Elon Musk: ಸ್ಪ್ಯಾಮ್ ಖಾತೆಯಲ್ಲಿ ವ್ಯತ್ಯಾಸ ಇರುವುದರಿಂದ ಟ್ವಿಟ್ಟರ್ ಖರೀದಿ ದರದಲ್ಲೂ ಕಡಿತ ಆಗಬಹುದು ಎಂದ ಎಲಾನ್ ಮಸ್ಕ್

| Updated By: Srinivas Mata

Updated on: May 17, 2022 | 5:42 PM

ಕಂಪೆನಿ ತಿಳಿಸಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸ್ಪ್ಯಾಮ್ ಇರುವುದರಿಂದ ಟ್ವಿಟ್ಟರ್​ನ ಖರೀದಿ ದರವನ್ನು ಕಡಿಮೆ ಮಾಡಬಹುದು ಎಂದು ಎಲಾನ್ ಮಸ್ಕ್ ಹೇಳಿದ್ದಾರೆ.

Elon Musk: ಸ್ಪ್ಯಾಮ್ ಖಾತೆಯಲ್ಲಿ ವ್ಯತ್ಯಾಸ ಇರುವುದರಿಂದ ಟ್ವಿಟ್ಟರ್ ಖರೀದಿ ದರದಲ್ಲೂ ಕಡಿತ ಆಗಬಹುದು ಎಂದ ಎಲಾನ್ ಮಸ್ಕ್
ಎಲಾನ್​ ಮಸ್ಕ್ (ಸಂಗ್ರಹ ಚಿತ್ರ)
Follow us on

ಟ್ವಿಟ್ಟರ್ (Twitter)​ ಕಂಪೆನಿ ಹೇಳಿದ್ದಕ್ಕಿಂತ ಕನಿಷ್ಠ ನಾಲ್ಕು ಪಟ್ಟು ಹೆಚ್ಚು ನಕಲಿ ಖಾತೆಗಳಿವೆ. ಆದ್ದರಿಂದ ಕಡಿಮೆ ಬೆಲೆಗೆ ಕೇಳುವುದಾಗಿ ಸೋಮವಾರ ಎಲಾನ್ ಮಸ್ಕ್ ಹೇಳಿದ್ದಾರೆ. “ಅವರು ಕ್ಲೇಮ್​ ಮಾಡಿದ್ದಕ್ಕಿಂತ ಹೆಚ್ಚು ಕೆಟ್ಟದ್ದಾಗಿರುವುದಕ್ಕೆ ನೀವು ಅದೇ ಬೆಲೆಯನ್ನು ನೀಡುವುದಕ್ಕೆ ಸಾಧ್ಯವಿಲ್ಲ,” ಎಂದು ಮಿಯಾಮಿಯಲ್ಲಿ ಅವರು ಹೇಳಿದ್ದಾರೆ. ಕಳೆದ ಶುಕ್ರವಾರ ಟ್ವಿಟ್ಟರ್ ಖರೀದಿ ಬಗ್ಗೆ ತಿಳಿಸಿದ್ದ ಅವರು, ಸ್ಪ್ಯಾಮ್ ಖಾತೆ ಬಗ್ಗೆ ಬಾಕಿ ಮಾಹಿತಿ ಬರಬೇಕಾಗಿರುವುದರಿಂದ 4400 ಕೋಟಿ ಅಮೆರಿಕನ್ ಡಾಲರ್​ನ ಟ್ವಿಟ್ಟರ್​ ಖರೀದಿ ವ್ಯವಹಾರಕ್ಕೆ ತಾತ್ಕಾಲಿಕ ತಡೆ ಹಾಕಿರುವುದಾಗಿ ಹೇಳಿದ್ದರು. ಟ್ವಿಟ್ಟರ್ ಅಧಿಕಾರಿಗಳ ಅಂದಾಜಿನ ಪ್ರಕಾರ ನಕಲಿ ಖಾತೆಗಳ ಪ್ರಮಾಣ ಶೇ 5ರೊಳಗೆ ಇದೆ. ಆದರೆ ಮಸ್ಕ್ ಅಂದಾಜು ಪ್ರಕಾರ ಕನಿಷ್ಠ ಶೇ 20ರಷ್ಟಿದೆ.

ಹಾಗಿದ್ದರೆ ಟ್ವಿಟ್ಟರ್​ ಖರೀದಿಯನ್ನು ಬೇರೆ ದರದಲ್ಲಿ ಮಾಡಲಾಗುತ್ತದೆಯೇ ಎಂಬ ಪ್ರಶ್ನೆಗೆ, ಈ ಪ್ರಶ್ನೆ ವಿಷಯಕ್ಕೆ ಹೊರತಾದದ್ದೇನಲ್ಲ ಎಂದಷ್ಟೇ ನಾನು ಹೇಳಲು ಹೊರಟಿರುವ ಅರ್ಥ ಎಂದು ಮಸ್ಕ್ ತಿಳಿಸಿದ್ದಾರೆ. “ಹೆಚ್ಚೆಚ್ಚು ಪ್ರಶ್ನೆಗಳನ್ನು ನಾನು ಕೇಳಿದರೆ, ಹೆಚ್ಚು ನನ್ನ ಆತಂಕ ಬೆಳೆಯುತ್ತದೆ,” ಎಂದಿದ್ದಾರೆ. “ಅವರು ಹೇಳಿಕೊಳ್ಳುವ ಪ್ರಕಾರ ಈ ಸಂಕೀರ್ಣವಾದ ವಿಧಾನವನ್ನು ಅವರು ಮಾತ್ರ ಅರ್ಥ ಮಾಡಿಕೊಳ್ಳುವುದಕ್ಕೆ ಸಾಧ್ಯ. ಇದು ಅಂಥ ರಹಸ್ಯ ಏನಾಗಿರಲಿಕ್ಕಿಲ್ಲ, ಮನುಷ್ಯರ ಆತ್ಮ ಅಥವಾ ಆ ರೀತಿಯ ಹಾಗೆ,” ಎಂದಿದ್ದಾರೆ. ಮಸ್ಕ್ ಅವರ ಈ ಅಭಿಪ್ರಾಯ ಬಂದ ಮೇಲೆ ಟ್ವಿಟ್ಟರ್​ ಷೇರುಗಳ ನಷ್ಟ ಇನ್ನಷ್ಟು ವಿಸ್ತರಣೆ ಆಗಿದೆ.

ಇದನ್ನೂ ಓದಿ: Elon Musk: ಟ್ವಿಟ್ಟರ್ ಖರೀದಿಗೆ ತಾತ್ಕಾಲಿಕ ತಡೆ; ಬೇಡವೇ ಬೇಡ ಅಂದರೆ ಎಲಾನ್​ ಮಸ್ಕ್​ಗೆ 100 ಕೋಟಿ ಯುಎಸ್​ಡಿ ಬರೆ

ಇದನ್ನೂ ಓದಿ
Donald Trump: ಡೊನಾಲ್ಡ್ ಟ್ರಂಪ್ ಮೇಲಿನ ಟ್ವಿಟರ್ ನಿರ್ಬಂಧ ವಾಪಸ್: ಎಲಾನ್ ಮಸ್ಕ್ ಘೋಷಣೆ
Twitter CEO: 44 ಬಿಲಿಯನ್ ಡಾಲರ್​ ಖರೀದಿ ವ್ಯವಹಾರ ಮುಗಿದ ಮೇಲೆ ಸ್ವತಃ ಎಲಾನ್ ಮಸ್ಕ್ ಆಗಲಿದ್ದಾರಂತೆ ಟ್ವಿಟ್ಟರ್ ಸಿಇಒ
Elon Musk: ಟ್ವೀಟ್​ನಿಂದ ಹಣ ಗಳಿಕೆ, ವೇತನ ಕಡಿತ ಸೇರಿದಂತೆ ಸಾಲ ನೀಡುವವರ ಮುಂದೆ ಎಲಾನ್ ಮಸ್ಕ್ ಇಟ್ಟ ಪ್ಲಾನ್​ಗಳಿವು
Elon Musk: ಕೋಕಾ-ಕೋಲಾ ಕಂಪೆನಿ ಖರೀದಿಸುತ್ತಾರಂತೆ ಎಲಾನ್ ಮಸ್ಕ್; ಕಾಮಿಡಿ ಮಾಡುತ್ತಿದ್ದಾರೆಯೇ ಎನ್ನುತ್ತಿದ್ದಾರೆ ಜನ

ಎಲಾನ್ ಮಸ್ಕ್ ಒಪ್ಪಿಕೊಂಡ ಬೆಲೆಯಲ್ಲೇ ಮುಂದುವರಿಯಬಹುದೇ ಎಂಬ ಅನುಮಾನದ ಹಿನ್ನೆಲೆಯಲ್ಲಿ ಕಂಪೆನಿಯ ಸ್ಟಾಕ್ ಶೇ 8ರಷ್ಟು ಕುಸಿದು, 37.39 ಡಾಲರ್ ಮುಟ್ಟಿದೆ. ಇನ್ನು ಟ್ವಿಟ್ಟರ್ ಸಿಇಒ ಪರಾಗ್ ಅಗರ್​ವಾಲ್ ಸೋಮವಾರ ಟ್ವೀಟ್ ಮಾಡಿ, ಕಳೆದ ನಾಲ್ಕು ತ್ರೈಮಾಸಿಕದಿಂದ ಸ್ಪ್ಯಾಮ್ ಖಾತೆಗಳು ಶೇ 5ಕ್ಕಿಂತ ಕಡಿಮೆ ಇವೆ ಎಂದಿದ್ದಾರೆ. ಸ್ವತಂತ್ರ ಸಂಶೋಧಕರ ಪ್ರಕಾರ, ಟ್ವಿಟ್ಟರ್ ಪ್ರೊಫೈಲ್​ಗಳಲ್ಲಿ ಶೇ 9ರಿಂದ 15ರಷ್ಟಿದೆ ಎಂದು ಅಭಿಪ್ರಾಯ ಪಡುತ್ತಾರೆ.

ವಾಣಿಜ್ಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ