Paytm Listing: ಪೇಟಿಎಂ ಷೇರು ವಿತರಣೆಗಿಂತ 200 ರೂಪಾಯಿ ಕಡಿಮೆಗೆ ಲಿಸ್ಟಿಂಗ್​; ದಿನದ ಕನಿಷ್ಠ 1586 ರೂ.

ಪೇಟಿಎಂನ ಮಾತೃಸಂಸ್ಥೆ ಒನ್​97 ಕಮ್ಯುನಿಕೇಷನ್ಸ್ ಷೇರಿನ ಲಿಸ್ಟಿಂಗ್ ನವೆಂಬರ್ 18ರ ಗುರುವಾರದಂದು ಶೇ 9ರ ರಿಯಾಯಿತಿ ದರದಲ್ಲಿ ಲಿಸ್ಟಿಂಗ್ ಆಗಿದೆ. ದಿನದ ಕನಿಷ್ಠ ಮೊತ್ತ ರೂ. 1586 ತಲುಪಿದೆ.

Paytm Listing: ಪೇಟಿಎಂ ಷೇರು ವಿತರಣೆಗಿಂತ 200 ರೂಪಾಯಿ ಕಡಿಮೆಗೆ ಲಿಸ್ಟಿಂಗ್​; ದಿನದ ಕನಿಷ್ಠ 1586 ರೂ.
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Nov 18, 2021 | 11:30 AM

ಡಿಜಿಟಲ್ ಪಾವತಿ ಹಾಗೂ ಹಣಕಾಸು ಸೇವೆ ಒದಗಿಸುವ ಕಂಪೆನಿ ಪೇಟಿಎಂನಿಂದ ಬಹು ನಿರೀಕ್ಷಿತ ಷೇರು ಮಾರ್ಕೆಟ್ ಲಿಸ್ಟಿಂಗ್ ನವೆಂಬರ್​ 18, 2021ರ ಗುರುವಾರದಂದು ಆಗಿದೆ. ಐಪಿಒದ ವಿತರಣೆ ಬೆಲೆ ಎಂದು 2,150 ರೂಪಾಯಿ ನಿಗದಿ ಮಾಡಲಾಗಿತ್ತು. ಆದರೆ ಈ ದಿನದ ಲಿಸ್ಟಿಂಗ್ ಎನ್​ಎಸ್​ಇಯಲ್ಲಿ ಶೇ 9ರಷ್ಟು ರಿಯಾಯಿತಿಗೆ ಅಂದರೆ ಪ್ರತಿ ಷೇರಿಗೆ 1,950 ರೂಪಾಯಿಯಂತೆ ಆಯಿತು. ಇನ್ನು ಬಿಎಸ್​ಇಯಲ್ಲಿ ಪ್ರತಿ ಷೇರಿಗೆ ರೂ. 1955 ರೂಪಾಯಿಯಂತೆ ಲಿಸ್ಟಿಂಗ್ ಆಯಿತು. ಆದರೆ ಮಾರುಕಟ್ಟೆ ಬಂಡವಾಳ ಮೌಲ್ಯವು ಮೌಲ್ಯವು 1 ಲಕ್ಷ ಕೋಟಿ ರೂಪಾಯಿಗೂ ಮೇಲ್ಮಟ್ಟಕ್ಕೆ ಹೋಯಿತು. ಲಿಸ್ಟಿಂಗ್​ ಆದ ಕೆಲವೇ ನಿಮಿಷಗಳಲ್ಲಿ ಆರಂಭದ ಬೆಲೆಗಿಂತ ಇನ್ನಷ್ಟು ಕುಸಿದು, ಪ್ರತಿ ಷೇರಿಗೆ 1806 ರೂಪಾಯಿ ತಲುಪಿತು. ಮೂರು ದಿನಗಳ ಕಾಲ ಸಬ್​ಸ್ಕ್ರಿಪ್ಷನ್​ಗೆ ಮುಕ್ತವಾಗಿದ್ದ ಪೇಟಿಎಂನ ಮಾತೃಸಂಸ್ಥೆಯಾದ ಒನ್97 ಕಮ್ಯುನಿಕೇಷನ್ಸ್​ಗೆ ನವೆಂಬರ್​ 1ರಿಂದ ಅಪ್ಲೈ ಮಾಡಬಹುದಿತ್ತು. ದರದ ಬ್ಯಾಂಡ್​ ಆಗಿ ಪ್ರತಿ ಷೇರಿಗೆ 2080ರಿಂದ 2150 ರೂಪಾಯಿ ನಿಗದಿ ಮಾಡಲಾಗಿತ್ತು.

ಭಾರತದ ಅತಿ ದೊಡ್ಡ ಐಪಿಒ 1.89 ಪಟ್ಟು ಸಬ್​ಸ್ಕ್ರೈಬ್ ಆಗಿತ್ತು. ಸಾಂಸ್ಥಿಕ ಹೂಡಿಕೆದಾರರು ಹಾಗೂ ವಿದೇಶೀ ಸಾಂಸ್ಥಿಕ ಹೂಡಿಕೆದಾರರಿಗೆ ಮೀಸಲಾಗಿದ್ದ ಷೇರು 2.79 ಪಟ್ಟು ಸಬ್​ಸ್ಕ್ರೈಬ್​ ಆಗಿತ್ತು. ಪೇಟಿಎಂನಿಂದ 8300 ಕೋಟಿ ಮೌಲ್ಯದ ಹೊಸದಾದ ಷೇರು ವಿತರಣೆ ಮತ್ತು ಆಫರ್ ಫಾರ್ ಸೇಲ್ (OFS) ಮೂಲಕ 10 ಸಾವಿರ ಕೋಟಿ ರೂಪಾಯಿ ತನಕ ಮಾರಾಟ ಮಾಡಲಾಗಿತ್ತು. ಈ ಆಫರ್​ ಫಾರ್​ ಸೇಲ್​ನಲ್ಲಿ ಪೇಟಿಎಂ ಸ್ಥಾಪಕ ವಿಜಯ್ ಶೇಖರ್ ಶರ್ಮಾ ಅವರಿಗೆ ಸೇರಿದ 402.65 ಕೋಟಿ ರೂಪಾಯಿ ಮೌಲ್ಯದ ಷೇರುಗಳು ಸಹ ಇದ್ದವು.

ಎಂಜಿನಿಯರಿಂಗ್ ಪದವೀಧರರಾದ ವಿಜಯ್​ಶೇಖರ್ ಶರ್ಮಾ 2010ರಲ್ಲಿ ಮೊಬೈಲ್ ರೀಚಾರ್ಜ್​ಗಳಿಗಾಗಿ ಪ್ಲಾಟ್​ಫಾರ್ಮ್ ಪೇಟಿಎಂ ಆರಂಭಿಸಿದರು. 2000ನೇ ಇಸವಿಯಲ್ಲಿ ಒನ್​97 ಕಮ್ಯುನಿಕೇಷನ್ಸ್​ ಆಗಿ ಇನ್​ಕಾರ್ಪೊರೇಟ್ ಆಗಿತ್ತು. ಗ್ರಾಹಕರಿಗೆ ಮತ್ತು ವ್ಯಾಪಾರಿಗಳಿಗೆ ಭಾರತದ ಪ್ರಮುಖ ಡಿಜಿಟಲ್ ಎಕೋಸಿಸ್ಟಮ್ ಆಗಿತ್ತು. ಬಳಕೆದಾರರಿಗೆ ಪಾವತಿ ಸೇವೆಗಳು ಮತ್ತು ಹಣಕಾಸು ಸೇವೆಗಳ ತನಕ ವಿವಿಧ ಆಫರ್​ಗಳನ್ನು ಒದಗಿಸುತ್ತದೆ. ಪೇಟಿಎಂನ ಯಶಸ್ಸು ಶರ್ಮಾ ಅವರನ್ನು ಶತಕೋಟ್ಯಧಿಪತಿಯನ್ನಾಗಿ ಮಾಡಿದೆ. 240 ಕೋಟಿ ಡಾಲರ್ ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ಫೋರ್ಬ್ಸ್​ ತಿಳಿಸಿದೆ. ಇನ್ನು ಈಗಿನ ಐಪಿಒ ಮೂಲಕ ದೇಶದಲ್ಲಿ ನೂರಾರು ಮಂದಿ ಮಿಲಿಯನೇರ್​ಗಳಾಗಿದ್ದಾರೆ.

ಈ ಮಧ್ಯೆ ಬ್ರೋಕರೇಜ್ ಸಂಸ್ಥೆಯಾದ Macquire ರೀಸರ್ಚ್​ನಿಂದ ಪೇಟಿಎಂ ಮಾಲೀಕ ಸಂಸ್ಥೆಯಾದ ಒನ್​97 ಕಮ್ಯುನಿಕೇಷನ್ಸ್​ಗೆ ಕೆಳಮಟ್ಟದ ರೇಟಿಂಗ್ ನೀಡಲಾಗಿದೆ. ಪೇಟಿಎಂನ ಉದ್ಯಮ ಮಾಡೆಲ್​ನಲ್ಲಿ ಗಮನ ಮತ್ತು ಸೂಕ್ತ ದಿಕ್ಕು- ದೆಸೆಯ ಕೊರತೆ ಇದೆ ಎಂದು ಅಭಿಪ್ರಾಯ ಪಡಲಾಗಿದೆ.

ಇದನ್ನೂ ಓದಿ: ಪೇಟಿಎಂ ಕಂಪೆನಿಯ ಹಾಲಿ ಹಾಗೂ ಮಾಜಿ ಉದ್ಯೋಗಿಗಳು ಸೇರಿ 350 ಮಂದಿ ಆಗಲಿದ್ದಾರೆ ಕೋಟ್ಯಧಿಪತಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ