
ನವದೆಹಲಿ, ಆಗಸ್ಟ್ 31: ಭಾರತದ ಅತಿದೊಡ್ಡ ಯುಪಿಐ ಪೇಮೆಂಟ್ ಸಂಸ್ಥೆಯಾದ ಫೋನ್‌ಪೇ (PhonePe) ಇದೀಗ ಫೀಚರ್ ಫೋನ್ಗಳಿಗೆ ಯುಪಿಐ ಪಾವತಿ ಅವಕಾಶ ಕಲ್ಪಿಸಿದೆ. ಸ್ಮಾರ್ಟ್‌ಫೋನ್ ಹಾಗೂ ಇಂಟರ್ನೆಟ್ ಸೌಲಭ್ಯವಿಲ್ಲದ ಕೀಪ್ಯಾಡ್ (Feature) ಫೋನ್ ಬಳಕೆದಾರರಿಗಾಗಿ ‘PhonePe UPI 123Pay’ ಎಂಬ ನೂತನ ಸೇವೆ ಪ್ರಾರಂಭಿಸಿದೆ.
ಈ ಸೇವೆಯು ಎಸ್‌ಎಮ್‌ಎಸ್ (SMS) ಆಧಾರಿತ ತಂತ್ರಜ್ಞಾನದ ಮೇಲೆ ಕಾರ್ಯನಿರ್ವಹಿಸುವುದರಿಂದ 2G ನೆಟ್‌ವರ್ಕ್ ಇರುವ ಪ್ರದೇಶಗಳಲ್ಲೂ ಇಂಟರ್ನೆಟ್ ಇಲ್ಲದೆಯೇ ಸುಲಭವಾಗಿ ಡಿಜಿಟಲ್ ಪಾವತಿ ಮಾಡಬಹುದು.
ಇದನ್ನೂ ಓದಿ: ಯುದ್ಧ, ತೈಲ ಬಿಕ್ಕಟ್ಟಿನ ಸ್ಥಿತಿಯಲ್ಲೂ ಭಾರತದ ಆರ್ಥಿಕತೆ ಶೇ. 7.8 ಬೆಳೆಯಲು ಸಾಧ್ಯವಾಗಿದ್ದು ಹೇಗೆ?
ನೆರವು ಮತ್ತು ಸೇವೆಗಳು: ಫೋನ್ಪೆನ ಈ ಹೊಸ ಸೇವೆಯ ಮೂಲಕ ಹಣ ವರ್ಗಾವಣೆ, ಕ್ಯೂಆರ್ (QR) ಕೋಡ್ ಸ್ಕ್ಯಾನ್ ಮಾಡಿ ಪಾವತಿಸುವುದು, ಬ್ಯಾಲೆನ್ಸ್ ಪರಿಶೀಲನೆ ಹಾಗೂ ವಹಿವಾಟಿನ ವಿವರಗಳನ್ನು ನೋಡಬಹುದು.
ಭಾರತದಲ್ಲಿ ಸುಮಾರು 20 ಕೋಟಿಗೂ ಹೆಚ್ಚು ಫೀಚರ್ ಫೋನ್ ಬಳಕೆದಾರರಿದ್ದು, ಥರ್ಡ್ ಪಾರ್ಟಿ ಆಪ್ (TPAP) ವಿಭಾಗದಲ್ಲಿ ಈ ಸೌಲಭ್ಯ ತಂದ ಮೊದಲ ಪ್ರಮುಖ ಸಂಸ್ಥೆ ಫೋನ್‌ಪೇ ಆಗಿದೆ.
ನೋಕಿಯಾ (Nokia), ಎಚ್‌ಎಂಡಿ (HMD), ಲಾವಾ (Lava) ಮತ್ತು ಐಟೆಲ್ (Itel) ಫೋನ್‌ಗಳಲ್ಲಿ ಈ ಆಪ್ ಪ್ರೀ-ಇನ್‌ಸ್ಟಾಲ್ (pre-bundled) ಆಗಿ ಸಿಗಲಿದೆ.
ಇದನ್ನೂ ಓದಿ: ಶೇ. 90 ಆದಾಯ ಹೂಡಿಕೆ ಹಾಕುವ ರಾಧಿಕಾ ಗುಪ್ತಾ; ಒಂದು ಪೈಸೆಯೂ ಉಳಿಸಲು ಆಗದಿದ್ದ ಅವರಿಗೆ ಇದು ಸಾಧ್ಯವಾಗಿದ್ದು ಹೇಗೆ?
ಧ್ವನಿ ಸಹಾಯ (Voice Assistant): ಫೀಚರ್ ಫೋನ್‌ಗಳಲ್ಲಿ ಯುಪಿಐ ಪೇಮೆಂಟ್ ಸೌಲಭ್ಯವನ್ನು ಸಕ್ರಿಯಗೊಳಿಸಲು ಮತ್ತು ಬಳಸಲು ಸಹಾಯ ಮಾಡಲು ಕನ್ನಡ ಸೇರಿದಂತೆ 12 ಭಾರತೀಯ ಭಾಷೆಗಳಲ್ಲಿ ಎಐ (AI) ಧ್ವನಿ ಮಾರ್ಗದರ್ಶನ ಲಭ್ಯವಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ