ದಕ್ಷಿಣ ಕೊರಿಯಾದಲ್ಲಿ ಎಲ್ಲಾ ವ್ಯಕ್ತಿಗಳಿಗೂ ಉಚಿತ ಎಐ ಸೇವೆ; ಟೋಕನ್​ಗಳಿಗೂ ಮಿತಿ ಇಲ್ಲ

South Korea launching AI for All to its people: ತಂತ್ರಜ್ಞಾನ ಕ್ಷೇತ್ರದಲ್ಲಿ ಬಹಳ ಎತ್ತರದಲ್ಲಿರುವ ದಕ್ಷಿಣ ಕೊರಿಯಾ ದೇಶದಲ್ಲಿ ಜನರಿಗೆ ಉಚಿತವಾಗಿ ಮತ್ತು ಮುಕ್ತವಾಗಿ ಎಐ ಬಳಸಲು ಅವಕಾಶ ಮಾಡಲಾಗುತ್ತಿದೆ. ಅಲ್ಲಿರುವ ಜನರಿಗೆ ಉಚಿತ ಎಐ ಸೇವೆಗಳು ಹಾಗೂ ಅಸೀಮಿತವಾಗಿ ಟೋಕನ್ ಬಳಸಲು ಸರ್ಕಾರ ಅವಕಾಶ ಕೊಡುತ್ತಿದೆ. ಎಐ ಫಾರ್ ಆಲ್ ಯೋಜನೆಯನ್ನು ಸೆಪ್ಟೆಂಬರ್​ನಲ್ಲಿ ಜಾರಿಗೆ ತರಲಿದೆ.

ದಕ್ಷಿಣ ಕೊರಿಯಾದಲ್ಲಿ ಎಲ್ಲಾ ವ್ಯಕ್ತಿಗಳಿಗೂ ಉಚಿತ ಎಐ ಸೇವೆ; ಟೋಕನ್​ಗಳಿಗೂ ಮಿತಿ ಇಲ್ಲ
ಕೃತಕ ಬುದ್ಧಿಮತ್ತೆ
Image Credit source: Getty Images

Updated on: Aug 30, 2026 | 7:37 PM

ನವದೆಹಲಿ, ಆಗಸ್ಟ್ 30: ಜಾಗತಿಕ ಕೃತಕ ಬುದ್ಧಿಮತ್ತೆ (AI) ರಂಗದಲ್ಲಿ ಮುಂಚೂಣಿ ಸಾಧಿಸಲು ದಕ್ಷಿಣ ಕೊರಿಯಾ ಸರ್ಕಾರವು ತನ್ನ ದೇಶದ ಎಲ್ಲಾ ಪ್ರಜೆಗಳಿಗೆ ಉಚಿತವಾಗಿ ಎಐ ತಂತ್ರಜ್ಞಾನ ಮತ್ತು ಸಾಧನಗಳನ್ನು ಒದಗಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಘೋಷಿಸಿದೆ. ನಾಗರಿಕರ ಡಿಜಿಟಲ್ ಕೌಶಲ್ಯಗಳನ್ನು ಹೆಚ್ಚಿಸಲು ಮತ್ತು ತಂತ್ರಜ್ಞಾನದ ಅಂತರವನ್ನು ತಗ್ಗಿಸಲು ದೇಶದ ಎಲ್ಲಾ ಪ್ರಜೆಗಳಿಗೆ ಉಚಿತವಾಗಿ ಸುಧಾರಿತ ಎಐ ಸೇವೆಗಳನ್ನು ಒದಗಿಸಲು ಸರ್ಕಾರ ನಿರ್ಧರಿಸಿದೆ.

ಸೌತ್ ಕೊರಿಯಾ ಸರ್ಕಾರ ‘AI for All’ ಬೀಟಾ ಯೋಜನೆಯನ್ನು ಸೆಪ್ಟೆಂಬರ್​ನಲ್ಲಿ ಆರಂಭಿಸುತ್ತಿದೆ. ಮುಂದಿನ ತಿಂಗಳು ಬೀಟಾ ಶುರುವಾದರೆ, ವರ್ಷಾಂತ್ಯದೊಳಗೆ ಪೂರ್ಣಪ್ರಮಾಣದಲ್ಲಿ ಯೋಜನೆ ಜಾರಿಗೆ ಬರುವ ನಿರೀಕ್ಷೆ ಇದೆ. ಈ ಎಐ ಸೇವೆಗಳನ್ನು ನೀಡಲು ಸರ್ಕಾರ ಮೂರು ತಂತ್ರಜ್ಞಾನ ಗುಂಪುಗಳನ್ನು ಆಯ್ಕೆ ಮಾಡಲಿದೆ. ಈ ಯೋಜನೆಗಾಗಿ ಸರ್ಕಾರವು ಬೃಹತ್ ಪ್ರಮಾಣದ ಎಐ ಕಂಪ್ಯೂಟಿಂಗ್ ಮೂಲಸೌಕರ್ಯ (AI Infrastructure) ಮತ್ತು ರಾಷ್ಟ್ರೀಯ ಡೇಟಾ ಸೆಂಟರ್‌ಗಳನ್ನು ನಿರ್ಮಿಸುತ್ತಿದೆ.

ಇದನ್ನೂ ಓದಿ: ನಿಮ್ಮ ಸ್ಮಾರ್ಟ್‌ಫೋನ್ ಗರಿಷ್ಠ ಎಷ್ಟು ವ್ಯಾಟ್ ಚಾರ್ಜರ್ ಬೆಂಬಲಿಸುತ್ತದೆ? 100W ಚಾರ್ಜರ್ ಬಳಸಬಹುದೇ?

ಜಾಗತಿಕ ಟೆಕ್ ದೈತ್ಯರಾದ ಓಪನ್‌ಎಐ (OpenAI) ಅಥವಾ ಗೂಗಲ್ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗುವ ಬದಲು, ದಕ್ಷಿಣ ಕೊರಿಯಾ ತನ್ನದೇ ಆದ ಸ್ವದೇಶಿ ಭಾಷಾ ಮಾದರಿಗಳನ್ನು (LLMs) ಮತ್ತು ಎಐ ತಂತ್ರಜ್ಞಾನಗಳನ್ನು ಪ್ರೋತ್ಸಾಹಿಸಲು ಈ ಹಣಕಾಸು ನೆರವು ನೀಡುತ್ತಿದೆ. ಆಯ್ಕೆಯಾಗುವ ಮೂರು ಎಐ ಕನ್ಸಾರ್ಟಿಯಂಗಳು ತಮ್ಮವೇ ಪ್ರತ್ಯೇಕವಾದ ಎಐ ಆ್ಯಪ್​ಗಳನ್ನು ಬಿಡುಗಡೆ ಮಾಡುತ್ತವೆ. ಅದರ ಬಳಕೆದಾರರಿಗೆ ಅಸೀಮಿತ ಬಳಕೆಯ ಅವಕಾಶ ಸಿಗುತ್ತದೆ.

ಶಿಕ್ಷಣ ಮತ್ತು ಉದ್ಯೋಗಗಳಿಗೆ ಆಸರೆ: ಶಾಲಾ ಶಿಕ್ಷಣದಿಂದ ಹಿಡಿದು ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳ (SMEs) ವರೆಗೆ ಎಐ ಉಪಕರಣಗಳನ್ನು ಉಚಿತವಾಗಿ ನೀಡುವುದರಿಂದ ದೇಶದ ಉತ್ಪಾದನೆ ಮತ್ತು ಶೈಕ್ಷಣಿಕ ಮಟ್ಟವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ.

ಇದನ್ನೂ ಓದಿ: ಯುರೇಕಾ ಸೀಪ್ಲೇನ್: ವಿಮಾನಕ್ಕಿಂತ ಕಡಿಮೆ ದರ, ಹಡಗಿಗಿಂತ ವೇಗ… 1 ಟನ್ ಸರಕನ್ನು 1 ಕಿಮೀ ಸಾಗಿಸುವ ವೆಚ್ಚ 1 ಡಾಲರ್​ಗಿಂತ ಕಮ್ಮಿ

ದಕ್ಷಿಣ ಕೊರಿಯಾ ಈ ಎಐ ಸೇವೆಗಳನ್ನು ಚಾಟ್​ಬೋಟ್​ಗಳ ಮೂಲಕ ನೀಡುವುದಿಲ್ಲ. ಸರ್ಕಾರದ ವಿವಿಧ ಸೇವೆಗಳಿಗೆ ಇವುಗಳನ್ನು ಜೋಡಿಸಲಾಗುತ್ತದೆ. ವೈದ್ಯರ ಅಪಾಯಿಂಟ್ಮೆಂಟ್ ಪಡೆಯುವುದು, ಅಪಾರ್ಟ್ಮೆಂಟ್​ಗಳಿಗೆ ಹುಡುಕುವುದು, ತೆರಿಗೆ ಎಣಿಕೆ ಮಾಡುವುದು ಇತ್ಯಾದಿ ಕಾರ್ಯಗಳನ್ನು ಮಾಡಲು ಅವಕಾಶ ಇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us