ಕಳೆದ ಕೆಲವು ವಾರಗಳಿಂದ ಸ್ಟಾಕ್ ಮಾರ್ಕೆಟ್ (Stock Market) ಏರಿಳಿತ ಕಾಣುತ್ತಿದೆ. ಇಂಥಹ ಸಂದರ್ಭದಲ್ಲಿ ಅನೇಕರು ಮಾರ್ಕೆಟ್ನಲ್ಲಿ ಹಣ ಹೂಡಿಕೆ ಮಾಡಲು ಮುಂದಾಗುವುದಿಲ್ಲ. ಆದರೆ, ನೀವು ಪೋಸ್ಟ್ ಆಫೀಸ್ನ (Post Office) ಕೆಲವು ಯೋಜನೆಗಳನ್ನು ಗಮನಿಸಿದರೆ ಸ್ಟಾಕ್ ಮಾರ್ಕೆಟ್ ಅನ್ನು ಮರೆತೇ ಬಿಡುತ್ತೀರಿ. ಅಂಥಹ ಅತ್ಯುತ್ತಮ ಸ್ಕೀಮ್ ಪೋಸ್ಟ್ ಆಫೀಸ್ನಲ್ಲಿದೆ. ಸಣ್ಣ ಮೊತ್ತದಿಂದ ಪ್ರಾರಂಭಿಸಿ ಅಧಿಕ ಹಣ ಮರಳಿ ಪಡೆಯುವಂತಹ ಅನೇಕ ಪ್ಲಾನ್ಗಳು ಇದರಲ್ಲಿದೆ. ಇಲ್ಲಿ ಪೋಸ್ಟ್ ಆಫೀಸ್ನ ಮೂರು ಮುಖ್ಯ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿ ಯೋಜನೆ (RD), ಪೋಸ್ಟ್ ಆಫೀಸ್ ಸಮಯದ ಠೇವಣಿ ಖಾತೆ (POTD) ಮತ್ತು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC).
ಮರುಕಳಿಸುವ ಠೇವಣಿ ಮಾರುಕಟ್ಟೆಯ ಮೇಲೆ ಅವಲಂಬಿತವಾಗಿಲ್ಲದಿರುವುದರಿಂದ, ಇದು ಅಪಾಯ–ಮುಕ್ತವಾಗಿದೆ. ಹೀಗಾಗಿ ಯಾರು ಬೇಕಾದರು ಧೈರ್ಯದಿಂದ ಈ ಯೋಜನೆಯನ್ನು ಆರಿಸಿಕೊಳ್ಳಬಹುದು. ಈ ಯೋಜನೆಗೆ ನಿಯಮಿತ ಮಧ್ಯಂತರದಲ್ಲಿ ಖಾತೆಗೆ ನಿಶ್ಚಿತ ಮೊತ್ತವನ್ನು ಠೇವಣಿ ಮಾಡಬೇಕಾಗುತ್ತದೆ, ಇದಕ್ಕಾಗಿ ಬಡ್ಡಿಯನ್ನು ತ್ರೈಮಾಸಿಕವಾಗಿ ಸಂಗ್ರಹಿಸಲಾಗುತ್ತದೆ. ತಮ್ಮ ಹೂಡಿಕೆಯ ಮೇಲಿನ ಭದ್ರತೆ ಇಷ್ಟಪಡುವ ಮತ್ತು ಸ್ಥಿರವಾದ ಹಣವನ್ನು ಬಡ್ಡಿಯಾಗಿ ಗಳಿಸಲು ಬಯಸುವ ಹೂಡಿಕೆದಾರರಿಗೆ, ಪೋಸ್ಟ್ ಆಫೀಸ್ ಆರ್‌ಡಿ ಸೂಕ್ತ ಹೂಡಿಕೆಯಾಗಿದೆ. ಇದಲ್ಲದೆ, ಈ ಯೋಜನೆಯು ಜನರಿಗೆ ನಿಗದಿತ ಮೊತ್ತ ಗಳಿಸಲು ಮತ್ತು ಕಾಲಾನಂತರದಲ್ಲಿ ಉತ್ಪಾದಿಸಲು ಮತ್ತು ಸ್ಥಿರ ಆದಾಯ ಗಳಿಸಲು ಸಹ ಪ್ರಯೋಜನಕಾರಿಯಾಗಿದೆ. ಇದರ ಮೇಲೆ ಸದ್ಯ 5.8% ಬಡ್ಡಿದರವನ್ನು ನೀಡಲಾಗುತ್ತದೆ. ಇದು ಜನರ ಉನ್ನತ ಹೂಡಿಕೆಯ ಆಯ್ಕೆಗಳಲ್ಲಿ ಒಂದಾಗಿದೆ.
ಹೆಸರೇ ಸೂಚಿಸುವಂತೆ ಇದು ಸಮಯದ ಠೇವಣಿ ಖಾತೆ. ಈ ಯೋಜನೆ ಅಡಿಯಲ್ಲಿ ನೀವು ಒಂದು, ಎರಡು, ಮೂರು ಅಥವಾ ಐದು ವರ್ಷಕ್ಕೆಂದು ಹಣವನ್ನು ಠೇವಣಿ ಮಾಡಬಹುದು. ಒಂದು, ಎರಡು ಮತ್ತು ಮೂರು ವರ್ಷಕ್ಕೆ ಎಂದಾದರೆ ಇದರಲ್ಲಿ 5.5% ಬಡ್ಡಿ ದರವನ್ನು ನೀಡಲಾಗುತ್ತಿದೆ. ನೀವು ಉತ್ತಮ ರಿಟರ್ನ್ ಅನ್ನು ಎದುರು ನೋಡುತ್ತಿದ್ದರೆ ಹಣವನ್ನು ಐದು ವರ್ಷಕ್ಕೆ ಡೆಪಾಸಿಟ್ ಮಾಡಬೇಕು. ಹೀಗಾದಲ್ಲಿ 6.7% ಬಡ್ಡಿ ದರ ಸಿಗುತ್ತದೆ.
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆ ಐದು ವರ್ಷದ್ದಾಗಿದೆ. 6.8% ಬಡ್ಡಿದರಲ್ಲಿ ನಿಮಗೆ ರಿಟರ್ನ್ ಸಿಗುತ್ತದೆ. ಇದರಲ್ಲಿ ಎಷ್ಟು ಬೇಕಾದರೂ ಹಣವನ್ನು ನೀವು ಹೂಡಿಕೆ ಮಾಡಬಹುದು. ಆದರೆ, ಈ ಯೋಜನೆ ಅಡಿಯಲ್ಲಿ ನಿಮಗೆ ಹಣವನ್ನು ಮಧ್ಯದಲ್ಲಿ ಅಗತ್ಯವಿದ್ದರೆ ತೆಗೆಯಲು ಸಾಧ್ಯವಿಲ್ಲ. ಪೂರ್ಣ ಐದು ವರ್ಷ ಆದ ನಂತರವ ಸಿಗುತ್ತದೆ.
Published On - 3:54 pm, Sat, 23 July 22