AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

CASHe ಮೂಲಕ 10,000 ರೂ.ನಿಂದ 4 ಲಕ್ಷದ ತನಕ ಪರ್ಸನಲ್ ಲೋನ್, ಜತೆಗೆ Buy Now Pay Later ಅವಕಾಶ

CASHe ಮೂಲಕ ರೂ. 10,000ದಿಂದ 4 ಲಕ್ಷ ರೂಪಾಯಿ ತನಕ ಪರ್ಸನಲ್ ಲೋನ್ ಪಡೆಯುವುದು ಹೇಗೆ ಎಂಬುದನ್ನು ತಿಳಿಯಿರಿ. ಜತೆಗೆ Buy Now Pay Later ಆಯ್ಕೆ ಕೂಡ ಇದೆ.

CASHe ಮೂಲಕ 10,000 ರೂ.ನಿಂದ 4 ಲಕ್ಷದ ತನಕ ಪರ್ಸನಲ್ ಲೋನ್, ಜತೆಗೆ  Buy Now Pay Later ಅವಕಾಶ
ಸಾಂದರ್ಭಿಕ ಚಿತ್ರ
Srinivas Mata
|

Updated on: May 11, 2021 | 6:59 PM

Share

ಡಿಜಿಟಲ್ ವ್ಯವಸ್ಥೆ ಮೂಲಕ ಸಾಲ ನೀಡುವ ಪ್ರಮುಖ ಸಂಸ್ಥೆಯಾದ CASHe ಸಂಸ್ಥೆಯು ತತ್​ಕ್ಷಣವೇ ಪರ್ಸನಲ್ ಸಾಲ ನೀಡುವ ವ್ಯವಸ್ಥೆಯನ್ನು ತನ್ನ ಗ್ರಾಹಕರಿಗೆ ಘೋಷಣೆ ಮಾಡಿದೆ. ಕನಿಷ್ಠ 10,000 ರೂಪಾಯಿಯಿಂದ ಶುರುವಾಗಿ 4 ಲಕ್ಷ ರೂಪಾಯಿ ತನಕ ಸಾಲ ನೀಡಲಾಗುತ್ತದೆ. ವೇತನದಾರರಿಗೆ ಸಾಲ ಹಿಂತಿರುಗಿಸುವುದಕ್ಕೆ CASHe ಸಂಸ್ಥೆಯು ಆರಾಮವಾದ ಕಾಲಾವಕಾಶವನ್ನೂ ನೀಡುತ್ತಿದೆ. ಬಳಕೆದಾರರಿಗೆ ಮಂಜೂರಾಗುವ ಸಾಲ ಮೊತ್ತದ ಪೈಕಿ ಎಷ್ಟು ಮೊತ್ತ ಬೇಕೋ ಅಷ್ಟನ್ನು ಯಾವುದೇ ಸಮಯದಲ್ಲಿ ಪಡೆಯಬಹುದು. ಮೊತ್ತವು ತಕ್ಷಣವೇ ಸಾಲಗಾರರ ಖಾತೆಗೆ ಜಮೆ ಮಾಡಲಾಗುತ್ತದೆ. ಸಾಲ ಪಡೆದ ಮೊತ್ತಕ್ಕೆ ಬಡ್ಡಿ ಇರುತ್ತದೆ. ಅಂದಹಾಗೆ, Buy Now Pay Later (BNPL- ಈಗ ಖರೀದಿಸಿ ನಂತರ ಪಾವತಿಸಿ) ಆಯ್ಕೆ ಸಹ ಇದೆ.

ಈ ಫೀಚರ್​ಗಾಗಿ CASHe ಸಂಸ್ಥೆಯು ಫಿಪ್​ಕಾರ್ಟ್​, ಅಮೆಜಾನ್, ನೈಕಾ, Myntraa, ಗ್ರೋಫರ್ಸ್, ಬಿಗ್ ಬ್ಯಾಸ್ಕೆಟ್ ಮತ್ತು ಉಬರ್​ನಂಥದ್ದರ ಜತೆ ಸಹಭಾಗಿ ಆಗಿದೆ. ಬಿಎನ್​ಪಿಎಲ್​ ಸಾಲ ವ್ಯವಸ್ಥೆ ಒದಗಿಸಲು ಇನ್ನಷ್ಟು ಸಂಸ್ಥೆಗಳ ಜತೆಗೆ ಸದ್ಯದಲ್ಲೇ CASHe ಸಂಸ್ಥೆಯು ಶೀಘ್ರದಲ್ಲೇ ಸಹಭಾಗಿತ್ವ ವಹಿಸಲಿದೆ. “CASHe ಸಂಸ್ಥೆಯ ಸಾಲ ನೀಡುವ ಹೊಸದಾದ ಯೋಜನೆಯು ಗ್ರಾಹಕರ ಹೆಚ್ಚುತ್ತಿರುವ ಅಗತ್ಯಗಳಿಗೆ ಸ್ಪಂದಿಸುವುದಾಗಿದೆ ಹಾಗೂ ಅದರ ಜತೆಗೆ ವಿವಿಧ ಆನ್​ಲೈನ್ ಪ್ಲಾಟ್​ಫಾರ್ಮ್ ಮೂಲಕ ಬಿಎನ್​ಪಿಎಲ್​ ಸಾಲ ವ್ಯವಸ್ಥೆ ಒದಗಿಸುವುದಾಗಿದೆ,” ಎಂದು ಕಂಪೆನಿ ಹೇಳಿದೆ.

ನಮ್ಮ ಆರಂಭದ ದಿನಗಳಿಂದ CASHe ಸಂಸ್ಥೆಯು ಗ್ರಾಹಕರ ನಿರೀಕ್ಷೆ, ಬೇಡಿಕೆ ಮತ್ತು ಬದಲಾಗುವ ಅಗತ್ಯಗಳನ್ನು ತಿಳಿದುಕೊಳ್ಳುವಲ್ಲಿ ಮತ್ತು ಹುಡುಕಾಟ ನಡೆಸಿ, ಪೂರ್ತಿಗೊಳಿಸುವಲ್ಲಿ ಮುಂಚೂಣಿಯಲ್ಲಿದೆ. ಕ್ರೆಡಿಟ್​ ಲೈನ್ ವ್ಯವಸ್ಥೆ ಎಂಬುದು ನಾವು ಪರಿಚಯಿಸಿರುವ ಹಲವು ಯಶಸ್ವಿ ಮೌಲ್ಯವರ್ಧಿತ ಪೋರ್ಟ್​ಫೋಲಿಯೋಗಳಲ್ಲಿ ಒಂದು ಎಂದು ಕಂಪೆನಿಯ ಸಿಇಒ ಯೋಗಿ ಸಾದನಾ ಹೇಳಿದ್ದಾರೆ. CASHe ಸಂಸ್ಥೆಯು ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಆ್ಯಪ್ ಓನ್ಲಿ ಲೆಂಡಿಂಗ್ (ಮೊಬೈಲ್ ಅಪ್ಲಿಕೇಷನ್​ ಮೂಲಕ ಸಾಲ ನೀಡುವಂಥ) ಕಂಪೆನಿ. ಯುವ ವೃತ್ತಿಪರರಿಗೆ ಅಲ್ಪಾವಧಿಗೆ ಪರ್ಸನಲ್ ಲೋನ್ ನೀಡುತ್ತದೆ. ಕಳೆದ ಕೆಲವು ವರ್ಷಗಳಲ್ಲಿ CASHe ಸಂಸ್ಥೆಯು ರೀಟೇಲ್ ಕ್ರೆಡಿಟ್ ಪೋರ್ಟ್​ಫೋಲಿಯೋವನ್ನು ವಿಸ್ತರಿಸಿಕೊಂಡಿದೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: Paytm Instant Personal Loan| ಪೇಟಿಎಂ ಮೂಲಕ ರೂ. 2 ಲಕ್ಷದ ತನಕ ತಕ್ಷಣದ ಪರ್ಸನಲ್ ಲೋನ್

(CASHe app only lending platform provides instant personal loan from minimum Rs 10,000 to Rs 4 Lakhs. Also provide Buy Now Pay Later loan option)

‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..