AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PM Kisan: ಪಿಎಂ ಕಿಸಾನ್ ಯೋಜನೆ ಮೊತ್ತ ಖಾತೆಗೆ ಜಮೆ ಆಯಿತಾ?

PM Kisan Scheme: ಪಿಎಂ ಕಿಸಾನ್ ನಿಧಿಯಿಂದ ರೈತರಿಗೆ 2000 ರೂಪಾಯಿಯ ಕಂತು ಬಿಡುಗಡೆ ಆಗುತ್ತಿದೆ. ಈಗಾಗಲೇ ಹಲವು ರಾಜ್ಯಗಳ ರೈತರ ಖಾತೆಗೆ ಹಣ ಜಮೆ ಆಗಿದೆ. ರೈತರಾಗಿದ್ದಲ್ಲಿ ಖಾತೆಗೆ ಹಣ ಬಂದಿದೆಯೇ ಎಂದು ಪರೀಕ್ಷಿಸಿಕೊಳ್ಳಬಹುದು.

PM Kisan: ಪಿಎಂ ಕಿಸಾನ್ ಯೋಜನೆ ಮೊತ್ತ ಖಾತೆಗೆ ಜಮೆ ಆಯಿತಾ?
ಪ್ರಾತಿನಿಧಿಕ ಚಿತ್ರ
Srinivas Mata
|

Updated on: May 11, 2021 | 1:17 PM

Share

ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಸರ್ಕಾರದಿಂದ ರೈತರ ಖಾತೆಗಳಿಗೆ 2000 ರೂಪಾಯಿ ವರ್ಗಾವಣೆ ಮಾಡುಲಾಗುತ್ತಿದೆ. ಒಂದು ವೇಳೆ ನೀವು ಕೂಡ ಈ ಯೋಜನೆ ಅಡಿಯಲ್ಲಿ ನೋಂದಣಿ ಮಾಡಿದ್ದಲ್ಲಿ ಹಣ ಬಂದಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಪಶ್ಚಿಮ ಬಂಗಾಲದಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಮೊದಲ ಕಂತು ಸಿಗುವುದಕ್ಕೆ ಆರಂಭವಾಗಲಿದೆ. ಮೇ 14ನೇ ತಾರೀಕಿನಿಂದ ಖಾತೆಗಳಿಗೆ 2000 ಜಮೆ ಆಗುವುದಕ್ಕೆ ಶುರುವಾಗಲಿದೆ. ಹಲವು ರಾಜ್ಯಗಳಲ್ಲಿ ಈ ಮೊತ್ತ ಮೇ 10ನೇ ತಾರೀಕಿನಂದೇ ಸಿಗಬೇಕಿತ್ತು. ಒಂದು ವೇಳೆ ನೀವು ರೈತರಾಗಿದ್ದಲ್ಲಿ, ಈ ಯೋಜನೆಯ ಫಲಾನುಭವಿ ಆಗಬೇಕಿದ್ದಲ್ಲಿ ಮೊದಲಿಗೆ ನೋಂದಣಿ ಆಗಬೇಕು. ನೋಂದಣಿಯ ನಂತರ ನಿಮ್ಮ ಗ್ರಾಮದ ಯಾರ್ಯಾರಿಗೆ 2000 ರೂಪಾಯಿ ಸಿಕ್ಕಿದೆ ಎಂದು ತಿಳಿದುಕೊಳ್ಳುವುದು ಸಲೀಸು.

ಮನೆಯಲ್ಲಿ ಕೂತುಕೊಂಡೇ ಇಡೀ ಗ್ರಾಮದ ಫಲಾನುಭವಿಗಳ ಹೆಸರನ್ನು ತಿಳಿಯಬಹುದು. ಎಲ್ಲಕ್ಕೂ ಮೊದಲು ಪಿಎಂ ಕಿಸಾನ್ ಸಮ್ಮಾನ್ ನಿಧಿಯ ವೆಬ್​ಸೈಟ್ https:pmkisan.gov.in/ ಭೇಟಿ ನೀಡಬೇಕು. ಆ ನಂತರ ಹೋಮ್​ ಪೇಜ್​ಗೆ ಹೋಗಿ, ಅಲ್ಲಿ Farmer Corner ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

ವೆಬ್​ಸೈಟ್​ಗೆ ತೆರಳಿಗೆ ಮೇಲೆ ಬಲಭಾಗಕ್ಕೆ Farmer Corner ಕ್ಲಿಕ್ ಮಾಡಿ. ಆ ನಂತರ ಅಲ್ಲಿ Beneficiary Status (ಬೆನಿಫಿಷಿಯರೀಸ್ ಸ್ಟೇಟಸ್) ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಅದಾದ ಮೇಲೆ ಹೊಸ ಪುಟ ತೆರೆದುಕೊಳ್ಳುತ್ತದೆ. ಈಗ ಆಧಾರ್​ ಸಂಖ್ಯೆ, ಮೊಬೈಲ್ ಸಂಖ್ಯೆ ನಮೂದಿಸಿ. ಇದಾದ ಮೇಲೆ ಸ್ಟೇಟಸ್ ಬಗ್ಗೆ ಸಂಪೂರ್ಣ ಮಾಹಿತಿ ಸಿಗುತ್ತದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿಗೆ ನಿಮ್ಮ ಮನೆಯಿಂದಲೇ ನೋಂದಣಿ ಮಾಡಬಹುದು. ಇದಕ್ಕಾಗಿ ನಿಮ್ಮ ಜಮೀನಿನ ಖಾತೆಯ ಮಾಹಿತಿ, ಆಧಾರ್​ ಕಾರ್ಡ್, ಮೊಬೈಲ್ ಸಂಖ್ಯೆ, ಬ್ಯಾಂಕ್​ ಖಾತೆ ಮಾಹಿತಿ ಕಡ್ಡಾಯವಾಗಿ ಇರಬೇಕು. pmkisan.nic.inನಲ್ಲಿ ನೋಂದಣಿ ಮಾಡಿಕೊಳ್ಳಿ.

ಈ ಯೋಜನೆಯ ಲಾಭ ಪಡೆಯುವುದಕ್ಕೆ ರೈತರ ಹತ್ತಿರ ಜಮೀನು ಇರುವುದು ಅಗತ್ಯ. ಇನ್ನು ರೈತರ ತಂದೆ ಅಥವಾ ತಾತನ ಹೆಸರಲ್ಲಿ ಇದ್ದರೂ ಯೋಜನೆಯ ಲಾಭ ಸಿಗಲ್ಲ. ಆದ್ದರಿಂದ ಯೋಜನೆಯ ಲಾಭ ಪಡೆಯಬೇಕು ಅಂದರೆ ರೈತರ ಹೆಸರಲ್ಲೇ ಜಮೀನಿರಬೇಕು. ಯಾರು ಆದಾಯ ತೆರಿಗೆಯನ್ನು ಕಟ್ಟುತ್ತಾರೋ ಅಂಥವರನ್ನು ಈ ಯೋಜನೆಯಿಂದ ಹೊರಗಿಡಲಾಗಿದೆ. ವಕೀಲರು, ವೈದ್ಯರು, ಚಾರ್ಟರ್ಡ್​ ಅಕೌಂಟೆಂಟ್​ಗಳು ಸಹ ಈ ಯೋಜನೆಯಿಂದ ಹೊರಗೆ ಇದ್ದಾರೆ.

ನೋಂದಣಿ ಮಾಡುವುದು ಹೇಗೆ? 1) ಮೊದಲಿಗೆ PM Kisan ವೆಬ್​ಸೈಟ್​ಗೆ ತೆರಳಬೇಕು 2) Farmers Corner ಪ್ರವೇಶಿಸಿ 3) ಇಲ್ಲಿ New Farmer Registration ಮೇಲೆ ಕ್ಲಿಕ್ ಮಾಡಿ 4) ಆಧಾರ್​ ಸಂಖ್ಯೆ ನಮೂದಿಸಿ 5) ಕ್ಯಾಪ್ಚ್ ಕೋಡ್ ಹಾಕಿ, ಯಾವ ರಾಜ್ಯ ಎಂಬುದನ್ನು ಆಯ್ಕೆ ಮಾಡಬೇಕು ಮತ್ತು ಪ್ರಕ್ರಿಯೆ ಮುಂದುವರಿಸಬೇಕು. 6) ಈ ಅರ್ಜಿಯಲ್ಲಿ ಪೂರ್ತಿ ವೈಯಕ್ತಿಕ ಮಾಹಿತಿಯನ್ನು ಹಾಕಬೇಕು 7) ಜತೆಗೆ ಬ್ಯಾಂಕ್​ ಖಾತೆಯ ಮಾಹಿತಿ ಮತ್ತು ಜಮೀನಿಗೆ ಸಂಬಂಧಿಸಿದ ವಿವರಗಳನ್ನು ಹಾಕಬೇಕು 8) ಆ ನಂತರ ಅರ್ಜಿಯನ್ನು ಸಲ್ಲಿಸಬಹುದು

ರೈತರು ಪಿಎಂ ಕಿಸಾನ್ ಹೆಲ್ಪ್​ಲೈನ್​ನ ಸಹಾಯ ಕೂಡ ಪಡೆಯಬಹುದು. ಪಿಎಂ ಕಿಸಾನ್ ಹೆಲ್ಪ್​ಲೈನ್ ನಂಬರ್ 155261 ಇದೆ. ಇನ್ನು ಟೋಲ್ ಫ್ರೀ ಸಂಖ್ಯೆ 18001155266 ಮತ್ತು ಪಿಎಂ ಕಿಸಾನ್ ಲ್ಯಾಂಡ್​ ಲೈನ್ ನಂಬರ್ 011-23381092, 23382401 ಕೂಡ ಇದೆ. ಮತ್ತೊಂದು ಹೆಲ್ಪ್​ಲೈನ್ 0120-6025109, ಇಮೇಲ್ pmkisan-ict@gov.in ಕೂಡ ಇದೆ.

ಇದನ್ನೂ ಓದಿ: PM Kisan Samman Nidhi: ಪಿಎಂ ಕಿಸಾನ್ ನಿಧಿ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ?

(PM Kisan scheme money transfering to farmers bank account. Here is the details of registration)

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ