ಇಪಿಎಫ್ಗೆ ಜೋಡಿತವಾದ ಇಪಿಎಸ್ ಸ್ಕೀಮ್ನಲ್ಲಿ ಅಧಿಕ ಪಿಂಚಣಿಗೆ ಅರ್ಜಿ ಸಲ್ಲಿಸಲು ಜುಲೈ 11ಕ್ಕೆ ಕೊನೆಯ ದಿನವಾಗಿ ಸರ್ಕಾರ ನಿಗದಿ ಮಾಡಿದೆ. ಈ ಡೆಡ್ಲೈನ್ಗೆ ಇನ್ನೊಂದೇ ದಿನ ಬಾಕಿ ಇದೆ. 2014ಕ್ಕೆ ಮುಂಚೆ ಇಪಿಎಸ್ಗೆ ಹೆಚ್ಚುವರಿ ಹಣ (Higher EPS Pension) ಜಮೆ ಆಗುವಂತೆ ಆಯ್ಕೆ ಮಾಡಿಕೊಂಡವರು ಈಗ ಅಧಿಕ ಪಿಂಚಣಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಸುಪ್ರೀಂ ಕೋರ್ಟ್ 2022ರ ನವೆಂಬರ್ 4ರಂದು ನೀಡಿದ ಆದೇಶದ ಪ್ರಕಾರ ಇಪಿಎಫ್ಒ ಸಂಸ್ಥೆ (EPFO) ಅಧಿಕ ಇಪಿಎಸ್ ಪಿಂಚಣಿ ಬಗ್ಗೆ ಮಾರ್ಗಸೂಚಿ ನೀಡಿತ್ತು.
ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಯೋಜನೆಯಲ್ಲಿ ಉದ್ಯೋಗಿಯ ಮೂಲ ವೇತನ ಮತ್ತು ಭತ್ಯೆ ಸೇರಿದ ಮೊತ್ತದ ಶೇ. 12ರಷ್ಟು ಹಣವನ್ನು ಕಡಿತಗೊಳಿಸಿ ಅವರ ಇಪಿಎಫ್ ಖಾತೆಗೆ ಹಾಕಲಾಗುತ್ತದೆ. ಅವರು ಕೆಲಸ ಮಾಡುವ ಸಂಸ್ಥೆ ಕೂಡ ಶೇ. 12ರಷ್ಟು ಹಣದ ಕೊಡುಗೆ ನೀಡುತ್ತದೆ. ಇದರಲ್ಲಿ ಶೇ. 8.33ರಷ್ಟು ಹಣ ಪ್ರತ್ಯೇಕವಾಗಿ ಇಪಿಎಸ್ ಖಾತೆಗೆ ಹಾಕಲಾಗುತ್ತದೆ. 2014ಕ್ಕೆ ಮುನ್ನ ಹೆಚ್ಚುವರಿ ಇಪಿಎಸ್ ಹಣದ ಕೊಡುಗೆಯನ್ನು ಆಯ್ದುಕೊಳ್ಳುವ ಅವಕಾಶ ಇತ್ತು. ಆದರೆ, 2014ರಲ್ಲಿ 15,000 ರೂ ಸಂಬಳದವರೆಗೆ ಮಾತ್ರ ಇಪಿಎಸ್ ಸ್ಕೀಮ್ ಅನ್ನು ಸೀಮಿತಗೊಳಿಸಲಾಯಿತು. ಅಂದರೆ ತಿಂಗಳಿಗೆ ಗರಿಷ್ಠ 1,250 ರೂ ಮಾತ್ರವೇ ಇಪಿಎಸ್ ಖಾತೆಗೆ ಜಮೆಯಾಗುತ್ತದೆ. ಈ ಪ್ರಮಾಣವನ್ನು ಹೆಚ್ಚಿಸುವ ಅವಕಾಶ ಈಗ ನೀಡಲಾಗಿದೆ. ಇದು 2014ಕ್ಕೆ ಮುನ್ನ ಅಧಿಕ ಇಪಿಎಸ್ ಪಿಂಚಣಿಯ ಅವಕಾಶ ಆಯ್ದುಕೊಂಡವರಿಗೆ ಈಗ ಅರ್ಜಿ ಸಲ್ಲಿಸಲು ಅವಕಾಶ ಇದೆ.
ಇದನ್ನೂ ಓದಿ: IT Return: ಒಂದಿಷ್ಟು ತೆರಿಗೆ ಉಳಿಸಲು ಆದಾಯ ಕಡಿಮೆ ತೋರಿಸದಿರಿ; ಜೈಲಿಗೆ ಹೋಗಬೇಕಾದೀತು ಜೋಕೆ..!
ಇಪಿಎಸ್ ಅಂದರೆ ಎಂಪ್ಲಾಯೀ ಪೆನ್ಷನ್ ಸ್ಕೀಮ್. ಉದ್ಯೋಗಿ ನಿವೃತ್ತಿಯ ಬಳಿಕ ಪಿಂಚಣಿ ರೂಪದಲ್ಲಿ ಈ ನಿಧಿ ಬಳಕೆಯಾಗುತ್ತದೆ. ಪೂರ್ವದಲ್ಲೇ ಪಿಂಚಣಿ ಹಣ ವಿತ್ಡ್ರಾ ಮಾಡಲು ನಿರ್ಬಂಧಗಳಿವೆ.
ಎನ್ಪಿಎಸ್ ಎಂದರೆ ನ್ಯಾಷನಲ್ ಪೆನ್ಷನ್ ಸ್ಕೀಮ್. ಇಪಿಎಸ್ ಎಂಬುದು ಉದ್ಯೋಗಸ್ಥರಿಗೆಂದು ರೂಪಿಸಲಾದ ಪಿಂಚಣಿ ಸಿಸ್ಟಂ ಆಗಿದೆ. ಎನ್ಪಿಎಸ್ ಎಂಬುದು ಯಾವುದೇ ಸಾರ್ವಜನಿಕರಿಗೆ ತೆರೆದಿರುವ ಯೋಜನೆ. 18ರಿಂದ 75 ವರ್ಷ ವಯಸ್ಸಿನ ಯಾವುದೇ ಭಾರತೀಯ ಪ್ರಜೆಗಳು ಎನ್ಪಿಎಸ್ ಸ್ಕೀಮ್ ಪಡೆಯಬಹುದು. ನ್ಯಾಷನಲ್ ಪೆನ್ಷನ್ ಸ್ಕೀಮ್ನಲ್ಲಿ ಒಬ್ಬರು ಎಷ್ಟು ಬೇಕಾದರೂ ಹೂಡಿಕೆ ಮಾಡುತ್ತಾ ಹೋಗಬಹುದು. ಇದಕ್ಕೆ ಹಾಕುವ ನಮ್ಮ ಹಣವನ್ನು ಷೇರುಮಾರುಕಟ್ಟೆ, ಬಾಂಡ್ ಇತ್ಯಾದಿ ಕಡೆ ಹೂಡಿಕೆ ಮಾಡಲಾಗುತ್ತದೆ. ಅದರಿಂದ ಬರುವ ಲಾಭದಲ್ಲಿ ಹಂಚಿಕೆ ಆಗುತ್ತದೆ. ಒಂದು ರೀತಿಯಲ್ಲಿ ಇದು ಮ್ಯೂಚುವಲ್ ಫಂಡ್ ರೀತಿಯ ರಿಟರ್ನ್ ತಂದುಕೊಡುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ