ಭಾರತದಲ್ಲೀಗ ಎಸ್​​ಐಪಿ ಮಂತ್ರ; ಮನಿ9 ಫೈನಾನ್ಷಿಯಲ್ ಫ್ರೀಡಂ ಸಮಿಟ್​​ನಲ್ಲಿ ಮ್ಯೂಚುವಲ್ ಫಂಡ್ ಸಹೀ ಹೈ ಎಂದ ಎಎಂಎಫ್​​ಐ ಛೇರ್ಮನ್ ವೆಂಕಟ್ ಎನ್ ಚಲಸಾನಿ

AMFI chairman Venkat N Chalasani speaks at Money9 Financial Freedom Summit 2025: ಭಾರತದಲ್ಲಿ ಎಸ್​ಐಪಿ ಜನಪ್ರಿಯತೆ ಬಹಳ ತೀವ್ರವಾಗಿ ಹೆಚ್ಚುತ್ತಿದೆ. ಪ್ರತಿ ತಿಂಗಳು ಸಾವಿರಾರು ಕೋಟಿ ರೂ ಹೂಡಿಕೆಗಳು ಮ್ಯೂಚುವಲ್ ಫಂಡ್ ಎಸ್​ಐಪಿ ಮೂಲಕ ಷೇರು ಮಾರುಕಟ್ಟೆಗೆ ಹರಿದುಬರುತ್ತಿವೆ. ಈವರೆಗೆ 68 ಲಕ್ಷ ಕೋಟಿ ರೂ ಹೂಡಿಕೆಯು ಎಸ್​ಐಪಿ ಮೂಲಕ ಸಲ್ಲಿಕೆಯಾಗಿವೆ ಎಂದು ಎಎಂಎಫ್​​ಐ ಛೇರ್ಮನ್ ವೆಂಕಟ್ ಎನ್ ಚಲಸಾನಿ ಹೇಳಿದ್ದಾರೆ. ಮನಿ9 ಫೈನಾನ್ಷಿಯಲ್ ಫ್ರೀಡಂ ಸಮಿಟ್ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಭಾರತದಲ್ಲೀಗ ಎಸ್​​ಐಪಿ ಮಂತ್ರ; ಮನಿ9 ಫೈನಾನ್ಷಿಯಲ್ ಫ್ರೀಡಂ ಸಮಿಟ್​​ನಲ್ಲಿ ಮ್ಯೂಚುವಲ್ ಫಂಡ್ ಸಹೀ ಹೈ ಎಂದ ಎಎಂಎಫ್​​ಐ ಛೇರ್ಮನ್ ವೆಂಕಟ್ ಎನ್ ಚಲಸಾನಿ
ವೆಂಕಟ್ ಎನ್ ಚಲಸಾನಿ

Updated on: Mar 06, 2025 | 10:55 AM

ಮುಂಬೈ, ಮಾರ್ಚ್ 5: ಭಾರತದಲ್ಲಿ ಅತ್ಯಂತ ಪ್ರಮುಖ ಹಣಕಾಸು ಯಶೋಗಾಥೆಗಳನ್ನು ಪಟ್ಟಿ ಮಾಡಿದರೆ ಎಸ್​ಐಪಿ ಇರುತ್ತದೆ. ಭಾರತದಲ್ಲಿ ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್ ಪ್ಲಾನ್ ಬಹಳ ಗಣನೀಯವಾಗಿ ಜನಪ್ರಿಯವಾಗಿದೆ ಎಂದು ಭಾರತೀಯ ಮ್ಯೂಚುವಲ್ ಫಂಡ್​ಗಳ ಸಂಘಟನೆಯಾದ ಎಎಂಎಫ್​​​ಐ ಛೇರ್ಮನ್ ವೆಂಕಟ್ ಎನ್ ಚಲಸಾನಿ ಹೇಳಿದರು. ಟಿವಿ9 ನೆಟ್ವರ್ಕ್ ಮುಂಬೈನಲ್ಲಿ ಇಂದು ಬುಧವಾರ ಆಯೋಜಿಸಿದ ಮನಿ9 ಫೈನಾನ್ಷಿಯಲ್ ಫ್ರೀಡಂ ಸಮಿಟ್ 2025ನ (Money9 Financial Freedom Summit 2025) ಸೆಷನ್​​ವೊಂದರಲ್ಲಿ ಮಾತನಾಡುತ್ತಿದ್ದ ಚಲಸಾನಿ, ಎಸ್​ಐಪಿಗಳು ಹೇಗೆ ಮ್ಯೂಚುವಲ್ ಫಂಡ್ ಉದ್ಯಮ ಹಾಗೂ ಷೇರು ಮಾರುಕಟ್ಟೆಯನ್ನು ಎತ್ತರಿಸಿವೆ ಎನ್ನುವುದನ್ನು ಅಂಕಿ ಅಂಶ ಸಮೇತ ವಿವರಿಸಿದರು.

2018ರ ಮಾರ್ಚ್​​ನಲ್ಲಿ ಎಸ್​ಐಪಿಗಳಿಂದ ಸೇರ್ಪಡೆಯಾದ ಒಟ್ಟು ನಿರ್ವಹಿತ ಆಸ್ತಿ 22 ಲಕ್ಷ ಕೋಟಿ ರೂ ಇತ್ತು. ಈಗ ಇದು 68 ಲಕ್ಷ ಕೋಟಿ ರೂಗೆ ಏರಿಕೆ ಆಗಿದೆ. ದೇಶದ ಜಿಡಿಪಿಯ ಶೇ. 12ರಷ್ಟು ಇದ್ದ ಎಯುಎಂ ಈಗ ಶೇ. 18ರಷ್ಟಾಗಿದೆ. ಈಗ ಪ್ರತೀ ತಿಂಗಳು ಎಸ್​ಐಪಿ ಮೂಲಕ ಆಗುತ್ತಿರುವ ಸರಾಸರಿ ಹೂಡಿಕೆ 26,500 ಕೋಟಿ ರೂ ಆಗಿದೆ. ಭಾರತದ ಆರ್ಥಿಕತೆ ಮತ್ತು ಮಾರುಕಟ್ಟೆ ಬಗ್ಗೆ ದೇಶೀಯ ಹೂಡಿಕೆದಾರರಿಗೆ ವಿಶ್ವಾಸ ಹೆಚ್ಚುತ್ತಿರುವ ಕುರುಹು ಇದು ಎಂದು ವೆಂಕಟ್ ಎನ್ ಚಲಸಾನಿ ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಬೆಳಗ್ಗೆ ಖರೀದಿಸಿ, ಮಧ್ಯಾಹ್ನ ಮಾರೋದು ಹೂಡಿಕೆ ಅಲ್ಲ: ಮನಿ9 ಸಮಿಟ್​ನಲ್ಲಿ ಎನ್​ಎಸ್​ಇ ಸಿಇಒ ಆಶೀಶ್ ಚೌಹಾಣ್ ಕಿವಿಮಾತು

ಇದನ್ನೂ ಓದಿ
ಹೂಡಿಕೆ ದೀರ್ಘಾವಧಿ ಇರಲಿ: ಎನ್​ಎಸ್​ಇ ಮುಖ್ಯಸ್ಥ ಆಶೀಶ್ ಚೌಹಾಣ್
2030ದೊಳಗೆ ಮಹಾರಾಷ್ಟ್ರ ಟ್ರಿಲಿಯನ್ ಡಾಲರ್ ಆರ್ಥಿಕತೆ: ಫಡ್ನವಿಸ್
ಜಾಗತಿಕವಾಗಿ ಭಾರತಕ್ಕೆ ವಿಶೇಷ ಸ್ಥಾನ: ಬರುಣ್ ದಾಸ್
ಮನಿ9 ಫೈನಾನ್ಷಿಯಲ್ ಫ್ರೀಡಂ ಸಮಿಟ್ ಲೈವ್ ವೀಕ್ಷಿಸಿ

2015ರಿಂದ ಷೇರು ಮಾರುಕಟ್ಟೆಯ ಚಹರೆ ಸಾಕಷ್ಟು ಬದಲಾವಣೆ ಆಗಿ ಹೋಗಿದೆ. ಮುಂಚೆಯಅದರೆ, ವಿದೇಶೀ ಸಾಂಸ್ಥಿಕ ಹೂಡಿಕೆಗಳು ಮಾರುಕಟ್ಟೆಯನ್ನು ಅತಿಹೆಚ್ಚು ಪ್ರಭಾವಿಸುತ್ತಿದ್ದವು. ಈಗ ದೇಶೀಯ ಹೂಡಿಕೆದಾರರ ಪಾತ್ರ ಹೆಚ್ಚಿದೆ. 10 ಕೋಟಿಗೂ ಅಧಿಕ ಎಸ್​​ಐಪಿ ಅಕೌಂಟ್​ಗಳಿವೆ. ತಿಂಗಳು ಕಳೆದಂತೆ ಸಂಖ್ಯೆ ಹೆಚ್ಚಳ ಏರುತ್ತಲೇ ಇದೆ. ದೇಶದ ಮೂಲೆ ಮೂಲೆಗೂ ಈ ಯಶೋಗಾಥೆ ವಿಸ್ತರಿಸುವುದು ತಮ್ಮ ಸಂಘಟನೆಯ ಗುರಿ ಎಂದು ಎಎಂಎಫ್​​​ಐ ಮುಖ್ಯಸ್ಥರು ತಿಳಿಸಿದರು.

ಜ್ಞಾನದ ಮೇಲೆ ಅತಿ ಹೆಚ್ಚು ಹೂಡಿಕೆಯಾಗಬೇಕು…

ಹೂಡಿಕೆ ಕುರಿತ ಅರಿವು ಎಷ್ಟು ಮುಖ್ಯ ಎನ್ನುವುದನ್ನು ವಿವರಿಸಿದ ವೆಂಕಟ್ ಚಲಸಾನಿ, ಜ್ಞಾನದ ಮೇಲೆ ಮಾಡುವ ಹೂಡಿಕೆಯೇ ಅತ್ಯಂತ ಪ್ರಮುಖ ಹೂಡಿಕೆಯಾಗಿದೆ. ಇದು ಅತಿಹೆಚ್ಚು ರಿಟರ್ನ್ ತರುತ್ತದೆ ಎಂದು ಹೇಳಿದರು.

ನೀವು ಟಿವಿಯಲ್ಲಿ ಮ್ಯೂಚುವಲ್ ಫಂಡ್ ಸಹೀ ಹೈ ಥೀಮ್​ನಲ್ಲಿ ಸಾಕಷ್ಟು ಆ್ಯಡ್​ಗಳನ್ನು ನೋಡಿರಬಹುದು. ಅದರ ಪರಿಕಲ್ಪನೆಯ ಕ್ರೆಡಿಟ್ ಅನ್ನು ಅಸೋಸಿಯೇಶನ್ ಆಫ್ ಮ್ಯೂಚುವಲ್ ಫಂಡ್ಸ್ ಆಫ್ ಇಂಡಿಯಾ ಸಂಸ್ಥೆಗೆ ಕೊಡಬೇಕು.

ಇದನ್ನೂ ಓದಿ: ಮೋದಿ ನಾಯಕತ್ವದಲ್ಲಿ ಹೊಸ ವಿಶ್ವ ಶ್ರೇಣಿಯಲ್ಲಿ ಭಾರತಕ್ಕೆ ವಿಶೇಷ ಸ್ಥಾನಮಾನ: ಟಿವಿ9 ನೆಟ್ವರ್ಕ್ ಸಿಇಒ ಬರುಣ್ ದಾಸ್

ಟಿವಿ9 ನೆಟ್ವರ್ಕ್ ಆಯೋಜಿಸಿರುವ ಮನಿ9 ಫೈನಾನ್ಷಿಯಲ್ ಫ್ರೀಡಂ ಸಮಿಟ್ 2025 ಈ ಬಾರಿಯದ್ದು ಮೂರನೇ ಅವತರಣಿಕೆ. ಹಣಕಾಸು ನಿರ್ವಹಣೆ, ಹೂಡಿಕೆ ಇತ್ಯಾದಿ ಕುರಿತು ಜನಜಾಗೃತಿ ಮೂಡಿಸುವುದು ಈ ಶೃಂಗಸಭೆಯ ಮುಖ್ಯ ಉದ್ದೇಶವಾಗಿದೆ. ಹಣಕಾಸು ಕ್ಷೇತ್ರದ ದಿಗ್ಗಜರು, ವಿವಿಧ ಕಂಪನಿಗಳ ಸಿಇಒಗಳು, ಎಂಡಿಗಳು, ಛೇರ್ಮನ್​ಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಸಲಹೆಗಳನ್ನು ನೀಡಿದ್ದಾರೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 9:10 pm, Wed, 5 March 25