ಆ. 15ಕ್ಕೆ ಷೇರು ಮಾರುಕಟ್ಟೆಗೆ ರಜೆಯಾ? ಇಲ್ಲಿದೆ ಎನ್​ಎಸ್​ಇ, ಬಿಎಸ್​ಇ ರಜಾ ದಿನಗಳ ಪಟ್ಟಿ

Stock market holidays list 2024: ಭಾರತದ ಷೇರು ವಿನಿಮಯ ಕೇಂದ್ರಗಳಾದ ಬಿಎಸ್​ಇ ಮತ್ತು ಎನ್​ಎಸ್​ಇ ಆಗಸ್ಟ್ 15, ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಜೆ ಹೊಂದಿರುತ್ತವೆ. 2024ರಲ್ಲಿ ಷೇರು ಮಾರುಕಟ್ಟೆಗೆ ಇರುವ 14 ಅಧಿಕೃತ ರಜೆಗಳಲ್ಲಿ ಇದೂ ಒಂದು. ಇದರ ಬಳಿಕ ಗಾಂಧಿ ಜಯಂತಿ, ಗುರುನಾನಕ್ ಜಯಂತಿ, ದೀಪಾವಳಿ ಮತ್ತು ಕ್ರಿಸ್ಮಸ್ ಹಬ್ಬಗಳಿಗೆ ಷೇರು ಮಾರುಕಟ್ಟೆ ರಜೆ ಹೊಂದಿರುತ್ತದೆ.

ಆ. 15ಕ್ಕೆ ಷೇರು ಮಾರುಕಟ್ಟೆಗೆ ರಜೆಯಾ? ಇಲ್ಲಿದೆ ಎನ್​ಎಸ್​ಇ, ಬಿಎಸ್​ಇ ರಜಾ ದಿನಗಳ ಪಟ್ಟಿ
ಷೇರು ಮಾರುಕಟ್ಟೆ
Follow us
|

Updated on: Aug 14, 2024 | 1:24 PM

ನವದೆಹಲಿ, ಆಗಸ್ಟ್ 14: ನಾಳೆ ಗುರುವಾರ (ಆ. 15) ಸ್ವಾತಂತ್ರ್ಯ ದಿನಾಚರಣೆ ಇದೆ. ಭಾರತದ ಷೇರು ಮಾರುಕಟ್ಟೆಗೆ ಅಂದು ರಜೆ ಇದೆ. ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ ಎರಡೂ ಕೂಡ ಬಂದ್ ಆಗಿರಲಿವೆ. ಷೇರು ಮಾರುಕಟ್ಟೆಯ ಕೆಲವೇ ರಜಾ ದಿನಗಳಲ್ಲಿ ಆಗಸ್ಟ್ 15ರದ್ದೂ ಒಂದು. 2024ರಲ್ಲಿ ಶನಿವಾರ ಮತ್ತು ಭಾನುವಾರ ಹೊರತುಪಡಿಸಿ 14 ಸಾರ್ವತ್ರಿಕ ರಜಾ ದಿನಗಳು ಷೇರುಪೇಟೆಗೆ ಇವೆ. ಈ ಆಗಸ್ಟ್ ತಿಂಗಳಲ್ಲಿ ಇದೊಂದೇ ರಜೆ ಇರುವುದು. ಸೆಪ್ಟಂಬರ್​ನಲ್ಲಿ ಯಾವ ರಜೆಯೂ ಇಲ್ಲ. ನಂತರ ರಜೆ ಸಿಗುವುದು ಅಕ್ಟೋಬರ್ ತಿಂಗಳಲ್ಲಿ, ನವೆಂಬರ್ ತಿಂಗಳಲ್ಲಿ ಮತ್ತು ಡಿಸೆಂಬರ್ ತಿಂಗಳಲ್ಲಿ.

ಷೇರು ಮಾರುಕಟೆಯಲ್ಲಿ ಡಿಸೆಂಬರ್ 31ರವರೆಗೂ ಇರುವ ರಜಾ ದಿನಗಳು

  • ಆಗಸ್ಟ್ 15: ಸ್ವಾತಂತ್ರ್ಯ ದಿನಾಚರಣೆ
  • ಅಕ್ಟೋಬರ್ 2: ಗಾಂಧಿ ಜಯಂತಿ
  • ನವೆಂಬರ್ 1: ದೀಪಾವಳಿ
  • ನವೆಂಬರ್ 15: ಗುರುನಾನಕ್ ಜಯಂತಿ
  • ಡಿಸೆಂಬರ್ 25: ಕ್ರಿಸ್ಮಸ್ ಹಬ್ಬ

ಈ ಮೇಲಿನವು ಸಾರ್ವತ್ರಿಕ ರಜಾ ದಿನಗಳು. ಇವುಗಳ ಜೊತೆಗೆ ಪ್ರತೀ ವಾರ ಶನಿವಾರ ಮತ್ತು ಭಾನುವಾರ ದಿನಗಳಂದು ಷೇರು ಮಾರುಕಟ್ಟೆಯಲ್ಲಿ ವ್ಯವಹಾರಗಳು ನಡೆಯುವುದಿಲ್ಲ.

ಇದನ್ನೂ ಓದಿ: ತೆರಿಗೆ ಹೇರುವ ಆಸೆ ನಂಗೂ ಇಲ್ಲ, ಆದರೆ ಸರ್ಕಾರ ನಡೆಸಲು ಹಣ ಬೇಕಲ್ಲ: ನಿರ್ಮಲಾ ಸೀತಾರಾಮನ್

ಹೊಯ್ದಾಡುತ್ತಿರುವ ಷೇರು ಮಾರುಕಟ್ಟೆ

ಲೋಕಸಭಾ ಚುನಾವಣೆಯ ಫಲಿತಾಂಶ ಬಂದಂದಿನಿಂದ ಭಾರತದ ಷೇರು ಮಾರುಕಟ್ಟೆ ತೀವ್ರ ತರದಲ್ಲಿ ಹೊಯ್ದಾಡುತ್ತಿದೆ. ಸರ್ಕಾರದ ಬಲ, ಜಾಗತಿಕ ವಿದ್ಯಮಾನ ಇತ್ಯಾದಿ ನಾನಾ ಕಾರಣಗಳು ಮಾರುಕಟ್ಟೆಯನ್ನು ಪ್ರಭಾವಿಸುತ್ತಿವೆ. ನಿನ್ನೆ ಮಂಗಳವಾರ ಜಾಗತಿಕವಾಗಿ ಷೇರು ಮಾರುಕಟ್ಟೆಗಳು ಸಕಾರಾತ್ಮಕವಾಗಿ ಇದ್ದರೂ ಭಾರತದಲ್ಲಿ ಮಾತ್ರ ಹಿನ್ನಡೆ ಆಗಿದೆ. ಇವತ್ತೂ ಕೂಡ ಈ ಹೊಯ್ದಾಟ ಮುಂದುವರಿದಿದೆ.

ನಾಳೆ ಷೇರು ಮಾರುಕಟ್ಟೆಗೆ ಬಿಡುವಾಗಿದ್ದು, ಶುಕ್ರವಾರ ಮತ್ತೆ ತೆರೆಯುತ್ತದೆ. ಅದಾದ ಬಳಿಕ ಎರಡು ದಿನ ರಜೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
VIDEO: ಎಲ್ಲಾ ಮಸಾಲೆಗೆ ವಿರಾಟ್ ಕೊಹ್ಲಿ-ಗೌತಮ್ ಗಂಭೀರ್ ಬ್ರೇಕ್..!
VIDEO: ಎಲ್ಲಾ ಮಸಾಲೆಗೆ ವಿರಾಟ್ ಕೊಹ್ಲಿ-ಗೌತಮ್ ಗಂಭೀರ್ ಬ್ರೇಕ್..!
ಜನ್ಮದಿನದಂದು ಹೇಗಿತ್ತು ನೋಡಿ ಉಪೇಂದ್ರ ಮನೆ ಮುಂದೆ ಫ್ಯಾನ್ಸ್​ ಸಂಭ್ರಮ
ಜನ್ಮದಿನದಂದು ಹೇಗಿತ್ತು ನೋಡಿ ಉಪೇಂದ್ರ ಮನೆ ಮುಂದೆ ಫ್ಯಾನ್ಸ್​ ಸಂಭ್ರಮ
CPL 2024: ಕಾರ್ನ್​ವಾಲ್ ಕಮಾಲ್: ರಾಯಲ್ಸ್​ಗೆ ಭರ್ಜರಿ ತಂದುಕೊಟ್ಟ ರಹ್​ಕೀಮ್
CPL 2024: ಕಾರ್ನ್​ವಾಲ್ ಕಮಾಲ್: ರಾಯಲ್ಸ್​ಗೆ ಭರ್ಜರಿ ತಂದುಕೊಟ್ಟ ರಹ್​ಕೀಮ್
‘ಬೇಸರ ಆಗೇ ಆಗುತ್ತದೆ’; ದರ್ಶನ್ ಕೇಸ್ ಬಗ್ಗೆ ಉಪೇಂದ್ರ ಮಾತು  
‘ಬೇಸರ ಆಗೇ ಆಗುತ್ತದೆ’; ದರ್ಶನ್ ಕೇಸ್ ಬಗ್ಗೆ ಉಪೇಂದ್ರ ಮಾತು  
ಈ ರಾಶಿಯವರು ಅಪರಿಚಿತ ವ್ಯಕ್ತಿಯಿಂದ ಹೆದರಿ ಸಂಪತ್ತು ಕಳೆದುಕೊಳ್ಳಲಿದ್ದೀರಿ
ಈ ರಾಶಿಯವರು ಅಪರಿಚಿತ ವ್ಯಕ್ತಿಯಿಂದ ಹೆದರಿ ಸಂಪತ್ತು ಕಳೆದುಕೊಳ್ಳಲಿದ್ದೀರಿ
ಮಕ್ಕಳು ಸೀನಿದಾಗ ಚಿರಂಜೀವಿ ಚಿರಂಜೀವಿ ಅಂತ ಯಾಕೆ ಅನ್ನಬೇಕು?
ಮಕ್ಕಳು ಸೀನಿದಾಗ ಚಿರಂಜೀವಿ ಚಿರಂಜೀವಿ ಅಂತ ಯಾಕೆ ಅನ್ನಬೇಕು?