ಜವಳಿ, ಪಾದರಕ್ಷೆಗಳು, ಉಡುಪುಗಳ ಬೆಲೆ ಮುಂದಿನ ವರ್ಷದ ಆರಂಭದಿಂದ ಏರಿಕೆ ಆಗುವ ಎಲ್ಲ ಸಾಧ್ಯತೆ ಇದೆ. ಕೇಂದ್ರೀಯ ಪರೋಕ್ಷ ತೆರಿಗೆಗಳ ಮಂಡಳಿಯು (CBDT) ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರವನ್ನು ಶೇ 5ರಿಂದ ಶೇ 12ಕ್ಕೆ ಹೆಚ್ಚಿಸಿ, ಅಧಿಸೂಚನೆ ಹೊರಡಿಸಿರುವುದರಿಂದ ಈ ಬೆಳವಣಿಗೆ ಆಗಲಿದೆ. ಇವುಗಳ ಮೇಲೆ ಹೆಚ್ಚಿದ ಜಿಎಸ್‌ಟಿ ದರವು ಜನವರಿ 1, 2022 ರಿಂದ ಅನ್ವಯವಾಗುತ್ತದೆ. ಆದರೂ ಕೆಲವು ಸಿಂಥೆಟಿಕ್ ಫೈಬರ್‌ಗಳು ಮತ್ತು ನೂಲುಗಳ ಮೇಲಿನ ಜಿಎಸ್‌ಟಿ ದರಗಳನ್ನು ಶೇ 18ರಿಂದ ಶೇ 12ಕ್ಕೆ ಇಳಿಸಲಾಗಿದ್ದು, ಇಡೀ ಜವಳಿ ವಲಯದಾದ್ಯಂತ ದರಗಳು ಏಕರೂಪವಾಗಿವೆ. ಸುಂಕ ರಚನೆಯು ಹೇಗಾಗಲಿದೆ ಅಂದರೆ, ಸಿದ್ಧಪಡಿಸಿದ ಉತ್ಪನ್ನದ ಮೇಲಿನ ತೆರಿಗೆಗಿಂತ ಇನ್ಪುಟ್ ತೆರಿಗೆ ದರವು ಹೆಚ್ಚಾಗಲಿದೆ ಎಂಬುದನ್ನು ಸೂಚಿಸುತ್ತದೆ.
ಜಿಎಸ್‌ಟಿ ಸಮಿತಿಯು ತನ್ನ ಸೆಪ್ಟೆಂಬರ್ ಸಭೆಯಲ್ಲಿ ಜವಳಿ ಮತ್ತು ಪಾದರಕ್ಷೆಗಳಲ್ಲಿನ ಇನ್ವರ್ಟೆಡ್ ಸುಂಕ ರಚನೆಯನ್ನು ಸರಿಪಡಿಸಲು ತೀರ್ಮಾನ ಮಾಡಿತು. ಇದು ಜನವರಿ 1, 2022ರಂದು ಜಾರಿಗೆ ಬರಲಿದೆ ಎಂದು ಹೇಳಿದೆ. ಆದರೆ ಆ ಸಮಯದಲ್ಲಿ ಪರಿಣಾಮಕಾರಿ ದರಗಳನ್ನು ನಿರ್ಧರಿಸಿರಲಿಲ್ಲ. ಜನವರಿ 1ರಿಂದ ಯಾವುದೇ ಮೌಲ್ಯದ ಉಡುಪುಗಳ ಮೇಲಿನ ಜಿಎಸ್‌ಟಿ ದರವು ಶೇ 12 ಆಗಿರುತ್ತದೆ. ಮೊದಲು ಇದು 1000 ರೂಪಾಯಿಯೊಳಗೆ ಇರುವ ಬಟ್ಟೆ ಮೇಲೆ ಶೇ 5ರಷ್ಟು ತೆರಿಗೆ ಇತ್ತು.
ತಜ್ಞರು ಈ ಕ್ರಮವನ್ನು ಶ್ಲಾಘಿಸಿದರೂ ಇನ್ವರ್ಟೆಡ್ (ತಲೆಕೆಳಗಾದ) ಸುಂಕ ರಚನೆಯು ಜನಸಂಖ್ಯೆಯ ಒಂದು ವರ್ಗದ ಮೇಲೆ ಮಾತ್ರ ಪರಿಣಾಮ ಬೀರುತ್ತದೆ ಎಂದು ಬಟ್ಟೆಗಳ ಬಗ್ಗೆ ತೆಗೆದುಕೊಂಡಿರುವ ಕ್ರಮಕ್ಕೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. “ಜಿಎಸ್‌ಟಿ ದರ ಬದಲಾವಣೆಯು ವ್ಯಾಲ್ಯೂ ಉದ್ದಕ್ಕೂ ಶೇ 12ರ ಏಕರೂಪದ ದರದ ಖಾತೆಯಲ್ಲಿ ಇನ್ವರ್ಟೆಡ್ ಸುಂಕ ರಚನೆಯ ಸಮಸ್ಯೆಗಳು ಅಂತ್ಯಗೊಳ್ಳುವುದನ್ನು ಖಚಿತಪಡಿಸುತ್ತದೆ,” ಎಂದು ಡೆಲಾಯ್ಟ್ ಇಂಡಿಯಾದ ಹಿರಿಯ ನಿರ್ದೇಶಕ ಎಂ.ಎಸ್. ಮಣಿ ಹೇಳಿದ್ದಾರೆ.
ಇದನ್ನೂ ಓದಿ: Price Hike: ಬಟ್ಟೆ, ಎಲೆಕ್ಟ್ರಾನಿಕ್ಸ್ನಿಂದ ಮದ್ಯದ ತನಕ ಹೊಸ ವರ್ಷದಿಂದ ಶೇ 8ರಿಂದ 10ರಷ್ಟು ಬೆಲೆ ಏರಿಕೆಗೆ ಸಿದ್ಧರಾಗಿ!
Published On - 11:38 am, Sat, 20 November 21