ನವದೆಹಲಿ, ಅಕ್ಟೋಬರ್ 27: ಬ್ಯಾಂಕುಗಳಲ್ಲಿನ ಫಿಕ್ಸೆಡ್ ಡೆಪಾಸಿಟ್ ಹಣವನ್ನು ಮುಂಚಿತವಾಗಿ ವಿತ್ಡ್ರಾ ಮಾಡಿಕೊಳ್ಳುವ ನಿಯಮದಲ್ಲಿ ಆರ್ಬಿಐ ಬದಲಾವಣೆ ಮಾಡಿದೆ. 15 ಲಕ್ಷ ರೂ ಇದ್ದ ಕನಿಷ್ಠ ಮೊತ್ತವನ್ನು 1 ಕೋಟಿ ರೂಗೆ ಏರಿಸಲಾಗಿದೆ. ಅಂದರೆ, ಒಂದು ಕೋಟಿ ರೂವರೆಗಿನ ಫಿಕ್ಸೆಡ್ ಡೆಪಾಸಿಟ್ ಅನ್ನು ಪ್ರೀಮೆಚ್ಯೂರ್ ಆಗಿ ಹಿಂಪಡೆಯಲು ಸಾಧ್ಯವಾಗಿಸುತ್ತದೆ ಈ ನಿಯಮ ಬದಲಾವಣೆ. ಅಕ್ಟೋಬರ್ 26ರಂದು ಆರ್ಬಿಐ ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದು, ಈ ನಿಯಮ ಬದಲಾವಣೆ ತತ್ಕ್ಷಣದಿಂದಲೇ ಅನ್ವಯ ಆಗುತ್ತದೆ ಎಂದು ಹೇಳಿದೆ.
ಇಲ್ಲಿಯವರೆಗೆ ಬ್ಯಾಂಕುಗಳು ತಮ್ಮಲ್ಲಿನ 15 ಲಕ್ಷ ರೂವರೆಗಿನ ಠೇವಣಿಗಳನ್ನು ಅವಧಿಗೆ ಮುನ್ನ ಪ್ರೀಮೆಚ್ಯೂರ್ ಆಗಿ ಹಿಂಪಡೆಯಲು ಅವಕಾಶ ನೀಡಿದ್ದವು. ಅದಕ್ಕಿಂತ ಹೆಚ್ಚಿನ ಮೊತ್ತದ ಠೇವಣಿಯಾದರೆ ಅವಧಿ ಮುಗಿಯುವವರೆಗೂ ವಿತ್ಡ್ರಾ ಮಾಡಲು ಅವಕಾಶ ಇರುತ್ತಿರಲಿಲ್ಲ. ಈಗ ಈ ಕನಿಷ್ಠ ಮೊತ್ತವನ್ನು 1 ಕೋಟಿ ರುಪಾಯಿಗೆ ಏರಿಸಲಾಗಿದೆ.
ಇದನ್ನೂ ಓದಿ: Capital gain Tax: ನೀವು ಮನೆ ಖರೀದಿಸಿ ಲಾಭಕ್ಕೆ ಮಾರಿದರೆ ಎಷ್ಟು ತೆರಿಗೆ ಕಟ್ಟಬೇಕು? ಇಲ್ಲಿದೆ ಲೆಕ್ಕಚಾರ
‘ನಾನ್ ಕ್ಯಾಲಬಲ್ ಟರ್ಮ್ ಡೆಪಾಸಿಟ್ಗಳಲ್ಲಿ ಕನಿಷ್ಠ ಮೊತ್ತವನ್ನು 15 ಲಕ್ಷದಿಂದ 1 ಕೋಟಿ ರೂಗೆ ಏರಿಕೆ ಮಾಡಲಾಗಿದೆ. ಒಂದು ಕೋಟಿ ಅಥವಾ ಅದಕ್ಕಿಂತ ಕಡಿಮೆ ಮೊತ್ತದ ಟರ್ಮ್ ಡೆಪಾಸಿಟ್ಗಳಿಗೆ ಪ್ರೀಮೆಚ್ಯೂರ್ ವಿತ್ಡ್ರಾಯಲ್ ಫೆಸಿಲಿಟಿ ಇರುತ್ತದೆ,’ ಎಂದು ಆರ್ಬಿಐ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ.
ಈ ನಿಯಮ ಬದಲಾವಣೆಯು ಎಲ್ಲಾ ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕುಗಳಿಗೆ ತತ್ಕ್ಷಣದಿಂದಲೇ (ಅ. 26) ಅನ್ವಯ ಆಗುತ್ತದೆ ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಇದನ್ನೂ ಓದಿ: ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ; ತಿಂಗಳಿಗೆ 5,000 ರೂ ಪಿಂಚಣಿ ಸಿಗಲು ಎಷ್ಟು ಹೂಡಿಕೆ ಬೇಕು?
ಭಾರತದಲ್ಲಿ ಅತಿಸಾಮಾನ್ಯವಾಗಿ ಬಳಕೆಯಾಗುವ ಹೂಡಿಕೆ ಸಾಧನಗಳಲ್ಲಿ ಫಿಕ್ಸೆಡ್ ಡೆಪಾಸಿಟ್ ಅಥವಾ ಅವಧಿ ಠೇವಣಿ ಪ್ರಮುಖವಾದುದು. ಪ್ರಮುಖ ವಾಣಿಜ್ಯ ಬ್ಯಾಂಕುಗಳಲ್ಲಿ ಶೇ. 7.5ರಿಂದ 8ರವರೆಗೂ ಬಡ್ಡಿ ನೀಡಲಾಗುತ್ತದೆ. ಸಹಕಾರಿ ಬ್ಯಾಂಕುಗಳಲ್ಲಿ ಎಫ್ಡಿ ಮೇಲೆ ಶೇ. 9ರವರೆಗೂ ಬಡ್ಡಿ ಸಿಗುವುದುಂಟು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ