ನವದೆಹಲಿ, ಜನವರಿ 15: ಹಣಕಾಸು ವ್ಯವಸ್ಥೆ ಸುರಕ್ಷಿತವಾಗಿರಬೇಕಾದರೆ ಬ್ಯಾಂಕುಗಳು ಸುಭದ್ರವಾಗಿರಬೇಕು. ಬ್ಯಾಂಕುಗಳ ಬಗ್ಗೆ ಜನರಿಗೆ ವಿಶ್ವಾಸ ಹೆಚ್ಚಿರಬೇಕು. ಈ ವಿಶ್ವಾಸಕ್ಕೆ ದ್ಯೋತಕವಾಗಿ ಬ್ಯಾಂಕುಗಳಲ್ಲಿ ಠೇವಣಿಗಳಿವೆ. ಹಾಗೆಯೇ, ಷೇರು ಮಾರುಕಟ್ಟೆಯಲ್ಲಿ ಬ್ಯಾಂಕುಗಳ ಷೇರು ಮೌಲ್ಯವೂ ವಿಶ್ವಾಸಾರ್ಹತೆಗೆ ದ್ಯೋತಕ ವೆಂಬಂತಿರಬಹುದು. ಅತಿಹೆಚ್ಚು ಮಾರುಕಟ್ಟೆ ಬಂಡವಾಳ ಹೊಂದಿರುವ ವಿಶ್ವದ 25 ಬ್ಯಾಂಕುಗಳಲ್ಲಿ ಭಾರತದ ಮೂರು ಬ್ಯಾಂಕುಗಳಿವೆ. ಎಚ್ಡಿಎಫ್ಸಿ ಬ್ಯಾಂಕು, ಐಸಿಐಸಿಐ ಬ್ಯಾಂಕು ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಮೂರು ಭಾರತೀಯ ಬ್ಯಾಂಕುಗಳಾಗಿವೆ. ಗ್ಲೋಬಲ್ ಡಾಟಾ ಎನ್ನುವ ಡಾಟಾ ಅನಾಲಿಟಿಕ್ಸ್ ಕಂಪನಿ ಬಿಡುಗಡೆ ಮಾಡಿದ ವರದಿಯಲ್ಲಿ ಅತಿಹೆಚ್ಚು ಮಾರುಕಟ್ಟೆ ಬಂಡವಾಳ (market capitalization) ಹೊಂದಿರುವ ಜಾಗತಿಕ ಕಂಪನಿಗಳ ಪಟ್ಟಿ ನೀಡಲಾಗಿದೆ.
ಎಚ್ಡಿಎಫ್ಸಿ ಬ್ಯಾಂಕು ಭಾರತದ ನಂಬರ್ ಒನ್ ಬ್ಯಾಂಕ್ ಎನಿಸಿದೆ. ಎಚ್ಡಿಎಫ್ಸಿ ಮತ್ತು ಎಚ್ಡಿಎಫ್ಸಿ ಬ್ಯಾಂಕ್ ಎರಡೂ ವಿಲೀನಗೊಂಡ ಪರಿಣಾಮ ಬೃಹತ್ ಎಚ್ಡಿಎಫ್ಸಿ ಬ್ಯಾಂಕ್ ಸೃಷ್ಟಿಯಾಗಿದೆ. ಇದರ ಮಾರುಕಟ್ಟೆ ಬಂಡವಾಳ 158.5 ಬಿಲಿಯನ್ ಡಾಲರ್ (ಸುಮಾರು 13,000 ಕೋಟಿ ರೂಗೂ ಅಧಿಕ) ಇದೆ. ಜಾಗತಿಕ ಬ್ಯಾಂಕುಗಳ ಪಟ್ಟಿಯಲ್ಲಿ ಇದು 13ನೇ ಸ್ಥಾನ ಹೊಂದಿದೆ.
ಇದನ್ನೂ ಓದಿ: ಮೇಡ್ ಇನ್ ಇಂಡಿಯಾ ಸ್ಮಾರ್ಟ್ಫೋನ್; 2024-25ರಲ್ಲಿ 1.70 ಲಕ್ಷ ಕೋಟಿ ರೂ ರಫ್ತು ಗುರಿ
ಐಸಿಐಸಿಐ ಬ್ಯಾಂಕ್ 105.7 ಬಿಲಿಯನ್ ಡಾಲರ್ ಮಾರುಕಟ್ಟೆ ಬಂಡವಾಳ ಹೊಂದಿದ್ದು ಟಾಪ್ 25 ಬ್ಯಾಂಕುಗಳಲ್ಲಿ 19ನೇ ಸ್ಥಾನ ಪಡೆದಿದೆ. ಅತಿದೊಡ್ಡ ಸರ್ಕಾರಿ ಬ್ಯಾಂಕ್ ಎನಿಸಿದ ಎಸ್ಬಿಐ 82.9 ಬಿಲಿಯನ್ ಡಾಲರ್ನೊಂದಿಗೆ 24ನೇ ಸ್ಥಾನ ಪಡೆದಿದೆ.
ಎಚ್ಡಿಎಫ್ಸಿ ಬ್ಯಾಂಕ್ ಮಾರುಕಟ್ಟೆ ಬಂಡವಾಳದಲ್ಲಿ ಜಾಗತಿಕವಾಗಿ ಟಾಪ್-100 ಸಂಸ್ಥೆಗಳ ಪಟ್ಟಿಯಲ್ಲಿ ಇದೆ. ಟಿಸಿಎಸ್ ಮತ್ತು ರಿಲಾಯನ್ಸ್ ಇಂಡಸ್ಟ್ರೀಸ್ ಸಾಲಿಗೆ ಅದೂ ಸೇರಿದೆ.
ಇದನ್ನೂ ಓದಿ: ರಿಯಲ್ ಎಸ್ಟೇಟ್ನಲ್ಲಿ ಸರ್ಕಲ್ ರೇಟ್ ಎಂದರೇನು? ಮಾರ್ಕೆಟ್ ರೇಟ್ಗೂ ಅದಕ್ಕೂ ಏನು ವ್ಯತ್ಯಾಸ? ಇಲ್ಲಿದೆ ವಿವರ
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ