AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Semiconductor: ಮೈಸೂರಿಗೆ ಹೊಸ ಗರಿಮೆ; ಬರಲಿದೆ ಸೆಮಿಕಂಡಕ್ಟರ್ ಚಿಪ್ ಫ್ಯಾಕ್ಟರಿ: ವರದಿ

Semiconductor chip factory in Mysore: ಮೈಸೂರಿನ ಕಡಕೋಳದಲ್ಲಿ ಸೆಮಿಕಂಡಕ್ಟರ್ ಚಿಪ್ ಫ್ಯಾಕ್ಟರಿ ಶೀಘ್ರದಲ್ಲೇ ಸ್ಥಾಪನೆ ಆಗಬಹುದು ಎಂದು ಹಾಸನ್ ಮೆಗಾ ಫೂಡ್ ಪಾರ್ಕ್ ಸಿಇಒ ಹೇಳಿದ್ಧಾರೆ. ಜಪಾನೀ ಕಂಪನಿಯೊಂದರ ಜೊತೆ ಮಾತುಕತೆ ನಡೆಯುತ್ತಿದ್ದು ಮೂರು ತಿಂಗಳೊಳಗೆ ಒಪ್ಪಂದ ಆಗುವ ನಿರೀಕ್ಷೆ ಇದೆ. ಬೆಂಗಳೂರಿನಲ್ಲಿ ಫೆಬ್ರುವರಿ 12 ಮತ್ತು 13ರಂದು ನಡೆಯುವ ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್ ವೇಳೆ ಒಪ್ಪಂದ ಅಂತಿಮಗೊಳ್ಳಬಹುದು ಎನ್ನಲಾಗಿದೆ.

Semiconductor: ಮೈಸೂರಿಗೆ ಹೊಸ ಗರಿಮೆ; ಬರಲಿದೆ ಸೆಮಿಕಂಡಕ್ಟರ್ ಚಿಪ್ ಫ್ಯಾಕ್ಟರಿ: ವರದಿ
ಸೆಮಿಕಂಡಕ್ಟರ್ ಚಿಪ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 08, 2024 | 12:46 PM

Share

ಮೈಸೂರು, ನವೆಂಬರ್ 8: ಭಾರತದಲ್ಲಿ ಏಳುತ್ತಿರುವ ಸೆಮಿಕಂಡಕ್ಟರ್ ಪ್ರವಾಹದ ಅಲೆ ಮೈಸೂರನ್ನೂ ತಲುಪಿದೆ. ಸರಳ ಮತ್ತು ಸುಂದರ ಅರಮನೆ ನಗರಿಯಾದ ಮೈಸೂರಿನಲ್ಲಿ ಸೆಮಿಕಂಡಕ್ಟರ್ ಚಿಪ್ ತಯಾರಿಕೆಯ ಘಟಕ ಸ್ಥಾಪನೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇತ್ತೀಚೆಗೆ ಇಲ್ಲಿಯ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹಾಸನ್ ಮೆಗಾ ಫೂಡ್ ಪಾರ್ಕ್​ನ ಸಿಇಒ ಅಶೋಕ್ ಈ ವಿಚಾರವನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮೈಸೂರಿನ ಕಡಕೋಳದಲ್ಲಿ ಈ ಘಟಕ ಶೀಘ್ರದಲ್ಲೇ ಸ್ಥಾಪನೆಯಾಗಬಹುದು ಎಂದು ಅವರು ಸುಳಿವು ನೀಡಿದ್ದಾರೆ.

ಜಪಾನ್ ಮೂಲದ ಕಂಪನಿಯೊಂದು ಸೆಮಿಕಂಡಕ್ಟರ್ ಚಿಪ್ ಮ್ಯಾನುಫ್ಯಾಕ್ಚರಿಂಗ್ ಘಟಕ ಸ್ಥಾಪಿಸಲು ಆಸಕ್ತಿ ತೋರಿದೆ. ಕಡಕೋಳದಲ್ಲಿ ಯೂನಿಟ್ ಸ್ಥಾಪಿಸುವಂತೆ ಆ ಕಂಪನಿ ಜೊತೆ ಮಾತುಕತೆ ನಡೆಸಲಾಗುತ್ತಿದೆ. ಬೆಂಗಳೂರಿನಲ್ಲಿ ಫೆಬ್ರುವರಿ 12 ಮತ್ತು 13ರಂದು ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಈ ಯೋಜನೆಯನ್ನು ಅಂತಿಮಗೊಳಿಸಲಾಗಬಹುದು ಎಮದು ಅಶೋಕ್ ಅವರು ಮಾಹಿತಿ ನೀಡಿದ್ದಾರೆ ಎಂದು ಸ್ಟಾರ್ ಆಫ್ ಮೈಸೂರ್ ವೆಬ್​ಸೈಟ್​ನಲ್ಲಿ ವರದಿಯಾಗಿದೆ.

ಇದನ್ನೂ ಓದಿ: Rahul Gandhi: ಉದ್ಯಮ ಕೆಲವೇ ವ್ಯಕ್ತಿಗಳ ಹಿಡಿತದಲ್ಲಿರೋದನ್ನು ವಿರೋಧಿಸುತ್ತೇನೆ: ರಾಹುಲ್ ಗಾಂಧಿ ಸ್ಪಷ್ಟನೆ

ಸೆಮಿಕಂಡಕ್ಟರ್ ಚಿಪ್ ತಯಾರಿಕೆಯ ಘಟಕ ಸ್ಥಾಪನೆಯಾದರೆ ಸಾಕಷ್ಟು ಉದ್ಯೋಗಾವಕಾಶ ಸೃಷ್ಟಿಯಾಗುತ್ತದೆ. ಅದಕ್ಕೆ ಪೂರಕವಾದ ಉದ್ದಿಮೆಗಳೂ ಮೈಸೂರಿನಲ್ಲಿ ಹುಟ್ಟಿಕೊಳ್ಳಲು ಅನುವು ಮಾಡಿಕೊಡುತ್ತದೆ. ಈಗಾಗಲೇ ಮೈಸೂರಿನಲ್ಲಿ ಸಣ್ಣ ಮತ್ತು ದೊಡ್ಡ ಉದ್ದಿಮೆಗಳು ಇದ್ದು, ಈಗ ಸೆಮಿಕಂಡಕ್ಟರ್ ಕ್ಷೇತ್ರವೂ ಸೇರ್ಪಡೆಯಾದರೆ ಅರಮನೆ ನಗರಿಗೆ ಹೊಸ ಆಯಾಮ ದಕ್ಕುವ ನಿರೀಕ್ಷೆ ಇದೆ. ಯಾವ ಜಪಾನೀ ಕಂಪನಿಯು ಸೆಮಿಕಂಡಕ್ಟರ್ ಚಿಪ್ ಘಟಕ ಸ್ಥಾಪಿಸುತ್ತದೆ ಎಂಬ ಮಾಹಿತಿ ಇನ್ನೂ ಗೊತ್ತಾಗಿಲ್ಲ.

ಮೈಸೂರಿನಲ್ಲಿ ಇನ್ಫೋಸಿಸ್, ವಿಪ್ರೋ, ಎಲ್ ಅಂಡ್ ಟಿ, ಸೀರೆನ್, ಮೈಸೂರ್ ಪಾಲಿಮರ್ಸ್ ರಬ್ಬರ್ ಪ್ರಾಡಕ್ಟ್ಸ್, ಗ್ಲೋಟ್ರಾನಿಕ್ಸ್, ಭೋರುಕ ಎಕ್ಸ್​ಟ್ರೂಶನ್ಸ್, ಮಿಟ್ಸುಬಿಶಿ, ಜೆಕೆ ಟಯರ್ಸ್, ಏಷ್ಯನ್ ಪೇಂಟ್ಸ್, ಕೇನಸ್ ಟೆಕ್ನಾಲಜಿ, ಎನ್ ರಂಗರಾವ್ ಅಂಡ್ ಸನ್ಸ್, ಜ್ಯೂಸ್ ಬಯೋಟೆಕ್ ಮೊದಲಾದ ನೂರಾರು ಉದ್ಯಮಗಳು ನೆಲಸಿವೆ.

ಇದನ್ನೂ ಓದಿ: ಯೂಟ್ಯೂಬ್​ನಲ್ಲಿ ಅಡುಗೆ ಚಾನಲ್ ಪ್ರಾರಂಭಿಸಿ ನಂ. 1 ಶ್ರೀಮಂತೆಯಾದ ನಿಶಾ ಮಧುಲಿಕಾ

ಮೈಸೂರಿನ ಹೂಟಗಳ್ಳಿ, ಮೇಟಗಳ್ಳಿ, ಕಡಕೋಳ ಮೊದಲಾದೆಡೆ ಕೈಗಾರಿಕಾ ಪ್ರದೇಶಗಳು ನೆಲಸಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕುಡಿದು ಟೈಟ್ ಆದವರಿಗೆ ಉಚಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆ
ಕುಡಿದು ಟೈಟ್ ಆದವರಿಗೆ ಉಚಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆ
ಮಾಧ್ಯಮದ ಕ್ಯಾಮೆರಾ​​​ ನೋಡುತ್ತಿದ್ದಂತೆ ಮುಖ ಮುಚ್ಚಿಕೊಂಡ ಯುವತಿ
ಮಾಧ್ಯಮದ ಕ್ಯಾಮೆರಾ​​​ ನೋಡುತ್ತಿದ್ದಂತೆ ಮುಖ ಮುಚ್ಚಿಕೊಂಡ ಯುವತಿ
New Year 2026 Live: ನ್ಯೂ ಇಯರ್; ರಾಜ್ಯದ ಉದ್ದಗಲಕ್ಕೂ ಸಂಭ್ರಮ ಜೋರು
New Year 2026 Live: ನ್ಯೂ ಇಯರ್; ರಾಜ್ಯದ ಉದ್ದಗಲಕ್ಕೂ ಸಂಭ್ರಮ ಜೋರು
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?