Post Office Savings Scheme: ಪೋಸ್ಟ್ ಆಫೀಸ್ನ ಈ ಯೋಜನೆಯಲ್ಲಿ ಶೇ 7.1ರ ಬಡ್ಡಿ; ಅಪ್ಲೈ ಮಾಡುವುದು ಹೇಗೆ?
ಪೋಸ್ಟ್ ಆಫೀಸ್ನ ಈ ಉಳಿತಾಯ ಯೋಜನೆಗೆ ವಾರ್ಷಿಕವಾಗಿ ಶೇ 7.1ರ ಬಡ್ಡಿ ದರ ದೊರೆಯುತ್ತದೆ. ಆ ಖಾತೆಯನ್ನು ತೆರೆಯುವುದು ಹೇಗೆ ಎಂಬುದರ ವಿವರ ಇಲ್ಲಿದೆ.

ಪೋಸ್ಟ್ ಆಫೀಸ್ ಹೂಡಿಕೆದಾರರಿಗೆ ಪ್ರಭಾವಶಾಲಿಯಾದ ಆದಾಯಕ್ಕಾಗಿ ವಿವಿಧ ಸುರಕ್ಷಿತ ಯೋಜನೆಗಳನ್ನು ನೀಡುತ್ತದೆ. ನಿಮ್ಮ ಹಣವನ್ನು ಸುರಕ್ಷಿತ ಯೋಜನೆಯಲ್ಲಿ ಹೂಡಿಕೆ ಮಾಡಲು ಯೋಜನೆಯನ್ನು ರೂಪಿಸುತ್ತಿದ್ದರೆ ಪೋಸ್ಟ್ ಆಫೀಸ್ ಸಾರ್ವಜನಿಕ ಭವಿಷ್ಯ ನಿಧಿ ಖಾತೆ (PPF) ಯೋಜನೆಯನ್ನು ಸಹ ಪರಿಗಣಿಸಬಹುದು. ಪೋಸ್ಟ್ ಆಫೀಸ್ ಪಿಪಿಎಫ್ ಯೋಜನೆಯಲ್ಲಿ ಹೂಡಿಕೆದಾರರು ವರ್ಷಕ್ಕೆ ಶೇ 7.1ರಷ್ಟು ಬಡ್ಡಿದರವನ್ನು ಪಡೆಯುತ್ತಾರೆ. ಪೋಸ್ಟ್ ಆಫೀಸ್ ಪಿಪಿಎಫ್ ಯೋಜನೆಯಲ್ಲಿ ಆರ್ಥಿಕ ವರ್ಷದಲ್ಲಿ ಕನಿಷ್ಠ 500ರಿಂದ ಗರಿಷ್ಠ 1 ಲಕ್ಷ 50 ಸಾವಿರ ರೂಪಾಯಿವರೆಗೆ ಹೂಡಿಕೆ ಮಾಡಬಹುದು. ಇಂಡಿಯಾ ಪೋಸ್ಟ್‌ನ ಅಧಿಕೃತ ವೆಬ್‌ಸೈಟ್ indiapost.gov.inನಲ್ಲಿ ಹೂಡಿಕೆದಾರರು ಪೋಸ್ಟ್ ಆಫೀಸ್ ಪಿಪಿಎಫ್ ಯೋಜನೆ ಕುರಿತು ಇನ್ನಷ್ಟು ತಿಳಿದುಕೊಳ್ಳಬಹುದು.
ಒಬ್ಬರು ಒಂದು ಬಾರಿ ಅಥವಾ ಒಂದು ಅವಧಿಯ ಹೂಡಿಕೆಯನ್ನು ಮಾಡಬಹುದು. ವಯಸ್ಕ ಭಾರತೀಯ ನಾಗರಿಕರು ತಮ್ಮ ಪಿಪಿಎಫ್ ಖಾತೆಗಳನ್ನು ನೇರವಾಗಿ ತೆರೆಯಬಹುದು. ಅಪ್ರಾಪ್ತ ವಯಸ್ಕರಾಗಿದ್ದಲ್ಲಿ ಪಾಲಕರು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಾಗಿ ಪೋಸ್ಟ್ ಆಫೀಸ್ ಪಿಪಿಎಫ್ ಖಾತೆಯನ್ನು ತೆರೆಯಬಹುದು. ಅಲ್ಲದೆ, ಹೂಡಿಕೆದಾರರು ತಮ್ಮ ಪೋಸ್ಟ್ ಆಫೀಸ್ ಪಿಪಿಎಫ್ ಹೂಡಿಕೆಗಳ ವಿರುದ್ಧ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು. ಅಲ್ಲದೆ, ಆದಾಯ ತೆರಿಗೆ ಪಿಪಿಎಫ್ ಯೋಜನೆಯಲ್ಲಿನ ಬಡ್ಡಿ ಮತ್ತು ಮೆಚ್ಯೂರ್ ಆದ ಆದಾಯವು ತೆರಿಗೆಮುಕ್ತವಾಗಿ ಇರುತ್ತದೆ.
ಹೂಡಿಕೆದಾರರು ತಮ್ಮ ಪಾಸ್‌ಬುಕ್ ಸೇರಿ ಖಾತೆಯನ್ನು ಕ್ಲೋಸ್ ಮಾಡುವ ದಾಖಲೆಗಳನ್ನು ಪೋಸ್ಟ್ ಆಫೀಸ್‌ನಲ್ಲಿ ಸಲ್ಲಿಸುವ ಮೂಲಕ ಮೆಚ್ಯೂರಿಟಿ ಪಾವತಿಯನ್ನು ಮಾಡಬಹುದು. ಮೇಲಾಗಿ ಸಂಬಂಧಪಟ್ಟ ಅಂಚೆ ಕಚೇರಿಯಲ್ಲಿ ದಾಖಲೆಗಳನ್ನು ಸಲ್ಲಿಸುವ ಮೂಲಕ ಹೆಚ್ಚುವರಿ ಬಡ್ಡಿ ಆದಾಯವನ್ನು ಗಳಿಸಲು ಮೆಚ್ಯೂರಿಟಿ ಅವಧಿಯನ್ನು 5 ವರ್ಷಗಳವರೆಗೆ ವಿಸ್ತರಿಸಬಹುದು. ಖಾತೆ ತೆರೆದ ವರ್ಷವನ್ನು ಹೊರತುಪಡಿಸಿ ಐದು ವರ್ಷಗಳ ನಂತರ ಹಣಕಾಸು ವರ್ಷದಲ್ಲಿ ಒಮ್ಮೆ ತಮ್ಮ ಹಣವನ್ನು ಹಿಂಪಡೆಯಲು ಪ್ರಾರಂಭಿಸಬಹುದು ಎಂಬುದನ್ನು ಹೂಡಿಕೆದಾರರು ಗಮನಿಸಬೇಕು. 4ನೇ ಹಿಂದಿನ ವರ್ಷದ ಕೊನೆಯಲ್ಲಿ ಅಥವಾ ಹಿಂದಿನ ವರ್ಷದ ಕೊನೆಯಲ್ಲಿ ಯಾವುದು ಕಡಿಮೆಯೋ ಅದು ಬಾಕಿಯ ಶೇಕಡಾ 50ಕ್ಕೆ ಹಿಂತೆಗೆದುಕೊಳ್ಳುವಿಕೆ ಮೊತ್ತ ಸೀಮಿತವಾಗಿರುತ್ತದೆ.
ಇದನ್ನೂ ಓದಿ: How To Activate PPF: ನಿಷ್ಕ್ರಿಯ ಪಿಪಿಎಫ್ ಖಾತೆಯನ್ನು ಸಕ್ರಿಯಗೊಳಿಸುವುದು ಹೇಗೆ?