ್ ಅವರು ಸಿಇಒ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಆಪಲ್ ಸಿಇಒ ಸ್ಥಾನಕ್ಕೆ ಟಿಮ್ ಕುಕ್ ವಿದಾಯ; ಸೆ. 1ರಿಂದ ಜಾನ್ ಟರ್ನಸ್ ಕೈಗೆ ಚುಕ್ಕಾಣಿ
ಜಾನ್ ಟರ್ನಸ್Image Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 31, 2026 | 11:08 PM

Share

ಕ್ಯಾಲಿಫೋರ್ನಿಯಾ, ಆಗಸ್ಟ್ 31: ಜಾಗತಿಕ ಸ್ಮಾರ್ಟ್​ಫೋನ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಮತ್ತು ಅತ್ಯಂತ ಜನಪ್ರಿಯ ಎನಿಸಿರುವ ಆ್ಯಪಲ್ ಸಂಸ್ಥೆಯಲ್ಲಿ ಸಿಇಒ ಸ್ಥಾನದಲ್ಲಿ ಪಲ್ಲಟವಾಗಿದೆ. ಕಳೆದ 15 ವರ್ಷಗಳಿಂದ ಆಪಲ್ (Apple) ಸಂಸ್ಥೆಯ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಟಿಮ್ ಕುಕ್ (Tim Cook) ಅವರು ನಾಳೆ (2026ರ ಸೆಪ್ಟೆಂಬರ್ 1) ಆ ಹುದ್ದೆಯಿಂದ ಕೆಳಗಿಳಿಯುತ್ತಿದ್ದಾರೆ. ಆಪಲ್‌ನ ಹಾರ್ಡ್‌ವೇರ್ ವಿಭಾಗದ ಮುಖ್ಯಸ್ಥರಾಗಿದ್ದ ಜಾನ್ ಟರ್ನಸ್ (John Ternus) ಅವರು ಸಂಸ್ಥೆಯ ನೂತನ ಸಿಇಒ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಸಿಇಒ ಹುದ್ದೆಯಿಂದ ಕೆಳಗಿಳಿದರೂ ಟಿಮ್ ಕುಕ್ ಸಂಪೂರ್ಣವಾಗಿ ಸಂಸ್ಥೆಯನ್ನು ತೊರೆಯುತ್ತಿಲ್ಲ. ಅವರು ಆಪಲ್‌ನ ನಿರ್ದೇಶಕರ ಮಂಡಳಿಯ ಕಾರ್ಯಕಾರಿ ಅಧ್ಯಕ್ಷರಾಗಿ (Executive Chairman) ಮುಂದುವರಿಯಲಿದ್ದು, ಜಾಗತಿಕ ನೀತಿ ನಿರ್ಧಾರಗಳು ಹಾಗೂ ಸರ್ಕಾರಗಳೊಂದಿಗಿನ ಸಂಬಂಧಗಳ ನಿರ್ವಹಣೆಯಲ್ಲಿ ಸಕ್ರಿಯರಾಗಿರಲಿದ್ದಾರೆ.

ಇದನ್ನೂ ಓದಿ: ಇಂಟರ್ನೆಟ್ ಇಲ್ಲದ ಫೀಚರ್ ಫೋನ್​ನಿಂದ ಯುಪಿಐ ಪೇಮೆಂಟ್: ಫೋನ್​ಪೇಯಿಂದ UPI 123Pay ಸೇವೆ

15 ವರ್ಷಗಳ ಐತಿಹಾಸಿಕ ಸಾಧನೆ: ಆಪಲ್ ಸಂಸ್ಥಾಪಕ ಸ್ಟೀವ್ ಜಾಬ್ಸ್ 2011 ರಲ್ಲಿ ಸಿಇಒ ಸ್ಥಾನದಿಂದ ನಿವೃತ್ತರಾದರು. ಅವರ ಉತ್ತರಾಧಿಕಾರಿಯಾಗಿ ಸಿಇಒ ಆದ ಟಿಮ್ ಕುಕ್, 15 ವರ್ಷದಲ್ಲಿ ಆಪಲ್ ಸಂಸ್ಥೆಯ ಮಾರುಕಟ್ಟೆ ಮೌಲ್ಯವನ್ನು $350 ಬಿಲಿಯನ್‌ನಿಂದ $5 ಟ್ರಿಲಿಯನ್ ಡಾಲರ್‌ಗೆ ಏರಿಸಿದ್ದಾರೆ.

ಕುಕ್ ಅವಧಿಯಲ್ಲಿ ಹೊಸ ಉತ್ಪನ್ನ ಮತ್ತು ಸೇವೆಗಳು

ಟಿಮ್ ಕುಕ್ ಅವರ ಅವಧಿಯಲ್ಲಿ ಆಪಲ್ ವಾಚ್, ಏರ್‌ಪಾಡ್ಸ್, ವಿಶನ್ ಪ್ರೊ ನಂತಹ ಹೊಸ ಹಾರ್ಡ್‌ವೇರ್ ಉತ್ಪನ್ನಗಳು ಮಾತ್ರವಲ್ಲದೆ ಆಪಲ್ ಮ್ಯೂಸಿಕ್, ಐಕ್ಲೌಡ್, ಆಪಲ್ ಟಿವಿ+ ಹಾಗೂ ಆಪಲ್ ಪೇ ನಂತಹ ಬೃಹತ್ ಸೇವಾ ವಲಯಗಳು (Services) ಯಶಸ್ವಿಯಾಗಿ ಬೆಳೆದು ನಿಂತಿವೆ.

ನೂತನ ಸಿಇಒ ಜಾನ್ ಟರ್ನಸ್: ಕಳೆದ 25 ವರ್ಷಗಳಿಂದ ಆಪಲ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಜಾನ್ ಟರ್ನಸ್ ಹಾರ್ಡ್‌ವೇರ್ ಎಂಜಿನಿಯರಿಂಗ್ ವಿಭಾಗದ ಜವಾಬ್ದಾರಿ ಹೊರಬಂದಿದ್ದಾರೆ. ಆಪಲ್ ಸಿಲಿಕಾನ್ (M-series Chips), ಐಫೋನ್ ಮತ್ತು ಐಪ್ಯಾಡ್‌ಗಳ ಹಾರ್ಡ್‌ವೇರ್ ವಿನ್ಯಾಸದ ಯಶಸ್ಸಿನ ಹಿಂದೆ ಇವರ ಪಾತ್ರ ಪ್ರಮುಖವಾಗಿತ್ತು.

ಇದನ್ನೂ ಓದಿ: ಯುದ್ಧ, ತೈಲ ಬಿಕ್ಕಟ್ಟಿನ ಸ್ಥಿತಿಯಲ್ಲೂ ಭಾರತದ ಆರ್ಥಿಕತೆ ಶೇ. 7.8 ಬೆಳೆಯಲು ಸಾಧ್ಯವಾಗಿದ್ದು ಹೇಗೆ?

ಮುಂದಿನ ಸವಾಲುಗಳು: ಆಪಲ್ ಸಂಸ್ಥೆಯು ಎಐ (AI) ತಂತ್ರಜ್ಞಾನದಲ್ಲಿ ಪೈಪೋಟಿ ನೀಡಬೇಕಿರುವ ಹಾಗೂ ಜಾಗತಿಕ ಪೂರೈಕೆ ಸರಪಳಿ (Supply Chain) ಸವಾಲುಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಜಾನ್ ಟರ್ನಸ್ ನಾಯಕತ್ವ ವಹಿಸಿಕೊಳ್ಳುತ್ತಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More