ಭಾರತದಲ್ಲಿ ಸೈಬರ್ ಸೆಕ್ಯೂರಿಟಿ ಹೆಚ್ಚಿಸಲು ಸಿಎಸ್​ಕೆ ಸ್ಥಾಪನೆ; ಕಂಪ್ಯೂಟರ್, ಮೊಬೈಲ್​ಗಳಲ್ಲಿ ರಕ್ಷಣೆ ಪಡೆಯುವುದು ಹೇಗೆ?

|

Updated on: Oct 18, 2023 | 4:07 PM

Cyber Swachhta Kendra Security Tools: ಸಿಎಸ್​ಕೆ ವೆಬ್​ಸೈಟ್​ನಲ್ಲಿ ಬಾಟ್​ನೆಟ್, ಮಾಲ್ವೇರ್​ಗಳಿಂದ ಆಗುವ ಅಪಾಯಗಳು ಹಾಗು ಅವುಗಳನ್ನು ಎದುರಿಸುವ ಸಾಧನಗಳ ಬಗ್ಗೆ ಉಪಯುಕ್ತ ಮಾಹಿತಿಗಳಿವೆ. ಕಂಪ್ಯೂಟರ್, ಲ್ಯಾಪ್​ಟಾಪ್, ಮೊಬೈಲ್ ಹೀಗೆ ವಿವಿಧ ಡಿಜಿಟಲ್ ಸಾಧನಗಳಲ್ಲಿ ಬಾಟ್​ಗಳನ್ನು ಪತ್ತೆ ಮಾಡಿ ತೆಗೆದುಹಾಕಲು ಟೂಲ್​ಗಳನ್ನು ಒದಗಿಸುತ್ತಿದೆ. ಅದಕ್ಕಾಗಿ ಇಸ್ಕ್ಯಾನ್, ಕೆ7 ಸೆಕ್ಯೂರಿಟಿ, ಕ್ವಿಕ್ ಹೀಲ್ ಎಂಬ ಆ್ಯಂಟಿ ವೈರಸ್ ಟೂಲ್​ಗಳನ್ನು ಡೌನ್​ಲೋಡ್ ಮಾಡಿಕೊಳ್ಳಲು ಲಿಂಕ್ ಕೂಡ ಈ ವೆಬ್​ಸೈಟ್​ನಲ್ಲಿದೆ.

ಭಾರತದಲ್ಲಿ ಸೈಬರ್ ಸೆಕ್ಯೂರಿಟಿ ಹೆಚ್ಚಿಸಲು ಸಿಎಸ್​ಕೆ ಸ್ಥಾಪನೆ; ಕಂಪ್ಯೂಟರ್, ಮೊಬೈಲ್​ಗಳಲ್ಲಿ ರಕ್ಷಣೆ ಪಡೆಯುವುದು ಹೇಗೆ?
ಸೈಬರ್ ಅಪರಾಧ ಪ್ರಕರಣ
Follow us on

ನವದೆಹಲಿ, ಅಕ್ಟೋಬರ್ 18: ಭಾರತದಲ್ಲಿ ಬಹಳಷ್ಟು ಕಂಪ್ಯೂಟರು, ಮೊಬೈಲ್ ಮತ್ತು ಸರ್ವರ್​ಗಳು ಹ್ಯಾಕರ್ಸ್ ದಾಳಿಗೆ ಒಳಗಾಗಿ, ಬಹಳಷ್ಟು ಮಂದಿಗೆ ಗೌಪ್ಯತೆ ಮಾಹಿತಿ ಸೋರಿಕೆ ಮತ್ತು ಹಣದ ಕಳುವಾಗುತ್ತಿದೆ. ಪ್ರತೀ ದಿನ ನೂರಾರು ಸೈಬರ್ ಅಪರಾಧ ಪ್ರಕರಣಗಳು (cyber crime incidents) ದಾಖಲಾಗುತ್ತವೆ. ದುಷ್ಕರ್ಮಿಗಳು ಹರಿದುಬಿಡುತ್ತಿರುವ ಬಾಟ್​ನೆಟ್​ಗಳು, ಮಾಲ್ವೇರ್​ಗಳು ಸೈಬರ್ ಲೋಕದಲ್ಲಿ ಉಪದ್ರವ ನಡೆಸುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಸೈಬರ್ ಸ್ವಚ್ಛತಾ ಕೇಂದ್ರವನ್ನು (Cyber Swachhta Kendra) ಸ್ಥಾಪನೆ ಮಾಡಿದೆ. ಕೇಂದ್ರ ಎಲೆಕ್ಟ್ರಾಕ್ಸ್ ಮತ್ತು ಇನ್ಫಾರ್ಮೇಶನ್ ಟೆಕ್ನಾಲಜಿ ಸಚಿವಾಲಯದ ಅಡಿಯಲ್ಲಿ ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (ಸಿಇಆರ್​ಟಿ-ಇನ್) ಈ ಸೆಂಟರ್ ಅನ್ನು ಸ್ಥಾಪಿಸಿದೆ. ಸಿಎಸ್​ಕೆ ಕೇಂದ್ರವು ವಿವಿಧ ಇಂಟರ್ನೆಟ್ ಸರ್ವಿಸ್ ಪ್ರೊವೈಡರ್​ಗಳು ಮತ್ತು ಆ್ಯಂಟಿ ವೈರಸ್ ಕಂಪನಿಗಳೊಂದಿಗೆ ಸಹಯೋಗದಲ್ಲಿ ಈ ಯೋಜನೆ ಹಮ್ಮಿಕೊಂಡಿದೆ.

ಸಿಎಸ್​ಕೆ ವೆಬ್​ಸೈಟ್​ನಲ್ಲಿ ಬಾಟ್​ನೆಟ್, ಮಾಲ್ವೇರ್​ಗಳಿಂದ ಆಗುವ ಅಪಾಯಗಳು ಹಾಗು ಅವುಗಳನ್ನು ಎದುರಿಸುವ ಸಾಧನಗಳ ಬಗ್ಗೆ ಉಪಯುಕ್ತ ಮಾಹಿತಿಗಳಿವೆ. ಕಂಪ್ಯೂಟರ್, ಲ್ಯಾಪ್​ಟಾಪ್, ಮೊಬೈಲ್ ಹೀಗೆ ವಿವಿಧ ಡಿಜಿಟಲ್ ಸಾಧನಗಳಲ್ಲಿ ಬಾಟ್​ಗಳನ್ನು ಪತ್ತೆ ಮಾಡಿ ತೆಗೆದುಹಾಕಲು ಟೂಲ್​ಗಳನ್ನು ಒದಗಿಸುತ್ತಿದೆ. ಅದಕ್ಕಾಗಿ ಇಸ್ಕ್ಯಾನ್, ಕೆ7 ಸೆಕ್ಯೂರಿಟಿ, ಕ್ವಿಕ್ ಹೀಲ್ ಎಂಬ ಆ್ಯಂಟಿ ವೈರಸ್ ಟೂಲ್​ಗಳನ್ನು ಡೌನ್​ಲೋಡ್ ಮಾಡಿಕೊಳ್ಳಲು ಲಿಂಕ್ ಕೂಡ ಈ ವೆಬ್​ಸೈಟ್​ನಲ್ಲಿದೆ.

ಇದನ್ನೂ ಓದಿ: ಹೊಸ ಸ್ಕ್ಯಾಮ್..! ಒಟಿಪಿ ಬರದೆಯೇ ಆಧಾರ್ ಬಳಸಿ ಹಣ ಎಗರಿಸುತ್ತಾರೆ; ಈಗಲೇ ಬಯೋಮೆಟ್ರಿಕ್ ಲಾಕ್ ಮಾಡಿ; ಇದು ಹೇಗೆ?

ಸೈಬರ್ ಸ್ವಚ್ಛತಾ ಕೇಂದ್ರದ ವೆಬ್​ಸೈಟ್​ನಲ್ಲಿ ಹಾಲಿ ಚಾಲನೆಯಲ್ಲಿರುವ ವಿವಿಧ ಬಾಟ್​​ಗಳು ಮತ್ತು ಮಾಲ್ವೇರ್​​ಗಳ ಪಟ್ಟಿ ಇದೆ. ಆ ಎಲ್ಲವುಗಳ ವಿವರಗಳನ್ನು ಪ್ರತ್ಯೇಕವಾಗಿ ಕೊಡಲಾಗಿದೆ.

ಮಾಲ್ವೇರ್ ದಾಳಿಯಾದರೆ ಏನಾಗುತ್ತದೆ?

ಮಾಲ್ವೇರ್ ಎಂಬುದು ಆಪರೇಟಿಂಗ್ ಸಿಸ್ಟಂನ ಕಾರ್ಯನಿರ್ವಹಣೆಯನ್ನು ಬದಲಿಸಿ ನಿಮ್ಮ ಸಾಧನದಲ್ಲಿರುವ ಸೂಕ್ಷ್ಮ ಮಾಹಿತಿಯನ್ನು ಬಚ್ಚಿಡುವಂತಹ ಕೋಡಿಂಗ್ ಹೊಂದಿರುತ್ತದೆ. ಸೂಕ್ಷ್ಮ ಮಾಹಿತಿ ಪಡೆಯುವುದು ಪ್ರಮುಖ ಉದ್ದೇಶ. ಹಾಗೆಯೇ, ಈ ಮಾಹಿತಿ ಇಟ್ಟುಕೊಂಡು ಜನರನ್ನು ಬ್ಲ್ಯಾಕ್​ಮೇಲ್ ಮಾಡುವುದು ಇನ್ನೊಂದು ಉದ್ದೇಶ. ದುಷ್ಕರ್ಮಿಗಳು ಹಣಕ್ಕಾಗಿ ಈ ಕೆಲಸ ಮಾಡಬಹುದು. ಅಥವಾ ಶತ್ರು ದೇಶಕ್ಕಾಗಿ ಸೈಬರ್ ಭದ್ರತೆಗೆ ಅಪಾಯ ಸೃಷ್ಟಿಸಬಹುದು.

ಇದನ್ನೂ ಓದಿ: IMPS Money Transfer Rules: ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಇನ್ನೂ ಸುಲಭ; ಹೊಸ ಐಎಂಪಿಎಸ್ ವ್ಯವಸ್ಥೆ ಬಗ್ಗೆ ತಿಳಿಯಿರಿ

ನಿಮ್ಮ ಸಿಸ್ಟಂ ಅಥವಾ ಮೊಬೈಲ್​ಗೆ ಮಾಲ್ವೇರ್ ಆಕ್ರಮಣವಾದಲ್ಲಿ ನಿಮಗೆ ಅಲರ್ಟ್ ಬರುತ್ತದೆ. ವಿವಿಧ ಟೂಲ್​ಗಳ ಪೈಕಿ ಒಂದನ್ನು ಡೌನ್​ಲೋಡ್ ಮಾಡಿಕೊಂಡು ಇನ್​ಸ್ಟಾಲ್ ಮಾಡಿ ಆ ಮಾಲ್ವೇರ್ ತೆಗೆಯಬಹುದು. ಸಿಸ್ಟಂನ ಸೆಕ್ಯೂರಿಟಿಗಾಗಿಯೂ ಈ ಆ್ಯಂಟಿ ವೈರಸ್ ಸ್ಕ್ಯಾನ್ ಟೂಲ್​ಗಳನ್ನು ಅಳವಡಿಸಿಕೊಂಡಿರುವುದು ಉತ್ತಮ. ಇವೆಲ್ಲವೂ ಉಚಿತವಾಗಿ ಸಿಗುತ್ತವೆ. ಆ ವೆಬ್​ಸೈಟ್​ನ ಲಿಂಕ್ ಇಲ್ಲಿದೆ: www.csk.gov.in

ಈ ವೆಬ್​ಸೈಟ್​ನಲ್ಲೇ ಬಾಟ್​ನೆಟ್ (botnet) ಮತ್ತು ಮಾಲ್ವೇರ್ ಆಕ್ರಮಣ (malware attack) ಮತ್ತು ಅದರಿಂದ ರಕ್ಷಿಸುವ ಕುರಿತು ಮಾಹಿತಿ ಮತ್ತು ಮಾರ್ಗೋಪಾಯಗಳಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:59 pm, Wed, 18 October 23