India’s Internet Economy: 2030ರ ವೇಳೆಗೆ ಭಾರತದ ಇಂಟರ್​ನೆಟ್​ ಆರ್ಥಿಕತೆ 75.31 ಲಕ್ಷ ಕೋಟಿಗೆ

ಭಾರತದ ಇಂಟರ್​ನೆಟ್​ ಆರ್ಥಿಕತೆಯು 2030ರ ಹೊತ್ತಿಗೆ 1 ಲಕ್ಷ ಕೋಟಿ ಡಾಲರ್ ಆಗುವ ಹಾದಿಯಲ್ಲಿದೆ ಎಂದು ಕನ್ಸಲ್ಟಿಂಗ್ ಸಂಸ್ಥೆಯೊಂದು ತಿಳಿಸಿದೆ.

India's Internet Economy: 2030ರ ವೇಳೆಗೆ ಭಾರತದ ಇಂಟರ್​ನೆಟ್​ ಆರ್ಥಿಕತೆ 75.31 ಲಕ್ಷ ಕೋಟಿಗೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Feb 11, 2022 | 2:45 PM

ಕನ್ಸಲ್ಟಿಂಗ್ ಸಂಸ್ಥೆಯಾದ ರೆಡ್‌ಸೀರ್‌ನ ಇತ್ತೀಚಿನ ವರದಿ ಪ್ರಕಾರ, ವರ್ಷದಿಂದ ವರ್ಷಕ್ಕೆ ಶೇ 50ರಷ್ಟು ಏರಿಕೆ ಆಗುತ್ತಿದ್ದು, ಭಾರತದ ಇಂಟರ್​ನೆಟ್ ಆರ್ಥಿಕತೆಯು (Internet Economy) 2030ರ ವೇಳೆಗೆ 1 ಟ್ರಿಲಿಯನ್ ಡಾಲರ್ (ಭಾರತದ ರೂಪಾಯಿ ಲೆಕ್ಕದಲ್ಲಿ 75,31,200 ಕೋಟಿ) ತಲುಪಲು ಸಿದ್ಧವಾಗಿದೆ. “1 ಟ್ರಿಲಿಯನ್ ಡಾಲರ್ ಗ್ರಾಹಕ ಇಂಟರ್​ನೆಟ್ ಆರ್ಥಿಕತೆಗೆ ಭಾರತದ ಪ್ರಯಾಣವು ಇ-ಟೈಲಿಂಗ್, ಇ-ಆರೋಗ್ಯ, ಆಹಾರ ತಂತ್ರಜ್ಞಾನ, ಆನ್‌ಲೈನ್ ಮೊಬಿಲಿಟಿ ಮತ್ತು ಶೀಘ್ರ ವಾಣಿಜ್ಯದಂತಹ (quick commerce) ಬಹು ಇಂಟರ್​ನೆಟ್ ವಲಯಗಳ ವಿಶಿಷ್ಟ ಕಥೆಯಾಗಿದ್ದು, ಇದು ಬಳಕೆ ನೇತೃತ್ವ ಬೆಳವಣಿಗೆಯ ಎಂಜಿನ್​ಗೆ ಬಲವಾದ ಅಡಿಪಾಯವನ್ನು ಸೃಷ್ಟಿಸಲು ಒಟ್ಟಿಗೆ ಸೇರುತ್ತದೆ. ಡಿಜಿಟಲ್-ಫಸ್ಟ್​ನಿಂದ ಡಿಜಿಟಲ್-ಫಾರ್ವರ್ಡ್​ಗೆ ನಡೆಯುತ್ತಿರುವ ಪ್ರಯಾಣವು ಅನೇಕ ಇಂಟರ್​ನೆಟ್ ಕ್ಷೇತ್ರಗಳು ಕೊವಿಡ್ ನಂತರದ ಬಲವಾದ ವೇಗವನ್ನು ತೋರಿಸಿದ ಪರಿಣಾಮವಾಗಿದೆ,” ಎಂದು ರೆಡ್‌ಸೀರ್‌ನ ಸಿಇಒ ಮತ್ತು ಸಂಸ್ಥಾಪಕ ಅನಿಲ್ ಕುಮಾರ್ ಹೇಳಿದರು.

“ಹೂಡಿಕೆದಾರರು ಎರಡನೇ ಆಲೋಚನೆಯೇ ಮಾಡದೆ ಭಾರತದ ಸುವರ್ಣ ಅವಕಾಶವನ್ನು ಗುರುತಿಸುತ್ತಿದ್ದಾರೆ. ಕೇವಲ 2021ನೇ ಇಸವಿಯಲ್ಲಿ 4000 ಕೋಟಿ ಡಾಲರ್​ಗೂ ಹೆಚ್ಚು ಹಣ ಮತ್ತು 42 ಹೊಸ ಯುನಿಕಾರ್ನ್‌ಗಳು ಹುಟ್ಟಿವೆ. ಇದು ಪ್ರಾಥಮಿಕವಾಗಿ ದೇಶದ ಆರ್ಥಿಕತೆಯು ಹೆಚ್ಚು ಕೌಶಲ ಆಧಾರಿತ ಮತ್ತು ಸೇವೆ ಆಧಾರಿತವಾಗಿರುವುದರಿಂದ ಹೆಚ್ಚಿನ ಉದ್ಯೋಗಗಳು ನುರಿತ ಕೆಲಸಗಾರರಿಗಾಗಿ ರಚಿಸಲಾಗುತ್ತಿದ್ದು, ಇದು ಹೂಡಿಕೆದಾರರಿಗೆ ಪ್ರಮುಖ ಆಕರ್ಷಣೆಯಾಗಿದೆ.” ಬೆಳೆಯುತ್ತಿರುವ ಇಂಟರ್​ನೆಟ್ ಬಳಕೆ ದರಗಳು, ಹೆಚ್ಚಿನ ವೇಗದ ಇಂಟರ್​ನೆಟ್‌ಗೆ ಪ್ರವೇಶ ಮತ್ತು ಆನ್‌ಲೈನ್ ಶಾಪಿಂಗ್ ಹಾಗೂ ಡಿಜಿಟಲ್ ಕಂಟೆಂಟ್ ಬಳಕೆಗೆ ಹೆಚ್ಚುತ್ತಿರುವ ಬೇಡಿಕೆ ಮಿಶ್ರಣದಿಂದ ಉತ್ತೇಜಿತ ಆಗಿರುವ ಭಾರತವು ವಿಭಿನ್ನ ಸಾಮಾಜಿಕ ಅಗತ್ಯಗಳೊಂದಿಗೆ ಅತ್ಯಂತ ವಿಭಿನ್ನವಾದ, ವೈವಿಧ್ಯಮಯ ಜನಸಂಖ್ಯೆ ನೆಲೆಯಾಗಿದೆ. ಈ ಡಿಜಿಟಲ್ ಗ್ರಾಹಕರ ನೆಲೆಯನ್ನು ವರದಿಯಲ್ಲಿ ಮೂರು ಪ್ರಮುಖ ವರ್ಗಗಳಾಗಿ ವರ್ಗೀಕರಿಸಲಾಗಿದೆ.

ವಾರ್ಷಿಕ ಆದಾಯ 5,000ದಿಂದ 12,000 ಡಾಲರ್ ಮೊದಲನೆಯದು ಮೆಟ್ರೋಪಾಲಿಟನ್ ಕೇಂದ್ರಿತ, 12,000 ಅಮೆರಿಕನ್ ಡಾಲರ್ ಆದಾಯವನ್ನು ಹೊಂದಿರುವ ಮತ್ತು ಉತ್ತಮ-ಗುಣಮಟ್ಟದ ಸೇವೆಗಳನ್ನು ನಿರೀಕ್ಷಿಸುವ ಸುಮಾರು 80ರಿಂದ 100 ಮಿಲಿಯನ್ ವ್ಯಕ್ತಿಗಳ ಕ್ವಾಸಿ-ಫಸ್ಟ್ ವಿಶ್ವ ಸಮೂಹವಾಗಿದೆ. ಎರಡನೆಯದು ತುಲನಾತ್ಮಕವಾಗಿ ಮಹತ್ವಾಕಾಂಕ್ಷೆಯ ಮತ್ತು ಬಜೆಟ್ ಉದ್ದೇಶಿತ ಸುಮಾರು 100ರಿಂದ 200 ಮಿಲಿಯನ್ ಸಮೂಹದಲ್ಲಿ ಇದು ವಾರ್ಷಿಕ ಆದಾಯ 5,000ದಿಂದ 12,000 ಡಾಲರ್ ಹೊಂದಿದೆ. 400ರಿಂದ 500 ಮಿಲಿಯನ್ ಜನಸಂಖ್ಯೆಯು ಡಿಜಿಟಲ್ ಮಧ್ಯಸ್ಥಿಕೆ ಕೊನೆಯ ಅಥವಾ ಹೆಚ್ಚು ಅಗತ್ಯವಾಗಿದ್ದು, ಇದು ಗ್ರಾಮೀಣ ಮತ್ತು ಶ್ರೇಣಿ-2 ವಿಭಾಗದಲ್ಲಿ ಹರಡಿರುವ ವಾರ್ಷಿಕ ಆದಾಯ 5,000 ಡಾಲರ್​ಗಿಂತ ಕಡಿಮೆಯಾಗಿದೆ. ಈ ಜನಸಂಖ್ಯಾಶಾಸ್ತ್ರ ವರದಿಯು “ಆಳವಾದ ವರ್ಟಿಕಲ್ ಸಮಸ್ಯೆ-ಪರಿಹರಿಸುವ” ತೀವ್ರ ಅಗತ್ಯದ ಉದ್ದೇಶವನ್ನು ಹೊಂದಿದೆ.

ಸ್ಥಳೀಯ ಭಾಷೆಯ ಆದ್ಯತೆ ನೀಡುವ ಅಪ್ಲಿಕೇಷನ್‌ಗಳು, ವರ್ಟಿಕಲ್ ಸೂಪರ್ ಅಪ್ಲಿಕೇಷನ್‌ಗಳು ಮತ್ತು ಓಮ್ನಿಚಾನಲ್ ವಿಧಾನವು ಡಿಜಿಟಲ್ ಮುಖ್ಯವಾಹಿನಿಗೆ ಸೇರಲು ಮೂರನೇ ಸಮೂಹಕ್ಕೆ ಹೆಚ್ಚು ಅವಕಾಶ ನೀಡುತ್ತಿದೆ ಎಂಬುದನ್ನು ವರದಿಯಲ್ಲಿ ಗಮನಿಸಲಾಗಿದೆ. ಭಾರತದ ಹೊಸ ಡಿಜಿಟಲ್ ಕ್ರಾಂತಿಯು B2B (ಬಿಜಿನೆಸ್ 2 ಬಿಜಿನೆಸ್) ಜಾಗದಲ್ಲಿ ಬೆಳೆಯುತ್ತಿರುವ ತಂತ್ರಜ್ಞಾನದ ಅಳವಡಿಕೆ ಮತ್ತು ವಿಸ್ತರಿಸುತ್ತಿರುವ ಹಾಗೂ ಮೆಚ್ಯೂರಿಂಗ್ ಇಂಟರ್​ನೆಟ್ ಗ್ರಾಹಕರ ನೆಲೆಯಿಂದ ಮತ್ತಷ್ಟು ಸಕ್ರಿಯಗೊಳಿಸಲಾಗಿದೆ. ಪ್ರಮುಖವಾದ ಇಂಟರ್​ನೆಟ್ ಆರ್ಥಿಕತೆಗಳಾದ ಇ-ಟೈಲ್, ಇಹೆಲ್ತ್, ಫುಡ್‌ಟೆಕ್, ಆನ್‌ಲೈನ್ ಮೊಬಿಲಿಟಿ ಮತ್ತು ಬಿಲ್‌ಪೇ ಮತ್ತು ರೀಚಾರ್ಜ್, ಕೊವಿಡ್ ಸಮಯದಲ್ಲಿ ತೀಕ್ಷ್ಣವಾದ ಕೆಳಮುಖವಾಗಿ ಸಾಗುವಾಗ ಅನುಭವಿಸಿದ ಪ್ರಮುಖ ಇಂಟರ್​ನೆಟ್ ಆರ್ಥಿಕತೆಗಳು ಹೆಚ್ಚು ಬಲವಾಗಿ ಹೊರಹೊಮ್ಮಿದವು ಎಂಬುದು ಗಮನಾರ್ಹವಾಗಿದೆ.

SaaS ಮಾರುಕಟ್ಟೆ ಗಾತ್ರ 8 ಶತಕೋಟಿ ಡಾಲರ್​ ಹೆಚ್ಚುವರಿಯಾಗಿ, B2B ಜಾಗದಲ್ಲಿ ಟೆಕ್ ಅಳವಡಿಕೆ ಏರಿಕೆಯು ಭಾರತದ ಹೊಸ ಡಿಜಿಟಲ್ ಕ್ರಾಂತಿಯನ್ನು ಉತ್ತೇಜಿಸುತ್ತಿದೆ. ವರದಿಯು ಭಾರತದ ಬೆಳವಣಿಗೆ ಬಗ್ಗೆ ಅಪಾರವಾದ ಆಶಾವಾದವನ್ನು ವ್ಯಕ್ತಪಡಿಸಿದೆ. ಹಣಕಾಸು ವರ್ಷ 2021ರಲ್ಲಿ ಸುಮಾರು 3.5 ಶತಕೋಟಿ ಡಾಲರ್​ನಷ್ಟಿದ್ದ SaaS ಮಾರುಕಟ್ಟೆ ಗಾತ್ರವು ಹಣಕಾಸು ವರ್ಷ 2026ರ ವೇಳೆಗೆ CAGR ಶೇ 18ರ ದರದಲ್ಲಿ 8 ಶತಕೋಟಿ ಡಾಲರ್​ ಅನ್ನು ಮುಟ್ಟುವ ನಿರೀಕ್ಷೆಯಿದೆ. ಇವೆಲ್ಲದರ ಜತೆಗೆ ಕಾರ್ಯನಿರ್ವಹಿಸುವುದು ವೇಗವುಳ್ಳ, ವಿಶ್ವಾಸಾರ್ಹ ಮತ್ತು ಪ್ರಜಾಪ್ರಭುತ್ವದ ಲಾಜಿಸ್ಟಿಕ್ ಬೆನ್ನೆಲುಬನ್ನು ಅಭಿವೃದ್ಧಿಪಡಿಸುವುದು.

ಇದು ಇನ್ನು ಮುಂದೆ ಸಂಕೀರ್ಣ ಪೂರೈಕೆ ಸರಪಳಿಗಳು (Supply chain) ಮತ್ತು ಆಳವಾದ ಪಾಕೆಟ್‌ಗಳ ಮೇಲೆ ಅವಲಂಬಿತವಾಗಿಲ್ಲ ಮತ್ತು ಮೂಲ, ಸಾಂಪ್ರದಾಯಿಕ ವೆಚ್ಚಗಳ ಒಂದು ಭಾಗದಲ್ಲಿ ಪ್ರವೇಶಿಸಬಹುದು. “2025ರ ವೇಳೆಗೆ ಪೈಪ್‌ಲೈನ್‌ನಲ್ಲಿ 70 ಟೆಕ್ ಐಪಿಒಗಳೊಂದಿಗೆ ಡಿಜಿಟಲೈಸೇಷನ್, ಸ್ಟಾರ್ಟ್‌ಅಪ್‌ಗಳಿಗಾಗಿ ಸರ್ಕಾರಿ ಉಪಕ್ರಮಗಳು ಹೆಚ್ಚಿನ ಈಕ್ವಿಟಿಯೊಂದಿಗೆ ಸ್ಥಳೀಯ ಹೂಡಿಕೆದಾರರನ್ನು ಹೆಚ್ಚಿಸುವುದು ಮತ್ತು ಟೆಕ್ ಕಂಪೆನಿಗಳಲ್ಲಿ ಖಾಸಗಿ ಈಕ್ವಿಟಿ ನಿಧಿಗಳು ಮತ್ತು ಪ್ರಸ್ತುತ ಆಶಾದಾಯಕ ಟೆಕ್ ಲ್ಯಾಂಡ್‌ಸ್ಕೇಪ್‌ನಿಂದ ಪ್ರೇರಿತವಾಗಿದೆ. ಹಣಕಾಸು ವರ್ಷ 2021ರಲ್ಲಿ ಭಾರತದ ಇಂಟರ್​ನೆಟ್‌ನಿಂದ 150ರಿಂದ 200 ಮಿಲಿಯನ್ ಡಾಲರ್ ಲಾಭದೊಂದಿಗೆ ಈಗಾಗಲೇ ಲಾಭದಾಯಕವಾಗಿದೆ,” ಎಂದು ಅದು ಉಲ್ಲೇಖಿಸಿದೆ.

ಆದರೆ, ಪ್ರಮುಖ ಐಪಿಒಗಳು ತಮ್ಮ ಮಾರುಕಟ್ಟೆಯ ಪದಾರ್ಪಣೆ ಸಮಯದಲ್ಲಿ ನಿರಾಶಾದಾಯಕವಾಗಿ ಇದ್ದುದರಿಂದ ಮತ್ತು ಅವುಗಳ ನಿರಂತರ ನಿರಾಶಾದಾಯಕ ಪ್ರದರ್ಶನದ ಹಿನ್ನೆಲೆಯಲ್ಲಿ ಇದು ಸ್ವಲ್ಪಮಟ್ಟಿಗೆ ಹಾನಿಗೊಳಗಾಗಿದೆ. ಉದಾಹರಣೆಗೆ, 2021ರಲ್ಲಿ ತನ್ನ ಉತ್ಸಾಹವಿಲ್ಲದ ಐಪಿಒ ಅನ್ನು ಪ್ರಾರಂಭಿಸಿದ ಪೇಟಿಎಂ, ಈ ವರ್ಷದಲ್ಲಿ ಇಲ್ಲಿಯ ತನಕ ಶೇಕಡಾ 30.57ರಷ್ಟು ನೆಗೆಟಿವ್ ಯೀಲ್ಡ್ ನೀಡಿದೆ. ಅದೇ ರೀತಿ, ಝೊಮ್ಯಾಟೋ ಕೂಡ ನೆಗೆಟಿವ್ ರಿಟರ್ನ್ ನೀಡಿದೆ. ಶೇಕಡಾ 34.81ರಷ್ಟು ಕುಸಿದಿದೆ. ಕಳೆದ ವರ್ಷ ಅದ್ಭುತವಾದ ಪದಾರ್ಪಣೆ ಮಾಡಿದ್ದ ನೈಕಾ (Nykaa) ಸಹ ನೆಗೆಟಿವ್ ಆದಾಯ ಹೊಂದಿದೆ. 2022ರ ಜನವರಿಯಿಂದ ಇಲ್ಲಿಯವರೆಗೆ ಶೇ 19.96ರಷ್ಟು ನೆಗೆಟಿವ್ ರಿಟರ್ನ್ ಹೊಂದಿದೆ.

ಇದನ್ನೂ ಓದಿ: ದೇಶದ ಆರ್ಥಿಕತೆಗೆ ಭವಿಷ್ಯದಲ್ಲಿ ಕರ್ನಾಟಕದ ಕೊಡುಗೆ ದೊಡ್ಡದಾಗಿರಲಿದೆ : ಸಿಎಂ ಬಸವರಾಜ ಬೊಮ್ಮಾಯಿ

ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್