FD: ಫಿಕ್ಸೆಡ್ ಡೆಪಾಸಿಟ್​ನಿಂದ ಬರೋ ಬಡ್ಡಿಗೆ ಎಷ್ಟು ಟ್ಯಾಕ್ಸ್ ಕಟ್ ಆಗುತ್ತೆ? ಟಿಡಿಎಸ್ ಕಡಿತಗೊಳ್ಳದಿರಲು ಏನು ಮಾಡಬೇಕು? ಇಲ್ಲಿದೆ ಡೀಟೇಲ್ಸ್

|

Updated on: Jul 05, 2023 | 11:58 AM

TDS On Interest From Fixed Deposits: ನೀವು ಎಫ್​ಡಿ ಇಟ್ಟ ಠೇವಣಿಯಿಂದ ವರ್ಷಕ್ಕೆ 40,000 ರೂ ಮೇಲ್ಪಟ್ಟು ಬಡ್ಡಿ ಆದಾಯ ಬರುತ್ತಿದ್ದರೆ ಅದಕ್ಕೆ ಶೇ. 10ರಷ್ಟು ಟಿಡಿಎಸ್ ಅನ್ವಯ ಆಗುತ್ತದೆ. ಇದನ್ನು ಐಟಿ ರಿಟರ್ನ್ ಸಲ್ಲಿಕೆ ವೇಳೆ ಕ್ಲೈಮ್ ಮಾಡಲು ಅವಕಾಶ ಇರುತ್ತದೆ.

FD: ಫಿಕ್ಸೆಡ್ ಡೆಪಾಸಿಟ್​ನಿಂದ ಬರೋ ಬಡ್ಡಿಗೆ ಎಷ್ಟು ಟ್ಯಾಕ್ಸ್ ಕಟ್ ಆಗುತ್ತೆ? ಟಿಡಿಎಸ್ ಕಡಿತಗೊಳ್ಳದಿರಲು ಏನು ಮಾಡಬೇಕು? ಇಲ್ಲಿದೆ ಡೀಟೇಲ್ಸ್
ಫಿಕ್ಸೆಡ್ ಡೆಪಾಸಿಟ್
Follow us on

ಜನಸಾಮಾನ್ಯರು ಹೆಚ್ಚಾಗಿ ಬಳಸುವ ಹೂಡಿಕೆ ಯೋಜನೆಗಳಲ್ಲಿ ಫಿಕ್ಸೆಡ್ ಡೆಪಾಸಿಟ್ (Fixed Deposit) ಪ್ಲಾನ್ ಪ್ರಮುಖವಾದುದು. ಯಾವುದೇ ಬ್ಯಾಂಕ್ ಹಾಗೂ ಸಹಕಾರ ಸಂಸ್ಥೆ ಮತ್ತು ಎನ್​ಬಿಎಫ್​ಸಿಗಳಲ್ಲಿ ಬಹಳ ಸುಲಭವಾಗಿ ನಿಶ್ಚಿತ ಠೇವಣಿ ಪ್ಲಾನ್​ಗಳನ್ನು ಆರಂಭಿಸಬಹುದು. ಯಾವುದೇ ರಿಸ್ಕ್ ಇಲ್ಲದೇ ಹಣ ಹೂಡಿಕೆಗೆ ಹೇಳಿಮಾಡಿಸಿದ ಸಾಧನ ಈ ಫಿಕ್ಸೆಡ್ ಡೆಪಾಸಿಟ್. ಒಂದು ವರ್ಷದ ಠೇವಣಿಗೆ ಏನಿಲ್ಲವೆಂದರೂ ಶೇ. 6.5ರಿಂದ ಶೇ. 9ರವರೆಗೂ ಬಡ್ಡಿ ಆಫರ್ ಮಾಡಲಾಗುತ್ತದೆ. ಆದರೆ, ಬಡ್ಡಿ ಹಣಕ್ಕೆ ಟಿಡಿಎಸ್ ಮುರಿದುಕೊಳ್ಳಲಾಗುತ್ತದೆ.

ಎಫ್​ಡಿ ಬಡ್ಡಿ ಹಣಕ್ಕೆ ಎಷ್ಟು ತೆರಿಗೆ ಹಿಡಿಯಲಾಗುತ್ತೆ?

ಫಿಕ್ಸೆಡ್ ಡೆಪಾಸಿಟ್ ಹಣಕ್ಕೆ ಸಿಗುವ ಬಡ್ಡಿಗೆ ಶೇ. 10ರಷ್ಟು ಟಿಡಿಎಸ್ ಅನ್ವಯ ಆಗುತ್ತದೆ. ಬ್ಯಾಂಕುಗಳಲ್ಲಿನ ಎಫ್​ಡಿಯಿಂದ ಬರುವ ಬಡ್ಡಿ ಒಂದು ವರ್ಷದಲ್ಲಿ 40,000 ರೂ ಮೊತ್ತಕ್ಕಿಂತ ಹೆಚ್ಚಾಗಿದ್ದರೆ ಅದಕ್ಕೆ ಟಿಡಿಎಸ್ ಕಡಿತ ಆಗುತ್ತದೆ. ಹಿರಿಯ ನಾಗರಿಕರಿಗೆ ವರ್ಷಕ್ಕೆ 50,000 ರೂ ವರೆಗೂ ಬಡ್ಡಿ ವರಮಾನಕ್ಕೆ ಅವಕಾಶ ಇದೆ.

ಬ್ಯಾಂಕೇತರ ಹಣಕಾಸು ಸಂಸ್ಥೆಗಳಾದರೆ (ಎನ್​ಬಿಎಫ್​ಸಿ) ವರ್ಷಕ್ಕೆ 5,000 ರೂ ಮೇಲ್ಪಟ್ಟ ಬಡ್ಡಿ ಆದಾಯಕ್ಕೆ ಟಿಡಿಎಸ್ ಅನ್ವಯ ಆಗುತ್ತದೆ. ಪ್ಯಾನ್ ಕಾರ್ಡ್ ಇಲ್ಲದಿದ್ದರೆ ಶೇ. 20ರಷ್ಟು ಟಿಡಿಎಸ್ ಅನ್ವಯ ಆಗುತ್ತದೆ. ಎನ್​ಆರ್​ಐಗಳಿಗಾದರೆ ಶೇ. 30ರವರೆಗೂ ಟಿಡಿಎಸ್ ಕಡಿತವಾಗುತ್ತದೆ.

ಇದನ್ನೂ ಓದಿInspiring: ಕಾಲೇಜು ಶುಲ್ಕ ಕಟ್ಟಲು ಚಹಾ ಮಾರುತ್ತಿದ್ದ ವಿಜಯ್ ಇವತ್ತು ಸಾವಿರ ಕೋಟಿ ರೂ ರಾಯಲ್ ಓಕ್ ಒಡೆಯ

ಐಟಿ ರಿಟರ್ನ್ ವೇಳೆ ಟಿಡಿಎಸ್ ಕ್ಲೈಮ್ ಮಾಡಬಹುದು

ಫಿಕ್ಸೆಡ್ ಡೆಪಾಸಿಟ್​ನಿಂದ ಬರುವ ಬಡ್ಡಿ ಹಣಕ್ಕೆ ತೆರಿಗೆ ಕಡಿತ ಮಾಡಲಾಗುತ್ತದೆಯಾದರೂ ಐಟಿ ರಿಟರ್ನ್ಸ್ ಫೈಲ್ ಮಾಡುವಾಗ ಅದನ್ನು ಕ್ಲೈಮ್ ಮಾಡಲು ಸಾಧ್ಯ. ಇದೆಲ್ಲವೂ ನಿಮ್ಮ ಒಟ್ಟಾರೆ ವಾರ್ಷಿಕ ಆದಾಯ ಎಷ್ಟಿದೆ ಎಂಬುದರ ಮೇಲೆ ಅವಲಂಬಿತವಾಗುತ್ತದೆ.

ಬ್ಯಾಂಕ್​ನಿಂದ ಎಫ್​ಡಿ ಬಡ್ಡಿ ಹಣಕ್ಕೆ ಟಿಡಿಎಸ್ ಕಡಿತಗೊಳ್ಳದಂತೆ ಮಾಡಲು ಸಾಧ್ಯ

ನಿಮ್ಮ ವಾರ್ಷಿಕ ಆದಾಯವು ತೆರಿಗೆ ವಿನಾಯಿತಿ ಮಿತಿಯೊಳಗೆ ಇದ್ದರೆ ಬ್ಯಾಂಕ್​ನಲ್ಲಿ ಫಾರ್ಮ್ 15ಜಿ ಅಥವಾ 15ಎಚ್ ಅನ್ನು ಭರ್ತಿ ಮಾಡಿ ಸಲ್ಲಿಸಬೇಕು. ಕಳೆದ ಬಜೆಟ್​ನಲ್ಲಿ ಸರ್ಕಾರ ತೆರಿಗೆ ವಿನಾಯಿತಿ ಮಿತಿಯನ್ನು ವರ್ಷಕ್ಕೆ 2.5 ಲಕ್ಷ ರೂನಿಂದ 3 ಲಕ್ಷ ರೂಗೆ ಹೆಚ್ಚಿಸಿದೆ. ನಿಮ್ಮ ವಾರ್ಷಿಕ ಆದಾಯ 3 ಲಕ್ಷ ರೂ ಒಳಗಿದ್ದರೆ ಫಾರ್ಮ್ ನಂಬರ್ 15ಜಿ ಅಥವಾ ಎಚ್ ಸಲ್ಲಿಸಬಹದು. ಆಗ ನಿಮ್ಮ ಎಫ್​ಡಿಗೆ ನೀಡಲಾಗುವ ಬಡ್ಡಿ ಹಣಕ್ಕೆ ಬ್ಯಾಂಕ್​ನಿಂದ ಟಿಡಿಎಸ್ ಕಡಿತ ಆಗುವುದಿಲ್ಲ. ನೀವು ಐಟಿ ರಿಟರ್ನ್ ಸಲ್ಲಿಸುವ ವೇಳೆ ಇದಕ್ಕೆ ಪೂರಕ ದಾಖಲೆಗಳನ್ನು ಕೊಡಬೇಕು. ನಿಮ್ಮ ಪ್ರಮುಖ ವರಮಾನದ ಜೊತೆಗೆ ಎಫ್​ಡಿಯಿಂದ ಬರುವ ಬಡ್ಡಿ ಆದಾಯವನ್ನೂ ಐಟಿಆರ್​ನಲ್ಲಿ ತೋರಿಸಬೇಕು.

ಇದನ್ನೂ ಓದಿDuplicate PAN: ಆನ್​ಲೈನ್​ನಲ್ಲಿ ಡೂಪ್ಲಿಕೇಟ್ ಪ್ಯಾನ್ ಕಾರ್ಡ್ ಡೌನ್​ಲೋಡ್ ಮಾಡುವುದು ಹೇಗೆ? ಇಲ್ಲಿದೆ ವಿಧಾನ

ಟಿಡಿಎಸ್ ಅನ್ವಯ ಆಗದಂತೆ ಎಷ್ಟು ಠೇವಣಿ ಇಡಬಹುದು?

ವರ್ಷದಲ್ಲಿ 40,000 ರೂ ಮೇಲ್ಪಟ್ಟ ಬಡ್ಡಿ ಹಣಕ್ಕೆ ಮಾತ್ರ ತೆರಿಗೆ ಅನ್ವಯ ಆಗುತ್ತದೆ. ನೀವು ಶೇ. 6.5ರಷ್ಟು ಬಡ್ಡಿ ಕೊಡುವ ಎಫ್​ಡಿ ಸ್ಕೀಮ್ ಆಯ್ಕೆ ಮಾಡಿಕೊಳ್ಳುತ್ತೀರಿ ಎಂದಿಟ್ಟುಕೊಳ್ಳಿ. ಈ ಪ್ಲಾನ್​ನಲ್ಲಿ ನೀವು 6 ಲಕ್ಷ ರೂವರೆಗೂ ಇಡುವ ಠೇವಣಿಗೆ ಒಂದು ವರ್ಷದಲ್ಲಿ ಸಿಗುವ ಬಡ್ಡಿ 40,000 ರೂ ಒಳಗೆಯೇ ಇರುತ್ತದೆ. ಇದಕ್ಕಿಂತ ಹೆಚ್ಚು ಬಡ್ಡಿಯನ್ನು ಬ್ಯಾಂಕ್ ಆಫರ್ ಮಾಡುತ್ತಿದ್ದರೆ ಠೇವಣಿ ಮೊತ್ತವನ್ನು 6 ಲಕ್ಷಕ್ಕಿಂತ ಕಡಿಮೆಗೆ ಇಳಿಸಬಹುದು. ಈ ರೀತಿ ಲೆಕ್ಕಹಾಕಿ ಠೇವಣಿ ಇಡಬಹುದು.

ಹೆಚ್ಚು ಮೊತ್ತದ ಹಣವನ್ನು ಹೂಡಿಕೆ ಮಾಡುವ ಮುನ್ನ ಹಣಕಾಸು ಸಲಹೆಗಾರರೊಂದಿಗೆ ಸಮಾಲೋಚಿಸುವುದು ಒಳಿತು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ