EPF: ಇಪಿಎಫ್ ಖಾತೆಗಳನ್ನು ವಿಲೀನಗೊಳಿಸದಿದ್ದರೆ ಏನಾಗುತ್ತದೆ? ಮರ್ಜ್ ಮಾಡುವ ಪ್ರಕ್ರಿಯೆ ಹೇಗೆ? ವಿವರ ತಿಳಿದಿರಿ

|

Updated on: Jun 15, 2023 | 1:34 PM

Merging Multiple EPF Accounts: ನೀವು ಒಂದಕ್ಕಿಂತ ಹೆಚ್ಚು ಕಂಪನಿಯಲ್ಲಿ ಕೆಲಸ ಮಾಡಿದರೆ ಒಂದಕ್ಕಿಂತ ಹೆಚ್ಚು ಇಪಿಎಫ್ ಖಾತೆಗಳಿರುವ ಸಾಧ್ಯತೆ ಇರುತ್ತದೆ. ಹಾಗೇನಾದರೂ ಇದ್ದರೆ ಈಗಿರುವ ಇಪಿಎಫ್ ಖಾತೆಗೆ ನಿಮ್ಮ ಹಿಂದಿನ ಖಾತೆಯನ್ನು ವಿಲೀನಗೊಳಿಸುವುದನ್ನು ಮರೆಯದಿರಿ....

EPF: ಇಪಿಎಫ್ ಖಾತೆಗಳನ್ನು ವಿಲೀನಗೊಳಿಸದಿದ್ದರೆ ಏನಾಗುತ್ತದೆ? ಮರ್ಜ್ ಮಾಡುವ ಪ್ರಕ್ರಿಯೆ ಹೇಗೆ? ವಿವರ ತಿಳಿದಿರಿ
ಇಪಿಎಫ್​ಒ
Follow us on

ಎಂಪ್ಲಾಯೀ ಪ್ರಾವಿಡೆಂಟ್ ಫಂಡ್ ಅಥವಾ ಉದ್ಯೋಗಿ ಭವಿಷ್ಯ ನಿಧಿ (EPF- Employee Provident Fund) ಎಂಬುದು ಭಾರತದಲ್ಲಿ ನೌಕರರ ಭವಿಷ್ಯದ ದಿನಗಳಿಗೆ ಹಣಕಾಸು ನೆರವು ಸಿಗಲೆಂದು ರೂಪಿಸಲಾಗಿರುವ ಯೋಜನೆ. ಒಂದು ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗೆ ಪ್ರತ್ಯೇಕ ಇಪಿಎಫ್ ಖಾತೆ ಸೃಷ್ಟಿಸಲಾಗುತ್ತದೆ. ಇದರಲ್ಲಿ ಉದ್ಯೋಗಿಯ ಸಂಬಳದಲ್ಲಿ ನಿರ್ದಿಷ್ಟ ಹಣವನ್ನು ಕಡಿತಗೊಳಿಸಿ ಆತನ ಇಪಿಎಫ್ ಖಾತೆಗೆ ಪ್ರತೀ ತಿಂಗಳು ಜಮೆ ಮಾಡಲಾಗುತ್ತದೆ. ಉದ್ಯೋಗದಾತರೂ ಅಷ್ಟೇ ಮೊತ್ತವನ್ನು ಖಾತೆಗೆ ತುಂಬಿಸುತ್ತಾರೆ. ಈ ಮೊತ್ತಕ್ಕೆ ಸರ್ಕಾರ ಪ್ರತೀ ವರ್ಷವೂ ಬಡ್ಡಿ ಹಣ ಬಿಡುಗಡೆ ಮಾಡುತ್ತದೆ. ಉದ್ಯೋಗಿ ನಿವೃತ್ತಿ ಆದ ಬಳಿಕ ಈ ಹಣವನ್ನು ಸಂಪೂರ್ಣವಾಗಿ ಹಿಂಪಡೆಯಬಹುದು, ಅಥವಾ ಪಿಂಚಣಿ ರೂಪದಲ್ಲಿ ಪಡೆಯುವ ಅವಕಾಶ ಇರುತ್ತದೆ.

ನೀವು ಒಂದೇ ಕಂಪನಿಯಲ್ಲಿ ನಿವೃತ್ತಿಯವರೆಗೂ ಕೆಲಸ ಮಾಡಿದರೆ ಒಂದೇ ಇಪಿಎಫ್ ಖಾತೆ ಇರುತ್ತದೆ. ನೀವು ಕೆಲಸ ಮಾಡುವ ಕಂಪನಿಯನ್ನು ಬದಲಿಸಿದರೆ ಅಲ್ಲಿ ಪ್ರತ್ಯೇಕ ಇಪಿಎಫ್ ಖಾತೆ ಸೃಷ್ಟಿಯಾಗುತ್ತದೆ. ಎರಡು ಕಂಪನಿಯಲ್ಲಿ ಕೆಲಸ ಮಾಡಿದ ಉದ್ಯೋಗಿಗಳಲ್ಲಿ ಎರಡು ಇಪಿಎಫ್ ಖಾತೆ ಇರುತ್ತದೆ. ನಿಮ್ಮ ಪಿಎಫ್ ಖಾತೆಗಳಿಗೆ ಯುಎಎನ್ ಜೋಡಿಸಿದ್ದರೆ ಒಂದೇ ಯುಎಎನ್ ಅಡಿಯಲ್ಲಿ ನಿಮ್ಮ ವಿವಿಧ ಇಪಿಎಫ್ ಖಾತೆಗಳು ಅಸ್ತಿತ್ವದಲ್ಲಿ ಇರುತ್ತವೆ. ಆದರೆ, ಬೇರೆ ಬೇರೆ ಇಪಿಎಫ್ ಖಾತೆಯಲ್ಲಿರುವ ಹಣ ಒಂದೇ ಖಾತೆಗೆ ವರ್ಗಾವಣೆ ಆಗಬೇಕೆಂದರೆ ಇಪಿಎಫ್ ಖಾತೆಗಳನ್ನು ಒಂದರಲ್ಲಿ ವಿಲೀನಗೊಳಿಸಬೇಕು. ನೀವು ಈಗ ಕೆಲಸ ಮಾಡುತ್ತಿರುವ ಕಂಪನಿಯಲ್ಲಿನ ಇಪಿಎಫ್ ಖಾತೆಗೆ ನಿಮ್ಮ ಹಿಂದಿನ ಇಪಿಎಫ್ ಅಕೌಂಟ್​ಗಳನ್ನು ಮರ್ಜ್ ಮಾಡಬಹುದು. ಆನ್​ಲೈನ್​ನಲ್ಲಿ ಸುಲಭವಾಗಿ ಈ ಕೆಲಸ ಸಾಧ್ಯ.

ಇದನ್ನೂ ಓದಿInsurance: ಸಿಂಗಲ್ ಪ್ರೀಮಿಯಮ್ ಇನ್ಷೂರೆನ್ಸ್ ಪಾಲಿಸಿ ಜನಪ್ರಿಯವಾಗುತ್ತಿರುವುದು ಯಾಕೆ? ಅದರ ಅನುಕೂಲತೆಗಳೇನು?

ಇಪಿಎಫ್ ಖಾತೆಗಳನ್ನು ವಿಲೀನ್ ಮಾಡದಿದ್ದರೆ ಏನಾಗುತ್ತದೆ?

ಒಂದು ಇಪಿಎಫ್ ಖಾತೆ 3 ಕ್ಕಿಂತ ಹೆಚ್ಚು ವರ್ಷ ನಿಷ್ಕ್ರಿಯವಾಗಿದ್ದರೆ, ಅಂದರೆ ಆ ಖಾತೆಗೆ ಹಣ ಬೀಳದೇ ಹೋದರೆ ಆಗ ಅದಕ್ಕೆ ಬಡ್ಡಿ ಹಾಕುವುದನ್ನು ಸರ್ಕಾರ ನಿಲ್ಲಿಸುತ್ತದೆ. ಸದ್ಯ ಪಿಎಫ್ ಖಾತೆಯಲ್ಲಿರುವ ಹಣಕ್ಕೆ ಸರ್ಕಾರ ವರ್ಷಕ್ಕೆ ಶೇ. 8ರಷ್ಟು ಬಡ್ಡಿ ತುಂಬಿಕೊಡುತ್ತದೆ. ವಿಲೀನವಾಗದ ನಿಮ್ಮ ಪಿಎಫ್ ಖಾತೆಗೆ ಬಡ್ಡಿ ಬೀಳದೇ ನಿಷ್ಫಲ ಎನಿಸುತ್ತದೆ. ಈ ಕಾರಣಕ್ಕೆ ಇಪಿಎಫ್ ಖಾತೆಗಳನ್ನು ವಿಲೀನಗೊಳಿಸಬೇಕಾಗುತ್ತದೆ.

ಇಪಿಎಫ್ ಖಾತೆಗಳನ್ನು ವಿಲೀನಗೊಳಿಸುವುದು ಹೇಗೆ?

  • ಇಪಿಎಫ್​ಒನ ಅಧಿಕೃತ ವೆಬ್​ಸೈಟ್​ಗೆ ಹೋಗಿ ಲಾಗಿನ್ ಆಗಿರಿ
  • ಮುಖ್ಯಪುಟದಲ್ಲಿ ಮೈ ಅಕೌಂಟ್ ಆಯ್ಕೆ ಮಾಡಿ
  • ಮರ್ಜ್ ಅಕೌಂಟ್ಸ್ ಫ್ರಂ ದಿ ಅಕೌಂಟ್ಸ್ ಡೀಟೇಲ್ಸ್ ಸೆಕ್ಷನ್ ಆಯ್ಕೆ ಮಾಡಿ
  • ಮರ್ಜ್ ಅಕೌಂಟ್ಸ್ ಪುಟದಲ್ಲಿ ನೀವು ವಿಲೀನಗೊಳಿಸಬೇಕೆಂದಿರುವ ಖಾತೆಗಳಿಗೆ ವಿವರ ತುಂಬಿರಿ.
  • ವಿಲೀನಗೊಂಡ ನಿಮ್ಮ ಖಾತೆಗೆ ಯಾವ ಬ್ಯಾಂಕ್ ಖಾತೆಯನ್ನು ಬಳಸಬಯಸುತ್ತೀರಿ ಎಂಬುದನ್ನು ಆಯ್ಕೆ ಮಾಡಿ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:32 pm, Thu, 15 June 23