ಪೇಟಿಎಂ ವಿಚಾರದಲ್ಲಿ ಹಲವರಿಗೆ ಗೊಂದಲಗಳು ಇನ್ನೂ ಉಳಿದಿವೆ. ಆರ್ಬಿಐ ನಿರ್ಬಂಧ ಹಾಕಿರುವುದು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ಗೆ (PPBL- Paytm Payments Bank Ltd) ಮಾತ್ರ. ಫೆಬ್ರುವರಿ 29ರ ಬಳಿಕ ಪೇಮೆಂಟ್ಸ್ ಬ್ಯಾಂಕ್ ಹೊಸ ಡೆಪಾಸಿಟ್ಗಳನ್ನು ಪಡೆಯುವಂತಿಲ್ಲ. ಹಾಗೂ ಬ್ಯಾಂಕಿಂಗ್ ಸರ್ವಿಸ್ ನೀಡುವಂತಿಲ್ಲ. ಪೇಟಿಎಂ ಸಂಸ್ಥೆ ತನ್ನ ಪೇಮೆಂಟ್ಸ್ ಬ್ಯಾಂಕ್ನಲ್ಲಿರುವ ನೋಡಲ್ ಅಕೌಂಟ್ಗಳನ್ನು ಫೆ. 29ರೊಳಗೆ ಬೇರೆ ಬ್ಯಾಂಕ್ಗೆ ವರ್ಗಾಯಿಸಬೇಕು. ಇವು ಆರ್ಬಿಐ ನೀಡಿದ ನಿರ್ದೇಶನ. ಆದರೆ, ಹೆಚ್ಚು ಗೊಂದಲವಾಗುತ್ತಿರುವುದು ಪೇಟಿಎಂ ಆ್ಯಪ್ ಬಗ್ಗೆ. ಪೇಟಿಎಂ ತನ್ನ ಹಲವು ಸೇವೆಗಳಿಗೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ನ ಸರ್ವಿಸ್ ಬಳಸುತ್ತದೆ. ಹೀಗಾಗಿ, ಒಂದಷ್ಟು ಗೊಂದಲಗಳು ಮನೆ ಮಾಡಿವೆ.
ಪೇಟಿಎಂ ಸರ್ವಿಸ್ ಉಪಯೋಗಿಸುವ ಬಹಳಷ್ಟು ವರ್ತಕರು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ನಲ್ಲಿ ಖಾತೆಗಳನ್ನು ಹೊಂದಿದ್ದಾರೆ. ಈಗ ಈ ವರ್ತಕರ ಖಾತೆಗಳನ್ನು ಫೆ. 29ರೊಳಗೆ ಬೇರೆ ಬ್ಯಾಂಕುಗಳಿಗೆ ವರ್ಗಾಯಿಸುವುದು ಪೇಟಿಎಂ ಮುಂದಿರುವ ಬಹುದೊಡ್ಡ ಸವಾಲು. ಲಕ್ಷಾಂತರ ಖಾತೆಗಳನ್ನು ಈ ಅಲ್ಪಸಮಯದಲ್ಲಿ ಇಷ್ಟು ಖಾತೆಗಳನ್ನು ಕೆವೈಸಿ ಸಮೇತ ಪಡೆಯುವುದು ಯಾವುದೇ ಬ್ಯಾಂಕಿದಾದರೂ ಕ್ಲಿಷ್ಟದ ಕೆಲಸ. ಅಂತೆಯೇ, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ನ ಖಾತೆಗಳನ್ನು ಪಡೆಯಲು ಯಾವ ಬ್ಯಾಂಕು ಕೂಡ ಆಸಕ್ತಿ ತೋರುತ್ತಿಲ್ಲ.
ಇದನ್ನೂ ಓದಿ: ಕೆವೈಸಿ ಅಪ್ಡೇಟ್ ಮಾಡಿ ಎಂದು ಕರೆ ಬಂದರೆ ಏನು ಮಾಡಬೇಕು? ಆರ್ಬಿಐ ಸಲಹೆ, ಸೂಚನೆಗಳಿವು
ಪೇಟಿಎಂನಲ್ಲಿ ಬಹಳ ಉಪಯೋಗಕ್ಕೆ ಬರುವ ಪೇಮೆಂಟ್ ಅವಕಾಶದಲ್ಲಿ ವ್ಯಾಲಟ್ ಒಂದು. ಪೇಟಿಎಂ ಗ್ರಾಹಕರ ತನ್ನ ಬ್ಯಾಂಕ್ ಸರ್ವರ್ ಬಳಸದೆಯೇ ವ್ಯಾಲಟ್ ಮೂಲಕ ಪೇಮೆಂಟ್ ಮಾಡಬಹುದು. ಆದರೆ, ವ್ಯಾಲಟ್ಗೆ ಪೇಮೆಂಟ್ಸ್ ಬ್ಯಾಂಕ್ನಲ್ಲಿ ಎಸ್ಕ್ರೂ ಅಥವಾ ತಾತ್ಕಾಲಿಕ ಖಾತೆ ಮಾಡಿ ಅದರಲ್ಲಿ ಹಣ ಇರಿಸಲಾಗುತ್ತದೆ. ಈಗ ಪೇಮೆಂಟ್ಸ್ ಬ್ಯಾಂಕ್ ಯಾವ ಬ್ಯಾಂಕಿಂಗ್ ಸೇವೆ ಮಾಡಬಾರದು ಎಂದಿರುವುದರಿಂದ ಫೆಬ್ರುವರಿ 29ರ ಬಳಿಕ ವ್ಯಾಲಟ್ಗೂ ಹಣ ಜಮೆ ಮಾಡಲು ಆಗುವುದಿಲ್ಲ.
ಆದರೆ, ವ್ಯಾಲಟ್ನಲ್ಲಿ ಹಣ ಇದ್ದರೆ ಅದನ್ನು ಯಥಾಪ್ರಕಾರ ಬಳಕೆ ಮಾಡಬಹುದು. ಫೆಬ್ರುವರಿ 29ರ ಬಳಿಕವೂ ವ್ಯಾಲಟ್ ಹಣವನ್ನು ಖರ್ಚು ಮಾಡಬಹುದು.
ಇದನ್ನೂ ಓದಿ: ಗವರ್ನ್ಮೆಂಟ್ ಬಾಂಡ್ಗಳಲ್ಲಿ ಹಣ ಹೂಡಿಕೆ ಮಾಡುವುದು ಸರಿಯಾದ ಮಾರ್ಗವಾ? ಈ ವಿಷಯ ತಿಳಿದಿರಲಿ
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ನಲ್ಲಿ ನೀವು ಖಾತೆ ಹೊಂದಿದ್ದರೆ ಅದನ್ನೂ ಕೂಡ ಫೆ. 29ರ ಬಳಿಕ ಬಳಕೆ ಮಾಡಲು ಯಾವ ನಿರ್ಬಂಧ ಇರುವುದಿಲ್ಲ.
ಪೇಟಿಎಂಗೆ ಸವಾಲಾಗಿರುವುದು ಈಗ ವರ್ತಕರ ಖಾತೆಗಳನ್ನು ವರ್ಗಾಯಿಸುವುದು. ಅದಾಗಿ ಹೋದರೆ ಪೇಟಿಎಂ ಬಗ್ಗೆ ಗ್ರಾಹಕರು ಯಾವ ಗೊಂದಲ ಇಟ್ಟುಕೊಳ್ಳುವ ಅಗತ್ಯ ಇರದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ