EPFO New Rules: ಮಿನಿಮಮ್ ಬ್ಯಾಲನ್ಸ್, 100% ವಿತ್​ಡ್ರಾಯಲ್ ಸೇರಿದಂತೆ ಬರಲಿವೆ ಇಪಿಎಫ್ ಹೊಸ ನಿಯಮಗಳು

EPFO reforms: ಇಪಿಎಫ್​ಒದಲ್ಲಿ ಸುಧಾರಣೆಗಳಾಗುತ್ತಿದ್ದು ಮುಂಬರುವ ದಿನಗಳಲ್ಲಿ ಹೆಚ್ಚು ಸರಳ ಮತ್ತು ಸ್ಪಷ್ಟ ನಿಯಮಗಳು ಬರಲಿವೆ. ಉದ್ಯೋಗಿಗಳ ಇಪಿಎಫ್ ಕಾರ್ಪಸ್​ನಲ್ಲಿ ಶೇ. 25ರಷ್ಟು ಕನಿಷ್ಠ ಬ್ಯಾಲನ್ಸ್ ಉಳಿಸಿಕೊಳ್ಳುವುದು ಸೇರಿದಂತೆ ಒಂದಷ್ಟು ಸುಧಾರಣೆಗಳಿವೆ. ಅರ್ಹ ವಿತ್​ಡ್ರಾ ಬ್ಯಾಲನ್ಸ್​ನಲ್ಲಿ ಶೇ. 100 ಹಣ ವಿತ್​ಡ್ರಾ ಮಾಡಿಕೊಳ್ಳಲು ಸಾಧ್ಯವಾಗಲಿದೆ.

EPFO New Rules: ಮಿನಿಮಮ್ ಬ್ಯಾಲನ್ಸ್, 100% ವಿತ್​ಡ್ರಾಯಲ್ ಸೇರಿದಂತೆ ಬರಲಿವೆ ಇಪಿಎಫ್ ಹೊಸ ನಿಯಮಗಳು
ಇಪಿಎಫ್​ಒ

Updated on: Oct 14, 2025 | 11:16 AM

ನವದೆಹಲಿ, ಅಕ್ಟೋಬರ್ 14: ಇಪಿಎಫ್ ನಿಯಮಗಳಲ್ಲಿ (EPFO) ಗಮನಾರ್ಹ ಸುಧಾರಣೆಗಳಾಗುತ್ತಿದ್ದು, ನಿಯಮಗಳು ಸರಳಗೊಳ್ಳುತ್ತಿವೆ. ಉದ್ಯೋಗಿಗಳು ತಮ್ಮ ಇಪಿಎಫ್ ಫಂಡ್ ಅನ್ನು ಹೆಚ್ಚು ಸುಲಭವಾಗಿ ವಿತ್​ಡ್ರಾ ಮಾಡಿಕೊಳ್ಳಲು ಸಾಧ್ಯವಾಗಲಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಾದ ಇಪಿಎಫ್​ಒನ ಕೇಂದ್ರೀಯ ಟ್ರಸ್ಟೀ ಮಂಡಳಿ ಈ ಸುಧಾರಣೆಗಳಿಗೆ ಅನುಮೋದನೆ ನೀಡಿದೆ. ಸಿಬಿಟಿ ಸಭೆ ಅಕ್ಟೋಬರ್ 13ರಂದು ನಡೆದಿತ್ತು. ಈ ಸಭೆಯಲ್ಲಿ ಕೆಲ ಗಮನಾರ್ಹ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

ಶೇ. 25ರಷ್ಟು ಕನಿಷ್ಠ ಬ್ಯಾಲನ್ಸ್ ಉಳಿಸಿಕೊಳ್ಳುವುದು

ಇಪಿಎಫ್ ಸದಸ್ಯರು ತಮ್ಮ ಕೊಡುಗೆಯಲ್ಲಿ ಶೇ. 25ರಷ್ಟನ್ನು ಮಿನಿಮಮ್ ಬ್ಯಾಲನ್ಸ್ ಆಗಿ ಹೊಂದಿರುವುದು ಕಡ್ಡಾಯ. ಅಂದರೆ, ಈ ಶೇ. 25ರಷ್ಟು ಮೊತ್ತವನ್ನು ವಿತ್​ಡ್ರಾ ಮಾಡಲು ಆಗುವುದಿಲ್ಲ. ಉದ್ಯೋಗಿಗಳು ನಿವೃತ್ತರಾದಾಗ ಈ ಇಪಿಎಫ್ ಕಾರ್ಪಸ್ ಸಹಾಯಕ್ಕೆ ಬರುತ್ತದೆ. ವರ್ಷಕ್ಕೆ ಶೇ. 8.25ರಷ್ಟು ಬಡ್ಡಿಯೂ ಸಿಗುತ್ತಿರುತ್ತದೆ.

ನೂರಕ್ಕೆ ನೂರು ಹಣ ವಿತ್​ಡ್ರಾ

ಇಪಿಎಫ್ ಸದಸ್ಯರು ತಮ್ಮ ಅರ್ಹ ಪಿಎಫ್ ಫಂಡ್ ಬ್ಯಾಲನ್ಸ್ ಅನ್ನು ಸಂಪೂರ್ಣವಾಗಿ ವಿತ್​ಡ್ರಾ ಮಾಡಲು ಅವಕಾಶ ಇದೆ. ಇಲ್ಲಿ ಅರ್ಹ ಪಿಎಫ್ ಬ್ಯಾಲನ್ಸ್ ಏನು ಎಂದು ನಿರ್ದಿಷ್ಟಪಡಿಸಲಾಗಿಲ್ಲ. ಈ ನಿಯಮಗಳನ್ನು ಜಾರಿಗೆ ತರುವಾಗ ಸ್ಪಷ್ಟತೆ ಸಿಗಬಹುದು.

ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ರದ್ದುಗೊಳಿಸಿದರೆ ಪರಿಣಾಮಗಳೇನು? ಕ್ರೆಡಿಟ್ ಸ್ಕೋರ್ ಕಡಿಮೆಗೊಳ್ಳುತ್ತಾ? ಇಲ್ಲಿದೆ ಮಾಹಿತಿ

ವಿತ್​ಡ್ರಾ ಮಾಡಲು ನೀಡಬೇಕಾದ ಕಾರಣಗಳಲ್ಲಿ ಬದಲಾವಣೆ

ಇಪಿಎಫ್ ಅಕೌಂಟ್​ನಿಂದ ಹಣ ವಿತ್​ಡ್ರಾ ಮಾಡಲು ಸದ್ಯ 13 ಕಾರಣಗಳನ್ನು ನಮೂದಿಸಲಾಗಿದೆ. ಇವುಗಳ ಬದಲು ಮೂರು ಕಾರಣಗಳನ್ನು ಮಾತ್ರ ನೀಡಲಾಗಿದೆ. ಅನಾರೋಗ್ಯ, ಶಿಕ್ಷಣ, ಮದುವೆಯಂತಹ ಪ್ರಮುಖ ಅಗತ್ಯತೆಗಳು, ಮನೆ ನಿರ್ಮಾಣ ಮತ್ತು ವಿಶೇಷ ಸಂದರ್ಭ ಈ ಮೂರು ಕೆಟಗರಿಯನ್ನು ಮಾತ್ರ ತರಲಾಗುತ್ತದೆ.

ಹೆಚ್ಚು ಬಾರಿ ವಿತ್​ಡ್ರಾ ಸಾಧ್ಯ

ಭಾಗಶಃ ಪಿಎಫ್ ವಿತ್​ಡ್ರಾ ಮಾಡಲು 3 ಬಾರಿ ಮಾತ್ರ ಅವಕಾಶ ಇತ್ತು. ಈಗ ಹೆಚ್ಚಿನ ಅವಕಾಶ ನೀಡಲಾಗುತ್ತದೆ. ಶಿಕ್ಷಣಕ್ಕಾಗಿ ನೀವು ವಿವಿಧ ಹಂತಗಳಲ್ಲಿ 10 ಬಾರಿ ವಿತ್​ಡ್ರಾ ಮಾಡಬಹುದು. ಮದುವೆಗಾಗಿ 5 ಬಾರಿ ವಿತ್​ಡ್ರಾ ಮಾಡಿಕೊಳ್ಳಲು ಅವಕಾಶ ಕೊಡಲಾಗಿದೆ.

ಕನಿಷ್ಠ ಸೇವಾವಧಿ 12 ತಿಂಗಳು

ಭಾಗಶಃ ಪಿಎಫ್ ವಿತ್​ಡ್ರಾಯಲ್​ಗೆ ನಿಮ್ಮ ಕನಿಷ್ಠ ಸೇವಾವಧಿ 12 ತಿಂಗಳಾಗಿರುತ್ತದೆ.

ಇದನ್ನೂ ಓದಿ: ನಿವೃತ್ತಿಗೆ ಮುನ್ನ ಇಪಿಎಫ್ ಹಣ ಹಿಂಪಡೆದರೆ ಏನು ಸಮಸ್ಯೆ? ಯಾವ ಕ್ರಮ ಜರುಗುವ ಸಾಧ್ಯತೆ?

ವಿಶೇಷ ಸಂದರ್ಭಕ್ಕೆ ಭಾಗಶಃ ಪಿಎಫ್ ವಿತ್​ಡ್ರಾ

ಪಿಎಫ್ ವಿತ್​ಡ್ರಾ ಮಾಡಲು ಇರುವ ಮೂರು ಕೆಟಗರಿಯಲ್ಲಿ ವಿಶೇಷ ಸಂದರ್ಭವೂ ಒಂದು. ಭಾಗಶಃ ಪಿಎಫ್ ಹಣ ಹಿಂಪಡೆಯುವಾಗ ಈ ಕೆಟಗರಿ ಆಯ್ದುಕೊಂಡು ಅದರಲ್ಲಿ ನೈಸರ್ಗಿಕ ವಿಕೋಪ, ನಿರುದ್ಯೋಗ ಇತ್ಯಾದಿ ನಿರ್ದಿಷ್ಟ ಕಾರಣ ನೀಡಬೇಕಿತ್ತು. ಈ ಹಂತದಲ್ಲಿ ಕ್ಲೇಮ್ ತಿರಸ್ಕೃತಗೊಳ್ಳುವ ಸಾಧ್ಯತೆ ಹೆಚ್ಚಿತ್ತು. ಈಗ ಅದನ್ನು ಸರಳಗೊಳಿಸಲಾಗುತ್ತಿದೆ. ಈ ಕೆಟಗರಿಯಲ್ಲಿ ಯಾವುದೇ ಕಾರಣ ನೀಡದೇ ಪಿಎಫ್​ಗೆ ಕ್ಲೇಮ್ ಸಲ್ಲಿಸಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us