ನವದೆಹಲಿ, ನವೆಂಬರ್ 13: ಪಾಕಿಸ್ತಾನದ ಆರ್ಥಿಕತೆಯನ್ನು ಮೇಲೆತ್ತಲು ಅಲ್ಲಿನ ಸರ್ಕಾರ ಅವಿರತವಾಗಿ ಪ್ರಯತ್ನಿಸುತ್ತಿದೆ. ಅದು ಒಂದಿಷ್ಟು ಪರಿಣಾಮ ಬೀರಲು ಆರಂಭಿಸಿದ್ದು, ಅದರ ಫಲವಾಗಿ ಪಾಕಿಸ್ತಾನದ ಡೆಟ್ ಟು ಜಿಡಿಪಿ ರೇಶಿಯೋ ಗಣನೀಯವಾಗಿ ಇಳಿಕೆ ಆಗಿದೆ. ಪಾಕಿಸ್ತಾನದ ಡಾನ್ ವಾಹಿನಿಯ ವರದಿ ಪ್ರಕಾರ ಸೆಪ್ಟೆಂಬರ್ ತಿಂಗಳಲ್ಲಿ ಜಿಡಿಪಿ ಮತ್ತು ಸಾಲ ನಡುವಿನ ಅನುಪಾತ ಶೇ. 65.7ರಷ್ಟಿದೆ. 2018ರ ಜೂನ್ ಬಳಿಕ ಇದು ಪಾಕಿಸ್ತಾನದ ಅತಿ ಸಕಾರಾತ್ಮಕ ಸ್ಥಿತಿ ಎನಿಸಿದೆ.
ಪಾಕಿಸ್ತಾನ ಸರ್ಕಾರದ ಸಾಲ ಸೆಪ್ಟೆಂಬರ್ನಲ್ಲಿ 79,200 ಕೋಟಿ ರೂಪಾಯಿಯಷ್ಟು (ಪಾಕ್ ರು) ಕಡಿಮೆ ಆಗಿದೆ. ಆಗಸ್ಟ್ ತಿಂಗಳಿಗೆ ಹೋಳಿಸಿದರೆ ಸೆಪ್ಟೆಂಬರ್ನಲ್ಲಿ ಸರ್ಕಾರ ಹೊಂದಿದ ಸಾಲದ ಪ್ರಮಾಣದಲ್ಲಿ ಶೇ. 1ರಷ್ಟು ಕಡಿಮೆ ಆಗಿದೆ. ಸರ್ಕಾರದ ಒಟ್ಟು ಸಾಲ ಸೆಪ್ಟೆಂಬರ್ ಅಂತ್ಯದಲ್ಲಿ 69.57 ಲಕ್ಷ ಕೋಟಿ ರೂ ಇದೆ. ಆಗಸ್ಟ್ನಲ್ಲಿ ಇದು 70.362 ಲಕ್ಷ ಕೋಟಿ ರೂ ಇತ್ತು.
ಇದನ್ನೂ ಓದಿ: ಬಡ್ಡಿದರ ಫೆಬ್ರುವರಿಯಲ್ಲೂ ಕಡಿಮೆ ಮಾಡುವ ಸಾಧ್ಯತೆ ಇಲ್ಲ: ಎಸ್ಬಿಐ ರಿಸರ್ಚ್
ಪಾಕಿಸ್ತಾನದ ಡೆಟ್ ಟು ಜಿಡಿಪಿ ರೇಶಿಯೋ ಶೇ 65.7 ರಷ್ಟಿದೆ. ಇದರಲ್ಲಿ ಆಂತರಿಕವಾಗಿ ಸಾಲದ ಅನುಪಾತ ಶೇ. 43.1ರಷ್ಟಿದೆ. ಬಾಹ್ಯ ಸಾಲದ ಪ್ರಮಾಣ ಶೇ. 22.7 ರಷ್ಟಿದೆ.
2023-24ರಲ್ಲಿ ಭಾರತದ ಡೆಟ್ ಟು ಜಿಡಿಪಿ ರೇಶಿಯೋ ಶೇ. 58.2ರಷ್ಟಿತ್ತು. ಇದರಲ್ಲಿ ಬಾಹ್ಯ ಸಾಲದ ಅನುಪಾತ ಶೇ. 18.8ರಷ್ಟಿದೆ. ಸರ್ಕಾರ ಪ್ರತೀ ವರ್ಷ ಒಂದು ಪ್ರತಿಶತದಷ್ಟು ಪ್ರಮಾಣದಲ್ಲಿ ಈ ಅನುಪಾತವನ್ನು ಕಡಿಮೆ ಮಾಡುವ ಗುರಿ ಹೊಂದಿದೆ. ಒಟ್ಟಾರೆಯಾಗಿ ಸಾಲ ಮತ್ತು ಜಿಡಿಪಿ ಅನುಪಾತ ಶೇ. 50ಕ್ಕೆ ತಂದು ನಿಲ್ಲಿಸುವುದು ಭಾರತ ಸರ್ಕಾರದ ಗುರಿಯಾಗಿದೆ.
ಇದನ್ನೂ ಓದಿ: 5,000 ಸ್ವಿಗ್ಗಿ ಉದ್ಯೋಗಿಗಳಿಗೆ 9,0000 ಕೋಟಿ ರೂ ಮೊತ್ತದ ಷೇರುಗಳು; ಕೋಟ್ಯಧಿಪತಿಗಳಾದ 500 ಮಂದಿ
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ