Zomato Shares: ಲಿಸ್ಟಿಂಗ್​ಗಿಂತ ಕೆಳಗೆ ಇಳಿದ ಝೊಮ್ಯಾಟೋ ಷೇರು ಬೆಲೆ; ಮಾರುಕಟ್ಟೆ ಬಂಡವಾಳ ಮೌಲ್ಯ 1 ಲಕ್ಷ ಕೋಟಿಗೂ ಕಡಿಮೆ

| Updated By: Srinivas Mata

Updated on: Jan 21, 2022 | 10:10 PM

ಝೊಮ್ಯಾಟೋ ಷೇರಿನ ಬೆಲೆ ಲಿಸ್ಟಿಂಗ್​ಗಿಂತ ಕೆಳಗೆ ಇಳಿದಿದೆ. ಮಾರುಕಟ್ಟೆ ಬಂಡವಾಳ ಮೌಲ್ಯವು 1 ಲಕ್ಷ ಕೋಟಿ ರೂಪಾಯಿಗಿಂತ ಕಡಿಮೆ ಆಗಿದೆ.

Zomato Shares: ಲಿಸ್ಟಿಂಗ್​ಗಿಂತ ಕೆಳಗೆ ಇಳಿದ ಝೊಮ್ಯಾಟೋ ಷೇರು ಬೆಲೆ; ಮಾರುಕಟ್ಟೆ ಬಂಡವಾಳ ಮೌಲ್ಯ 1 ಲಕ್ಷ ಕೋಟಿಗೂ ಕಡಿಮೆ
ಸಾಂದರ್ಭಿಕ ಚಿತ್ರ
Follow us on

ಷೇರು ಮಾರುಕಟ್ಟೆಯಲ್ಲಿ ಲಿಸ್ಟಿಂಗ್ ಆದ ನಂತರದಲ್ಲಿ ಇದೇ ಮೊದಲ ಬಾರಿಗೆ ಝೊಮ್ಯಾಟೋ (Zomato) ಷೇರುಗಳು ತಮ್ಮ ಲಿಸ್ಟಿಂಗ್ ಬೆಲೆಗಿಂತ ಕೆಳಗೆ ಇಳಿದಿವೆ. ಏಕೆಂದರೆ ಕಳೆದ ನಾಲ್ಕು ಅವಧಿಗಳಲ್ಲಿ ನಿರಂತರವಾಗಿ ಮಾರಾಟವಾಗಿದೆ. ಶುಕ್ರವಾರದಂದು ಈ ಸ್ಕ್ರಿಪ್ ಶೇಕಡಾ 10ರಷ್ಟು ಕುಸಿದು, 52 ವಾರಗಳ ಕನಿಷ್ಠ ಮಟ್ಟವಾದ ರೂ. 113.15ಕ್ಕೆ ತಲುಪಿತು. ಇದರೊಂದಿಗೆ ಎನ್‌ಎಸ್‌ಇಯಲ್ಲಿ ಈ ಸ್ಕ್ರಿಪ್ ಲಿಸ್ಟಿಂಗ್ ಬೆಲೆಯಾದ 115 ರೂಪಾಯಿಯಿಂದ ಕೆಳಗೆ ಇಳಿದಿದೆ. ನಾಲ್ಕು ಅವಧಿಗಳಲ್ಲಿ ಷೇರುಗಳು ಸುಮಾರು ಶೇ 17ರಷ್ಟು ನೆಲ ಕಚ್ಚಿದೆ. ಕುಸಿತದ ಸಂದರ್ಭದಲ್ಲಿ ಷೇರುಗಳ ಮಾರುಕಟ್ಟೆ ಬಂಡವಾಳ ಮೌಲ್ಯವೂ 1 ಲಕ್ಷ ಕೋಟಿ ರೂಪಾಯಿಗಿಂತ ಕೆಳಗಿಳಿಯಿತು. ಆಹಾರ ವಿತರಣೆ ಪ್ಲಾಟ್​ಫಾರ್ಮ್​ ಆದ ಝೊಮ್ಯಾಟೋ ಕಳೆದ ವರ್ಷ ಹೆಚ್ಚು ಸಂಭ್ರಮದಿಂದ ಲಿಸ್ಟ್ ಮಾಡಿತ್ತು.ಮತ್ತು ಆ ನಂತರ ಹಿಂತಿರುಗಿ ನೋಡಲಿಲ್ಲ. ಕೆಲವೇ ದಿನಗಳಲ್ಲಿ ಬೆಲೆಯು ದ್ವಿಗುಣಗೊಂಡಿತು. ಆದರೆ ನಷ್ಟದ ಕಂಪೆನಿಗಳ ಮೇಲಿನ ಇತ್ತೀಚಿನ ಆತಂಕವು ಅದರ ಬೆಲೆಗಳಿಗೆ ಹೊಡೆತವನ್ನು ನೀಡಿದೆ. ಅದರ ಹೊಸ-ಯುಗದ ಟೆಕ್ ಕಂಪೆನಿಗಳ ಷೇರುಗಳಾದ ಪೇಟಿಎಂ, ಪಿಬಿ ಇನ್​ಫೋಟೆಕ್ ಮತ್ತು ಕಾರ್​ಟ್ರೇಡ್ (CarTrade) ಸಹ ಕೆಳಮುಖ ಪ್ರಯಾಣದಲ್ಲಿವೆ.

ಪೇಟಿಎಂ ಷೇರುಗಳು ಶುಕ್ರವಾರದಂದು ಶೇಕಡಾ 1ರಷ್ಟು ಕಡಿಮೆಯಾಗಿದ್ದು, ಕಳೆದ 14 ಸೆಷನ್‌ಗಳಲ್ಲಿ 13ನೇ ಬಾರಿಗೆ ಕುಸಿಯಿತು. ಪಿಬಿ ಫಿನ್‌ಟೆಕ್ ಶೇಕಡಾ 4ರಷ್ಟು ಕುಸಿದರೆ, ಕಾರ್​ಟ್ರೇಡ್ ಶೇಕಡಾ 0.5ರಷ್ಟು ಇಳಿಯಿತು. ಕೆಲವು ಲಾಭದಾಯಕ ಇ-ಕಾಮರ್ಸ್ ಕಂಪೆನಿಗಳಲ್ಲಿ ಒಂದಾದ ನೈಕಾ ಸಹ ಶೇಕಡಾ 1 ಪರ್ಸೆಂಟ್​ಗಿಂತ ಕಡಿಮೆಯಾಗಿದೆ. ಈ ಆತಂಕಗಳ ಹೊರತಾಗಿಯೂ ಹೆಚ್ಚಿನ ವಿಶ್ಲೇಷಕರು ಝೊಮ್ಯಾಟೋವನ್ನು ‘ಖರೀದಿ’ಗೆ ಸೂಕ್ತ ಎಂದು ನಂಬುತ್ತಾರೆ. ಕಂಪೆನಿಯು ದ್ವಿಸ್ವಾಮ್ಯ ಸ್ಪರ್ಧೆಯಲ್ಲಿ ಅಸ್ತಿತ್ವದಲ್ಲಿದೆ ಮತ್ತು ಆರ್ಥಿಕತೆಯು ಮತ್ತೆ ಬೆಳವಣಿಗೆಯ ಹಾದಿಯಲ್ಲಿದೆ.

17 ವಿಶ್ಲೇಷಕರು 12 ತಿಂಗಳಲ್ಲಿ 166 ರೂಪಾಯಿಗಳ ಸರಾಸರಿ ಬೆಲೆ ಗುರಿಯನ್ನು ಝೊಮ್ಯಾಟೋಗೆ ಹೊಂದಿದ್ದಾರೆ. ಅತ್ಯಂತ ಬುಲಿಶ್ ಅಂದಾಜು ಅಂದರೆ ಈ ಸ್ಟಾಕ್ ಅನ್ನು ರೂ. 220ಕ್ಕೆ ಏರಿಸುತ್ತದೆ. ಆದರೆ ಹೆಚ್ಚು ಬೇರ್ (ಕರಡಿ) ಅದು ರೂ. 90ಕ್ಕೆ ಇಳಿಯುತ್ತದೆ ಎಂದು ನಂಬುತ್ತದೆ. ಇದು ಲಾಭವನ್ನು ದೊರಕಿಸುವುದಕ್ಕೆ ಎಲ್ಲಿಯೂ ಹತ್ತಿರದಲ್ಲಿರುವುದಾಗಿ ಯಾವುದೇ ವಿಶ್ಲೇಷಕರು ನಂಬುವುದಿಲ್ಲ.

ಇದನ್ನೂ ಓದಿ: Zomato: ಜೊಮ್ಯಾಟೋ ಸಹ ಸಂಸ್ಥಾಪಕ ಗೌರವ್ ಗುಪ್ತ ರಾಜೀನಾಮೆ; ಷೇರು ಮೌಲ್ಯ ಕುಸಿತ