Income Tax: ಹೊಸ ಅದಾಯ ತೆರಿಗೆ ವ್ಯವಸ್ಥೆಯೋ ಹಳೆಯದ್ದೋ? ಆಯ್ಕೆ ಮಾಡಿಕೊಳ್ಳದಿದ್ದರೆ ಏನಾಗುತ್ತದೆ? ಸಿಬಿಡಿಟಿ ಹೊಸ ನೋಟೀಸ್​ನಲ್ಲಿ ಏನು ಹೇಳಿದೆ?

|

Updated on: Apr 12, 2023 | 10:59 AM

CBDT Notification: ಹೊಸ ಹಣಕಾಸು ವರ್ಷದಿಂದ ಟಿಡಿಎಸ್ ಡಿಡಕ್ಷನ್ ಸಂಬಂಧ ಸಿಬಿಡಿಟಿ ಸುತ್ತೋಲೆ ಹೊರಡಿಸಿದೆ. ಅದರಂತೆ ಹಳೆಯ ತೆರಿಗೆ ವ್ಯವಸ್ಥೆ ಬೇಕೋ ಹೊಸ ತೆರಿಗೆ ವ್ಯವಸ್ಥೆ ಬೇಕೋ ಎಂಬುದನ್ನು ಆಯ್ಕೆ ಮಾಡಿಕೊಳ್ಳದ ಉದ್ಯೋಗಿಗೆ ಡೀಫಾಲ್ಟ್ ವ್ಯವಸ್ಥೆಯನ್ನು ಜಾರಿಗೊಳಿಸಬೇಕೆಂದು ತಿಳಿಸಲಾಗಿದೆ.

Income Tax: ಹೊಸ ಅದಾಯ ತೆರಿಗೆ ವ್ಯವಸ್ಥೆಯೋ ಹಳೆಯದ್ದೋ? ಆಯ್ಕೆ ಮಾಡಿಕೊಳ್ಳದಿದ್ದರೆ ಏನಾಗುತ್ತದೆ? ಸಿಬಿಡಿಟಿ ಹೊಸ ನೋಟೀಸ್​ನಲ್ಲಿ ಏನು ಹೇಳಿದೆ?
ಸಾಂದರ್ಭಿಕ ಚಿತ್ರ
Follow us on

Opting New Tax Regime Or Old Tax Regime:  ಏಪ್ರಿಲ್ 1ರಿಂದ ಹೊಸ ಹಣಕಾಸು ವರ್ಷ ಆರಂಭವಾಗಿದೆ. ಏಪ್ರಿಲ್ ತಿಂಗಳ ಸಂಬಳ ಮೇನಲ್ಲಿ ದೊರೆಯುತ್ತದೆ. ಅಷ್ಟರಲ್ಲಿ ಉದ್ಯೋಗಿಗಳು ತಮಗೆ ಹೊಸ ಆದಾಯ ತೆರಿಗೆ ವ್ಯವಸ್ಥೆ (New Tax Regime) ಬೇಕೋ, ಅಥವಾ ಹಳೆಯ ತೆರಿಗೆ ವ್ಯವಸ್ಥೆಯಲ್ಲೇ (Old Tax Regime) ಮುಂದುವರಿಯಬೇಕೋ ಎಂಬುದನ್ನು ನಿರ್ಧರಿಸಬೇಕಿದೆ. ಉದ್ಯೋಗಿಗಳಿಂದ ಈ ಆಯ್ಕೆ ಮಾಡಿಸುವುದು ಅವರು ಕೆಲಸ ಮಾಡುವ ಕಂಪನಿಯ (Employer) ಜವಾಬ್ದಾರಿ. ಹೊಸ ತೆರಿಗೆ ವ್ಯವಸ್ಥೆ ಡೀಫಾಲ್ಟ್ ಆಯ್ಕೆ (Default Tax System) ಅಗಿರುತ್ತದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹಿಂದೆಯೇ ಸ್ಪಷ್ಟಪಡಿಸಿದ್ದರು. ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT- Central Board of Direct Taxes) ಇದೀಗ ಹೊಸ ಹಣಕಾಸು ವರ್ಷದಿಂದ ಟಿಡಿಎಸ್ ಡಿಡಕ್ಷನ್ ಸಂಬಂಧ ಸುತ್ತೋಲೆ (Circular) ಹೊರಡಿಸಿದೆ. ಅದರಂತೆ ಹಳೆಯ ತೆರಿಗೆ ವ್ಯವಸ್ಥೆ ಬೇಕೋ ಹೊಸ ತೆರಿಗೆ ವ್ಯವಸ್ಥೆ ಬೇಕೋ ಎಂಬುದನ್ನು ಆಯ್ಕೆ ಮಾಡಿಕೊಳ್ಳದ ಉದ್ಯೋಗಿಗೆ ಡೀಫಾಲ್ಟ್ ಸಿಸ್ಟಮ್ ಆದ ಹೊಸ ತೆರಿಗೆ ವ್ಯವಸ್ಥೆಯನ್ನು ಜಾರಿಗೊಳಿಸಬೇಕೆಂದು ಈ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

‘ಉದ್ಯೋಗಿಯಿಂದ ಏನೂ ಸ್ಪಂದನೆ ಬರಲಿಲ್ಲವೆಂದರೆ ಅವರು ಡೀಫಾಲ್ಟ್ ತೆರಿಗೆ ವ್ಯವಸ್ಥೆಯಲ್ಲಿ ಮುಂದುವರಿಯುತ್ತಾರೆ. ಹೊಸ ತೆರಿಗೆ ವ್ಯವಸ್ಥೆ ಬೇಡ ಎನ್ನುವ ಆಯ್ಕೆ ಸ್ವೀಕರಿಸಿಲ್ಲ ಎಂದು ಭಾವಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 192 ಅಡಿಯಲ್ಲಿ ಮತ್ತು 115ಬಿಎಸಿ ಸೆಕ್ಷನ್​ನ ಸಬ್ ಸೆಕ್ಷನ್ (1) ನಲ್ಲಿರುವ ದರಗಳ ಪ್ರಕಾರ ಟಿಡಿಎಸ್ ಮುರಿದುಕೊಳ್ಳಬೇಕು’ ಎಂದು ಸಿಬಿಡಿಟಿ ಹೊರಡಿಸಿರುವ ಈ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿGMS: ಚಿನ್ನ ನಗದೀಕರಣ ಯೋಜನೆಯಲ್ಲಿ ನೀವಿಡುವ ಆಭರಣ ಯಾವುದಕ್ಕೆ ಬಳಕೆ ಆಗುತ್ತದೆ? ಚಿನ್ನಕ್ಕೆ ಬಡ್ಡಿ ಕೊಡುವ ಜಿಎಂಎಸ್ ಸ್ಕೀಮ್ ಬಗ್ಗೆ ಎಲ್ಲಾ ಮಾಹಿತಿ

ಅಂದರೆ, ಹೊಸ ತೆರಿಗೆ ವ್ಯವಸ್ಥೆ ಪ್ರಕಾರವಾಗಿ ಉದ್ಯೋಗಿಯ ಸಂಬಳದಲ್ಲಿ ಟಿಡಿಎಸ್ ಮುರಿದುಕೊಳ್ಳಲಾಗುತ್ತದೆ. ಹೀಗಾಗಿ, ಉದ್ಯೋಗಿ ತನಗೆ ಹಳೆಯ ವ್ಯವಸ್ಥೆ ಬೇಕೋ ಅಥವಾ ಹೊಸ ತೆರಿಗೆ ವ್ಯವಸ್ಥೆ ಸಾಕಾ ಎಂಬುದನ್ನು ಕೆಲವೇ ದಿನಗಳ ಒಳಗಾಗಿ ಆಯ್ಕೆ ಮಾಡಿಕೊಳ್ಳಬೇಕು. ತಾವು ಕೆಲಸ ಮಾಡುವ ಕಂಪನಿಯ ಹೆಚ್​ಆರ್ ಅಥವಾ ಫೈನಾನ್ಸ್ ವಿಭಾಗದವರಿಗೆ ತಮ್ಮ ಆಯ್ಕೆಯನ್ನು ತಿಳಿಸಬೇಕು. ಅದರಲ್ಲೂ ಹಳೆಯ ತೆರಿಗೆ ವ್ಯವಸ್ಥೆ ಬೇಕು ಎನ್ನುವವರು ಖಂಡಿತವಾಗಿ ತಮ್ಮ ಆಯ್ಕೆಯನ್ನು ಸ್ಪಷ್ಟಪಡಿಸಬೇಕು. ಇಲ್ಲದಿದ್ದರೆ ಡೀಫಾಲ್ಟ್ ಆಗಿ ಹೊಸ ತೆರಿಗೆ ವ್ಯವಸ್ಥೆ ಅನ್ವಯ ಆಗುತ್ತದೆ.

ಹೊಸ ಮತ್ತು ಹಳೆಯ ತೆರಿಗೆ ವ್ಯವಸ್ಥೆಯಲ್ಲಿ ಏನು ವ್ಯತ್ಯಾಸ? ಯಾವುದು ಉತ್ತಮ?

ಹೊಸ ತೆರಿಗೆ ವ್ಯವಸ್ಥೆ ಮತ್ತು ಹಳೆಯ ತೆರಿಗೆ ವ್ಯವಸ್ಥೆ ಎರಡರಲ್ಲೂ ಮೂಲ ತೆರಿಗೆ ವಿನಾಯಿತಿ ಮಿತಿ 3 ಲಕ್ಷ ಇದೆ. ಹೊಸ ತೆರಿಗೆ ವ್ಯವಸ್ಥೆಯಲ್ಲಿ 7 ಲಕ್ಷ ರೂ ತೆರಿಗೆ ಅನ್ವಯಕ ಆದಾಯದವರೆಗೂ ರಿಬೇಟ್ ಮೊತ್ತವನ್ನು ಹೆಚ್ಚಿಸಲಾಗಿದೆ. 50,000 ರೂ ಸ್ಟ್ಯಾಂಡರ್ಡ್ ಡಿಡಕ್ಷನ್ ಅವಕಾಶ ಕೊಡಲಾಗಿದೆ.

ಇದನ್ನೂ ಓದಿTravel Insurance: ಪ್ರಯಾಣಕ್ಕೂ ಇನ್ಷೂರೆನ್ಸ್ ಸ್ಕೀಮ್; ಇದರಲ್ಲಿ ಏನೇನು ಕವರ್ ಆಗುತ್ತೆ? ಇಲ್ಲಿದೆ ಡೀಟೇಲ್ಸ್

ಹಳೆಯ ತೆರಿಗೆ ವ್ಯವಸ್ಥೆಯ ಪ್ರಮುಖ ಪ್ರಯೋಜನ ಇರುವುದು ಅದರ ಸೆಕ್ಷನ್ 80ಸಿ. ವಿವಿಧ ಉಳಿತಾಯ ಯೋಜನೆಗಳ ಮೇಲೆ ನೀವು ಹೂಡಿಕೆ ಮಾಡುತ್ತಿರುವವರಾದರೆ ಹಳೆಯ ತೆರಿಗೆ ವ್ಯವಸ್ಥೆ ಉತ್ತಮ ಆಯ್ಕೆ ಆಗುತ್ತದೆ.

ಉಳಿತಾಯ ಯೋಜನೆಗಳ ಮೇಲಿನ ಹೂಡಿಕೆ, ಮಕ್ಕಳ ಟ್ಯೂಷನ್ ಫೀಸ್, ಸಾಲಕ್ಕೆ ಕಟ್ಟುವ ಕಂತು ಅಥವಾ ಇಎಂಐ ಇತ್ಯಾದಿ ನಿಮ್ಮ ಹೂಡಿಕೆ ಮತ್ತು ವೆಚ್ಚಗಳ ಮೊತ್ತ ಒಂದೂವರೆ ಲಕ್ಷ ರೂಗಿಂತ ಹೆಚ್ಚು ಇದ್ದರೆ ಹಳೆಯ ತೆರಿಗೆ ವ್ಯವಸ್ಥೆ ಮುಂದುವರಿಸುವುದು ಉತ್ತಮ ಎನ್ನುತ್ತಾರೆ ತೆರಿಗೆ ತಜ್ಞರು.

ನೀವು ವಾರ್ಷಿಕ 7 ಲಕ್ಷ ರೂಗಿಂತ ಹೆಚ್ಚು ಸಂಬಳ ಪಡೆಯುವವರಾಗಿದ್ದು, ತೆರಿಗೆ ಉಳಿಸುವ ಯೋಜನೆಗಳ ಮೇಲೆ ಒಂದೂವರೆ ಲಕ್ಷಕ್ಕಿಂತ ಕಡಿಮೆ ಹೂಡಿಕೆ ಮಾಡಿದ್ದರೆ ಹೊಸ ತೆರಿಗೆ ವ್ಯವಸ್ಥೆ ಉತ್ತಮ ಆಯ್ಕೆ ಆಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:51 am, Wed, 12 April 23