Aadhaar Update: ಆಧಾರ್ ಕಾರ್ಡ್​ಗೆ ಮೊಬೈಲ್ ಲಿಂಕ್ ಮಾಡುವುದು; ನಂಬರ್ ಬದಲಿಸುವುದು ಹೇಗೆ? ಇಲ್ಲಿದೆ ಕ್ರಮಗಳು

How to update mobile number to Aadhaar Card: ಆಧಾರ್ ಕಾರ್ಡ್​ಗೆ ಮೊಬೈಲ್ ನಂಬರ್ ಲಿಂಕ್ ಮಾಡಿದ್ದರೆ ಸಾಕಷ್ಟು ಕಾರ್ಯಗಳಿಗೆ ಉಪಯೋಗವಾಗುತ್ತದೆ. ಆಧಾರ್ ಎನ್ರೋಲ್ಮೆಂಟ್ ಸೆಂಟರ್​ಗೆ ಹೋಗಿ ಅಲ್ಲಿ ಬಯೋಮೆಟ್ರಿಕ್ ದತ್ತಾಂಶ ನೀಡಿ ನಿಮ್ಮ ಆಧಾರ್​ಗೆ ಮೊಬೈಲ್ ನಂಬರ್ ಜೋಡಿಸಬಹುದು. ಇದೇ ಆಧಾರ್ ಸೆಂಟರ್​ನಲ್ಲಿ ಆಧಾರ್​ಗೆ ಜೋಡಿಸಿದ್ದ ಮೊಬೈಲ್ ನಂಬರ್ ಅನ್ನೂ ಬದಲಿಸಬಹುದು. ಅದಕ್ಕೆ 50 ರೂ ಶುಲ್ಕ ಇರುತ್ತದೆ.

Aadhaar Update: ಆಧಾರ್ ಕಾರ್ಡ್​ಗೆ ಮೊಬೈಲ್ ಲಿಂಕ್ ಮಾಡುವುದು; ನಂಬರ್ ಬದಲಿಸುವುದು ಹೇಗೆ? ಇಲ್ಲಿದೆ ಕ್ರಮಗಳು
ಆಧಾರ್
Follow us
|

Updated on: Mar 18, 2024 | 4:04 PM

ಆಧಾರ್ ಕಾರ್ಡ್ ಇವತ್ತಿನ ದಿನಗಳಲ್ಲಿ ಬಹಳ ಮುಖ್ಯವಾದ ಸರ್ಕಾರಿ ದಾಖಲೆಯಾಗಿದೆ. ಹಲವು ಯೋಜನೆಗಳಿಗೆ ಇದು ಲಿಂಕ್ ಆಗಿರಬಹುದು. ಇದು ಗುರುತಿನ ದಾಖಲೆಯಷ್ಟೇ ಅಲ್ಲದೇ ವಿಳಾಸದ ದಾಖಲೆಯೂ (address proof) ಆಗಿದೆ. ಸರ್ಕಾರದ ವಿವಿಧ ಸಬ್ಸಿಡಿಗಳಿಗೆ ಆಧಾರವೂ ಆಗಿರುತ್ತದೆ. ಆಧಾರ್ ಕಾರ್ಡ್​ನಲ್ಲಿ (Aadhaar card) ವ್ಯಕ್ತಿಯ ಫೋಟೋ, ವಿಳಾಸ ಇತ್ಯಾದಿ ವಿವರದ ಜೊತೆಗೆ ಬಯೋಮೆಟ್ರಿಕ್ ಡಾಟಾ ಕೂಡ ಇರುತ್ತದೆ. ಆಧಾರ್ ಕಾರ್ಡ್​ಗೆ ಮೊಬೈಲ್ ಲಿಂಕ್ ಮಾಡುವುದು ಕಡ್ಡಾಯವಲ್ಲ. ಆದರೆ, ಮೊಬೈಲ್ ಸಂಖ್ಯೆ ಜೋಡಿಸಿದ್ದರೆ ಬಹಳ ಉಪಯೋಗಕ್ಕೆ ಬರುತ್ತದೆ. ಆನ್​ಲೈನ್​ನಲ್ಲಿ ಆಧಾರ್ ವೆರಿಫಿಕೇಶನ್​ಗೆ ಮೊಬೈಲ್ ನಂಬರ್ ಬೇಕಾಗುತ್ತದೆ. ಹಾಗೆಯೇ, ಆಧಾರ್ ಕಾರ್ಡ್​ಗೆ ಲಿಂಕ್ ಮಾಡಲಾದ ಮೊಬೈಲ್ ನಂಬರ್ ಅನ್ನು ಬದಲಿಸಬಹುದು.

ಆಧಾರ್ ಕಾರ್ಡ್​ಗೆ ಮೊಬೈಲ್ ನಂಬರ್ ಲಿಂಕ್ ಮಾಡುವುದು ಹೇಗೆ?

ನಿಮಗೆ ಸಮೀಪ ಇರುವ ಯಾವುದಾದರೂ ಆಧಾರ್ ಎನ್ರೋಲ್​ಮೆಂಟ್ ಸೆಂಟರ್​ಗೆ ಹೋಗಬೇಕು. ಅಲ್ಲಿರುವ ಸಿಬ್ಬಂದಿ ಬಳಿ ಸಂಬಂಧಪಟ್ಟ ಫಾರ್ಮ್ ಪಡೆದು ಭರ್ತಿ ಮಾಡಿ ಕೊಡಬೇಕು. ಬಳಿಕ ನಿಮ್ಮ ಕೈಬೆರಳ ಬಯೋಮೆಟ್ರಿಕ್ ಪಡೆದು ಡಾಟಾಬೇಸ್​ಗೆ ಲಾಗಿನ್ ಮಾಡಲಾಗುತ್ತದೆ. ಈಗ ನಿಮ್ಮ ಆಧಾರ್ ಡಾಟಾಬೇಸ್​ಗೆ ಮೊಬೈಲ್ ನಂಬರ್ ಅನ್ನು ಸೇರಿಸಲಾಗುತ್ತದೆ. ಇದಕ್ಕೆ 50 ರೂ ಶುಲ್ಕ ಇರುತ್ತದೆ.

ಇದನ್ನೂ ಓದಿ: ಸರ್ಕಾರದ ಸಣ್ಣ ಉಳಿತಾಯ ಯೋಜನೆಗಳು: ಏಪ್ರಿಲ್ ನಂತರದ ಕ್ವಾರ್ಟರ್​ನಲ್ಲಿ ಬಡ್ಡಿದರ ವಿವರ

ಆಧಾರ್ ಕಾರ್ಡ್​ಗೆ ಮೊಬೈಲ್ ನಂಬರ್ ಬದಲಿಸುವುದು ಹೇಗೆ?

ಆಧಾರ್ ಎನ್ರೋಲ್ಮೆಂಟ್​ಗೆ ಹೋಗಿ ಸಂಬಂಧಿಸಿದ ಫಾರ್ಮ್ ಪಡೆದು ಭರ್ತಿ ಮಾಡಿಕೊಡಬೇಕು. ನಿಮ್ಮ ಬಯೋಮೆಟ್ರಿಕ್ ಮೂಲಕ ಆಧಾರ್​ಗೆ ಲಾಗಿನ್ ಮಾಡಲಾಗುತ್ತದೆ. ಈಗ ನಿಮ್ಮ ಹೊಸ ಮೊಬೈಲ್ ನಂಬರ್ ಅನ್ನು ಇದಕ್ಕೆ ಸೇರಿಸಬಹುದು. 30 ದಿನದೊಳಗೆ ಆಧಾರ್ ಡಾಟಾಬೇಸ್​ನಲ್ಲಿ ಮೊಬೈಲ್ ನಂಬರ್ ಅಪ್​ಡೇಟ್ ಆಗಿರುತ್ತದೆ. ಈ ಸೇವೆಗೂ 50 ರೂ ಶುಲ್ಕ ನಿಗದಿಯಾಗಿರುತ್ತದೆ.

ಆನ್​ಲೈನ್​ನಲ್ಲಿ ಆಧಾರ್ ಕಾರ್ಡ್​ಗೆ ಮೊಬೈಲ್ ನಂಬರ್ ಬದಲಿಸುವುದು ಹೇಗೆ?

ಆನ್ಲೈನ್​ನಲ್ಲಿ ಆಧಾರ್ ಕಾರ್ಡ್​ಗೆ ಮೊಬೈಲ್ ನಂಬರ್ ಬದಲಿಸುವ ಅವಕಾಶವನ್ನು ಈಗ ನಿಲ್ಲಿಸಲಾಗಿದೆ. ಆಧಾರ್ ಕೇಂದ್ರಕ್ಕೆ ಹೋಗದೆಯೇ ಆಧಾರ್ ಸೇವೆ ಪಡೆಯುವ ದಾರಿಯೊಂದು ಇದೆ. ಅದು ಇಂಡಿಯ ಪೋಸ್ಟ್ ಸರ್ವಿಸ್​ನ ವೆಬ್​ಸೈಟ್ ಮೂಲಕ ಸಾಧ್ಯ. ಅದರ ಲಿಂಕ್ ಇಲ್ಲಿದೆ: ccc.cept.gov.in/ServiceRequest/request.aspx

ಇದನ್ನೂ ಓದಿ: ಒಳ್ಳೆಯ ಕ್ರೆಡಿಟ್ ಸ್ಕೋರ್ ಗಳಿಸಲು ಎಷ್ಟು ಕ್ರೆಡಿಟ್ ಕಾರ್ಡ್ ಇದ್ದರೆ ಉತ್ತಮ? ತಜ್ಞರ ಸಲಹೆ ಇದು

ಇದರಲ್ಲಿ ಹೆಸರು, ವಿಳಾಸ, ಇಮೇಲ್ ವಿಳಾಸ, ಮೊಬೈಲ್ ನಂಬರ್ ಇತ್ಯಾದಿ ವಿವರ ತುಂಬಿರಿ.

ಸರ್ವಿಸ್ ಡ್ರಾಪ್​ಡೌನ್​ನಲ್ಲಿ ಐಐಪಿಬಿ ಆಧಾರ್ ಸರ್ವಿಸಸ್ ಆಯ್ಕೆ ಮಾಡಿ

ಇಲ್ಲಿ ಐದು ವರ್ಷದೊಳಗಿನ ಮಕ್ಕಳಿಗೆ ಆಧಾರ್ ಎನ್ರೋಲ್ಮೆಂಟ್ ಹಾಗೂ ಆಧಾರ್​ಗೆ ಮೊಬೈಲ್ ಲಿಂಕಿಂಗ್, ಹೀಗೆ ಎರಡು ಆಯ್ಕೆಗಳಿರುತ್ತದೆ. ಮೊಬೈಲ್ ಲಿಂಕಿಂಗ್ ಅಪ್​ಡೇಟ್ ಎಂಬ ಆಯ್ಕೆ ಆರಿಸಿ. ಮೊಬೈಲ್​ಗೆ ಬರುವ ಒಟಿಪಿಯನ್ನು ನಮೂದಿಸಿ ಸಲ್ಲಿಸಿ.

ನಿಮಗೆ ಸಮೀಪದ ಅಂಚೆ ಕಚೇರಿಗೆ ಮನವಿ ಹೋಗುತ್ತದೆ. ಒಬ್ಬ ಅಧಿಕಾರಿ ನೀವಿರುವ ಸ್ಥಳಕ್ಕೆ ಬಂದು ವೆರಿಫಿಕೇಶನ್ ಮಾಡುತ್ತಾರೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು