
ನವದೆಹಲಿ, ಅಕ್ಟೋಬರ್ 15: ಮೊಬೈಲ್ ಬಳಕೆದಾರರಿಗೆ ಬರುವ ಅಜ್ಞಾತ ಅಥವಾ ಸ್ಪ್ಯಾಮ್ ಕರೆಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ದೂರಸಂಚಾರ ಇಲಾಖೆಯ (DoT) ನಿರ್ದೇಶನದಂತೆ, 2026ರ ನವೆಂಬರ್ 1 ರಿಂದ ದೇಶಾದ್ಯಂತ ‘ಕಾಲಿಂಗ್ ನೇಮ್ ಪ್ರೆಸೆಂಟೇಶನ್’ (CNAP – Calling Name Presentation) ವ್ಯವಸ್ಥೆಯು ಕಡ್ಡಾಯವಾಗಿ ಜಾರಿಗೆ ಬರಲಿದೆ.
ಮೊಬೈಲ್ ಸ್ಕ್ರೀನ್ ಮೇಲೆ ಕೇವಲ ಫೋನ್ ನಂಬರ್ ಮಾತ್ರವಲ್ಲದೆ, ಆ ಕರೆ ಮಾಡುವವರ ಅಧಿಕೃತ ಹೆಸರೂ ಸಹ ನೇರವಾಗಿ ಕಾಣಿಸಿಕೊಳ್ಳಲಿದೆ. ಸಿಮ್ ಕಾರ್ಡ್ ಪಡೆಯುವಾಗ (KYC ದಾಖಲೆಗಳಲ್ಲಿ) ವ್ಯಕ್ತಿಯು ನೀಡಿರುವ ನೋಂದಾಯಿತ ಹೆಸರನ್ನು ಟೆಲಿಕಾಂ ಆಪರೇಟರ್ಗಳ ಡೇಟಾಬೇಸ್ನಿಂದ ಪಡೆದು ಇದು ಪ್ರದರ್ಶಿಸುತ್ತದೆ.
ನಿಮ್ಮ ಮೊಬೈಲ್ನಲ್ಲಿ ಈಗಾಗಲೇ ನಂಬರ್ ಸೇವ್ ಆಗಿದ್ದರೆ, ನಿಮ್ಮ ಕಾಂಟ್ಯಾಕ್ಟ್ನಲ್ಲಿರುವ ಹೆಸರೇ ಕಾಣಿಸುತ್ತದೆ. ನಂಬರ್ ಸೇವ್ ಆಗಿಲ್ಲದಿದ್ದರೆ, ದೇಶಿ ಕರೆಗಳಿಗಾದರೆ ಟೆಲಿಕಾಂ ಆಪರೇಟರ್ ದಾಖಲೆಗಳಲ್ಲಿರುವ ಆ ವ್ಯಕ್ತಿಯ ಅಧಿಕೃತ ಹೆಸರು ಸ್ಕ್ರೀನ್ ಮೇಲೆ ಮೂಡುತ್ತದೆ.
ಇದನ್ನೂ ಓದಿ: ಸಣ್ಣ ವ್ಯಾಪಾರಿಗಳ ಗಮನಕ್ಕೆ; ವಾಟ್ಸಾಪ್ ಮೂಲಕ ವ್ಯವಹಾರ ವೃದ್ಧಿಸುವ ಸರಳ ಸೂತ್ರಗಳು
ಸದ್ಯಕ್ಕೆ ಇದು 4G ಮತ್ತು 5G ಸೇರಿದಂತೆ ಉನ್ನತ ತಲೆಮಾರಿನ ಮೊಬೈಲ್ ನೆಟ್ವರ್ಕ್ಗಳಿಗೆ ಮಾತ್ರ ಕಡ್ಡಾಯಗೊಳಿಸಲಾಗಿದೆ. 2G ಮತ್ತು 3G ನೆಟ್ವರ್ಕ್ಗಳಲ್ಲಿ ಇದರ ಅನುಷ್ಠಾನದ ಕುರಿತು ಮುಂದಿನ ದಿನಗಳಲ್ಲಿ ಪರಿಶೀಲಿಸಲಾಗುವುದು ಎಂದು ಇಲಾಖೆ ತಿಳಿಸಿದೆ.
ಅಂತಾರಾಷ್ಟ್ರೀಯ ಕರೆಗಳ ವಿಷಯದಲ್ಲಿ, ಕರೆ ಮಾಡುವವರ ನಿಜವಾದ ಹೆಸರು ಸಿಗದಿರುವ ಕಾರಣದಿಂದ ಸ್ಕ್ರೀನ್ ಮೇಲೆ “ಅಂತಾರಾಷ್ಟ್ರೀಯ ಕರೆ” (International Call) ಎಂದು ಪ್ರದರ್ಶಿಸಲಾಗುತ್ತದೆ.
ಇದನ್ನೂ ಓದಿ: ಸಾಲದ ಹೊರೆ ಕಡಿಮೆಯಾಗ್ಬೇಕು ಅಂದ್ರೆ ಈ ಕೆಲ್ಸಗಳನ್ನು ಮೊದ್ಲು ಮಾಡಿ
ಬ್ಯುಸಿನೆಸ್ ಕನೆಕ್ಷನ್ ಅಥವಾ ಬಲ್ಕ್ ಕನೆಕ್ಷನ್ಗಳನ್ನು ಹೊಂದಿರುವವರು ತಮ್ಮ ವೈಯಕ್ತಿಕ ಹೆಸರಿನ ಬದಲು ಟ್ರೇಡ್ಮಾರ್ಕ್ ಅಥವಾ ಜಿಎಸ್ಟಿ (GST) ಪೋರ್ಟಲ್ನಲ್ಲಿ ನೋಂದಾಯಿಸಲಾದ ತಮ್ಮ ವ್ಯಾಪಾರ ಹೆಸರನ್ನು (Trade Name) ಪ್ರದರ್ಶಿಸಲು ಅವಕಾಶವಿರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ