
ನವದೆಹಲಿ, ಜುಲೈ 20: ಭಾರತೀಯ ರಿಸರ್ವ್ ಬ್ಯಾಂಕ್ (RBI) ಕಾಗದದ ನೋಟುಗಳ ಬದಲಿಗೆ ಪಾಲಿಮರ್ (ಪ್ಲಾಸ್ಟಿಕ್) ನೋಟುಗಳನ್ನು ಪರಿಚಯಿಸಲು ಪ್ರಾಯೋಗಿಕ ಯೋಜನೆಗೆ (Pilot Project) ಸಿದ್ಧತೆ ನಡೆಸುತ್ತಿದೆ. ಆರ್‌ಬಿಐನ ನೋಟು ಮುದ್ರಣ ಸಂಸ್ಥೆಯಾದ ‘ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ್ ಪ್ರೈವೇಟ್ ಲಿಮಿಟೆಡ್’ (BRBNMPL) ಗ್ಲೋಬಲ್ ಟೆಂಡರ್ (EOI) ಕರೆದಿದ್ದು, ಪ್ರಾಯೋಗಿಕವಾಗಿ ₹10 ಮತ್ತು ₹20 ಮುಖಬೆಲೆಯ ನೋಟುಗಳಿಗೆ ಪ್ಲಾಸ್ಟಿಕ್ ಹಾಳೆಗಳನ್ನು ಪೂರೈಸಲು ಜಾಗತಿಕ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಿದೆ.
ಇದನ್ನೂ ಓದಿ: ಗ್ರಾಹಕರಿಗೆ DND ಆಯ್ಕೆ ತೋರಿಸಿ, ಬ್ಲಾಕ್ಡ್ ಬ್ಯಾಡ್ಜ್ ಅಲ್ಲ; ಟ್ರೂಕಾಲರ್ಗೆ ಸರ್ಕಾರ ನಿರ್ದೇಶನ
ಹೊಸ ಸೆಕ್ಯೂರಿಟಿ ಫೀಚರ್ಗಳಿರುವ ವಿಶೇಷೀಕೃತ ಪಾಲಿಮರ್ ಸಬ್ಸ್ಟ್ರೇಟ್ ಶೀಟ್ಗಳನ್ನು ತಯಾರಿಸುವವರು ಇಒಐ ಸಲ್ಲಿಸಬಹುದು ಎಂದು ಆರ್ಬಿಐ ತಿಳಿಸಿದೆ. ಪೂರೈಕೆದಾರರು ಚೀನಾ ಅಥವಾ ಪಾಕಿಸ್ತಾನದೊಂದಿಗೆ ಯಾವುದೇ ಸಂಪರ್ಕ ಹೊಂದಿರಬಾರದು ಮತ್ತು ನೋಟುಗಳ ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು (Animal Tallow) ಬಳಸದಿರುವುದನ್ನು ದೃಢೀಕರಿಸಬೇಕು ಎನ್ನುವ ನಿಯಮಗಳನ್ನೂ ಸೇರಿಸಲಾಗಿದೆ.
ಪ್ರಸ್ತುತ ಚಾಲ್ತಿಯಲ್ಲಿರುವ ಕಾಗದದ ನೋಟುಗಳನ್ನು ತಕ್ಷಣವೇ ಹಿಂಪಡೆಯಲಾಗುತ್ತದೆ ಎಂಬ ವದಂತಿಗಳು ಸುಳ್ಳು. ಈ ಪಾಲಿಮರ್ ನೋಟುಗಳ ಯೋಜನೆಯು ಆರಂಭಿಕ ಹಾಗೂ ಪ್ರಾಯೋಗಿಕ ಹಂತದಲ್ಲಿದ್ದು, ಈ ಪರೀಕ್ಷೆಗಳು ಯಶಸ್ವಿಯಾದರೆ ಮಾತ್ರ ಮುಂದಿನ ದಿನಗಳಲ್ಲಿ ಹಂತ-ಹಂತವಾಗಿ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ. ಸದ್ಯಕ್ಕೆ 10 ರೂ ಮತ್ತು 20 ರೂ ಮುಖಬೆಲೆಯ ನೋಟುಗಳನ್ನು ಮಾತ್ರ ಪಾಲಿಮರ್ನಿಂದ ಮುದ್ರಿಸಲಾಗುತ್ತದೆ. ಈ ಪೈಲಟ್ ಪ್ರಾಜೆಕ್ಟ್ ಯಶಸ್ವಿಯಾದ ಬಳಿಕ ಬೇರೆ ನೋಟುಗಳನ್ನೂ ಪ್ಲಾಸ್ಟಿಕ್ನಿಂದಲೇ ತಯಾರಿಸಲು ಆರ್ಬಿಐ ಮುಂದಾಗಬಹುದು.
ಇದನ್ನೂ ಓದಿ: ಸ್ಕೂಲ್ನಲ್ಲಿ ಫೇಲ್, ಬ್ಯುಸಿನೆಸ್ನಲ್ಲಿ ವಿನ್; ದೊಡ್ಡ ಬ್ಯುಸಿನೆಸ್ ಸಾಮ್ರಾಜ್ಯ ಕಟ್ಟಿದ ರೋನಿ ಸ್ಕ್ರೂವಾಲಾ ಅವರ ಯಶೋಗಾಥೆ
ಹಲವು ದೇಶಗಳಲ್ಲಿ ಪಾಲಿಮರ್ನಿಂದ ತಯಾರಿಸಲಾದ ನೋಟುಗಳಿವೆ. ಆಸ್ಟ್ರೇಲಿಯಾ, ಕೆನಡಾ, ನ್ಯೂಜಿಲ್ಯಾಂಡ್, ಸಿಂಗಾಪುರ್, ಬ್ರಿಟನ್ ಮೊದಲಾದ ಸುಮಾರು 40 ದೇಶಗಳಲ್ಲಿ ಪ್ಲಾಸ್ಟಿಕ್ ನೋಟುಗಳನ್ನು ಮುದ್ರಿಸಲಾಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ