Satya Nadella: ನನ್ನ ನೀನು ಮೋಸಗೊಳಿಸಲಾರೆ; ದಕ್ಷಿಣ ಭಾರತದ ತಿಂಡಿ ಬಗ್ಗೆ ಚಾಟ್ಜಿಪಿಟಿ ಜತೆ ಸತ್ಯ ನಾದೆಲ್ಲಾ ಹೀಗೊಂದು ಸಂಭಾಷಣೆ!
‘ಚಾಟ್ಜಿಪಿಟಿ’ ಓಪನ್ ಎಇಐ (ಕೃತಕ ಬುದ್ಧಿಮತ್ತೆ) ಯಿಂದ ಅಭಿವೃದ್ಧಿಪಡಿಸಿದ ಸಾಫ್ಟ್ವೇರ್ ಆಗಿದ್ದು, ಇದರ ಸ್ಥಾಪಕರಲ್ಲಿ ಉದ್ಯಮಿ ಎಲಾನ್ ಮಸ್ಕ್ ಸಹ ಒಬ್ಬರಾಗಿದ್ದಾರೆ. ‘ಚಾಟ್ಜಿಪಿಟಿ’ ಮತ್ತು ನಾದೆಲ್ಲಾ ನಡುವೆ ನಡೆದ ಸ್ವಾರಸ್ಯಕರ ಸಂಭಾಷಣೆ ಇಲ್ಲಿದೆ.
ಬೆಂಗಳೂರು: ‘ಹೇಯ್, ಹಾಗೆಲ್ಲ ನೀನು ನನ್ನನ್ನು ಮೋಸಗೊಳಿಸಲಾಗದು. ಅದ್ಹೇಗೆ ಬಿರಿಯಾನಿಯನ್ನು (Biryani) ದಕ್ಷಿಣ ಭಾರತದ ಬೆಳಗ್ಗಿನ ಉಪಾಹಾರದ ತಿಂಡಿ ಎನ್ನುತ್ತೀ?’ ಹೀಗೆಂದು ಹೇಳಿದ್ದು ಮೈಕ್ರೋಸಾಫ್ಟ್ ಕಂಪನಿ ಮುಖ್ಯಸ್ಥ ಸತ್ಯ ನಾದೆಲ್ಲಾ (Satya Nadella). ಯಾರ ಜೊತೆ ಗೊತ್ತೇ? ಕೃತಕ ಬುದ್ಧಿಮತ್ತೆಯಿಂದ ಅಭಿವೃದ್ಧಿಪಡಿಸಿದ ಸಾಫ್ಟ್ವೇರ್ ‘ಚಾಟ್ಜಿಪಿಟಿ (ChatGPT)’ ಜತೆ! ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿದ್ದ ಟೆಕ್ ಸಮ್ಮಿಟ್ಗೆ ಬಂದಿದ್ದ ಸತ್ಯ ನಾದೆಲ್ಲಾ, ‘ಚಾಟ್ಜಿಪಿಟಿ’ ಜತೆ ಸಂಭಾಷಣೆ ನಡೆಸಿ, ದಕ್ಷಿಣ ಭಾರತದ ಬೆಳಗ್ಗಿನ ಉಪಾಹಾರದ ತಿಂಡಿಗಳು ಯಾವುವೆಲ್ಲ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ‘ಚಾಟ್ಜಿಪಿಟಿ’ ಇಡ್ಲಿ, ವಡಾ, ಉತ್ತಪ್ಪ, ದೋಸೆ, ಪೊಂಗಲ್ ದಕ್ಷಿಣ ಭಾರತದ ಸಾಂಪ್ರದಾಯಿಕ ತಿನಿಸುಗಳು ಎಂದಿದೆ. ಜತೆಗೆ ಬಿರಿಯಾನಿಯನ್ನೂ ಸೇರಿಸಿದೆ.
ತಕ್ಷಣವೇ ಪ್ರತಿಕ್ರಿಯಿಸಿದ ನಾದೆಲ್ಲಾ, ಬಿರಿಯಾನಿ ಬೆಳಗ್ಗಿನ ತಿಂಡಿ ಎಂದು ಹೇಳಿ ನನ್ನನ್ನು ಅವಮಾನಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ‘ಚಾಟ್ಜಿಪಿಟಿ’, ನೀವು ಹೇಳಿದ್ದು ನಿಜ. ಬಿರಿಯಾನಿಯನ್ನು ದಕ್ಷಿಣ ಭಾರತದ ಬೆಳಗ್ಗಿನ ತಿಂಡಿ ಎಂದು ಪರಿಗಣಿಸುವುದಿಲ್ಲ ಎಂದು ಹೇಳಿದೆ.
ಇದನ್ನೂ ಓದಿ: ಭಾರತದ ಪ್ರಸ್ತುತ ಪರಿಸ್ಥಿತಿ ನೋಡಿ ನಾನು ಎದೆಗುಂದಿದ್ದೇನೆ; ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲ
ನಂತರ ದೋಸೆ, ವಡಾ ಮತ್ತು ಇಡ್ಲಿಗೆ ಸಂಬಂಧಿಸಿ ಪ್ಲೇ ಕ್ರಿಯೇಟ್ ಮಾಡುವಂತೆ ‘ಚಾಟ್ಜಿಪಿಟಿ’ಗೆ ನಾದೆಲ್ಲಾ ಸೂಚಿಸಿದರು. ತಕ್ಷಣವೇ ಉತ್ತಮ ರೋಲ್ಪ್ಲೇ ಕ್ರಿಯೇಟ್ ಮಾಡಿದ ‘ಚಾಟ್ಜಿಪಿಟಿ’, ಮುಂಬೈಯ ಸ್ಟ್ರೀಟ್ ಫುಡ್ ವಡಾ ಪಾವ್, ಪಾವ್ ಬಾಜಿ ಬಗ್ಗೆಯೂ ವಿಶ್ಲೇಷಿಸಿತು.
‘ಚಾಟ್ಜಿಪಿಟಿ’ ಓಪನ್ ಎಇಐ (ಕೃತಕ ಬುದ್ಧಿಮತ್ತೆ) ಯಿಂದ ಅಭಿವೃದ್ಧಿಪಡಿಸಿದ ಸಾಫ್ಟ್ವೇರ್ ಆಗಿದ್ದು, ಇದರ ಸ್ಥಾಪಕರಲ್ಲಿ ಉದ್ಯಮಿ ಎಲಾನ್ ಮಸ್ಕ್ ಸಹ ಒಬ್ಬರಾಗಿದ್ದಾರೆ. ‘ಚಾಟ್ಜಿಪಿಟಿ’ ಮತ್ತು ನಾದೆಲ್ಲಾ ನಡುವೆ ನಡೆದ ಸ್ವಾರಸ್ಯಕರ ಸಂಭಾಷಣೆಯ ಬಗ್ಗೆ ‘ಮನಿ ಕಂಟ್ರೋಲ್’ ಸುದ್ದಿ ತಾಣ ವರದಿ ಮಾಡಿ ಗಮನ ಸೆಳೆದಿದೆ.