
ನವದೆಹಲಿ, ನವೆಂಬರ್ 9: ಡಾಲರ್ ಎದುರು ರುಪಾಯಿ ಮೌಲ್ಯ ಸತತವಾಗಿ ವೃದ್ಧಿಸುತ್ತಿದೆ. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಸೋಮವಾರ ಬೆಳಗ್ಗೆ ಆರಂಭಿಕ ವಹಿವಾಟಿನ ವೇಳೆ ಭಾರತೀಯ ರೂಪಾಯಿಯು ಅಮೆರಿಕದ ಡಾಲರ್ ಎದುರು 28 ಪೈಸೆ ಜಿಗಿತವನ್ನು ದಾಖಲಿಸಿದೆ. ಇದರೊಂದಿಗೆ ರೂಪಾಯಿಯ ಮೌಲ್ಯವು 93.70 ಕ್ಕೆ ತಲುಪಿದೆ.
ಹಿಂದಿನ ದಿನ ರುಪಾಯಿ 93.98 ಕ್ಕೆ ಕೊನೆಗೊಂಡಿತ್ತು. ರೂಪಾಯಿಯು ದಾಖಲಿಸಿರುವ ಈ ಚೇತರಿಕೆಯು ಕಳೆದ ಏಳು ತಿಂಗಳ ಅವಧಿಯಲ್ಲಿನ ಅತ್ಯಧಿಕ ಗರಿಷ್ಠ ಮಟ್ಟವಾಗಿದೆ ಎಂದು ವರದಿ ತಿಳಿಸಿದೆ.
ಮಾರುಕಟ್ಟೆ ಪ್ರಭಾವ: ಜಾಗತಿಕ ಆರ್ಥಿಕ ಬೆಳವಣಿಗೆಗಳು, ವಿದೇಶಿ ಬಂಡವಾಳ ಹೂಡಿಕೆ ಮತ್ತು ವಿದೇಶಿ ವಿನಿಮಯ ಮಾರುಕಟ್ಟೆಯ ಧನಾತ್ಮಕ ಅಂಶಗಳು ರೂಪಾಯಿಯ ಮೌಲ್ಯ ಬಲಗೊಳ್ಳಲು ಕಾರಣವಾಗಿವೆ.
ಇದನ್ನೂ ಓದಿ: ಇದು ಹಾಲಿವುಡ್ ಸ್ಪೈ ಥ್ರಿಲ್ಲರ್ನಂಥ ಕಥೆ; ಅಮೆರಿಕದ ಕಾರ್ಪೊರೇಟ್ ದಂತಕಥೆಯ ಬೆನ್ನಿಗೆ ಅಂಟಿದ ಚೀನೀ ಗೂಢಚಾರಿಣಿ
ಕಳೆದ ವಾರ ಭಾರತದ ಈಕ್ವಿಟಿ ಮಾರುಕಟ್ಟೆಗೆ ವಿದೇಶೀ ಹೂಡಿಕೆದಾರರಿಂದ 4 ಬಿಲಿಯನ್ ಡಾಲರ್ ಹರಿದುಬಂದಿದೆ. ಅಂದರೆ, ಡಾಲರ್ ಹರಿವು ಸಾಕಷ್ಟು ಬಂದಿದೆ. ಎಐ ಕ್ಷೇತ್ರಕ್ಕೆ ಹಿನ್ನಡೆಯಾದ ಹಿನ್ನೆಲೆಯಲ್ಲಿ ಸೌತ್ ಕೊರಿಯಾ ಮತ್ತು ತೈವಾನ್ನ ಮಾರುಕಟ್ಟೆಗಳಲ್ಲಿ ಎಐ ಕಂಪನಿಗಳ ಮೇಲೆ ಹಣ ಹಾಕಿದ್ದ ಹೂಡಿಕೆದಾರರು ಈಗ ತಮ್ಮ ಹಣವನ್ನು ಭಾರತದತ್ತ ವರ್ಗಾಯಿಸುತ್ತಿದ್ದಾರೆ. ಹೀಗಾಗಿ, ಎಫ್ಐಐ ಹೂಡಿಕೆಗಳ ಒಳಹರಿವು ಭಾರತದಲ್ಲಿ ಹೆಚ್ಚಾಗಿದೆ.
ಅಮೆರಿಕದ ಮಧ್ಯತರ ಚುನಾವಣೆಯಲ್ಲಿ ಡೆಮಾಕ್ರಾಟಿಕ್ ಪಕ್ಷ ಗೆಲುವು ಸಾಧಿಸಿದ್ದೂ ಕೂಡ ಟೆಕ್ನಾಲಜಿ ಕ್ಷೇತ್ರದ ಕಂಪನಿಗಳ ಷೇರುಗಳಿಂದ ಹೂಡಿಕೆಗಳು ಹೊರಹೋಗುತ್ತಿದ್ದು, ಭಾರತಕ್ಕೆ ಲಾಭವಾಗಿದೆ.
ಇದನ್ನೂ ಓದಿ: ನಿಮ್ಮ ಆಲೋಚನಾ ಶಕ್ತಿಯನ್ನು ಎಐಗೆ ಒಪ್ಪಿಸಬೇಡಿ: ಯುವಜನರಿಗೆ ಮಾಜಿ ಐಎಂಎಫ್ ಅಧಿಕಾರಿ ಗೀತಾ ಗೋಪಿನಾಥ್ ಸಲಹೆ
ಹಾಗೆಯೆ, ಕಚ್ಚಾ ತೈಲ ಬೆಲೆಗಳೂ ಕೂಡ ಕಡಿಮೆ ಆಗಿದ್ದರಿಂದ ಭಾರತದ ಡಾಲರ್ ವೆಚ್ಚ ತಗ್ಗಿದೆ. ಇವೆಲ್ಲವೂ ಕೂಡ ಡಾಲರ್ ಎದುರು ರುಪಾಯಿಯನ್ನು ಬಲಪಡಿಸಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ