ನವದೆಹಲಿ, ಏಪ್ರಿಲ್ 24: ಕೋಟಕ್ ಮಹೀಂದ್ರ ಬ್ಯಾಂಕ್ನ ಆನ್ಲೈನ್ ಸೆಕ್ಯೂರಿಟಿ ವ್ಯವಸ್ಥೆ ಅಸಮರ್ಪಕವಾಗಿರುವ ಹಿನ್ನೆಲೆಯಲ್ಲಿ ಅದರ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿರ್ಬಂಧ ಹಾಕಿದೆ. ಅದರ ಆನ್ಲೈನ್ ಪ್ಲಾಟ್ಫಾರ್ಮ್ ಮತ್ತು ಮೊಬೈಲ್ ಬ್ಯಾಂಕಿಂಗ್ ಪ್ಲಾಟ್ಫಾರ್ಮ್ನಿಂದ ಹೊಸ ಗ್ರಾಹಕರನ್ನು ಸೇರಿಸಿಕೊಳ್ಳುವಂತಿಲ್ಲ. ಹೊಸ ಕ್ರೆಡಿಟ್ ಕಾರ್ಡ್ಗಳನ್ನು ನೀಡುವಂತಿಲ್ಲ ಎಂದು ಕೋಟಕ್ ಮಹೀಂದ್ರ ಬ್ಯಾಂಕ್ಗೆ (Kotak Mahindra Bank) ಆರ್ಬಿಐ ಆದೇಶಿಸಿದೆ. ಈಗಿರುವ ಬ್ಯಾಂಕ್ ಗ್ರಾಹಕರಿಗೆ ಯಥಾ ಪ್ರಕಾರ ಸೇವೆ ಲಭ್ಯ ಇರುತ್ತದೆ. ಈ ಬ್ಯಾಂಕ್ನ ಕ್ರೆಡಿಟ್ ಕಾರ್ಡ್ ಹೊಂದಿರುವವರೂ ಕೂಡ ಕಾರ್ಡ್ ಬಳಕೆ ಮುಂದುವರಿಸಲು ಯಾವ ಅಡ್ಡಿಯೂ ಇಲ್ಲ. ಏನಿದ್ದರೂ ಹೊಸ ಕ್ರೆಡಿಟ್ ಕಾರ್ಡ್ ನೀಡುವುದು ಸದ್ಯಕ್ಕೆ ಬಂದ್ ಆಗುತ್ತದೆ.
ಕಳೆದ ಎರಡು ವರ್ಷದಲ್ಲಿ, ಅಂದರೆ 2022 ಮತ್ತು 2023ರಲ್ಲಿ ಬ್ಯಾಂಕ್ನ ಐಟಿ ಪರಿಶೀಲನೆ ನಡೆಸಲಾಗಿತ್ತು. ಈ ವೇಳೆ ಸಮಸ್ಯೆಗಳನ್ನು ಸರಿಪಡಿಸಲಾಗಿಲ್ಲದಿರುವುದು ಆರ್ಬಿಐ ಗಮನಕ್ಕೆ ಬಂದಿದೆ. ಹೀಗಾಗಿ, ಭಾರತದ ಸೆಂಟ್ರಲ್ ಬ್ಯಾಂಕ್ ಈ ಕಠಿಣ ನಿರ್ಧಾರ ತೆಗೆದುಕೊಂಡಿದೆ.
‘ಸತತ ಎರಡು ವರ್ಷ ಕಾಲ ನಿಯಮಾನುಸಾರ ಕೋಟಕ್ ಮಹೀಂದ್ರ ಬ್ಯಾಂಕ್ನ ಐಟಿ ಅಪಾಯ ಮತ್ತು ಮಾಹಿತಿ ಭದ್ರತಾ ಆಡಳಿತದಲ್ಲಿ (IT Risk and Information Security Governance) ದೋಷ ಕಂಡು ಬಂದಿದೆ’ ಎಂದು ಆರ್ಬಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ವೈಯಕ್ತಿಕ ಆಸ್ತಿಯಲ್ಲಿ ಸರ್ಕಾರಕ್ಕೆ ಶೇ. 55 ಪಾಲು: ಅಮೆರಿಕದ ಟ್ಯಾಕ್ಸ್ ವ್ಯವಸ್ಥೆ ಪ್ರಸ್ತಾಪಿಸಿದ ಸ್ಯಾಮ್ ಪಿತ್ರೋಡಾ
ಐಟಿ ಇನ್ವೆಂಟರಿ ಮ್ಯಾನೇಜ್ಮೆಂಟ್, ಯೂಸರ್ ಅಕ್ಸೆಸ್ ಮ್ಯಾನೇಜ್ಮೆಂಟ್, ಪ್ಯಾಂಚ್ ಅಂಡ್ ಚೇಂಜ್ ಮ್ಯಾನೇಜ್ಮೆಂಟ್, ಡಾಟಾ ಸೆಕ್ಯೂರಿಟಿ ತಂತ್ರ, ಡಾಟಾ ಸೋರಿಕೆ ನಿಯಂತ್ರಣ ತಂತ್ರ, ವೆಂಡರ್ ರಿಸ್ಕ್ ಮ್ಯಾನೇಜ್ಮೆಂಟ್ ಮೊದಲಾದ ವಿಚಾರಗಳ್ಲಲಿ ಆರ್ಬಿಐ ನಿಯಮಗಳಿಗೆ ಬ್ಯಾಂಕ್ ಬದ್ಧವಾಗಿಲ್ಲದಿರುವುದು ತಿಳಿದುಬಂದಿದೆ.
‘ಪಕ್ವವಾದ ಐಟಿ ಸೌಕರ್ಯ ಮತ್ತು ಐಟಿ ಅಪಾಯ ನಿರ್ವಹಣೆ ವ್ಯವಸ್ಥೆ ಇಲ್ಲದಿರುವುದರಿಂದ ಬ್ಯಾಂಕ್ನ ಕೋರ್ ಬ್ಯಾಂಕಿಂಗ್ ಸಿಸ್ಟಮ್ ಹಾಗು ಅದರ ಆನ್ಲೈನ್ ಮತ್ತು ಡಿಜಿಟಲ್ ಬ್ಯಾಂಕಿಂಗ್ ಪ್ಲಾಟ್ಫಾರ್ಮ್ಗಳು ಕಳೆದ ಎರಡು ವರ್ಷದಲ್ಲಿ ಆಗಾಗ್ಗೆ ಕುಗ್ಗಿವೆ. ಇತ್ತೀಚೆಗೆ ಏಪ್ರಿಲ್ 15ರಂದು ಸೇವೆಯಲ್ಲಿ ವ್ಯತ್ಯಯವಾಗಿತ್ತು. ಇದರಿಂದ ಗ್ರಾಹಕರಿಗೆ ಗಂಭೀರ ರೀತಿಯಲ್ಲಿ ಅನನುಕೂಲವಾಗುತ್ತಿದೆ,’ ಎಂದು ಆರ್ಬಿಐ ಹೇಳಿದೆ.
ಇದನ್ನೂ ಓದಿ: ಮದ್ಯದೊರೆಯ ಮಗಳು; ಫ್ಯಾಷನ್ ಜಗತ್ತಿನಲ್ಲಿ ಲೈಲಾ ಓ ಲೈಲಾ..! ಯಶಸ್ಸು ಕಂಡ ಲೈಲಾ ಮಲ್ಯ
ಕೋಟಕ್ ಮಹೀಂದ್ರ ಬ್ಯಾಂಕ್ನ ಗ್ರಾಹಕರ ಹಿತದೃಷ್ಟಿಯಿಂದ ಆರ್ಬಿಐ ಈ ನಿರ್ಬಂಧಗಳನ್ನು ಹೇರಿದೆ. ಬ್ಯಾಂಕ್ನ ಅಸಮರ್ಪಕ ಐಟಿ ಭದ್ರತೆ ಇಲ್ಲದೇ ಇರುವುದು ಗೊತ್ತಾಗಿ ಆರ್ಬಿಐ ಕಳೆದ 2 ವರ್ಷದಿಂದಲೂ ಬ್ಯಾಂಕ್ ಜೊತೆ ನಿಕಟ ಸಂಪರ್ಕದಲ್ಲಿತ್ತು. ಆದರೆ, ವ್ಯವಸ್ಥೆಯಲ್ಲಿ ಯಾವ ಸುಧಾರಣೆಯೂ ಆಗಿಲ್ಲ. ಗ್ರಾಹಕರಿಗೆ ಯಾವ ತೃಪ್ತಿಯೂ ಆಗಿಲ್ಲ. ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ನ ಡಿಜಿಟಲ್ ವಹಿವಾಟು ಪ್ರಮಾಣ ಬಹಳ ವೇಗವಾಗಿ ಹೆಚ್ಚಾಗಿತ್ತು. ಇದು ಬ್ಯಾಂಕ್ನ ಐಟಿ ಸಿಸ್ಟಂಗಳ ಮೇಲೆ ಇನ್ನಷ್ಟು ಹೊರೆ ತಂದಿದೆ ಎಂದೂ ಆರ್ಬಿಐ ಅಭಿಪ್ರಾಯಪಟ್ಟಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ