
ಬ್ರಿಟನ್ ಮೂಲದ ಟೆಕ್ ಕಂಪೆನಿ ನಥಿಂಗ್ ಟೆಕ್ನಾಲಜಿ ಲಿಮಿಟೆಡ್ ನಥಿಂಗ್ ಫೋನ್ನ ಹೊಸ ಎಡಿಷನ್ ಬಿಡುಗಡೆ ಮಾಡಲು ಮುಂದಾಗಿದೆ. ಆದರೆ ಈ ಬಾರಿ ಬಿಡುಗಡೆ ಮಾಡುತ್ತಿರುವುದು RCB ಎಡಿಷನ್ ಮೊಬೈಲ್ ಫೋನ್ ಎಂಬುದು ವಿಶೇಷ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗಾಗಿ “ನಥಿಂಗ್ 4b ಆರ್‌ಸಿಬಿ ಎಡಿಷನ್” (Nothing Phone 4b RCB Edition) ಮೊಬೈಲ್ ಫೋನ್ ಬಿಡುಗಡೆ ಮಾಡುವುದಾಗಿ ನಥಿಂಗ್ ಟೆಕ್ನಾಲಜಿ ಲಿಮಿಟೆಡ್ ಅಧಿಕೃತವಾಗಿ ಘೋಷಿಸಿದೆ. ಈ ಫೋನ್ ಕುರಿತಾದ ಮತ್ತಷ್ಟು ಮಾಹಿತಿಗಳು ಈ ಕೆಳಗಿನಂತಿದೆ…
ನಥಿಂಗ್ ಫೋನ್ 4b RCB ಎಡಿಷನ್, ಜುಲೈ 7 ರಂದು ಬಿಡುಗಡೆಯಾಗಲಿದೆ. ಅಲ್ಲದೆ ಸಂಜೆ 4 ಗಂಟೆಯಿಂದ ಅಧಿಕೃತ ಸ್ಟೋರ್ಗಳಿಂದ ಖರೀದಿಸಬಹುದು.
ನಥಿಂಗ್ ಫೋನ್ 4b RCB ಎಡಿಷನ್ ಅತ್ಯಂತ ಸೀಮಿತ ಪ್ರಮಾಣದಲ್ಲಿ ಬಿಡುಗಡೆಯಾಗುತ್ತಿದ್ದು, ಕೇವಲ ಬೆಂಗಳೂರಿನ ಇಂದಿರಾನಗರದಲ್ಲಿರುವ ನಥಿಂಗ್ ಸ್ಟೋರ್‌ನಲ್ಲಿ ಮಾತ್ರ ನೇರವಾಗಿ ಖರೀದಿಸಬಹುದಾಗಿದೆ.
ವಿಶೇಷವೆಂದರೆ, ಈ ಫೋನ್ ಯಾವುದೇ ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಸಿಗುವುದಿಲ್ಲ. ಇದು ಕೇವಲ ಒಂದು ದಿನದ ಆಫ್‌ಲೈನ್ ಮಾರಾಟಕ್ಕೆ ಮಾತ್ರ ಲಭ್ಯವಿರಲಿದೆ.
ಸಾಮಾನ್ಯವಾಗಿ ಬಿಳಿ ಮತ್ತು ಕಪ್ಪು ಬಣ್ಣಗಳಲ್ಲಿ ಮಾತ್ರ ಲಭ್ಯವಿರುವ ನಥಿಂಗ್ ಫೋನ್‌ಗಳಿಗೆ ಹೋಲಿಸಿದರೆ, ಆರ್‌ಸಿಬಿ ಎಡಿಷನ್ ಸಂಪೂರ್ಣ ಭಿನ್ನವಾಗಿದೆ:
ಆರ್‌ಸಿಬಿ ಎಡಿಷನ್ ವಿನ್ಯಾಸದಲ್ಲಿ ಬದಲಾವಣೆ ಹೊಂದಿದ್ದರೂ, ಇದರ ಒಳಗಿನ ಫೀಚರ್‌ಗಳು ಸ್ಟ್ಯಾಂಡರ್ಡ್ ನಥಿಂಗ್ ಫೋನ್ 4b ನಂತೆಯೇ ಇರಲಿವೆ.
ಇದನ್ನೂ ಓದಿ: ಅವನು ನನ್ನ ಆತ್ಮೀಯ ಗೆಳೆಯ: ದಿನೇಶ್ ಕಾರ್ತಿಕ್ ಬಗ್ಗೆ ಮುರಳಿ ವಿಜಯ್ ಭಾವುಕ!
ಜುಲೈ 7 ರಂದು ಮಧ್ಯಾಹ್ನ 3:30 ಕ್ಕೆ ನಡೆಯಲಿರುವ ಜಾಗತಿಕ ಲಾಂಚ್ ಈವೆಂಟ್‌ನಲ್ಲಿ ನಥಿಂಗ್ ಫೋನ್ 4b RCB ಎಡಿಷನ್ನ ಅಧಿಕೃತ ಬೆಲೆ ಪ್ರಕಟವಾಗಲಿದೆ. ಆದರೆ ಟೆಕ್ ವಲಯದ ಲೀಕ್ಸ್‌ಗಳ ಪ್ರಕಾರ, ಈ ಪ್ರೀಮಿಯಂ ಮಿಡ್-ರೇಂಜ್ ಫೋನಿನ ಬೆಲೆ ₹30,000 ಕ್ಕಿಂತ ಹೆಚ್ಚಿರುತ್ತದೆ ಎಂದು ಅಂದಾಜಿಸಲಾಗಿದೆ.
Published On - 1:36 pm, Sun, 5 July 26