AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೇ. 90 ಆದಾಯ ಹೂಡಿಕೆ ಹಾಕುವ ರಾಧಿಕಾ ಗುಪ್ತಾ; ಒಂದು ಪೈಸೆಯೂ ಉಳಿಸಲು ಆಗದಿದ್ದ ಅವರಿಗೆ ಇದು ಸಾಧ್ಯವಾಗಿದ್ದು ಹೇಗೆ?

Edelweiss MF's Radhika Gupta invests 90% of her income: ಎಡಲ್​ವೀಸ್ ಮ್ಯೂಚುವಲ್ ಫಂಡ್ ಸಂಸ್ಥೆಯ ಸಿಇಒ ರಾಧಿಕಾ ಗುಪ್ತಾ ಅವರು ತಮ್ಮ ಶೇ. 90 ಆದಾಯದ ಹಣವನ್ನು ಹೂಡಿಕೆಗಳಿಗೆ ಬಳಸುತ್ತಾರಂತೆ. ಅಂದರೆ, ಅವರು ತಮ್ಮ ಖರ್ಚು ವೆಚ್ಚಗಳನ್ನು ಶೇ. 10 ಹಣದಲ್ಲೇ ನಿಭಾಯಿಸುತ್ತಾರೆ. ಹಿಂದೆ ಒಂದು ಪೈಸೆ ಉಳಿಸಲು ಆಗದಿದ್ದ ಅವರಿಗೆ ಇಷ್ಟೊಂದು ಹೂಡಿಕೆ ಸಾಧ್ಯವಾಗಿದ್ದು ಹೇಗೆ?

ಶೇ. 90 ಆದಾಯ ಹೂಡಿಕೆ ಹಾಕುವ ರಾಧಿಕಾ ಗುಪ್ತಾ; ಒಂದು ಪೈಸೆಯೂ ಉಳಿಸಲು ಆಗದಿದ್ದ ಅವರಿಗೆ ಇದು ಸಾಧ್ಯವಾಗಿದ್ದು ಹೇಗೆ?
ಉಳಿತಾಯImage Credit source: anand purohit/Moment/Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 31, 2026 | 7:55 PM

Share

ನವದೆಹಲಿ, ಆಗಸ್ಟ್ 31: ಬಹಳ ಜನರು ಹಣ ಉಳಿಸಲು ಬಹಳ ಪರದಾಡುತ್ತಾರೆ. ಶೇ. 10ರಷ್ಟು ಹಣ ಉಳಿಸಿ, ಅದನ್ನು ಹೂಡಿಕೆ ಮಾಡಲೂ ಸಾಧ್ಯವಿಲ್ಲದೆ ಹತಾಶರಾಗುವುದುಂಟು. ಆದರೆ, ಎಡಲ್‌ವೀಸ್ ಮ್ಯೂಚುವಲ್ ಫಂಡ್‌ನ (Edelweiss Mutual Fund) ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಒ ರಾಧಿಕಾ ಗುಪ್ತಾ (Radhika Gupta) ಅವರು ತಮ್ಮ ಶೇ. 90ರಷ್ಟು ಆದಾಯವನ್ನು ಮ್ಯೂಚುವಲ್ ಫಂಡ್ ಎಸ್​ಐಪಿಗಳಲ್ಲಿ ನಿಯಮಿತವಾಗಿ ಹೂಡಿಕೆ ಮಾಡುತ್ತಿದ್ದಾರಂತೆ. ಹಾಗಂತ ಅವರು ಪಾಡ್​ಕ್ಯಾಸ್ಟ್​ವೊಂದರಲ್ಲಿ ಹೇಳಿಕೊಂಡಿದ್ದಾರೆ.

ಆರಂಭಿಕ ದಿನಗಳಲ್ಲಿ ಶೂನ್ಯ ಉಳಿತಾಯ

ತಮ್ಮ ವೃತ್ತಿಜೀವನದ ಆರಂಭಿಕ ವರ್ಷಗಳಲ್ಲಿ ತಾವು ಯಾವುದೇ ಉಳಿತಾಯ ಅಥವಾ ಹೂಡಿಕೆ ಮಾಡುತ್ತಿರಲಿಲ್ಲ ಎಂದು ಅವರು ಮುಕ್ತವಾಗಿ ಒಪ್ಪಿಕೊಂಡಿದ್ದಾರೆ. ಕಾಲಕ್ರಮೇಣ ಅನುಭವದೊಂದಿಗೆ ಶಿಸ್ತಾಗಿ ಹೂಡಿಕೆ ಮಾಡುವುದನ್ನು ಕಲಿತಿದ್ದಾರೆ.

ರಾಧಿಕಾ ಗುಪ್ತ ಅವರು ತಮ್ಮ ಆದಾಯದ ಸಿಂಹಪಾಲು (ಶೇ. 90) ಹಣವನ್ನು ಮ್ಯೂಚುವಲ್ ಫಂಡ್‌ಗಳು, ಈಕ್ವಿಟಿಗಳು ಹಾಗೂ ಡೆಟ್​ಗಳಲ್ಲಿ ನಿಯೋಜಿಸುತ್ತಾರೆ. ಉಳಿದ ಶೇ. 10 ರಷ್ಟು ಹಣವನ್ನು ಮಾತ್ರ ತಮ್ಮ ದೈನಂದಿನ ವೆಚ್ಚಗಳು ಮತ್ತು ವೈಯಕ್ತಿಕ ಅಗತ್ಯಗಳಿಗಾಗಿ ಬಳಸುತ್ತಾರೆ.

ಇದನ್ನೂ ಓದಿ: 40ರ ವರ್ಷ ವಯಸ್ಸು ದಾಟಿದ ಬಳಿಕ ಹಣದ ಬಳಕೆ ಹೇಗಿರಬೇಕು? ತಜ್ಞರ ಅನಿಸಿಕೆ ಇದು…

ಹೂಡಿಕೆದಾರರಿಗೆ ಕಿವಿಮಾತು

  • ಹೂಡಿಕೆ ಮಾಡಲು ಶಿಸ್ತು (Discipline) ಮತ್ತು ತಾಳ್ಮೆ (Patience) ಅತ್ಯಂತ ಅಗತ್ಯ.
  • ಆರಂಭದಲ್ಲಿ ಸಣ್ಣ ಪ್ರಮಾಣದಿಂದ ಉಳಿತಾಯ ಶುರು ಮಾಡಿ, ಆದಾಯ ಹೆಚ್ಚಿದಂತೆ ಉಳಿತಾಯ ಮತ್ತು ಹೂಡಿಕೆಯ ಶೇಕಡಾವಾರು ಪ್ರಮಾಣವನ್ನು ಕಡ್ಡಾಯವಾಗಿ ಹೆಚ್ಚಿಸಿಕೊಳ್ಳಬೇಕು.
  • ಮಾರುಕಟ್ಟೆಯ ಇತ್ತೀಚಿನ ರಿಟರ್ನ್ಸ್ ನೋಡುವ ಬದಲು, ದೀರ್ಘಾವಧಿಯ ಗುರಿಗಳನ್ನು ಇಟ್ಟುಕೊಂಡು ಪೋರ್ಟ್‌ಫೋಲಿಯೊ ಸಿದ್ಧಪಡಿಸಬೇಕು.

ವ್ಯಕ್ತಿಗತ ಹಣಕಾಸು ನಿರ್ವಹಣೆಯಲ್ಲಿ ಶಿಸ್ತು ಎಷ್ಟೊಂದು ಪ್ರಮುಖ ಎಂಬುವುದಕ್ಕೆ ರಾಧಿಕಾ ಗುಪ್ತಾ ಅವರ ಈ ಪಯಣ ಮತ್ತು ಶೇ. 90 ರಷ್ಟು ಹೂಡಿಕೆ ಸೂತ್ರವು ಸಾಕ್ಷಿಯಾಗಿದೆ. ಆದರೆ, ಎಲ್ಲರಿಂದಲೂ ನೂರಕ್ಕೆ ತೊಂಬತ್ತು ಹಣ ಉಳಿಸಲು ಆಗುವುದಿಲ್ಲ. ಅದಕ್ಕೆ ಹಣಕಾಸು ತಜ್ಞರು 50-30-20 ಸೂತ್ರ ಮುಂದಿಡುತ್ತಾರೆ. ಇಲ್ಲಿ ದಿನಸಿ, ವಿವಿಧ ಬಿಲ್​ಗಳು, ಮನೆ ಬಾಡಿಗೆ, ಆಸ್ಪತ್ರೆ, ಔಷಧ, ಸಾಲದ ಕಂತು ಇತ್ಯಾದಿ ಅಗತ್ಯ ವೆಚ್ಚಗಳು ನಿಮ್ಮ ಆದಾಯದ ಶೇ. 50 ಅನ್ನು ಮೀರುವಂತಿಲ್ಲ. ಮನರಂಜನೆ, ಪ್ರವಾಸ ಇತ್ಯಾದಿ ಐಷಾರಾಮಿ ಎನಿಸುವ, ಅಗತ್ಯ ಇಲ್ಲದ ಆಸೆ ಬಯಕೆಗಳಿಗೆ ಮಾಡುವ ವೆಚ್ಚ ಶೇ. 30ಕ್ಕಿಂತ ಹೆಚ್ಚಿರಬಾರದು. ಇವುಗಳ ಮಧ್ಯೆ ಶೇ. 20ರಷ್ಟು ಆದಾಯವನ್ನು ಕಟ್ಟುನಿಟ್ಟಾಗಿ ಉಳಿಸಿ, ಹೂಡಿಕೆಗೆ ಬಳಸಬೇಕು.

ಇದನ್ನೂ ಓದಿ: ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇಷ್ಟಿರಲೇಬೇಕು

ನಿಮಗೆ ಕೈ ಸೇರುವ ಸಂಬಳ 50,000 ರೂ ಇದ್ದರೆ 10,000 ರೂನಷ್ಟಾದರೂ ನೀವು ಉಳಿಸಿ ಹೂಡಿಕೆ ಮಾಡಬೇಕು. ಅನಗತ್ಯ ವೆಚ್ಚಗಳನ್ನು ಕಡಿತಗೊಳಿಸಿ ಆ ಹಣವನ್ನೂ ಹೂಡಿಕೆಗೆ ಬಳಸುವ ಶಿಸ್ತನ್ನು ನೀವು ರೂಢಿಸಿಕೊಂಡರೆ ದೀರ್ಘಾವಧಿಯಲ್ಲಿ ಉತ್ತಮ ಸಂಪತ್ತು ಸೃಷ್ಟಿಸಲು ಸಾಧ್ಯ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಯ ಕಂಪು ಪಸರಿಸಿದ ಪಿಎಂ ಮೋದಿ
ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಯ ಕಂಪು ಪಸರಿಸಿದ ಪಿಎಂ ಮೋದಿ
CID ತನಿಖೆ ವೇಳೆ ಹಲವು ಸ್ಫೋಟಕ ಅಂಶಗಳು ಪತ್ತೆ
CID ತನಿಖೆ ವೇಳೆ ಹಲವು ಸ್ಫೋಟಕ ಅಂಶಗಳು ಪತ್ತೆ