ಪಿಎಂ ಕಿಸಾನ್ ಮಾನ್​ಧನ್ ಯೋಜನೆ: ರೈತರಿಗೆ ವರ್ಷಕ್ಕೆ 36,000 ರೂ ಪಿಂಚಣಿ ಕೊಡುವ ಗವರ್ನ್ಮೆಂಟ್ ಸ್ಕೀಮ್

ಪ್ರಧಾನಮಂತ್ರಿ ಕಿಸಾನ್ ಮಾನ್​ಧನ್ ಯೋಜನೆಯಲ್ಲಿ ರೈತರು 60ರ ವಯಸ್ಸಿನ ನಂತರ ತಿಂಗಳಿಗೆ 3,000 ರೂ ಪಿಂಚಣಿ ಪಡೆಯಲು ಅವಕಾಶ ಇದೆ. ಈ ಯೋಜನೆಯಲ್ಲಿ ಪಾಲ್ಗೊಳ್ಳಲು ರೈತರು ಸ್ವಂತ ಕೃಷಿ ಭೂಮಿ ಹೊಂದಿರಬೇಕು. 18ರಿಂದ 40 ವರ್ಷ ವಯೋಮಾನದಲ್ಲಿರಬೇಕು. ಯೋಜನೆಯಲ್ಲಿ ರೈತರು 60ರ ವಯಸ್ಸಿನವರೆಗೂ ತಿಂಗಳಿಗೆ 55ರಿಂದ 200 ರೂವರೆಗೆ ಕಂತು ಕಟ್ಟುತ್ತಾ ಹೋಗಬೇಕಾಗುತ್ತದೆ.

ಪಿಎಂ ಕಿಸಾನ್ ಮಾನ್​ಧನ್ ಯೋಜನೆ: ರೈತರಿಗೆ ವರ್ಷಕ್ಕೆ 36,000 ರೂ ಪಿಂಚಣಿ ಕೊಡುವ ಗವರ್ನ್ಮೆಂಟ್ ಸ್ಕೀಮ್
ರೈತ
Image Credit source: Getty Images

Updated on: Sep 30, 2026 | 4:50 PM

ಕೇಂದ್ರ ಸರ್ಕಾರ ರೈತರಿಗಾಗಿ ಕೆಲ ಪ್ರಮುಖ ಯೋಜನೆಗಳನ್ನು ಜಾರಿಗೆ ತಂದಿದೆ. ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಬಹಳ ಜನಪ್ರಿಯವಾಗಿದೆ. ಆದರೆ, ಪಿಎಂ ಕಿಸಾನ್ ಮಾನ್​ಧನ್ ಯೋಜನೆ ಬಹಳ ರೈತರಿಗೆ ಅರಿವಿಗೆ ಬಂದಿಲ್ಲ. ರೈತರಿಗೆ ವೃದ್ಧಾಪ್ಯದಲ್ಲಿ ಧನ ಸಹಾಯ ಒದಗಿಸುವ ಸ್ಕೀಮ್ ಆಗಿದೆ. 3,000 ರೂ ಮಾಸಿಕ ಪಿಂಚಣಿ ಕೊಡುತ್ತದೆ. ವರ್ಷಕ್ಕೆ 36,000 ರೂ ಪೆನ್ಷನ್ ಪಡೆಯಲು ಅವಕಾಶ ಕೊಡುತ್ತದೆ.

ಏನಿದು ಪಿಎಂ ಕಿಸಾನ್ ಮಾನ್​ಧನ್ ಯೋಜನೆ?

200 ರೂವರೆಗೆ ಕಟ್ಟಬೇಕು: ಇದು 18ರಿಂದ 40 ವರ್ಷ ವಯೋಮಾನದೊಳಗೆ ಇರುವ ರೈತರಿಗೆ ಇರುವ ಯೋಜನೆ. ರೈತರು 60 ವರ್ಷ ವಯಸ್ಸಿನವರೆಗೂ ಪ್ರತೀ ತಿಂಗಳು 55 ರೂನಿಂದ 200 ರೂವರೆಗೆ ಹಣ ಕಟ್ಟಬೇಕು. 18 ವರ್ಷ ವಯಸ್ಸಿನಲ್ಲಿ ಸ್ಕೀಮ್ ಆರಂಭಿಸಿದರೆ 32 ವರ್ಷ ಕಾಲ ತಿಂಗಳಿಗೆ 55 ರೂ ಕಟ್ಟಬೇಕು. 40ರ ವಯಸ್ಸಲ್ಲಿ ಸ್ಕೀಮ್ ಆರಂಭಿಸಿದರೆ 20 ವರ್ಷ ಕಾಲ ತಿಂಗಳಿಗೆ 200 ರೂ ಕಟ್ಟಬೇಕು. ಮಧ್ಯದಲ್ಲಿ ಯಾವ ಕಾಲಘಟ್ಟದಲ್ಲಿ ಸ್ಕೀಮ್ ಆರಂಭಿಸಲಾಗುತ್ತದೋ ಅದಕ್ಕೆ ಅನುಗುಣವಾಗಿ ಪ್ರೀಮಿಯಮ್ ಮೊತ್ತ ನಿಗದಿಯಾಗಿರುತ್ತದೆ.

ಸರ್ಕಾರದಿಂದ ಸಮಾನ ಕೊಡುಗೆ

ರೈತರು ಈ ಸ್ಕೀಮ್​ನಲ್ಲಿ ಎಷ್ಟು ಕೊಡುಗೆ ನೀಡುತ್ತಾರೋ, ಸರ್ಕಾರವೂ ಕೂಡ ಅಷ್ಟೇ ಕೊಡುಗೆ ನೀಡುತ್ತದೆ. ಈ ಮೂಲಕ ಪಿಎಂಕೆಎಂವೈ ಅಕೌಂಟ್​ನಲ್ಲಿ ನಿಧಿ ಬೆಳೆಯುತ್ತಾ ಹೋಗುತ್ತದೆ. ಇದರಿಂದ ರೈತರಿಗೆ ಉತ್ತಮ ಪಿಂಚಣಿ ಮೊತ್ತ ಶೇಖರಣೆ ಸಾಧ್ಯವಾಗುತ್ತದೆ.

ಇದನ್ನೂ ಓದಿ: ಪಿಎಂ ಆವಾಸ್ ಯೋಜನೆ; ಸ್ವಂತ ಸೂರು ಇಲ್ಲದವರಿಗೆ ಒಂದು ಆಶಾಕಿರಣ; ಸರ್ಕಾರದ ನೆರವು ಬಳಸಿ

ರೈತರಿಗೆ 3,000 ರೂ ಪಿಂಚಣಿ

ಫಲಾನುಭವಿ ರೈತರ ವಯಸ್ಸು 60 ವರ್ಷ ಆದ ಬಳಿಕ ಪಿಂಚಣಿ ಸಿಗಲು ಆರಂಭವಾಗುತ್ತದೆ. ತಿಂಗಳಿಗೆ 3,000 ರೂ ಪಿಂಚಣಿ ಸಿಗುತ್ತಾ ಹೋಗುತ್ತದೆ. ಇದು ಸಾಯುವವರೆಗೂ ಸಿಗುವ ಪೆನ್ಷನ್. ತಿಂಗಳಿಗೆ 3,000 ರೂ ಎಂದರೆ ವರ್ಷಕ್ಕೆ 36,000 ರೂ ಆಗುತ್ತದೆ.

ರೈತರು ಈ ಸ್ಕೀಮ್​ನಲ್ಲಿ ಮಾಸಿಕವಾಗಿ ಕಟ್ಟುವ ಹಣವನ್ನು ಗಣಿಸಿದರೆ ಒಟ್ಟು ಮೊತ್ತ 21,120 ರೂನಿಂದ 48,000 ರೂವರೆಗೆ ಆಗುತ್ತದೆ. ಆದರೆ, ಪಿಂಚಣಿ ವರ್ಷಕ್ಕೆ 36,000 ರೂ ಬರುತ್ತದೆ ಎನ್ನುವುದು ವಿಶೇಷ.

ಪಿಎಂ ಕಿಸಾನ್ ಮಾನಧನ್ ಯೋಜನೆಯನ್ನು ಭಾರತೀಯ ಜೀವ ವಿಮಾ ನಿಗಮ ನಿರ್ವಹಿಸುತ್ತದೆ. ಪಿಂಚಣಿ ತೆಗೆದುಕೊಳ್ಳುತ್ತಿರುವ ರೈತ ಅಕಸ್ಮಾತ್ ಸಾವನ್ನಪ್ಪಿದರೆ ಆ ಪೆನ್ಷನ್ ಅವರ ಸಂಗಾತಿಗೆ (ಗಂಡ/ಹೆಂಡತಿ) ವರ್ಗವಾಗುತ್ತದೆ. ಆದರೆ, ಆ ಸಂದರ್ಭದಲ್ಲಿ 3,000 ರೂ ಬದಲು 1,500 ರೂ ಪಿಂಚಣಿ ಸಿಗುತ್ತದೆ.

ಇದನ್ನೂ ಓದಿ:ರಾಜ್ಯದ ರೈತರಿಗೆ ಸಿಹಿಸುದ್ದಿ​​ ನೀಡಿ ಮೋದಿ ಸರ್ಕಾರ: ಬೆಂಬಲ ಬೆಲೆ ಯೋಜನೆಯಡಿ ಭರ್ಜರಿ ಬೆಳೆ ಖರೀದಿ, ಜೋಶಿ ಧನ್ಯವಾದ

ಪಿಎಂ ಕಿಸಾನ್ ಮಾನ್​ಧನ್ ಯೋಜನೆಗೆ ಯಾರು ಅರ್ಹರು

ಐದು ಎಕರೆವರೆಗೆ ಕೃಷಿ ಭೂಮಿ ಹೊಂದಿರುವ ರೈತರು ಪಿಎಂ ಕಿಸಾನ್ ಮಾನ್​ಧನ್ ಯೋಜನೆಯನ್ನು ಪಡೆಯಲು ಅರ್ಹರಾಗಿರುತ್ತಾರೆ. ಜಮೀನು 2019ರ ಆಗಸ್ಟ್ 1ರಂದು ತಮ್ಮ ಹೆಸರಿನಲ್ಲಿ ಕೃಷಿ ಜಮೀನು ಹೊಂದಿರಬೇಕು. ಅವರ ವಯಸ್ಸು 18ರಿಂದ 40 ವರ್ಷದೊಳಗೆ ಇರಬೇಕು ಎನ್ನುತ್ತದೆ ನಿಯಮ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us