ರಿಲಯನ್ಸ್ ಇಂಡಸ್ಟ್ರೀಸ್ ದಾಖಲೆ ಆದಾಯ, ಲಾಭ; ಷೇರುಬೆಲೆ ಶೇ. 7ರಷ್ಟು ಜಿಗಿತ

ಮುಕೇಶ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್​ನ ಎರಡನೇ ಕ್ವಾರ್ಟರ್ ವರದಿ ಬಹಳ ಸಕಾರಾತ್ಮಕವಾಗಿದೆ. ಸಂಸ್ಥೆಯು ದಾಖಲೆಯ ಆದಾಯ ಮತ್ತು ಲಾಭ ತೋರಿಸಿದೆ. ಇದರ ಬೆನ್ನಲ್ಲೇ ಇವತ್ತು ಆರ್​​ಐಎಲ್​ನ ಷೇರುಬೆಲೆ ಶೇ. 7ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಗೋಲ್ಡ್​ಮನ್ ಸ್ಯಾಕ್ಸ್, ನೊಮುರಾ ಮೊದಲಾದ ರೇಟಿಂಗ್ ಏಜೆನ್ಸಿಗಳು ರಿಲಯನ್ಸ್ ಷೇರಿಗೆ ‘ಬಯ್’ ರೇಟಿಂಗ್ ನೀಡಿವೆ.

ರಿಲಯನ್ಸ್ ಇಂಡಸ್ಟ್ರೀಸ್ ದಾಖಲೆ ಆದಾಯ, ಲಾಭ; ಷೇರುಬೆಲೆ ಶೇ. 7ರಷ್ಟು ಜಿಗಿತ
ಷೇರು ಮಾರುಕಟ್ಟೆ
Image Credit source: Getty Images

Updated on: Nov 02, 2026 | 12:05 PM

ನವದೆಹಲಿ, ನವೆಂಬರ್ 2: ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಆದಾಯ ಗಳಿಕೆ ಈ ಎರಡನೇ ಕ್ವಾರ್ಟರ್​ನಲ್ಲಿ ಅಮೋಘವಾಗಿ ದಾಖಲಾಗಿದೆ. ಇದರ ಬೆನ್ನಲ್ಲೇ ಇವತ್ತು ರಿಲಯನ್ಸ್​ನ ಷೇರುಬೆಲೆ ಸಖತ್ ಏರಿದೆ. ಬೆಳಗಿನ ವಹಿವಾಟಿನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಷೇರುಬೆಲೆ ಶೇ. ಕ್ಕಿಂತಲೂ ಅಧಿಕ ಜಿಗಿದಿದೆ. ಎನ್​ಎಸ್​ಇ ಮತ್ತು ಬಿಎಸ್​ಇ ಎರಡೂ ವಿನಿಮಯ ಕೇಂದ್ರಗಳಲ್ಲೂ ರಿಲಯನ್ಸ್ ಷೇರುಗಳಿಗೆ ಇವತ್ತು ಬೇಡಿಕೆ ಬಂದಿದೆ. ಬಹಳಷ್ಟು ಸಂಖ್ಯೆಯಲ್ಲಿ ವಹಿವಾಟುಗಳಾಗುತ್ತಿವೆ.

ಆರ್​ಐಎಲ್​ನ ಆದಾಯ ವರದಿ: ಉತ್ತಮ ಲಾಭ ದಾಖಲು

ಈ ಹಣಕಾಸು ವರ್ಷದ ಎರಡನೇ ಕ್ವಾರ್ಟರ್ ಆದ ಜುಲೈನಿಂದ ಸೆಪ್ಟೆಂಬರ್ ಅವಧಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಉತ್ತಮ ಆದಾಯ ದಾಖಲಿಸಿರುವುದು ಅದರ ತ್ರೈಮಾಸಿಕ ವರದಿಯಿಂದ ತಿಳಿದುಬಂದಿದೆ. ತೈಲ ಸಂಸ್ಕರಣೆ, ರಾಸಾಯನಿಕ ಇತ್ಯಾದಿ ಹತ್ತು ಹಲವು ಬ್ಯುಸಿನೆಸ್​ಗಳನ್ನು ಒಳಗೊಂಡಿರುವ ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಒಟ್ಟಾರೆ ಆದಾಯವು 3.62 ಲಕ್ಷ ಕೋಟಿ ರೂ ದಾಖಲಾಗಿದೆ. ಇದು ಅದರ ಈವರೆಗಿನ ಅತ್ಯುತ್ತಮ ಕ್ವಾರ್ಟರ್ ರಿಸಲ್ಟ್ ಎನಿಸಿದೆ.

ಇದನ್ನೂ ಓದಿ: ಅಕ್ಟೋಬರ್ ತಿಂಗಳಲ್ಲಿ ಭರ್ಜರಿ ಜಿಎಸ್​ಟಿ ಕಲೆಕ್ಷನ್ಸ್; 2 ಲಕ್ಷ ಕೋಟಿ ರೂ ದಾಟಿದ ನಿವ್ವಳ ತೆರಿಗೆ ಸಂಗ್ರಹ

ತೆರಿಗೆ ಇತ್ಯಾದಿ ವೆಚ್ಚವನ್ನು ಕಳೆದು ಉಳಿಯುವ ನಿವ್ವಳ ಲಾಭ 29,550 ಕೋಟಿ ರೂ ಇದೆ. ಇದೂ ಕೂಡ ಈವರೆಗಿನ ಗರಿಷ್ಠ ಲಾಭ ಎನಿಸಿದೆ.

ರಿಲಯನ್ಸ್ ಇಂಡಸ್ಟ್ರೀಸ್​ನ ಅಂಗಸಂಸ್ಥೆಯಾದ ಜಿಯೋ ಪ್ಲಾಟ್​ಫಾರ್ಮ್ಸ್​ನ ಆದಾಯವು ಶೇ. 11.3ರಷ್ಟು ಹೆಚ್ಚಿದೆ. ಅದರ ಷೇರುಬೆಲೆಯೂ ಸತತವಾಗಿ ಏರುತ್ತಿದೆ.

ಇದನ್ನೂ ಓದಿ: ಯುಪಿಐ ಹೊಸ ಮೈಲಿಗಲ್ಲು; ಅಕ್ಟೋಬರ್​ನಲ್ಲಿ 1 ಲಕ್ಷ ಕೋಟಿ ರೂ ದಾಟಿದ ದೈನಂದಿನ ಸರಾಸರಿ ಪೇಮೆಂಟ್ ಮೌಲ್ಯ

ಆರ್​ಐಎಲ್ ಷೇರಿಗೆ ಪಾಸಿಟಿವ್ ರೇಟಿಂಗ್ ಕೊಟ್ಟ ಬ್ರೋಕರೇಜ್ ಸಂಸ್ಥೆಗಳು

ದಾಖಲೆಯ ಆದಾಯ ಮತ್ತು ಲಾಭ ಪಡೆದ ರಿಲಯನ್ಸ್ ಇಂಡಸ್ಟ್ರೀಸ್​ನ ಷೇರಿಗೆ ‘ಖರೀದಿ’ ರೇಟಿಂಗ್ ಅನ್ನು ಬ್ರೋಕರೇಜ್ ಸಂಸ್ಥೆಗಳು ನೀಡಿವೆ. ಗೋಲ್ಡ್​ಮನ್ ಸ್ಯಾಕ್ಸ್ ಕಂಪನಿಯು ಆರ್​ಐಎಲ್ ಷೇರಿಗೆ 1,840 ರೂ ಟಾರ್ಗೆಟ್ ಪ್ರೈಸ್ ನೀಡಿದೆ. ಸದ್ಯ ಇದರ ಷೇರು ಬೆಲೆ 1,256 ರೂನಲ್ಲಿದೆ. ನೊಮುರಾ ಕೂಡ ರಿಲಯನ್ಸ್ ಷೇರಿಗೆ ಥಂಬ್ಸ್ ಅಪ್ ಕೊಟ್ಟಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us