AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೆಣಬಿಗೆ ಬೆಂಬಲ ಬೆಲೆ ಹೆಚ್ಚಳ; ಕ್ವಿಂಟಾಲ್​ಗೆ ಈಗ 5,650 ರೂ; ಬೇರೆ ಬೆಳೆಗಳಿಗಿರುವ ಬೆಲೆಪಟ್ಟಿ

Raw Jute MSP rised: ಕಚ್ಚಾ ಸೆಣಬಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಶೇ. 6ರಷ್ಟು ಹೆಚ್ಚಿಸಲು ಕೇಂದ್ರ ಸಂಪುಟದಿಂದ ಅನುಮೋದನೆ ಸಿಕ್ಕಿದೆ. ಒಂದು ಕ್ವಿಂಟಾಲ್ ಸೆಣಬಿಗೆ 5,335 ರೂ ಇದ್ದ ಎಂಎಸ್​ಪಿಯನ್ನು 5,650 ರೂಗೆ ಏರಿಸಲಾಗಿದೆ. ಸೆಣಬು ಬೆಳೆಗಾರರಿಗೆ ಸರಾಸರಿ ವೆಚ್ಚಕ್ಕಿಂತ ಶೇ. 66.8ರಷ್ಟು ಹೆಚ್ಚು ಲಾಭ ಸಿಗುತ್ತದೆ ಎಂದು ಎಂಎಸ್​ಪಿ ಏರಿಕೆ ಬಗ್ಗೆ ಕೇಂದ್ರ ಸಚಿವ ಪೀಯೂಶ್ ಗೋಯಲ್ ವಿವರಿಸಿದ್ದಾರೆ.

ಸೆಣಬಿಗೆ ಬೆಂಬಲ ಬೆಲೆ ಹೆಚ್ಚಳ; ಕ್ವಿಂಟಾಲ್​ಗೆ ಈಗ 5,650 ರೂ; ಬೇರೆ ಬೆಳೆಗಳಿಗಿರುವ ಬೆಲೆಪಟ್ಟಿ
ಸೆಣಬು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 22, 2025 | 6:06 PM

Share

ನವದೆಹಲಿ, ಜನವರಿ 22: ಕಚ್ಚಾ ಸೆಣಬಿಗೆ ಈ ಸೀಸನ್​ನಲ್ಲಿ ಸರ್ಕಾರದಿಂದ ನೀಡಲಾಗುವ ಕನಿಷ್ಠ ಬೆಂಬಲ ಬೆಲೆ ಅಥವಾ ಎಂಎಸ್​ಪಿ ದರವನ್ನು ಹೆಚ್ಚಿಸಲಾಗಿದೆ. 2025-26ರ ಮಾರುಕಟ್ಟೆ ಋತುವಿನಲ್ಲಿ ಕಚ್ಚಾ ಸೆಣಬಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಪ್ರತೀ ಕ್ವಿಂಟಾಲ್​ಗೆ 5,650 ರೂಗಳಿಗೆ ಏರಿಸಲಾಗಿದೆ. ಹಿಂದಿನ ವರ್ಷದಲ್ಲಿ ಸೆಣಬಿಗೆ ಎಂಎಸ್​ಪಿ 5,335 ರೂ ಇತ್ತು. ಕ್ವಿಂಟಾಲ್​ಗೆ 315 ರೂ ಅಥವಾ ಶೇ. 6ರಷ್ಟು ಎಂಎಸ್​ಪಿ ಏರಿಕೆ ಆಗಿದೆ. ಕೇಂದ್ರ ಸಂಪುಟದಲ್ಲಿ ಈ ಕ್ರಮಕ್ಕೆ ಇಂದು ಅನುಮೋದನೆ ಸಿಕ್ಕಿದೆ. ಕೇಂದ್ರ ಸಚಿವ ಪೀಯುಶ್ ಗೋಯಲ್ ಇಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ಸಂಗತಿಯನ್ನು ತಿಳಿಸಿದ್ದಾರೆ.

ಸೆಣಬು ಬೆಳೆಯಲು ಆಗುವ ಸರಾಸರಿ ವೆಚ್ಚಕ್ಕಿಂತ ಶೇ. 66.8ರಷ್ಟು ಹೆಚ್ಚು ಲಾಭ ರೈತರಿಗೆ ಸಿಗಲಿದೆ. ಸೆಣಬು ಬೆಳೆಗಾರರಿಗೆ ಆದಾಯ ಹೆಚ್ಚಳ ಸಾಧ್ಯವಾಗಲಿದೆ ಎಂದು ಸಚಿವರು ಹೇಳಿದ್ದಾರೆ.

ಕಳೆದ ಹತ್ತು ವರ್ಷಗಳಿಂದ ಸೆಣಬಿಗೆ ಬೆಂಬಲ ಬೆಲೆ ಸಾಕಷ್ಟು ಏರಿಕೆ ಆಗುತ್ತಾ ಬಂದಿದೆ. 2014-15ರಲ್ಲಿ ಒಂದು ಕ್ವಿಂಟಾಲ್ ಸೆಣಬಿಗೆ 2,400 ರೂ ಎಂಎಸ್​ಪಿ ಇತ್ತು. ಹತ್ತು ವರ್ಷದಲ್ಲಿ 2.35 ಪಟ್ಟು ಹೆಚ್ಚು ಏರಿಕೆ ಮಾಡಲಾಗಿದೆ. ಕೇಂದ್ರ ಸಂಪುಟ ಇಂದು ಎಂಎಸ್​ಪಿ ಏರಿಕೆ ಜೊತೆಗೆ ಮತ್ತೊಂದು ನಡೆಗೂ ಅನುಮೋದನೆ ನೀಡಿದೆ. ರಾಷ್ಟ್ರೀಯ ಹೆಲ್ತ್ ಮಿಷನ್ ಅನ್ನು ಮತ್ತಷ್ಟು ಐದು ವರ್ಷಕ್ಕೆ ವಿಸ್ತರಿಸುವ ಕ್ರಮಕ್ಕೆ ಸಂಪುಟದ ಒಪ್ಪಿಗೆ ಸಿಕ್ಕಿದೆ.

ಇದನ್ನೂ ಓದಿ: ಭಾರತೀಯ ಜಿನೋಮ್ ಡಾಟಾಬೇಸ್, ಐಬಿಡಿಸಿ ಪೋರ್ಟಲ್ ಆರಂಭ; ಬಯೋಟೆಕ್ ಸೂಪರ್​ಪವರ್ ದೇಶವಾಗುವತ್ತ ಭಾರತದ ಹೆಜ್ಜೆ

ವಿವಿಧ ಬೆಳೆಗಳಿಗೆ ಹಾಲಿ ಇರುವ ಎಂಎಸ್​ಪಿ ದರಗಳು… (ಕ್ವಿಂಟಾಲ್​ಗೆ)

  • ಭತ್ತ: 2,300 ರೂ
  • ಜೋಳ: 2,320 ರೂ
  • ರಾಗಿ: 4,290
  • ತೊಗರಿ ಬೇಳೆ: 7,550 ರೂ
  • ಹೆಸರುಕಾಳು: 8,682 ರೂ
  • ಉದ್ದಿನಬೇಳೆ: 7,400 ರೂ
  • ಹತ್ತಿ: 7,121 ರೂ
  • ಸೂರ್ಯಕಾಂತಿ ಬೀಜ: 7,280 ರೂ
  • ಸೋಯಾ: 4,892 ರೂ
  • ಗೋಧಿ: 2,425 ರೂ
  • ಬಾರ್ಲೀ: 1,980 ರೂ
  • ಕಡಲೆ: 5,650 ರೂ
  • ಕೊಬ್ಬರಿ: 11,160 ರೂ
  • ಕಬ್ಬು: 340 ರೂ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ