AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುರೇಕಾ ಸೀಪ್ಲೇನ್: ವಿಮಾನಕ್ಕಿಂತ ಕಡಿಮೆ ದರ, ಹಡಗಿಗಿಂತ ವೇಗ… 1 ಟನ್ ಸರಕನ್ನು 1 ಕಿಮೀ ಸಾಗಿಸುವ ವೆಚ್ಚ 1 ಡಾಲರ್​ಗಿಂತ ಕಮ್ಮಿ

Bangalore's startup announces seaplane for cheaper cargo: ಬೆಂಗಳೂರಿನ ಆಸ್ಪೆರಾ ಇಂಡಸ್ಟ್ರೀಸ್ ಸಂಸ್ಥೆಯು ಯುರೇಕಾ ಎನ್ನುವ ಸ್ವಾಯತ್ತ ಸೀಪ್ಲೇನ್ ಅನ್ನು ತಯಾರಿಸಿದೆ. ಇದು ಸರಕು ಸಾಗಣೆ ವಾಹನವಾಗಿದ್ದು, ಸಮುದ್ರದ ಮೇಲ್ಮೈ ನೀರಿನ ಸಹಾಯದಿಂದ ವೇಗವಾಗಿ ಹೋಗಬಲ್ಲುದು. ಯುರೇಕಾ ವಿಮಾನವು 1,000 ಕಿಲೋ ತೂಕದ ವಸ್ತುಗಳನ್ನು 2,000 ಕಿಮೀ ದೂರ ಸಾಗಿಸಬಲ್ಲುದು.

ಯುರೇಕಾ ಸೀಪ್ಲೇನ್: ವಿಮಾನಕ್ಕಿಂತ ಕಡಿಮೆ ದರ, ಹಡಗಿಗಿಂತ ವೇಗ... 1 ಟನ್ ಸರಕನ್ನು 1 ಕಿಮೀ ಸಾಗಿಸುವ ವೆಚ್ಚ 1 ಡಾಲರ್​ಗಿಂತ ಕಮ್ಮಿ
ಬೆಂಗಳೂರಿನ ಆಸ್ಪೆರಾ ಇಂಡಸ್ಟ್ರೀಸ್​ನ ಯುರೇಕಾ ವಿಮಾನImage Credit source: X user @khushhhi_
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 30, 2026 | 2:53 PM

Share

ಬೆಂಗಳೂರು, ಆಗಸ್ಟ್ 30: ಬೆಂಗಳೂರು ಮೂಲದ ಡೀಪ್-ಟೆಕ್ ಸ್ಟಾರ್ಟಪ್ (Startup) ಸಂಸ್ಥೆಯಾದ ‘ಆಸ್ಪೆರಾ ಇಂಡಸ್ಟ್ರೀಸ್’ (Aspera Industries) ಸರಕು ಸಾಗಣೆ (Cargo Transport) ವೆಚ್ಚವನ್ನು ಗಣನೀಯವಾಗಿ ತಗ್ಗಿಸುವ ಸಾಮರ್ಥ್ಯವಿರುವ ಭಾರತದ ಮೊದಲ ಸ್ವಾಯತ್ತ (ಆಟೋನಾಮಸ್) ಸೀಪ್ಲೇನ್ ಅನ್ನು ಅನಾವರಣಗೊಳಿಸಿದೆ. ಯುರೇಕಾ ಎಂದು ಹೆಸರಿಸಲಾಗಿರುವ ಈ ಸೀಪ್ಲೇನ್ 1,000 ಕಿಲೋ ತೂಕದ ಸರಕುಗಳನ್ನು 2,000 ಕಿಮೀ ದೂರ ಸಾಗಿಸುವ ಸಾಮರ್ಥ್ಯ ಹೊಂದಿದೆ.

ಸಮುದ್ರದ ಮೇಲೆ ತುಸು ಎತ್ತರದಲ್ಲಿ ಸಾಗುವ ಈ ಡ್ರೋನ್ ಶೈಲಿಯ ಸೀಪ್ಲೇನ್ ಪ್ರತಿ ಟನ್-ಕಿಲೋಮೀಟರ್‌ಗೆ 1 ಡಾಲರ್​ಗಿಂತ ಕಡಿಮೆ ವೆಚ್ಚದಲ್ಲಿ ಸರಕು ಸಾಗಣೆ ಮಾಡಬಲ್ಲದು. ಇದು ಸಾಂಪ್ರದಾಯಿಕ ವಾಯು ಮಾರ್ಗದ ಕಾರ್ಗೋ ವೆಚ್ಚಕ್ಕಿಂತ ಶೇ. 80 ರಷ್ಟು ಅಗ್ಗವಾಗಿದೆ. ಹಾಗೆಯೇ, ಹಡಗುಗಳಲ್ಲಿ ಸಾಗಿಸಲು ತಿಂಗಳು ಬೇಕಾದರೆ ಈ ಸೀಪ್ಲೇನ್ ಕೆಲವೇ ಗಂಟೆಗಳಲ್ಲಿ ಸರಕುಗಳನ್ನು ಕೊಂಡೊಯ್ಯಬಲ್ಲುದು. ಹೆಚ್ಚಿನ ಪ್ರಮಾಣದಲ್ಲಿ ಸೀಪ್ಲೇನ್​ಗಳ ಬಳಕೆಯಾದರೆ, ಒಂದು ಕಿಮೀ ಸಾಗಣೆ ವೆಚ್ಚ 50 ಸೆಂಟ್ ಅಥವಾ ಅರ್ಧ ಡಾಲರ್​ಗೆ ಇಳಿಯಬಹುದು ಎಂದು ಈ ಸಂಸ್ಥೆ ಹೇಳಿಕೊಂಡಿದೆ.

ಇದನ್ನೂ ಓದಿ: ಎಚ್​ಡಿಎಫ್​ಸಿ ಬ್ಯಾಂಕ್ ಸಿಇಒ ಮತ್ತು ಎಂಡಿ ಶಶಿದರ್ ಜಗದೀಶನ್ ನಿವೃತ್ತಿ; ಅಕ್ಟೋಬರ್ 26ಕ್ಕೆ ಅವರ ಅವಧಿ ಅಂತ್ಯ

ಚಾಲಕ ರಹಿತ ತಂತ್ರಜ್ಞಾನ: ಇದರಲ್ಲಿ ಮಾನವ ಪೈಲಟ್‌ಗಳ ಅಗತ್ಯವಿರುವುದಿಲ್ಲ (Unmanned). ಕೃತಕ ಬುದ್ಧಿಮತ್ತೆ (AI) ಮತ್ತು ಸುಧಾರಿತ ಸಂವೇದಕಗಳ (Sensors) ಸಹಾಯದಿಂದ ಇದು ನೀರು ಮತ್ತು ನೆಲದ ಮೇಲೆ ಸ್ವಯಂಚಾಲಿತವಾಗಿ ಟೇಕ್-ಆಫ್ ಮತ್ತು ಲ್ಯಾಂಡಿಂಗ್ ಆಗುವ ಸಾಮರ್ಥ್ಯ ಹೊಂದಿದೆ.

ಆಸ್ಪೆರಾ ಇಂಡಸ್ಟ್ರೀಸ್ ಸಿಇಒ ಖುಷಿ ಮಿಟ್ಟಲ್ ಅವರ ಎಕ್ಸ್ ಪೋಸ್ಟ್

ಈ ವಿಮಾನವು ಸಾಗರ, ನದಿ ಹಾಗೂ ಜಲಾಶಯಗಳ ಜಲಮೂಲಗಳನ್ನು ರನ್‌ವೇ ಆಗಿ ಬಳಸಿಕೊಳ್ಳಬಲ್ಲದು. ಹೀಗಾಗಿ ಪ್ರತ್ಯೇಕ ವಿಮಾನ ನಿಲ್ದಾಣಗಳ (Airports) ಅಗತ್ಯವಿರುವುದಿಲ್ಲ.

ಇದನ್ನೂ ಓದಿ: Range Rover: 4.5 ಸೆಕೆಂಡ್ಸ್​​ನಲ್ಲಿ 100 ಕಿ.ಮೀ. ವೇಗ: 1.90 ಕೋಟಿಯ ರೇಂಜ್ ರೋವರ್ ಸ್ಪೋರ್ಟ್ ಟ್ವೆಂಟಿ ಬಿಡುಗಡೆ

ದೂರದ ಪ್ರದೇಶಗಳಿಗೆ ಸಂಪರ್ಕ: ಭಾರತದ ಸುದೀರ್ಘ ಕರಾವಳಿ ತೀರಗಳು, ದ್ವೀಪಗಳು (ಅಂಡಮಾನ್, ಲಕ್ಷದ್ವೀಪ) ಹಾಗೂ ಗುಡ್ಡಗಾಡು ಪ್ರದೇಶಗಳಿಗೆ ಅತಿ ವೇಗವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ಸರಕುಗಳನ್ನು ತಲುಪಿಸಲು ಈ ಯೋಜನೆ ಕ್ರಾಂತಿಕಾರಿ ಬದಲಾವಣೆ ತರಲಿದೆ.

ಈ ಯೋಜನೆಯು ಭಾರತದ ನೀಲಿ ಆರ್ಥಿಕತೆ (Blue Economy) ಮತ್ತು ಲಾಜಿಸ್ಟಿಕ್ಸ್ ರಂಗದಲ್ಲಿ ಪ್ರಮುಖ ಮೈಲಿಗಲ್ಲಾಗುವ ನಿರೀಕ್ಷೆಯಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
7ನೇ ಕ್ಲಾಸ್ ವಿದ್ಯಾರ್ಥಿಗಳಿಗೆ ವರ್ಣಮಾಲೆ ಗೊತ್ತಿಲ್ಲ:ಶಿಕ್ಷಕರಿಗೆ ನೊಟೀಸ್
7ನೇ ಕ್ಲಾಸ್ ವಿದ್ಯಾರ್ಥಿಗಳಿಗೆ ವರ್ಣಮಾಲೆ ಗೊತ್ತಿಲ್ಲ:ಶಿಕ್ಷಕರಿಗೆ ನೊಟೀಸ್
ಪ್ರಚೋದನಕಾರಿ ಭಾಷಣ: ಪ್ರತಾಪ್ ಸಿಂಹ ಸೇರಿ ಹಲವರ ವಿರುದ್ಧ ಕೈ ದೂರು
ಪ್ರಚೋದನಕಾರಿ ಭಾಷಣ: ಪ್ರತಾಪ್ ಸಿಂಹ ಸೇರಿ ಹಲವರ ವಿರುದ್ಧ ಕೈ ದೂರು
ಸಿದ್ದರಾಮಯ್ಯ ಪ್ರತಿಮೆ ತೆರವು ಸಮರ್ಥಿಸಿಕೊಂಡ ಪ್ರಿಯಾಂಕ್ ಖರ್ಗೆ
ಸಿದ್ದರಾಮಯ್ಯ ಪ್ರತಿಮೆ ತೆರವು ಸಮರ್ಥಿಸಿಕೊಂಡ ಪ್ರಿಯಾಂಕ್ ಖರ್ಗೆ
ಕಲಬುರಗಿ ಯುವತಿಯನ್ನ ಬಾಂಗ್ಲಾದೇಶಕ್ಕೆ ಕರೆದೊಯ್ದು ಟಾರ್ಚರ್
ಕಲಬುರಗಿ ಯುವತಿಯನ್ನ ಬಾಂಗ್ಲಾದೇಶಕ್ಕೆ ಕರೆದೊಯ್ದು ಟಾರ್ಚರ್
ಗರ್ಭಿಣಿ ಹಸುವನ್ನು ಅರ್ಧ ತಿಂದು ರೈತನನ್ನು ಬೆನ್ನಟ್ಟಿದ ಹುಲಿ
ಗರ್ಭಿಣಿ ಹಸುವನ್ನು ಅರ್ಧ ತಿಂದು ರೈತನನ್ನು ಬೆನ್ನಟ್ಟಿದ ಹುಲಿ
ಸಂಘಟನೆಗೆ ಮತ್ತಷ್ಟು ಬಲ‌ ತುಂಬಲು ಕಾಂಗ್ರೆಸ್ ಪ್ಲ್ಯಾನ್: ಹೊಸ ಸಮಿತಿ
ಸಂಘಟನೆಗೆ ಮತ್ತಷ್ಟು ಬಲ‌ ತುಂಬಲು ಕಾಂಗ್ರೆಸ್ ಪ್ಲ್ಯಾನ್: ಹೊಸ ಸಮಿತಿ
ಬಿಸಿಯೂಟ ಮೆನುಗೆ ಚಿಕನ್ ಬಿರಿಯಾನಿ ಸೇರ್ಪಡೆಗೆ ತಮಿಳುನಾಡು ಸರ್ಕಾರ ಚಿಂತನೆ
ಬಿಸಿಯೂಟ ಮೆನುಗೆ ಚಿಕನ್ ಬಿರಿಯಾನಿ ಸೇರ್ಪಡೆಗೆ ತಮಿಳುನಾಡು ಸರ್ಕಾರ ಚಿಂತನೆ
ತಮ್ಮನಾಗಲು ಯೋಗ್ಯತೆಗಳಿರಬೇಕು: ಅಣ್ಣ ಎಂದ ಮಂಜನಿಗೆ ಗುನ್ನಾ ಇಟ್ಟ ಕಿಚ್ಚ
ತಮ್ಮನಾಗಲು ಯೋಗ್ಯತೆಗಳಿರಬೇಕು: ಅಣ್ಣ ಎಂದ ಮಂಜನಿಗೆ ಗುನ್ನಾ ಇಟ್ಟ ಕಿಚ್ಚ
ವಂದೇ ಮಾತರಂ ಎರಡೇ ಚರಣ ಹಾಡಿದ್ದಕ್ಕೆ ಬಿಜೆಪಿ ಶಾಸಕ ಅಸಮಾಧಾನ
ವಂದೇ ಮಾತರಂ ಎರಡೇ ಚರಣ ಹಾಡಿದ್ದಕ್ಕೆ ಬಿಜೆಪಿ ಶಾಸಕ ಅಸಮಾಧಾನ
ಬಳ್ಳಾರಿ: 2 ತಿಂಗಳಿನಿಂದ ವೇತನವಿಲ್ಲದೆ ಬಿಸಿಯೂಟ ಕಾರ್ಯಕರ್ತರ ಪರದಾಟ!
ಬಳ್ಳಾರಿ: 2 ತಿಂಗಳಿನಿಂದ ವೇತನವಿಲ್ಲದೆ ಬಿಸಿಯೂಟ ಕಾರ್ಯಕರ್ತರ ಪರದಾಟ!