Opening Bell: ಸೆನ್ಸೆಕ್ಸ್ 950ಕ್ಕೂ ಪಾಯಿಂಟ್ಸ್, ನಿಫ್ಟಿ 291 ಪಾಯಿಂಟ್ಸ್ನಷ್ಟು ಭಾರೀ ಕುಸಿತ
ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಫೆಬ್ರವರಿ 11ನೇ ತಾರೀಕಿನ ಶುಕ್ರವಾರದ ಆರಂಭದ ವಹಿವಾಟಿನಲ್ಲಿ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ. ಇಳಿಕೆ, ಏರಿಕೆ ಕಂಡ ಷೇರುಗಳ ವಿವರ ಇಲ್ಲಿದೆ.
ಭಾರತದ ಷೇರು ಮಾರುಕಟ್ಟೆ (Stock Market) ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಫೆಬ್ರವರಿ 11ನೇ ತಾರೀಕಿನ ಶುಕ್ರವಾರದ ಬೆಳಗಿನ ವಹಿವಾಟಿನಲ್ಲಿ ಭಾರೀ ಕುಸಿತ ಕಂಡಿದೆ. ಸೆನ್ಸೆಕ್ಸ್ 908.91 ಪಾಯಿಂಟ್ಸ್ ಅಥವಾ ಶೇ 1.54ರಷ್ಟು ಕೆಳಗಿಳಿದು ವಹಿವಾಟು ನಡೆಸುತ್ತಿತ್ತು. ಇನ್ನು ನಿಫ್ಟಿ 270.50 ಪಾಯಿಂಟ್ಸ್ ಅಥವಾ ಶೇ 1.54ರಷ್ಟು ಕುಸಿದು, 17,335 ಪಾಯಿಂಟ್ಸ್ನಲ್ಲಿ ವ್ಯವಹಾರ ಮಾಡುತ್ತಿತ್ತು. ನಿಫ್ಟಿ ಬ್ಯಾಂಕ್ ಸೂಚ್ಯಂಕ 502.70 ಪಾಯಿಂಟ್ಸ್ ಅಥವಾ ಶೇ 1.29ರಷ್ಟು ಕುಸಿದು, 38,508.25 ಪಾಯಿಂಟ್ಸ್ನೊಂದಿಗೆ ಷೇರು ಮಾರುಕಟ್ಟೆಯಲ್ಲಿ ವಹಿವಾಟು ನಡೆಸುತ್ತಿತ್ತು. ನಿಫ್ಟಿ ಮಾಹಿತಿ ತಂತ್ರಜ್ಞಾನ ಸೂಚ್ಯಂಕವು 919.55 ಪಾಯಿಂಟ್ಸ್ ಅಥವಾ ಶೇ 2.60ರಷ್ಟು ನೆಲ ಕಚ್ಚಿತ್ತು. ನಿಫ್ಟಿ ಲೋಹದ ಸೂಚ್ಯಂಕವು 32.50 ಪಾಯಿಂಟ್ಸ್ ಅಥವಾ ಶೇ 0.54ರಷ್ಟು ಕುಸಿದಿತ್ತು.
ಮದುವೆ ಹಾಗೂ ಸಮಾರಂಭಗಳ ಬಟ್ಟೆ ಸೆಗ್ಮೆಂಟ್ಗಳ ಭಾರತದ ಅತಿದೊಡ್ಡ ಕಂಪೆನಿಯಾದ ವೇದಾಂತ್ ಫ್ಯಾಷನ್ಸ್ ಐಪಿಒ ಷೇರು ವಿತರಣೆ ಫೆಬ್ರವರಿ 11ನೇ ತಾರೀಕಿನಂದು ವಿತರಣೆ ಮಾಡಲಿದೆ. ಹೂಡಿಕೆದಾರರು ಎರಡು ಬಗೆಯಲ್ಲಿ ತಮ್ಮ ವಿತರಣೆ ಸ್ಥಿತಿಯನ್ನು ಪರೀಕ್ಷಿಸಿಕೊಳ್ಳಬಹುದು. ಐಪಿಒ ರಿಜಿಸ್ಟ್ರಾರ್ ವೆಬ್ಸೈಟ್ ಅಥವಾ ಬಿಎಸ್ಇ ವೆಬ್ಸೈಟ್ನಲ್ಲಿ ಪರೀಕ್ಷಿಸಬಹುದು. ಇನ್ನು ಭಾರತದ ರೂಪಾಯಿ ಮೌಲ್ಯವು ಡಾಲರ್ ವಿರುದ್ಧ ಶುಕ್ರವಾರ 45 ಪೈಸೆ ಇಳಿಕೆಯಲ್ಲಿ ಆರಂಭವಾಗಿದ್ದು, ಈ ಹಿಂದಿನ ಸೆಷನ್ನಲ್ಲಿ 74.94ಕ್ಕೆ ಕೊನೆಗೊಂಡಿತ್ತು. ಈ ಲೇಖನ ಸಿದ್ಧವಾಗುವ ಹೊತ್ತಿಗೆ ಸೆನ್ಸೆಕ್ಸ್ 970 ಪಾಯಿಂಟ್ಸ್ಗೂ ಹೆಚ್ಚು, ನಿಫ್ಟಿ 291 ಪಾಯಿಂಟ್ಸ್ ನೆಲ ಕಚ್ಚಿತ್ತು.
ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ
ಐಒಸಿ ಶೇ 1.21
ಬಿಪಿಸಿಎಲ್ ಶೇ 0.43
ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ
ಗ್ರಾಸಿಮ್ ಶೇ -3.14
ಇನ್ಫೋಸಿಸ್ ಶೇ -2.97
ಟೆಕ್ ಮಹೀಂದ್ರಾ ಶೇ -2.89
ಬ್ರಿಟಾನಿಯಾ ಶೇ -2.68
ನೆಸ್ಟ್ಲೆ ಶೇ -2.55
ಇದನ್ನೂ ಓದಿ: Adani Wilmar Listing: ಅದಾನಿ ವಿಲ್ಮರ್ ಶೇ 4ರ ರಿಯಾಯಿತಿಗೆ ಷೇರು ಮಾರ್ಕೆಟ್ನಲ್ಲಿ ಲಿಸ್ಟಿಂಗ್