What A Sandwich success story: 29 ರೂಪಾಯಿಗೆ ಸ್ಯಾಂಡ್‌ವಿಚ್ ಮಾರುತ್ತಿದ್ದಾರೆ ಈ ಎಂಬಿಎ ಪದವೀಧರ
ವಾಟ್ ಎ ಸ್ಯಾಂಡ್‌ವಿಚ್ ಎಂಬುದನ್ನು ಆರಂಭಿಸಿ ಯಶಸ್ಸು ಕಂಡಿರುವ ಉದ್ಯಮಿಯ ಪಯಣದ ಕಥೆ ಇದು. ಯುರೋಪ್ ಪ್ರವಾಸಕ್ಕೆ ಹೋಗಬೇಕಿದ್ದ ದುಡ್ಡಲ್ಲಿ ಆರಂಭಿಸಿದ ವ್ಯವಹಾರ ಇವತ್ತಿಗೆ ಉತ್ತಮ ಸ್ಥಾಯಿಯಲ್ಲಿದೆ.
“ವಾಟ್ ಎ ಸ್ಯಾಂಡ್‌ವಿಚ್” ಎಂಬುದು ಪ್ರಮುಖವಾಗಿ ಶೀಘ್ರ ಆಹಾರ (Food) ಸೇವೆ ಒದಗಿಸುತ್ತದೆ. ಸಬ್ಮರೀನ್ ಸ್ಯಾಂಡ್ವಿಚ್ಗಳು ಹಾಗೂ ಸಲಾಡ್ಗಳಿಗೆ ದೇಸಿ ಸ್ಪರ್ಶವನ್ನು ನೀಡುತ್ತದೆ. ಭಾರತದಾದ್ಯಂತ 65 ಕೇಂದ್ರಗಳಲ್ಲಿ ಅಸ್ತಿತ್ವ ಹೊಂದಿದೆ. ದೆಹಲಿ, ಮುಂಬೈ, ಪುಣೆ, ಕೋಲ್ಕತ್ತಾ ಮತ್ತು ಟಯರ್ 1 ಮತ್ತು ಟಯರ್ 2 ನಗರಗಳಲ್ಲಿ ಇದೆ. ವಾಟ್ ಎ ಸಯಾಂಡ್ವಿಚ್ ನ್ಯೂಟ್ರಿಷನ್ಯುಕ್ತ, ರುಚಿಯಾದ ಹಾಗೂ ಕೈಗೆಟುಕುವ ದರದಲ್ಲಿ ಸಬ್ಮರೀನ್ ಸ್ಯಾಂಡ್‌ವಿಚ್, ಚೀಸೀ ಪನಿನಿಸ್ ಮತ್ತು wraps, ಬರ್ಗರ್ಗಳು, ಸಲಾಡ್ಗಳು, ಪಾವ್ ಬರ್ಗರ್ಗಳು, ತುಂಡು ಮಾಡಿದ ಸ್ಯಾಂಡ್‌ವಿಚ್, ಫ್ರೈಸ್ ಮುಂತಾದವು ಸಸ್ಯಾಹಾರ ಹಾಗೂ ಮಾಂಸಾಹಾರ ಆಯ್ಕೆಗಳೊಂದಿಗೆ ಲಭ್ಯ ಇವೆ. ಹುಸೇನ್ ಲೋಖಂಡ್ವಾಲ ಅವರು ವಾಟ್ ಎ ಸ್ಯಾಂಡ್‌ವಿಚ್ ಸ್ಥಾಪಕರು. ಏನನ್ನಾದರೂ ಸ್ವಂತಕ್ಕಾಗಿ ನಿರ್ಮಿಸಬೇಕು ಎಂಬ ಉದ್ದೇಶದಿಂದ ಕಟ್ಟಿದ ಸಂಸ್ಥೆ ಇದು.
ಈ ಹಿಂದೆ ಹುಸೇನ್ ಲೋಖಂಡ್ವಾಲ ಹಿಂದೂಸ್ತಾನ್ ಟೈಮ್ಸ್ ಜತೆಗೆ ಮಾತನಾಡಿ, ಮಾರುಕಟ್ಟೆಯಲ್ಲಿ ಪಿಜ್ಜಾಗಳು, ಬರ್ಗರ್ಗಳು, ರೋಲ್ಗಳು ಮತ್ತು ಬಿರಿಯಾನಿ ಇವುಗಳಿಂದ ಮಾರುಕಟ್ಟೆ ತುಂಬಿಹೋಗಿದೆ. ದೇಸಿ ಸಮಾನವಾಗಿ ಅಂತರರಾಷ್ಟ್ರೀಯ ದೈತ್ಯ ಸಬ್ಮರೀನ್ ಸ್ಯಾಂಡ್‌ವಿಚ್ ಸ್ಪೇಸ್ನಲ್ಲಿ ವಿಭಿನ್ನವಾಗಿ ತರಲು ಬಯಸಿದೆವು ಎಂದು ಹೇಳಿದ್ದರು. ಕೊರೊನಾ ಕಾಲಘಟ್ಟ 2020ರಲ್ಲಿ ಕ್ಲೌಡ್ ಕುಕಿಂಗ್ ಸ್ಪೇಸ್ನಲ್ಲಿ ವಾಟ್ ಎ ಸ್ಯಾಂಡ್‌ವಿಚ್ ದೊಡ್ಡ ಮಟ್ಟದಲ್ಲಿ ವಿಸ್ತರಿಸಿತು. ಆ ನಂತರದ ವರ್ಷದಲ್ಲಿ ರಾಜ್ಯಗಳನ್ನು ದಾಟಿ, ರಾಷ್ಟ್ರ ಮಟ್ಟದಲ್ಲಿ ಬೆಳೆಯಿತು. 50 ಡೆಲಿವರಿ ಕಿಚನ್ ಆರಂಭಿಸಲಾಯಿತು. 2022ರ ಹೊತ್ತಿಗೆ 100 ಕಿಚನ್ಗೆ ಹೆಚ್ಚಿಸಲು ಮತ್ತು ವಿದೇಶೀ ಮಾರುಕಟ್ಟೆಗೆ ವಿಸ್ತರಿಸಲು ಉದ್ದೇಶಿಸಿದೆ.
ಹುಸೇನ್ ಲೋಖಂಡವಾಲಾ ಅವರು ಯುರೋಪ್‌ನಾದ್ಯಂತ ಪ್ರವಾಸಕ್ಕಾಗಿ ಸುಮಾರು ರೂ. 1.5 ಲಕ್ಷವನ್ನು ಉಳಿಸಿದ್ದರು. ಅದರ ಬದಲಾಗಿ, ಎಂಬಿಎ ಪದವೀಧರರಾದ ಅವರು ಹಣವನ್ನು ತನ್ನ ಮೊದಲ ಅಂಗಡಿಗೆ ಹಾಕಲು ನಿರ್ಧರಿಸಿದರು ಹಾಗೂ ತನ್ನ ಯುರೋಪ್ ರಜೆಯನ್ನು ಮುಂದೂಡಿದರು. ಮತ್ತು ಆ ನಿರ್ಧಾರದಿಂದಾಗಿ ಎಲ್ಲವೂ ಬದಲಾಯಿತು.ಹುಸೇನ್ ಮುಂಬೈನಲ್ಲಿ ಸಬ್‌ವೇಯ ನಿಯಮಿತ ಗ್ರಾಹಕರಾಗಿದ್ದರು ಮತ್ತು ಪ್ರತಿ ವಾರ ಕೆಲವು ಬಾರಿ ಅಲ್ಲಿ ತಿನ್ನುತ್ತಿದ್ದರು. ಆದರೆ ಹೆಚ್ಚಿನ ಬೆಲೆಯಿಂದಾಗಿ ಅವರು ದಿನದ ಒಂದು ಹೊತ್ತು ಮಾತ್ರ ತಿನ್ನಬಹುದಾಗಿತ್ತು. ಆಗ ಅವರು ಅಮೆರಿಕನ್ ಫಾಸ್ಟ್ ಫುಡ್ ರೆಸ್ಟೋರೆಂಟ್ ಫ್ರಾಂಚೈಸಿಗೆ ಸಮನಾದ ಭಾರತೀಯ ರೆಸ್ಟೋರೆಂಟ್ ಹೊಂದಲು ಯೋಜಿಸಿದ್ದರು. ಈಗ, ವಾಟ್ ಎ ಸ್ಯಾಂಡ್‌ವಿಚ್‌ನಲ್ಲಿ ರೂ. 29ಕ್ಕೆ ತಿನ್ನಬಹುದು.
ವಾಟ್ ಎ ಸ್ಯಾಂಡ್‌ವಿಚ್ ಫ್ರಾಂಚೈಸ್ ಹೂಡಿಕೆ ಯೋಜನೆಯನ್ನು ಹೊಂದಿದೆ. ಅದು ರೂ. 1.75 ಲಕ್ಷಗಳಿಂದ ಪ್ರಾರಂಭವಾಗುತ್ತದೆ ಮತ್ತು ಹೂಡಿಕೆ ಲಾಭವನ್ನು ಒಳಗೊಂಡಂತೆ ಬೋನಸ್‌ಗಳು ಮತ್ತು ವೈಶಿಷ್ಟ್ಯಗಳನ್ನು ಒಳಗೊಂಡಿದೆ. 2013ರಲ್ಲಿ ಪ್ರಾರಂಭವಾದಾಗಿನಿಂದ ವಾಟ್ ಎ ಸ್ಯಾಂಡ್‌ವಿಚ್ ಆಗಸ್ಟ್ 2021ರಲ್ಲಿ ಟೈಮ್ಸ್ ಫುಡ್ ಡೆಲಿವರಿ ಐಕಾನ್ಸ್ ಪುಣೆಯ ‘ಐಕಾನಿಕ್ ಸ್ಯಾಂಡ್‌ವಿಚ್’ ವಿಭಾಗ ಮತ್ತು ಸೆಪ್ಟೆಂಬರ್ 2021ರಲ್ಲಿ ಟೈಮ್ಸ್ ಫುಡ್ ಡೆಲಿವರಿ ಐಕಾನ್ಸ್ ಮುಂಬೈನ ‘ಐಕಾನಿಕ್ ಸ್ಯಾಂಡ್‌ವಿಚ್’ ವಿಭಾಗ ಸೇರಿದಂತೆ ಹಲವಾರು ಪ್ರಶಸ್ತಿಗಳು ಮತ್ತು ಗೌರವಗಳನ್ನು ಪಡೆದುಕೊಂಡಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬಿಕಾಂ ಪದವೀಧರನ ಕೃಷಿ ಪಯಣ; 20 ಎಕರೆ ಜಮೀನಿನಲ್ಲಿ ಸಮೃದ್ಧ ಬೆಳೆ, ಸ್ವಾವಲಂಬಿ ಜೀವನದ ಯಶೋಗಾಥೆ ಇಲ್ಲಿದೆ