AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೋಹಿತ್ ಶರ್ಮಾ​​ಗೆ ಎಸೆದ ಯಾರ್ಕರ್​ಗೆ ಅಜಿತ್ ಅಗರ್ಕರ್ ಕ್ಲೀನ್ ಬೌಲ್ಡ್​!

ಟೀಮ್ ಇಂಡಿಯಾದ ಹಿರಿಯ ಆಟಗಾರರ ಯುಗವನ್ನು ಕೊನೆಗಾಣಿಸಿ, ಭವಿಷ್ಯದ ಬಲಿಷ್ಠ ಯುವ ಪಡೆಯನ್ನು ಕಟ್ಟಲು ಹೊರಟಿದ್ದ ಬಿಸಿಸಿಐ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರ ಪ್ಲಾನ್ ಉಲ್ಟಾ ಹೊಡೆದಿದೆ. ರೋಹಿತ್ ಶರ್ಮಾ ಅವರ ಏಕದಿನ ಭವಿಷ್ಯಕ್ಕೆ ಬ್ರೇಕ್ ಹಾಕಿ, ಯಶಸ್ವಿ ಜೈಸ್ವಾಲ್ ಅವರಿಗೆ ಮಣೆ ಹಾಕಲು ಅಗರ್ಕರ್ ಸಿದ್ಧಪಡಿಸಿದ್ದ ಮಹಾ ಮಾಸ್ಟರ್ ಪ್ಲಾನ್‌ಗೆ ಖುದ್ದು ಬಿಸಿಸಿಐ ಆಡಳಿತ ಮಂಡಳಿಯೇ ಶಾಕ್ ನೀಡಿದೆ.

ರೋಹಿತ್ ಶರ್ಮಾ​​ಗೆ ಎಸೆದ ಯಾರ್ಕರ್​ಗೆ ಅಜಿತ್ ಅಗರ್ಕರ್ ಕ್ಲೀನ್ ಬೌಲ್ಡ್​!
ಅಜಿತ್ - ರೋಹಿತ್Image Credit source: GettyImages
ಝಾಹಿರ್ ಯೂಸುಫ್
|

Updated on: Sep 21, 2026 | 8:11 AM

Share

ಟೀಮ್ ಇಂಡಿಯಾದ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ದಿಢೀರ್ ರಾಜೀನಾಮೆ ನೀಡುತ್ತಿರುವುದು ಯಾಕೆ? ಇದು ಸದ್ಯ ಕ್ರಿಕೆಟ್ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಪ್ರಶ್ನೆ. ಭಾರತ ತಂಡದಲ್ಲಿ ಮಹತ್ವದ ಬದಲಾವಣೆಗಳನ್ನು ತರುವ ಉದ್ದೇಶದಿಂದ ಬಿಸಿಸಿಐ, ಅಗರ್ಕರ್ ಅವರನ್ನು ಆಯ್ಕೆ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಿಸಿತ್ತು. ಆದರೀಗ ಅವರು ಏಕಾಏಕಿ ತಮ್ಮ ಸ್ಥಾನ ತೊರೆಯಲು ಮುಂದಾಗಿದ್ದಾರೆ. ಇದಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ನಡುವೆ ತಲೆದೂರಿರುವ ತೀವ್ರ ಭಿನ್ನಾಭಿಪ್ರಾಯವೇ ಮುಖ್ಯ ಕಾರಣ ಎಂದು ತಿಳಿದುಬಂದಿದೆ.

ಅಜಿತ್ ಅಗರ್ಕರ್ ಅವರ ದಿಟ್ಟ ನಿರ್ಧಾರಗಳು ಹಾಗೂ ತಂಡದಲ್ಲಿನ ಬದಲಾವಣೆಗೆ ಬಿಸಿಸಿಐ ಸಂಪೂರ್ಣ ಬೆಂಬಲ ನೀಡಿತ್ತು ಎಂಬ ವರದಿಗಳ ಬೆನ್ನಲ್ಲೇ, ಕ್ರಿಕೆಟ್ ವಲಯವನ್ನು ಬೆಚ್ಚಿಬೀಳಿಸುವ ಸುದ್ದಿಯೊಂದು ಹೊರಬಿದ್ದಿದೆ. ವರದಿಗಳ ಪ್ರಕಾರ, ಬಿಸಿಸಿಐ ಮತ್ತು ಅಜಿತ್ ಅಗರ್ಕರ್ ನಡುವಿನ ಸಂಬಂಧ ಇತ್ತೀಚಿನ ದಿನಗಳಲ್ಲಿ ತೀರಾ ಹಳಸಿದ್ದು, ಅಂತಿಮವಾಗಿ ಅಗರ್ಕರ್ ಅವರು 2026ರ ಅಕ್ಟೋಬರ್ 4 ರಿಂದ ಜಾರಿಗೆ ಬರುವಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.

ಟೀಮ್ ಇಂಡಿಯಾದ ಹಿರಿಯ ಆಟಗಾರರ, ವಿಶೇಷವಾಗಿ ನಾಯಕ ರೋಹಿತ್ ಶರ್ಮಾ ಅವರ ಏಕದಿನ ಭವಿಷ್ಯದ ಕುರಿತು ಬಿಸಿಸಿಐ ಮತ್ತು ಅಗರ್ಕರ್ ನಡುವೆ ಉಂಟಾದ ತೀವ್ರ ಭಿನ್ನಾಭಿಪ್ರಾಯವೇ ಈ ಹಠಾತ್ ಬೆಳವಣಿಗೆಗೆ ಪ್ರಮುಖ ಕಾರಣ ಎನ್ನಲಾಗಿದೆ.

ರೋಹಿತ್ ಶರ್ಮಾ ಏಕದಿನ ಭವಿಷ್ಯ: ಅಗರ್ಕರ್ ಆಲೋಚನೆ ಏನಿತ್ತು?

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಟಿ20 ನಿವೃತ್ತಿ ನೀಡಿದ್ದರು. ಈ ನಿವೃತ್ತಿಯ ಬೆನ್ನಲ್ಲೇ ಭಾರತ ಟೆಸ್ಟ್ ತಂಡದಿಂದಲೂ ಇವರನ್ನು ಹೊರಗಿಡಲು ಪ್ರಯತ್ನಿಸಲಾಗಿತ್ತು. ಅಷ್ಟರಲ್ಲಾಗಲೇ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್​ಗೆ ವಿದಾಯ ಹೇಳಿದ್ದರು.

ಇದಾದ ಬಳಿಕ, ಬಿಸಿಸಿಐ ಆಯ್ಕೆ ಸಮಿತಿಯು ರೋಹಿತ್ ಶರ್ಮಾ ಅವರು ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯಬೇಕೆಂದು ಬಯಸಿತ್ತು. ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಏಕದಿನ ಸರಣಿಯ ನಿರ್ಣಾಯಕ ಪಂದ್ಯದ ನಂತರ, ಹಿರಿಯ ಆರಂಭಿಕ ಆಟಗಾರ ರೋಹಿತ್ ಶರ್ಮಾ ಅವರನ್ನು ಏಕದಿನ ಮಾದರಿಯಿಂದಲೂ ಮುಕ್ತಗೊಳಿಸಿ, ಮುಂದಿನ ಪೀಳಿಗೆಯನ್ನು ಸಿದ್ಧಪಡಿಸುವುದು ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯ ಪ್ರಮುಖ ಯೋಜನೆಯಾಗಿತ್ತು.

2027ರ ಏಕದಿನ ವಿಶ್ವಕಪ್‌ ಅನ್ನು ದೃಷ್ಟಿಯಲ್ಲಿಟ್ಟುಕೊಂಡು ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರಿಗೆ ಸತತವಾಗಿ ಕನಿಷ್ಠ 20 ಏಕದಿನ ಪಂದ್ಯಗಳಲ್ಲಿ ಅವಕಾಶ ನೀಡಿ, ಅವರನ್ನು ಭವಿಷ್ಯದ ಆರಂಭಿಕ ಆಟಗಾರನನ್ನಾಗಿ ರೂಪಿಸುವುದು ಅಗರ್ಕರ್ ಅವರ ದೂರದೃಷ್ಟಿಯಾಗಿತ್ತು.

ಬಿಸಿಸಿಐ ಹಸ್ತಕ್ಷೇಪ ಮತ್ತು ಅಗರ್ಕರ್ ಅಸಮಾಧಾನ!

ಆದರೆ, ಹಿರಿಯ ಆಟಗಾರರನ್ನು ಹಂತಹಂತವಾಗಿ ಕೈಬಿಡುವ ಅಗರ್ಕರ್ ಅವರ ಈ ತರಾತುರಿಯ ಟೈಮ್‌ಲೈನ್‌ಗೆ ಬಿಸಿಸಿಐ ಒಪ್ಪಿಗೆ ನೀಡಲಿಲ್ಲ. ರೋಹಿತ್ ಶರ್ಮಾ ಅವರು ಮಂಡಳಿಯ ಮುಂದೆ ತಮ್ಮ ಆತಂಕಗಳನ್ನು ಹಂಚಿಕೊಂಡ ಬೆನ್ನಲ್ಲೇ, ಬಿಸಿಸಿಐ ಮಧ್ಯಪ್ರವೇಶಿಸಿತು. ರೋಹಿತ್ ಶರ್ಮಾ ಅವರ ನಿವೃತ್ತಿಯ ಕುರಿತಾದ ಊಹಾಪೋಹಗಳನ್ನು ಅಧಿಕೃತ ಹೇಳಿಕೆಯ ಮೂಲಕ ತಳ್ಳಿಹಾಕಿದ ಬಿಸಿಸಿಐ, ಹಿರಿಯ ಆಟಗಾರನಿಗೆ ತನ್ನ ಸಂಪೂರ್ಣ ಬೆಂಬಲವನ್ನು ಘೋಷಿಸಿತು.

ತಂಡದ ಹಿರಿಯ ಮತ್ತು ಸ್ಟಾರ್ ಆಟಗಾರರ ಭವಿಷ್ಯದ ಬಗ್ಗೆ ಇಷ್ಟು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಮುಖ್ಯ ಆಯ್ಕೆಗಾರನಾದ ತಮ್ಮ ಆಲೋಚನೆಗೆ ಮಂಡಳಿ ಬೆಲೆ ನೀಡದಿರುವುದು ಅಗರ್ಕರ್ ಅವರನ್ನು ಕೆರಳಿಸಿತು ಎನ್ನಲಾಗಿದೆ. ಕ್ರಿಕೆಟ್ ಆಡಳಿತ ಮತ್ತು ಆಯ್ಕೆ ಪ್ರಕ್ರಿಯೆಯಲ್ಲಿ ಬಿಸಿಸಿಐನ ಅತಿಯಾದ ಹಸ್ತಕ್ಷೇಪದಿಂದ ಬೇಸತ್ತ ಅವರು, ತಮ್ಮ ಅವಧಿಯನ್ನು ವಿಸ್ತರಿಸಿಕೊಳ್ಳದಿರಲು ತೀರ್ಮಾನಿಸಿದರು.

ವಿವಿಎಸ್ ಲಕ್ಷ್ಮಣ್ ಜೊತೆಗಿನ ಭಿನ್ನಾಭಿಪ್ರಾಯ!

ಕೇವಲ ಆಟಗಾರರ ಆಯ್ಕೆ ಮಾತ್ರವಲ್ಲದೆ, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (CoE) ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರೊಂದಿಗಿನ ಅಗರ್ಕರ್ ಅವರ ಸಂಬಂಧವೂ ಅಷ್ಟೊಂದು ಚೆನ್ನಾಗಿರಲಿಲ್ಲ. ಆಟಗಾರರ ಫಿಟ್‌ನೆಸ್, ಗಾಯದ ಸಮಸ್ಯೆಗಳ ಕುರಿತಾದ ಸಂವಹನ ಮತ್ತು ಇಂಡಿಯಾ ‘ಎ’ ತಂಡಗಳ ವೇಳಾಪಟ್ಟಿಯ ವಿಷಯದಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳಿದ್ದವು. ಇತ್ತೀಚೆಗೆ ಮುಂಬೈನಲ್ಲಿ ನಡೆದ ಉನ್ನತ ಮಟ್ಟದ ಪರಾಮರ್ಶನಾ ಸಭೆಗೆ ಅಜಿತ್ ಅಗರ್ಕರ್ ಗೈರುಹಾಜರಾಗಿದ್ದು ಅವರ ನಿರ್ಗಮನವನ್ನು ಬಹುತೇಕ ಖಚಿತಪಡಿಸಿತ್ತು.

ಇತ್ತ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಟೆಸ್ಟ್ ನಿವೃತ್ತಿಯಂತಹ ಪ್ರಮುಖ ಘಟ್ಟಗಳನ್ನು ಅಜಿತ್ ಅಗರ್ಕರ್ ಯಶಸ್ವಿಯಾಗಿ ನಿಭಾಯಿಸಿದ್ದರೂ, 2027ರ ವಿಶ್ವಕಪ್‌ಗಾಗಿ ಅವರು ರೂಪಿಸಿದ್ದ ದೀರ್ಘಾವಧಿಯ ಬ್ಲೂಪ್ರಿಂಟ್‌ಗೆ ಬಿಸಿಸಿಐ ಬ್ರೇಕ್ ಹಾಕಿದೆ. ಅಂದರೆ ಆರಂಭದಲ್ಲಿ ಅಜಿತ್ ಅಗರ್ಕರ್ ಅವರ ದಿಟ್ಟ ನಿರ್ಧಾರಗಳಿಗೆ ಮುಕ್ತ ಬೆಂಬಲ ನೀಡಿದ್ದ ಬಿಸಿಸಿಐ, ಆ ಬಳಿಕ ರೋಹಿತ್ ಶರ್ಮಾ ಅವರ ಭವಿಷ್ಯದ ವಿಚಾರದಲ್ಲಿ ಆಯ್ಕೆ ಸಮಿತಿಯ ನಿಲುವಿಗೆ ವಿರುದ್ಧವಾಗಿ ತಿರುಗಿ ನಿಂತಿದೆ. ಮಂಡಳಿಯ ಈ ಹಠಾತ್ ಹಸ್ತಕ್ಷೇಪ ಹಾಗೂ ಭಿನ್ನಾಭಿಪ್ರಾಯದಿಂದ ತೀವ್ರ ಅಸಮಾಧಾನಗೊಂಡಿರುವ ಅಗರ್ಕರ್, ತಮ್ಮ ಅಧಿಕಾರಾವಧಿಯನ್ನು ವಿಸ್ತರಿಸಿಕೊಳ್ಳದೆ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ: ಅಸಮರ್ಪಕ ವೇಳಾಪಟ್ಟಿ: ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ಅಲಭ್ಯ!

ಒಟ್ಟಾರೆಯಾಗಿ ಹೇಳುವುದಾದರೆ, ಭಾರತೀಯ ಕ್ರಿಕೆಟ್‌ನಲ್ಲಿ ಬದಲಾವಣೆಯ ಪರ್ವದ ನಡುವೆಯೇ ಸಂಭವಿಸಿರುವ ಅಜಿತ್ ಅಗರ್ಕರ್ ಅವರ ಈ ನಿರ್ಗಮನ, ಬಿಸಿಸಿಐ ಆಡಳಿತ ಮಂಡಳಿ ಮತ್ತು ಆಯ್ಕೆ ಸಮಿತಿಯ ನಡುವಿನ ಭಿನ್ನಾಭಿಪ್ರಾಯಗಳನ್ನು ಮತ್ತೊಮ್ಮೆ ಮುನ್ನಲೆಗೆ ತಂದಿದೆ.

Follow Us
ಬೆಂಗಳೂರಿನ ಹಲವೆಡೆ ತಡರಾತ್ರಿ ಮಳೆ ಅಬ್ಬರ: ವಾಹನ ಸವಾರರ ಪರದಾಟ
ಬೆಂಗಳೂರಿನ ಹಲವೆಡೆ ತಡರಾತ್ರಿ ಮಳೆ ಅಬ್ಬರ: ವಾಹನ ಸವಾರರ ಪರದಾಟ
ರವಿ ಕನ್ಯಾ, ಚಂದ್ರ ಧನು ರಾಶಿಯಲ್ಲಿ ಸಂಚಾರ: 12 ರಾಶಿಗಳ ಇಂದಿನ ದಿನ ಭವಿಷ್ಯ
ರವಿ ಕನ್ಯಾ, ಚಂದ್ರ ಧನು ರಾಶಿಯಲ್ಲಿ ಸಂಚಾರ: 12 ರಾಶಿಗಳ ಇಂದಿನ ದಿನ ಭವಿಷ್ಯ
ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು
ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ಸಿನಿಮಾ ಸೆನ್ಸಾರ್​​ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ
ಸಿನಿಮಾ ಸೆನ್ಸಾರ್​​ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ