
ನವದೆಹಲಿ, ಮಾರ್ಚ್ 4: ಭಾರತದ ಈಕ್ವಿಟಿ ಮಾರುಕಟ್ಟೆಯಲ್ಲಿ (Stock Market) ಕರಡಿ ಕುಣಿತ ಮುಂದುವರಿದಿದೆ. ಇಂದು ಬಿಎಸ್ಇ ಮತ್ತು ಎನ್ಎಸ್ಇಯ ಹೆಚ್ಚಿನ ಸೂಚ್ಯಂಕಗಳು ಕೆಂಪು ಬಣ್ಣಕ್ಕೆ ತಿರುಗಿವೆ. ನಿಫ್ಟಿ, ಸೆನ್ಸೆಕ್ಸ್ ಶೇ. 2ರವರೆಗೂ ಕುಸಿತ ಕಂಡಿವೆ. ಹೂಡಿಕೆದಾರರಿಗೆ ಬರೋಬ್ಬರಿ 8 ಲಕ್ಷ ಕೋಟಿ ರೂ ನಷ್ಟ ಎದುರಾಗಿದೆ. ಇರಾನ್ ಯುದ್ಧ ನಡೆಯುತ್ತಿರುವುದರಿಂದ ಷೇರು ಮಾರುಕಟ್ಟೆ ಕುಸಿತ ಅನಿರೀಕ್ಷಿತವೇನಲ್ಲ. ಭಾರತದಲ್ಲಿ ಮಾತ್ರವಲ್ಲ, ವಿಶ್ವದ ಎಲ್ಲಾ ಷೇರು ಮಾರುಕಟ್ಟೆಗಳು ಹಿನ್ನಡೆ ಕಾಣುತ್ತಿವೆ.
ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನ ಸೆನ್ಸೆಕ್ಸ್ ಸೂಚ್ಯಂಕ 1,523 ಅಂಕ ಕಳೆದುಕೊಂಡು 78,711 ಮಟ್ಟ ಮುಟ್ಟಿತ್ತು. ಬುಧವಾರದ ಟ್ರೇಡಿಂಗ್ನ ಒಂದು ಹಂತದಲ್ಲಿ ಸೆನ್ಸೆಕ್ಸ್ 78,528 ಅಂಕಗಳ ಮಟ್ಟದವರೆಗೆ ಕುಸಿದಿತ್ತು.
ಇದನ್ನೂ ಓದಿ: ಮಹಿಳೆಯ ಘೋಷಿತ ಆದಾಯ 4.81 ಲಕ್ಷ ರೂ; ಇನ್ಷೂರೆನ್ಸ್ ಕಟ್ಟಿದ್ದು 50 ಲಕ್ಷ ರೂ; ಕೋರ್ಟ್ಗೆ ಹೋಯ್ತು ಕೇಸ್
ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನ ನಿಫ್ಟಿ ಸೂಚ್ಯಂಕ 506 ಅಂಕಗಳನ್ನು ತೊಡೆದುಕೊಂಡು 24,359 ಮಟ್ಟಕ್ಕೆ ಇಳಿದಿದೆ. ಒಂದು ಹಂತದಲ್ಲಿ ಇದು 24,325 ಅಂಕಗಳಿಗೆ ಇಳಿದಿತ್ತು. 50 ಸ್ಟಾಕ್ಗಳ ಬುಟ್ಟಿಯಾದ ನಿಫ್ಟಿ, ಶೇ. 2ಕ್ಕಿಂತಲೂ ಹೆಚ್ಚು ಕುಸಿತ ಕಂಡಿದೆ. ಒಂದು ಅಂದಾಜು ಪ್ರಕಾರ ಭಾರತದ
ಗೋಲ್ಡ್ ಇಟಿಎಫ್, ಸಿಲ್ವರ್ ಇಟಿಎಫ್ಗಳೂ ಕೂಡ ಕುಸಿತ ಕಾಣುತ್ತಿವೆ. ಹೆಚ್ಚಿನ ಹೂಡಿಕೆದಾರರು ಈ ಇಟಿಎಫ್ಗಳಿಂದ ಹೂಡಿಕೆ ಹಿಂಪಡೆಯುತ್ತಿರುವ ಟ್ರೆಂಡ್ ಇದೆ. ಭಾರತದ ಷೇರು ಪೇಟೆಯ ಭಯದ ಸೂಚಕವಾಗಿರುವ ವಿಐಎಕ್ಸ್ 20ರ ಮಟ್ಟ ದಾಟುತ್ತಿದೆ. ಇದು ಹೂಡಿಕೆದಾರರು ಆತಂಕದಲ್ಲಿರುವುದನ್ನು ಸೂಚಿಸುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ