AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Provident Fund: ತೆರಿಗೆ ಲೆಕ್ಕಾಚಾರದ ಸಲುವಾಗಿ ಏ.1ರಿಂದ ಪಿಎಫ್ ಖಾತೆ ಎರಡು ಭಾಗವಾಗಿ ವಿಂಗಡಿಸುವ ಸಾಧ್ಯತೆ​

ಪ್ರಾವಿಡೆಂಟ್​ ಫಂಡ್ ಖಾತೆಯನ್ನು ಇದೇ ಏಪ್ರಿಲ್​ 1ರಿಂದ ಎರಡು ಖಾತೆಗಳಾಗಿ ವಿಭಜಿಸಬಹುದಾಗಿದೆ. ಏಕಾಗಿ ಈ ನಿರ್ಧಾರ ಮಾಡಲಾಗಿದೆ ಎಂಬುದನ್ನು ಐದು ಅಂಶಗಳಲ್ಲಿ ವಿವರಿಸಲಾಗಿದೆ.

Provident Fund: ತೆರಿಗೆ ಲೆಕ್ಕಾಚಾರದ ಸಲುವಾಗಿ ಏ.1ರಿಂದ ಪಿಎಫ್ ಖಾತೆ ಎರಡು ಭಾಗವಾಗಿ ವಿಂಗಡಿಸುವ ಸಾಧ್ಯತೆ​
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on: Feb 05, 2022 | 12:40 PM

Share

ಇದೇ ಏಪ್ರಿಲ್ 1ನೇ ತಾರೀಕಿನಿಂದ ಅನ್ವಯ ಆಗುವಂತೆ ಈಗ ಅಸ್ತಿತ್ವದಲ್ಲಿರುವ ಭವಿಷ್ಯ ನಿಧಿ (Provident Fund) ಖಾತೆಗಳನ್ನು ಎರಡು ಭಾಗಗಳಾಗಿ ವಿಂಗಡಿಸುವ ಸಾಧ್ಯತೆ ಇದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸರ್ಕಾರವು ಹೊಸ ಆದಾಯ ತೆರಿಗೆ (Income Tax) ನಿಯಮಗಳನ್ನು ಪ್ರಕಟಿಸಿತ್ತು. ಅದರ ಅಡಿಯಲ್ಲಿ ಪಿಎಫ್ ಖಾತೆಗಳನ್ನು ಎರಡು ಭಾಗಗಳಾಗಿ ವಿಭಜಿಸಲಾಗುತ್ತದೆ. ಈ ಕ್ರಮವು ವಾರ್ಷಿಕವಾಗಿ ರೂ. 2.5 ಲಕ್ಷಕ್ಕಿಂತ ಹೆಚ್ಚಿನ ಉದ್ಯೋಗಿ ಕೊಡುಗೆಗಳ (Employee contribution) ಪಿಎಫ್​ ಆದಾಯದ ಮೇಲೆ ತೆರಿಗೆ ವಿಧಿಸಲು ಕೇಂದ್ರಕ್ಕೆ ಅವಕಾಶ ನೀಡುತ್ತದೆ. ಹೊಸ ನಿಯಮಗಳ ಮೂಲಕ, ಹೆಚ್ಚು ಆದಾಯ ಗಳಿಸುವ ಜನರು ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಲಾಭವನ್ನು ಪಡೆಯುವುದನ್ನು ತಡೆಯುವ ಗುರಿಯನ್ನು ಕೇಂದ್ರ ಸರ್ಕಾರವು ಹೊಂದಿದೆ.

ಟಾಪ್ ಐದು ಅಂಶಗಳು ಇಲ್ಲಿವೆ:

1) ಅಸ್ತಿತ್ವದಲ್ಲಿರುವ ಎಲ್ಲ ಪ್ರಾವಿಡೆಂಟ್ ಖಾತೆಗಳನ್ನು ತೆರಿಗೆ ಮತ್ತು ತೆರಿಗೆಗೆ ಒಳಪಡದ ಕೊಡುಗೆ ಖಾತೆಗಳಾಗಿ ವಿಂಗಡಿಸಲಾಗಿದೆ.

2) ಮಾರ್ಚ್ 31, 2021ರಂದು ಇದ್ದಂತೆ ತೆರಿಗೆಗೆ ಒಳಪಡದ ಖಾತೆಗಳು ತಮ್ಮ ಮುಕ್ತಾಯದ ಖಾತೆಯನ್ನು (Closing Account) ಒಳಗೊಂಡಿರುತ್ತವೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT) ಹೇಳಿದೆ. CBDTಯು ಆದಾಯ ತೆರಿಗೆ ಇಲಾಖೆಗೆ ನೀತಿ ರೂಪಿಸುತ್ತದೆ.

3) ಅಧಿಕೃತ ಮೂಲಗಳ ಪ್ರಕಾರ, ನಿಯಮಗಳು ಮುಂದಿನ ಹಣಕಾಸು ವರ್ಷದಿಂದ ಅಂದರೆ ಏಪ್ರಿಲ್ 1, 2022ರಿಂದ ಜಾರಿಗೆ ಬರಬಹುದು.

4) ವಾರ್ಷಿಕ ರೂ. 2.5 ಲಕ್ಷಕ್ಕಿಂತ ಹೆಚ್ಚಿನ ಉದ್ಯೋಗಿಗಳ ಕೊಡುಗೆಗಳಿಂದ ಪ್ರಾವಿಡೆಂಟ್ ಫಂಡ್​ ಆದಾಯದ ಮೇಲೆ ಹೊಸ ತೆರಿಗೆಯನ್ನು ಜಾರಿಗೆ ತರಲು, ಆದಾಯ ತೆರಿಗೆ ನಿಯಮಗಳ ಅಡಿಯಲ್ಲಿ ಹೊಸ ಸೆಕ್ಷನ್ 9D ಅನ್ನು ಸೇರಿಸಲಾಗಿದೆ.

5) ತೆರಿಗೆಗೆ ಒಳಪಡುವ ಮತ್ತು ತೆರಿಗೆಗೆ ಒಳಪಡದ ಕೊಡುಗೆಯನ್ನು ನಿರ್ಣಯಿಸಲು ತೆರಿಗೆ ವಿಧಿಸಬಹುದಾದ ಬಡ್ಡಿ ಲೆಕ್ಕಾಚಾರಕ್ಕಾಗಿ ಇತ್ತೀಚೆಗೆ ಮುಕ್ತಾಯಗೊಂಡ ಹಣಕಾಸು ವರ್ಷದಲ್ಲಿ ಮತ್ತು ಹಿಂದಿನ ಎಲ್ಲ ವರ್ಷಗಳಲ್ಲಿ ಅಸ್ತಿತ್ವದಲ್ಲಿರುವ ಪ್ರಾವಿಡೆಂಟ್ ಫಂಡ್ ಖಾತೆಯೊಳಗೆ ಎರಡು ಪ್ರತ್ಯೇಕ ಖಾತೆಗಳನ್ನು ನಿರ್ವಹಿಸಲಾಗುತ್ತದೆ.

ಇದನ್ನೂ ಓದಿ: PF Transfer: 6 ಹಂತಗಳಲ್ಲಿ ಆನ್​ಲೈನ್​ನಲ್ಲಿ ಪಿಎಫ್ ವರ್ಗಾವಣೆ ಮಾಡುವುದರ ಮಾಹಿತಿ ಇಲ್ಲಿದೆ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ