AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂಟರ್ನೆಟ್ ಇಲ್ಲದ ಫೀಚರ್ ಫೋನ್​ನಿಂದ ಯುಪಿಐ ಪೇಮೆಂಟ್: ಫೋನ್​ಪೇಯಿಂದ UPI 123Pay ಸೇವೆ

PhonePe launches UPI 123Pay service for feature phones: ಭಾರತದ ನಂಬರ್ ಒನ್ ಡಿಜಿಟಲ್ ಪೇಮೆಂಟ್ ಕಂಪನಿ ಫೋನ್​ಪೇ ಫೀಚರ್ ಫೋನ್ ಬಳಕೆದಾರರಿಗೆ ಯುಪಿಐ ಪೇಮೆಂಟ್ ಫೀಚರ್ ಶುರು ಮಾಡಿದೆ. ಇಂಟರ್ನೆಟ್ ಸಂಪರ್ಕ ಇಲ್ಲದ ಫೀಚರ್ ಫೋನ್​ನಲ್ಲಿ ಫೋನ್​ಪೇನ ಯುಪಿಐ 123ಪೇ ಸರ್ವಿಸ್ ಬಳಸಿ ಯುಪಿಐ ಪೇಮೆಂಟ್ ಮಾಡಬಹುದು.

ಇಂಟರ್ನೆಟ್ ಇಲ್ಲದ ಫೀಚರ್ ಫೋನ್​ನಿಂದ ಯುಪಿಐ ಪೇಮೆಂಟ್: ಫೋನ್​ಪೇಯಿಂದ UPI 123Pay ಸೇವೆ
ಫೋನ್‌ಪೇImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 31, 2026 | 9:55 PM

Share

ನವದೆಹಲಿ, ಆಗಸ್ಟ್ 31: ಭಾರತದ ಅತಿದೊಡ್ಡ ಯುಪಿಐ ಪೇಮೆಂಟ್ ಸಂಸ್ಥೆಯಾದ ಫೋನ್‌ಪೇ (PhonePe) ಇದೀಗ ಫೀಚರ್ ಫೋನ್​ಗಳಿಗೆ ಯುಪಿಐ ಪಾವತಿ ಅವಕಾಶ ಕಲ್ಪಿಸಿದೆ. ಸ್ಮಾರ್ಟ್‌ಫೋನ್ ಹಾಗೂ ಇಂಟರ್ನೆಟ್ ಸೌಲಭ್ಯವಿಲ್ಲದ ಕೀಪ್ಯಾಡ್ (Feature) ಫೋನ್ ಬಳಕೆದಾರರಿಗಾಗಿ ‘PhonePe UPI 123Pay’ ಎಂಬ ನೂತನ ಸೇವೆ ಪ್ರಾರಂಭಿಸಿದೆ.

ಈ ಸೇವೆಯು ಎಸ್‌ಎಮ್‌ಎಸ್ (SMS) ಆಧಾರಿತ ತಂತ್ರಜ್ಞಾನದ ಮೇಲೆ ಕಾರ್ಯನಿರ್ವಹಿಸುವುದರಿಂದ 2G ನೆಟ್‌ವರ್ಕ್ ಇರುವ ಪ್ರದೇಶಗಳಲ್ಲೂ ಇಂಟರ್ನೆಟ್ ಇಲ್ಲದೆಯೇ ಸುಲಭವಾಗಿ ಡಿಜಿಟಲ್ ಪಾವತಿ ಮಾಡಬಹುದು.

ಇದನ್ನೂ ಓದಿ: ಯುದ್ಧ, ತೈಲ ಬಿಕ್ಕಟ್ಟಿನ ಸ್ಥಿತಿಯಲ್ಲೂ ಭಾರತದ ಆರ್ಥಿಕತೆ ಶೇ. 7.8 ಬೆಳೆಯಲು ಸಾಧ್ಯವಾಗಿದ್ದು ಹೇಗೆ?

ನೆರವು ಮತ್ತು ಸೇವೆಗಳು: ಫೋನ್​ಪೆನ ಈ ಹೊಸ ಸೇವೆಯ ಮೂಲಕ ಹಣ ವರ್ಗಾವಣೆ, ಕ್ಯೂಆರ್ (QR) ಕೋಡ್ ಸ್ಕ್ಯಾನ್ ಮಾಡಿ ಪಾವತಿಸುವುದು, ಬ್ಯಾಲೆನ್ಸ್ ಪರಿಶೀಲನೆ ಹಾಗೂ ವಹಿವಾಟಿನ ವಿವರಗಳನ್ನು ನೋಡಬಹುದು.

ಭಾರತದಲ್ಲಿ ಸುಮಾರು 20 ಕೋಟಿಗೂ ಹೆಚ್ಚು ಫೀಚರ್ ಫೋನ್ ಬಳಕೆದಾರರಿದ್ದು, ಥರ್ಡ್ ಪಾರ್ಟಿ ಆಪ್ (TPAP) ವಿಭಾಗದಲ್ಲಿ ಈ ಸೌಲಭ್ಯ ತಂದ ಮೊದಲ ಪ್ರಮುಖ ಸಂಸ್ಥೆ ಫೋನ್‌ಪೇ ಆಗಿದೆ.

ನೋಕಿಯಾ (Nokia), ಎಚ್‌ಎಂಡಿ (HMD), ಲಾವಾ (Lava) ಮತ್ತು ಐಟೆಲ್ (Itel) ಫೋನ್‌ಗಳಲ್ಲಿ ಈ ಆಪ್ ಪ್ರೀ-ಇನ್‌ಸ್ಟಾಲ್ (pre-bundled) ಆಗಿ ಸಿಗಲಿದೆ.

ಇದನ್ನೂ ಓದಿ: ಶೇ. 90 ಆದಾಯ ಹೂಡಿಕೆ ಹಾಕುವ ರಾಧಿಕಾ ಗುಪ್ತಾ; ಒಂದು ಪೈಸೆಯೂ ಉಳಿಸಲು ಆಗದಿದ್ದ ಅವರಿಗೆ ಇದು ಸಾಧ್ಯವಾಗಿದ್ದು ಹೇಗೆ?

ಧ್ವನಿ ಸಹಾಯ (Voice Assistant): ಫೀಚರ್ ಫೋನ್​ಗಳಲ್ಲಿ ಯುಪಿಐ ಪೇಮೆಂಟ್ ಸೌಲಭ್ಯವನ್ನು ಸಕ್ರಿಯಗೊಳಿಸಲು ಮತ್ತು ಬಳಸಲು ಸಹಾಯ ಮಾಡಲು ಕನ್ನಡ ಸೇರಿದಂತೆ 12 ಭಾರತೀಯ ಭಾಷೆಗಳಲ್ಲಿ ಎಐ (AI) ಧ್ವನಿ ಮಾರ್ಗದರ್ಶನ ಲಭ್ಯವಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು
ಚಿನ್ನದ ಸಿಂಹಾಸನವೇರಿದ ಯದುವೀರ ಒಡೆಯರ್:ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್
ಚಿನ್ನದ ಸಿಂಹಾಸನವೇರಿದ ಯದುವೀರ ಒಡೆಯರ್:ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್
ಚೆನ್ನೈನ ಜಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ
ಚೆನ್ನೈನ ಜಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ
ಚೆನ್ನೈನಲ್ಲಿ ಮೋದಿ ರೋಡ್‌ ಶೋ: 13 ಸಾವಿರ ಕೋಟಿ ರೂ. ಯೋಜನೆಗಳಿಗೆ ಚಾಲನೆ
ಚೆನ್ನೈನಲ್ಲಿ ಮೋದಿ ರೋಡ್‌ ಶೋ: 13 ಸಾವಿರ ಕೋಟಿ ರೂ. ಯೋಜನೆಗಳಿಗೆ ಚಾಲನೆ
ಬಿಗ್ ಬಾಸ್ ಕನ್ನಡ ಸೀಸನ್ 13: ವೈಲ್ಡ್ ಕಾರ್ಡ್ ಮೂಲಕ ಕಾಮನರ್ ಕುಮಾರಿ ಎಂಟ್ರಿ
ಬಿಗ್ ಬಾಸ್ ಕನ್ನಡ ಸೀಸನ್ 13: ವೈಲ್ಡ್ ಕಾರ್ಡ್ ಮೂಲಕ ಕಾಮನರ್ ಕುಮಾರಿ ಎಂಟ್ರಿ
ತುಮಕೂರು: ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿದ್ಧಗಂಗಾ ಶ್ರೀಗಳು
ತುಮಕೂರು: ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿದ್ಧಗಂಗಾ ಶ್ರೀಗಳು
ನೇಪಾಳದ ಬುಧಿ ಗಂಡಕಿ ನದಿಯಲ್ಲಿ ಹಠಾತ್ ಪ್ರವಾಹ
ನೇಪಾಳದ ಬುಧಿ ಗಂಡಕಿ ನದಿಯಲ್ಲಿ ಹಠಾತ್ ಪ್ರವಾಹ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ
ಮೈಸೂರು ದಸರಾ ಉದ್ಘಾಟನೆಗೂ ಮುನ್ನ ಅವಘಡ: ಮುರಿದುಬಿದ್ದ ನಂದಿ ಧ್ವಜ ಕಂಬ!
ಮೈಸೂರು ದಸರಾ ಉದ್ಘಾಟನೆಗೂ ಮುನ್ನ ಅವಘಡ: ಮುರಿದುಬಿದ್ದ ನಂದಿ ಧ್ವಜ ಕಂಬ!
ದಸರಾ ಉದ್ಘಾಟನೆಗೂ ಮುನ್ನ ಚಾಮುಂಡೇಶ್ವರಿ ದರ್ಶನ ಪಡೆದ ಗವಿಸಿದ್ದೇಶ್ವರ ಶ್ರೀ
ದಸರಾ ಉದ್ಘಾಟನೆಗೂ ಮುನ್ನ ಚಾಮುಂಡೇಶ್ವರಿ ದರ್ಶನ ಪಡೆದ ಗವಿಸಿದ್ದೇಶ್ವರ ಶ್ರೀ