AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

TCS: ಎಪಿಕ್ ಸಿಸ್ಟಮ್ಸ್ ಪ್ರಕರಣದಲ್ಲಿ 140 ಮಿಲಿಯನ್ ಯುಎಸ್​ಡಿ ದಂಡವನ್ನು ಟಿಸಿಎಸ್​ಗೆ ಖಾತ್ರಿ ಪಡಿಸಿದ ಯುಎಸ್​ ಕೋರ್ಟ್

ಎಪಿಕ್ ಸಿಸ್ಟಮ್ಸ್ ಪ್ರಕರಣದಲ್ಲಿ 140 ಮಿಲಿಯನ್ ಡಾಲರ್ ದಂಡವನ್ನು ಅಮೆರಿಕದ ನ್ಯಾಯಾಲಯವು ಟಿಸಿಎಸ್​ಗೆ ಖಾತ್ರಿ ಪಡಿಸಿದೆ. ಆ ಬಗ್ಗೆ ವಿವರ ಇಲ್ಲಿದೆ.

TCS: ಎಪಿಕ್ ಸಿಸ್ಟಮ್ಸ್ ಪ್ರಕರಣದಲ್ಲಿ 140 ಮಿಲಿಯನ್ ಯುಎಸ್​ಡಿ ದಂಡವನ್ನು ಟಿಸಿಎಸ್​ಗೆ ಖಾತ್ರಿ ಪಡಿಸಿದ ಯುಎಸ್​ ಕೋರ್ಟ್
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Jul 05, 2022 | 10:53 AM

Share

ಭಾರತದ ಪ್ರಮುಖ ಐಟಿ ಕಂಪೆನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್​ಗೆ (TCS) ಅಮೆರಿಕದ ಜಿಲ್ಲಾ ಕೋರ್ಟ್ 140 ಮಿಲಿಯನ್ (1.40 ಕೋಟಿ) ಅಮೆರಿಕನ್ ಡಾಲರ್​ ದಂಡ ವಿಧಿಸಿದೆ. ವಿಸ್ಕನ್ಸಿನ್​ನ ವೆಸ್ಟರ್ನ್ ಡಿಸ್ಟ್ರಿಕ್ಟ್ ಇದನ್ನು ಖಾತ್ರಿ ಪಡಿಸಿದೆ. ಎಪಿಕ್ ಸಿಸ್ಟಮ್ಸ್​ ಜತೆಗಿನ ವ್ಯಾಜ್ಯದಲ್ಲಿ ಇಷ್ಟು ದೊಡ್ಡ ಮೊತ್ತದ ದಂಡವನ್ನು ಟಿಸಿಎಸ್ ಪಾವತಿ ಮಾಡಬೇಕಾಗಿದೆ. ಈ ತೀರ್ಪಿನ ವಿರುದ್ಧ ಶಿಕಾಗೋದ 7ನೇ ಸರ್ಕ್ಯೂಟ್ ಕೋರ್ಟ್​​ನಲ್ಲಿ ಮೇಲ್ಮನವಿಯನ್ನು ಸಲ್ಲಿಸಲು ಟಿಸಿಎಸ್​ ಆಲೋಚಿಸಿದೆ. “ನಾವು ನಿಮಗೆ ಈ ಮೂಲಕ ತಿಳಿಸುವುದೇನೆಂದರೆ, ಎಪಿಕ್ ಸಿಸ್ಟಮ್ಸ್ ಕಾರ್ಪೊರೇನ್ ವಿಷಯದಲ್ಲಿ ವೆಸ್ಟರ್ನ್ ಡಿಸ್ಟ್ರಿಕ್ಟ್ ಆಫ್ ವಿಸ್ಕನ್ಸಿನ್​ ಆದೇಶ ಹೊರಡಿಸಿದ್ದು, ಶಿಕ್ಷಾರ್ಹ ಹಾನಿಗೆ 140 ಮಿಲಿಯನ್ ಅಮೆರಿಕನ್ ಡಾಲರ್ ಪರಿಹಾರ ಮೊತ್ತಕ್ಕೆ ಇಳಿಕೆ ಮಾಡಿದೆ. ಇದರ ಪ್ರಕಾರವಾಗಿ ತಿದ್ದುಪಡಿಯಾದ ತೀರ್ಪನ್ನು ಫೈಲ್ ಮಾಡುವಂತೆ ನ್ಯಾಯಾಲಯ ಗುಮಾಸ್ತೆಗೆ ಸೂಚಿಸಲಾಗಿದೆ,” ಎಂದು ನಿಯಂತ್ರಕ ಫೈಲಿಂಗ್​ನಲ್ಲಿ ಟಿಸಿಎಸ್​ ತಿಳಿಸಿದೆ.

2021ರ ಆಗಸ್ಟ್​ನಲ್ಲಿ ಎಪಿಕ್ ಸಿಸ್ಟಮ್ಸ್​ಗೆ 280 ಮಿಲಿಯನ್​ ಯುಎಸ್​ಡಿ ದಂಡ ಪಾವತಿಸಬೇಕು ಎಂದಿದ್ದ ಆದೇಶವನ್ನು 140 ಮಿಲಿಯನ್ ಯುಎಸ್​ಡಿಗೆ ಇಳಿಸಲಾಗಿತ್ತು. 2014ರ ಅಕ್ಟೋಬರ್​ನಲ್ಲಿ ಎಪಿಕ್​ಗೆ 940 ಮಿಲಿಯನ್ ಡಾಲರ್ ಪಾವತಿಸುವಂತೆ ಟಿಸಿಎಸ್​ಗೆ ಸೂಚಿಸಲಾಗಿತ್ತು. ಆ ನಂತರ ಮೊತ್ತವನ್ನು 280 ಮಿಲಿಯನ್ ಡಾಲರ್​ಗೆ ಇಳಿಸಲಾಯಿತು.

ಏನಿದು ಪ್ರಕರಣ?

ವ್ಯಾಪಾರ ರಹಸ್ಯಕ್ಕೆ ಸಂಬಂಧಿಸಿದಂತೆ ಅಮೆರಿಕದ ನ್ಯಾಯಾಲಯದಲ್ಲಿ ಟಾಟಾದ ಎರಡು ಕಂಪೆನಿಗಳಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಮತ್ತು ಟಾಟಾ ಅಮೆರಿಕ ಇಂಟರ್​ನ್ಯಾಷನಲ್ ಕಾರ್ಪೊರೇಷನ್ ವಿರುದ್ಧ ಎಪಿಕ್ ಸಿಸ್ಟಮ್ಸ್ ದೂರು ಸಲ್ಲಿಸಿತ್ತು. ಕಂಪೆನಿಯ ವ್ಯಾಪಾರ ರಹಸ್ಯ, ಗೋಪ್ಯ ಮಾಹಿತಿಗಳು ದಾಖಲಾತಿಗಳು ಮತ್ತು ದತ್ತಾಂಶಗಳನ್ನು ಕಳುವು ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು.

ಅಮೆರಿಕ ಮೂಲದ ಹೆಲ್ತ್​ಕೇರ್ ಸಾಫ್ಟ್​ವೇರ್ ಕಂಪೆನಿಯಾದ ಎಪಿಕ್ ಸಿಸ್ಟಮ್ಸ್ ಕೈಸರ್ ಪರ್ಮನೆಂಟೆ ಎಂಬ ಸೇವಾ ಪೂರೈಕೆದಾರರ ಜತೆಗೆ ತನ್ನ ಹೆಲ್ತ್​ಕೇರ್ ನಿರ್ವಹಣೆ ವ್ಯವಸಸ್ಥೆಯನ್ನು ಅನುಷ್ಠಾನಗೊಳಿಸಿತ್ತು. ಸಿಸ್ಟಮ್ ಅನುಷ್ಠಾನಕ್ಕೆ ಟಿಸಿಎಸ್​ ಅನ್ನು ನೇಮಿಸಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಎಪಿಕ್​ ಕಂಪೆನಿಯ ದಾಖಲಾತಿಗಳನ್ನು ನೋಡುವುದರಿಂದ ಟಿಸಿಎಸ್ ಸಿಬ್ಬಂದಿಯನ್ನು ನಿರ್ಬಂಧಿಸಲಾಗಿತ್ತು. ಆದರೆ ಎಪಿಕ್ ಸಿಸ್ಟಮ್ಸ್ ಹೇಳುವಂತೆ, ಕೈಸರ್ ಪರ್ಮನೆಂಟೆ ಉದ್ಯೋಗಿಗಳ ಕ್ರೆಡೆನ್ಷಿಯಲ್ಸ್​ಗಳನ್ನು ಬಳಸಿಕೊಂಡು, 6000ದಷ್ಟು ದಾಖಲಾತಿಗಳನ್ನು ಟಿಸಿಎಸ್ ಸಿಬ್ಬಂದಿ ಕಳುವು ಮಾಡಿದ್ದಾರೆ.

ಆದರೆ, ಟಿಸಿಎಸ್ ಈ ತನಕ ಹೇಳಿರುವಂತೆ, ಎಪಿಕ್ ಮಾಹಿತಿಯನ್ನು ದುರ್ಬಳಕೆ ಮಾಡಿಕೊಂಡಿರುವ ಯಾವುದೇ ಸಾಕ್ಷ್ಯ ಇಲ್ಲ. ಮತ್ತು ಇದನ್ನೇ ನ್ಯಾಯಾಲಯದಲ್ಲೂ ಹೇಳುತ್ತಾ ಬಂದಿದೆ.

ಇದನ್ನೂ ಓದಿ: TCS FY22 Q4 Results: ಟಿಸಿಎಸ್ ನಾಲ್ಕನೇ ತ್ರೈಮಾಸಿಕ ಲಾಭ 9926 ಕೋಟಿ ರೂಪಾಯಿ; 22 ರೂ. ಡಿವಿಡೆಂಡ್

Published On - 10:53 am, Tue, 5 July 22

ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ