AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕದ ಟ್ಯಾರಿಫ್​ಗಳಿಂದ ಪರಿಣಾಮ ಹೌದು, ಆದರೆ, ಭಾರತ ಹೆಚ್ಚು ಚಿಂತೆ ಪಡಬೇಕಿಲ್ಲ: ಆರ್​ಬಿಐ ಗವರ್ನರ್

US Tariffs Not A Matter Of Huge Concern For India's Growth: RBI Governor - ಅಮೆರಿಕದ ಟ್ಯಾರಿಫ್​ಗಳು ಭಾರತದ ಮೇಲೆ ಪರಿಣಾಮ ಬೀರುತ್ತವೆ. ಆದರೆ, ದೊಡ್ಡದಾಗಿ ಚಿಂತೆ ಮಾಡುವಷ್ಟಿಲ್ಲ ಎಂದಿದ್ದಾರೆ ಆರ್​ಬಿಐ ಗವರ್ನರ್. ಐಎಂಎಫ್​ನ ವಾರ್ಷಿಕ ಸಭೆ ಉದ್ದೇಶಿಸಿ ಮಾತನಾಡಿದ ಸಂಜಯ್ ಮಲ್ಹೋತ್ರಾ, ಜಾಗತಿಕ ಅನಿಶ್ಚಿತ ಸ್ಥಿತಿಯಲ್ಲೂ ಭಾರತ ಉತ್ತಮ ಬೆಳವಣಿಗೆ ಸಾಧಿಸಿದೆ ಎಂದಿದ್ದಾರೆ. ಹಣದುಬ್ಬರ ಕಡಿಮೆ ಆಗಿದೆ. ವಿತ್ತೀಯ ಕೊರತೆ, ಸಾಲದ ಅನುಪಾತ ಕಡಿಮೆ ಆಗಿರುವುದು ಇತ್ಯಾದಿ ಅಂಶಗಳನ್ನು ಅವರು ಎತ್ತಿ ತೋರಿಸಿದ್ದಾರೆ.

ಅಮೆರಿಕದ ಟ್ಯಾರಿಫ್​ಗಳಿಂದ ಪರಿಣಾಮ ಹೌದು, ಆದರೆ, ಭಾರತ ಹೆಚ್ಚು ಚಿಂತೆ ಪಡಬೇಕಿಲ್ಲ: ಆರ್​ಬಿಐ ಗವರ್ನರ್
ಸಂಜಯ್ ಮಲ್ಹೋತ್ರಾ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 16, 2025 | 6:32 PM

Share

ನವದೆಹಲಿ, ಅಕ್ಟೋಬರ್ 16: ಜಾಗತಿಕ ಅನಿಶ್ಚಿತತೆಯ ನಡುವೆಯೂ ಭಾರತ ಅಪ್ರತಿಮ ಎನಿಸಬಹುದಾದಷ್ಟು ವೇಗದಲ್ಲಿ ಆರ್ಥಿಕ ಬೆಳವಣಿಗೆ ಸಾಧಿಸುತ್ತಿರುವುದಕ್ಕೆ ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ (RBI Guv Sanjay Malhotra) ತೃಪ್ತಿ ವ್ಯಕ್ತಪಡಿಸಿದ್ದಾರೆ. ಐಎಂಎಫ್​ನ ವಾರ್ಷಿಕ ಸಭೆಯಲ್ಲಿ ಮಾತನಾಡುತ್ತಿದ್ದ ಸಂಜಯ್ ಮಲ್ಹೋತ್ರಾ, ಅಮೆರಿಕದ ಟ್ಯಾರಿಫ್​ನಿಂದ ಭಾರತಕ್ಕೆ ದೊಡ್ಡ ಆತಂಕವೇನೂ ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಟ್ಯಾರಿಫ್​ಗಳಿಂದ ನಕಾರಾತ್ಮಕ ಪರಿಣಾಮ ಆಗುತ್ತದೆಯಾದರೂ ಅದೇನೂ ಬಹಳ ಚಿಂತೆ ಪಡಬೇಕಾದ ಸಂಗತಿ ಅಲ್ಲ. ಭಾರತದ ಆರ್ಥಿಕತೆಯು ಹೆಚ್ಚಾಗಿ ದೇಶೀಯ ಶಕ್ತಿ ಆಧಾರಿತವಾಗಿದೆ,’ ಎಂದು ಆರ್​ಬಿಐ ಗವರ್ನರ್ ತಿಳಿಸಿದ್ದಾರೆ.

ಇದನ್ನೂ ಓದಿ: ಭಾರತದ ಇವಿ ಸಬ್ಸಿಡಿಗಳಿಗೆ ಚೀನಾ ಅಸಮಾಧಾನ; ಡಬ್ಲ್ಯುಟಿಒದಲ್ಲಿ ದೂರು

‘ನೀತಿ ಅನಿಶ್ಚಿತತೆ ಸೇರಿದಂತೆ ಹಲವಾರು ಕಾರಣಗಳಿಂದಾಗಿ ಹಿಂದೆಂದೂ ಕಂಡರಿಯದಷ್ಟು ಅನಿಶ್ಚಿತ ಕಾಲಘಟ್ಟದಲ್ಲಿ ಇದ್ದೇವೆ. ಉದಯೋನ್ಮುಖ ಮಾರುಕಟ್ಟೆಯ ಆರ್ಥಿಕತೆಯ ಬೆಳವಣಿಗೆಗೆ ಇದು ದೊಡ್ಡ ತೊಡರುಗಾಲಾಗಿದೆ. ಎಲ್ಲಾ ಅಭಿವೃದ್ಧಿಶೀಲ ಆರ್ಥಿಕತೆಗಳೂ ಕೂಡ ಈ ಅಪಾಯವನ್ನು ಗಣನೆಗೆ ತೆಗೆದುಕೊಳ್ಳಬೇಕು’ ಎಂದು ಐಎಂಎಫ್ ಸಭೆಯಲ್ಲಿ ಸಂಜಯ್ ಮಲ್ಹೋತ್ರಾ ಕರೆ ನೀಡಿದ್ದಾರೆ.

ಭಾರತದ ಆರ್ಥಿಕತೆಯ ಅಂಶಗಳ ಬಗ್ಗೆ ಮಲ್ಹೋತ್ರಾ ಮೆಚ್ಚುಗೆ

‘ಕೋವಿಡ್ ಪರಿಸ್ಥಿತಿ ಹಾಗೂ ರಷ್ಯಾ ಉಕ್ರೇನ್ ಯುದ್ಧದ ಪರಿಣಾಮವನ್ನು ಭಾರತ ಸಮರ್ಥವಾಗಿ ಎದುರಿಸಿದೆ. ಹಣದುಬ್ಬರವನ್ನು ಉತ್ತಮವಾಗಿ ನಿಭಾಯಿಸಿದ್ದೇವೆ. ಶೇ. 8ರಷ್ಟಿದ್ದ ಹಣದುಬ್ಬರವನ್ನು ಶೇ. 1.5ಕ್ಕೆ ಇಳಿಸಿದ್ದೇವೆ. ತೈಲ ಬೆಲೆಗಳೂ ಕೂಡ ಕಡಿಮೆ ಆಗಿದೆ. ವಿತ್ತೀಯ ಕೊರತೆಯು ಜಿಡಿಪಿಯ ಶೇ. 4.4ಕ್ಕೆ ಸೀಮಿತಗೊಳ್ಳಬಹುದು. ಸಾಲವೂ ಕೂಡ ಕಡಿಮೆ ಇದೆ’ ಎಂದು ಸಂಜಯ್ ಮಲ್ಹೋತ್ರಾ ಭಾರತದ ಆರ್ಥಿಕತೆಯ ಸಕಾರಾತ್ಮಕ ಅಂಶಗಳ ಪಟ್ಟಿ ಮಾಡಿದ್ದಾರೆ.

ಇದನ್ನೂ ಓದಿ: ಭಾರತದ ಆರ್ಥಿಕ ಬೆಳವಣಿಗೆ ಬಗ್ಗೆ ಐಎಂಎಫ್​ನಿಂದಲೂ ನಿರೀಕ್ಷೆ ಹೆಚ್ಚಳ; ಶೇ. 6.4ರಿಂದ ಶೇ. 6.6ಕ್ಕೆ ಅಂದಾಜು ಪರಿಷ್ಕರಣೆ

ಈ ವರ್ಷ ಡಾಲರ್ ಮೌಲ್ಯ ಶೇ. 10ರಷ್ಟು ಇಳಿಮುಖವಾಗಿದೆ. ಹೆಚ್ಚಿನ ಕರೆನ್ಸಿಗಳ ಮೌಲ್ಯ ಕಡಿಮೆ ಆಗಿದ್ದರೂ ಭಾರತೀಯ ರುಪಾಯಿಯ ಮೌಲ್ಯ ಅಷ್ಟೇನೂ ಕುಂದಿಲ್ಲ ಎನ್ನುವ ಸಂಗತಿಯನ್ನು ಆರ್​ಬಿಐ ಗವರ್ನರ್ ಒತ್ತಿಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ