ಹಬ್ಬದ ಸೀಸನ್, ಭರ್ಜರಿ ಡಿಸ್ಕೌಂಟ್ ಆಫರ್ಸ್; ಕ್ರೆಡಿಟ್ ಕಾರ್ಡ್​ನಿಂದ ಲಾಭ ಮಾಡುವ ಟ್ರಿಕ್ಸ್ ತಿಳಿಯಿರಿ

Credit card tips: ಕ್ರೆಡಿಟ್ ಕಾರ್ಡ್ ಅನ್ನು ಜಾಣತನದಿಂದ ಉಪಯೋಗಿಸಿದರೆ ಬಹಳಷ್ಟು ಲಾಭ ಮಾಡಬಹುದು. ಹಬ್ಬದ ಸೀಸನ್ ಇತ್ಯಾದಿ ಸಂದರ್ಭದಲ್ಲಿ ಬಹಳಷ್ಟು ಕಡೆ ಡಿಸ್ಕೌಂಟ್ ಆಫರ್ ಕಾಣಬಹುದು. ಕ್ರೆಡಿಟ್ ಕಾರ್ಡ್​ ಬಳಸಿ ಹಣ ಪಾವತಿಸಿದಾಗ ಕೆಲವೆಡೆ ಡಿಸ್ಕೌಂಟ್ ನೀಡಲಾಗುತ್ತದೆ. ಇದನ್ನು ನೀವು ಹೇಗೆ ಉಪಯೋಗಿಸಬಹುದು ಎನ್ನುವ ಟಿಪ್ಸ್ ಇಲ್ಲಿದೆ.

ಹಬ್ಬದ ಸೀಸನ್, ಭರ್ಜರಿ ಡಿಸ್ಕೌಂಟ್ ಆಫರ್ಸ್; ಕ್ರೆಡಿಟ್ ಕಾರ್ಡ್​ನಿಂದ ಲಾಭ ಮಾಡುವ ಟ್ರಿಕ್ಸ್ ತಿಳಿಯಿರಿ
ಕ್ರೆಡಿಟ್ ಕಾರ್ಡ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 09, 2024 | 5:27 PM

ಬೆಂಗಳೂರು, ಅಕ್ಟೋಬರ್ 9: ಕ್ರೆಡಿಟ್ ಕಾರ್ಡ್​ನಿಂದ ಸಾಲದ ವರ್ತುಲಕ್ಕೆ ಸಿಲುಕಿ ನಲುಗಿ ಹೋದವರಿದ್ದಾರೆ. ಹಾಗೆಯೇ, ಅದನ್ನು ಸಮರ್ಪಕವಾಗಿ ಉಪಯೋಗಿಸಿ ಸಾಕಷ್ಟು ಲಾಭ ಕಂಡವರೂ ಇದ್ದಾರೆ. ಕ್ರೆಡಿಟ್ ಕಾರ್ಡ್ ಬಳಕೆ ಒಂದು ರೀತಿಯ ಹಣಕಾಸು ಕಲೆ. ಯಾವ ರೀತಿಯ ಕ್ರೆಡಿಟ್ ಕಾರ್ಡ್ ಬೇಕು ಎಂದು ಆಯ್ಕೆ ಮಾಡಿಕೊಳ್ಳುವುದೂ ತಿಳಿದಿರಬೇಕು. ಈಗ ಹಬ್ಬದ ಸೀಸನ್ ಚಾಲನೆಯಲ್ಲಿದ್ದು ಸಾಕಷ್ಟು ಆಫ್​ಲೈನ್ ಮತ್ತು ಆನ್​ಲೈನ್ ಮಳಿಗೆಗಳಲ್ಲಿ ಡಿಸ್ಕೌಂಟ್ ಸೇಲ್ಸ್ ಇವೆ. ನಿರ್ದಿಷ್ಟ ಕ್ರೆಡಿಟ್ ಕಾರ್ಡ್​ಗಳಿಂದಲೂ ಡಿಸ್ಕೌಂಟ್, ರಿವಾರ್ಡ್ ಇತ್ಯಾದಿ ಸಿಗುತ್ತವೆ.

ನೀವು ಯಾವುದಕ್ಕೆ ಹೆಚ್ಚು ಶಾಪಿಂಗ್ ಮಾಡುತ್ತೀರಿ ಎಂಬುದರ ಆಧಾರದ ಮೇಲೆ ಅದಕ್ಕೆ ತಕ್ಕಂತಹ ಕ್ರೆಡಿಟ್ ಕಾರ್ಡ್ ಪಡೆಯುವುದು ಜಾಣತನ. ನೀವು ಥಿಯೇಟರ್​ನಲ್ಲಿ ಸಿನಿಮಾ ನೋಡುವುದು ಹೆಚ್ಚಿದ್ದರೆ, ಎಚ್​ಡಿಎಫ್​ಸಿ ಬ್ಯಾಂಕ್ ಡೈನರ್ಸ್ ಕ್ಲಬ್ ಪ್ರಿವಿಲೀಜ್ ಕಾರ್ಡ್, ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೀಗೆ ಡಿಸ್ಕೌಂಟ್ ಕೊಡುವ ಕಾರ್ಡ್​ಗಳಲ್ಲಿ ಒಂದನ್ನು ಆಯ್ದುಕೊಳ್ಳಬಹುದು.

ಹೋಟೆಲ್​ನಲ್ಲಿ ಊಟಕ್ಕೆ ಹೆಚ್ಚು ವ್ಯಯಿಸುತ್ತಿದ್ದರೆ ಡೈನಿಂಗ್ ಕ್ರೆಡಿಟ್ ಕಾರ್ಡ್​ಗಳನ್ನು ಹುಡುಕಬಹುದು. ಬಟ್ಟೆ ಬರೆ ಶೂ ಚಪ್ಪಲಿ ಶಾಪಿಂಗ್​ಗೆ ಹೆಚ್ಚು ಡಿಸ್ಕೌಂಟ್ ಕೊಡುವ ಕಾರ್ಡ್​ಗಳಿವೆ. ಪೆಟ್ರೋಲ್​ಗೆ ಕೆಲ ಕಾರ್ಡ್​ಗಳು ಡಿಸ್ಕೌಂಟ್ ಕೊಡುತ್ತವೆ. ರೈಲ್ವೆ, ವಿಮಾನ ಟಿಕೆಟ್ ಬುಕಿಂಗ್​ಗೆ ಡಿಸ್ಕೌಂಟ್ ಕೊಡುವ ಕಾರ್ಡ್ ಇದೆ. ನಿಮಗೆ ಸೂಕ್ತವೆನಿಸುವ ಕಾರ್ಡ್ ಅಥವಾ ಕಾರ್ಡ್​ಗಳನ್ನು ಆಯ್ದುಕೊಳ್ಳಬೇಕು.

ಇಂಥ ಕಾರ್ಡ್​ಗಳಿಂದ ನೀವು ಶಾಪಿಂಗ್ ಮಾಡಿದಾಗ ಶೇ. 1ರಿಂದ 10ರಷ್ಟು ರಿಯಾಯಿತಿ ಪಡೆಯಬಹುದು. ಕೆಲವೊಮ್ಮೆ ಶೇ. 15ರಷ್ಟು ರಿಯಾಯಿತಿ ಸಿಗಬಹುದು. ಕೆಲ ಶಾಪಿಂಗ್​ನಲ್ಲಿ ನಿರ್ದಿಷ್ಟ ಕ್ರೆಡಿಟ್ ಕಾರ್ಡ್​ಗಳಿಗೆ ಡಿಸ್ಕೌಂಟ್ ಸಿಗುತ್ತದೆ.

ಇದನ್ನೂ ಓದಿ: ಡಿಸೆಂಬರ್​ನಲ್ಲಿ ಬಡ್ಡಿ ಇಳಿಕೆ ಸಾಧ್ಯತೆ; ಈಗಲೇ ಎಫ್​ಡಿ ಇಡಲು ತ್ವರೆ ಮಾಡಿ

ಆದರೆ, ಎಚ್ಚರ ವಹಿಸಬೇಕಾದ ಸಂಗತಿ ಎಂದರೆ, ರಿಯಾಯಿತಿ ಅಥವಾ ರಿವಾರ್ಡ್ ಸಿಗುತ್ತದೆಂದು ಕ್ರೆಡಿಟ್ ಕಾರ್ಡ್ ಅನ್ನು ಮಿತಿಮೀರಿ ಬಳಸುವ ತಪ್ಪು ಮಾಡಬಾರದು. ಇಲ್ಲವಾದರೆ ಅನಗತ್ಯ ವೆಚ್ಚ ಕಾಣಬೇಕಾಗುತ್ತದೆ. ಅದರ ಪರಿಣಾಮವಾಗಿ ಸಾಲದ ವಿಷ ವರ್ತುಲಕ್ಕೂ ಸಿಲುಕಬೇಕಾಗಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ